ಮದುವೆ ಆಗಿ ಕೆಲವೇ ಸಮಯಕ್ಕೆ ಲೈಂಗಿಕ ಆಸಕ್ತಿ ಕಳೆದುಕೊಳ್ಳುವ ಅನೇಕರು ನಮ್ಮ ನಡುವೆ ಇದ್ದಾರೆ. ದಾಂಪತ್ಯದಲ್ಲಿ ಸೆಕ್ಸ್ ಲೈಫನ್ನು ಎಂಜಾಯ್ ಮಾಡೋರು ಕೆಲವೇ ಮಂದಿ. ಲೈಂಗಿಕತೆ ಚೆನ್ನಾಗಿರಬೇಕು ಅಂದರೆ ಲೈಪ್‌ಸ್ಟೈಲ್ ಹಾಗೇ ಇರ್ಬೇಕು. ದಿನಚರಿ ಹೇಗಿದ್ದರೆ ಆ ಬಯಕೆಯನ್ನು ಸದಾ ಜೀವಂತ ಇಡಬಹುದು ಅನ್ನೋ ಡೀಟೇಲ್ಸ್ ಇಲ್ಲಿದೆ.
ಕಾವ್ಯಾ ಮತ್ತು ಶ್ರೀಹರಿ ಮದುವೆ ಆಗಿ ಐದಾರು ವರ್ಷ ಕಳೆದಿದೆ. ಇಬ್ಬರೂ ಕೆಲಸದಲ್ಲಿ ಬ್ಯುಸಿ ಆಗಿರೋ ಕಾರಣ ಪರ್ಸನಲ್ ಲೈಫ್ ಅದರಲ್ಲೂ ಸೆಕ್ಸ್ ಎಕ್ಕುಟ್ಟು ಹೋಗಿದೆ ಅನ್ನೋದು ಇಬ್ಬರಿಗೂ ಗೊತ್ತಾಗಿದೆ. ಆದರೆ ಅದನ್ನು ಸರಿಪಡಿಸೋದು ಹೇಗೆ ಅಂತ ಗೊತ್ತಾಗ್ತಿಲ್ಲ. ಈ ವಿಚಾರವನ್ನು ಓಪನ್ ಆಗಿ ಮನೆಯ ಉಳಿದ ಸದಸ್ಯರ ಹತ್ರ ಡಿಸ್‌ಕಸ್ ಮಾಡೋದು ಕಷ್ಟ. ತೀರಾ ಕೌನ್ಸಿಲಿಂಗ್ ಪಡೆಯೋವಷ್ಟು ದೊಡ್ಡ ಸಮಸ್ಯೆ ಇದು ಅಂತ ಇಬ್ಬರಿಗೂ ಅನಿಸಿಲ್ಲ. ಇಂಥಾ ಟೈಮಲ್ಲಿ ಅವರ ಸಹಾಯಕ್ಕೆ ಬಂದಿದ್ದು ಒಬ್ಬ ಫ್ರೆಂಡ್. ಅವರು ಹೇಳಿದ ಟಿಪ್ಸ್ ಫಾಲೋ ಮಾಡೋದು ಶುರು ಶುರುವಿಗೆ ಬಹಳ ಕಷ್ಟ ಆಯ್ತು. ಆದರೆ ಕ್ರಮೇಣ ಇಬ್ಬರಿಗೂ ತಮ್ಮ ಸೆಕ್ಸ್ ಲೈಫ್ ನಿಧಾನಕ್ಕೆ ಹಳಿಗೆ ಮರಳುತ್ತಿರುವುದು ಗೊತ್ತಾಯ್ತು. ಅಷ್ಟಕ್ಕೂ ಅವರು ಬಹಳ ಕಷ್ಟಪಟ್ಟು ಈ ಖುಷಿಯನ್ನು ಮರಳಿ ಪಡೆದಿಲ್ಲ. ಬದಲಿಗೆ ಸಣ್ಣ ಬದಲಾವಣೆ ಮಾಡಿಕೊಂಡರು ಅಷ್ಟೇ. ಅಂಥಾ ಬದಲಾವಣೆ ಏನು, ಅದರಿಂದ ಅವರ ಸೆಕ್ಸ್ ಲೈಫ್ ಸರಿ ಹೋಗಲು ಎಷ್ಟು ಸಮಯ ಬೇಕಾಯ್ತು ಅನ್ನೋ ಡೀಟೇಲ್ಸ್ ನಿಮ್ಮ ಲೈಫ್ ಗೂ ಸಹಕಾರಿ ಆಗಬಹುದು.
* ಇಬ್ಬರೂ ಒಬ್ಬರಿಗೊಬ್ಬರು ಸಮಯ ಕೊಟ್ಟುಕೊಳ್ಳೋದು ಮೊದಲನೇದಾಗಿ ಪಾಲಿಸಬೇಕಾದ ಸೂತ್ರ. ಆ ಟೈಮಲ್ಲಿ ಅವರಿಬ್ಬರೇ ಅಂದರೆ ಅವರಿಬ್ಬರೇ ಇರಬೇಕು. ಕೆಲಸದ ಸ್ಟ್ರೆಸ್, ಮನೆಯ ಸಮಸ್ಯೆಗಳು, ಕಿರಿಕ್ ಇದ್ಯಾವುದೂ ಆ ಸಮಯವನ್ನು ಕಸಿದುಕೊಳ್ಳಬಾರದು. ತಮ್ಮಿಬ್ಬರ ಬಗೆಗೆ, ತಮ್ಮ ಆಸಕ್ತಿ ಬಗೆಗಿನ ಮಾತು, ಓಡಾಟ ಇತ್ಯಾದಿಗಳಷ್ಟೇ ಅಲ್ಲಿರಬೇಕು. ದಿನದಲ್ಲಿ ಇಂಥಾ ಹತ್ತು ನಿಮಿಷ ನಿಮ್ಮಿಬ್ಬರದೇ ಆಗಿರಲಿ.
* ಪ್ರಣಯವನ್ನು ಜೀವಂತವಾಗಿಟ್ಟುಕೊಳ್ಳಿ. ಪ್ರೇಮ, ಪ್ರಣಯ ಕೇವಲ ಲೈಂಗಿಕತೆ ಸಮಯಕ್ಕೆ ಮಾತ್ರ ಸೀಮಿತ ಆಗದೇ ಇರಲಿ. ಇದು ನಿಮ್ಮ ದೈನಂದಿನ ಜೀವನದ ಒಂದು ಭಾಗವಾಗಿರಬೇಕು. ಸಣ್ಣ ಮುತ್ತು, ಮುದ್ದಾಟ, ಕಾಂಪ್ಲಿಮೆಂಟ್ಸ್, ಅಭಿನಂದನೆಗಳನ್ನು ಸ್ವೀಕರಿಸುವುದು. * ಮದುವೆ ಆದಮೇಲೂ ಡೇಟಿಂಗ್ ಮಾಡಿ. ಮದುವೆಗೂ ಮೊದಲು ಡೇಟಿಂಗ್ ಮಾಡ್ತಿದ್ದ ಬಹುತೇಕರು ಮದುವೆಯಾದ ಮೇಲೆ ಡೇಟಿಂಗ್ ಸಮಯದಲ್ಲಿ ಮಾಡಿದ ಕೆಲಸಗಳನ್ನು ಮಾಡಬೇಕೆಂದು ಯೋಚಿಸುವುದಿಲ್ಲ. ಡೇಟಿಂಗ್ ಸಮಯದ ಸುತ್ತಾಟ, ರಸಿಕತೆ, ಸ್ನೇಹ ಇವೆಲ್ಲ ನಿಮ್ಮ ಲೈಂಗಿಕತೆಯನ್ನು ಚೆನ್ನಾಗಿಟ್ಟಿರುತ್ತದೆ.
Royal Love Story: ಮಹಾರಾಜ ಯದುವೀರ್- ತ್ರಿಶಿಖಾ, ಇಬ್ಬರ ನಡುವೆ ಪ್ರೀತಿ ಮೂಡಿದ್ಹೇಗೆ ?
* ಆರೋಗ್ಯವಾಗಿರುವುದ, ಪಾಸಿಟಿವ್ ಯೋಚನೆಗಳು (Positive Thoughts) ಬಹಳ ಮುಖ್ಯ. ನಿಮ್ಮ ಮೇಳೆ ನಿಮಗೆ ವಿಶ್ವಾಸವಿದ್ದಾಗ, ನೀವು ಹಾಸಿಗೆಯಲ್ಲಿ ಉತ್ತಮ ಸಮಯ ಕಳೆಯಬಹುದು. ಅದು ನಿಮ್ಮ ಸಂಗಾತಿಯ ಆರೋಗ್ಯವನ್ನೂ ಹೆಚ್ಚಿಸುತ್ತದೆ. ಸರಿಯಾಗಿ ವ್ಯಾಯಾಮ ಮಾಡುವುದರಿಂದ ಮತ್ತು ಸರಿಯಾಗಿ ತಿನ್ನುವುದರಿಂದ ನಿಮ್ಮ ಸಾಮಾನ್ಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
* ಸೆಕ್ಸ್ ಬಗ್ಗೆ ಒಬ್ಬರಿಗೊಬ್ಬರು ಮಾತಾಡಿಕೊಳ್ಳಿ. ನಿಮಗೇನಾದರೂ ಅಹಿತಕರ ಭಾವನೆ ಮೂಡಿದರೆ ನಿಮ್ಮ ಸಂಗಾತಿಗೂ ತಿಳಿಸಿ. ಆಗ ಸಮಸ್ಯೆಗಳನ್ನು ಸರಿಪಡಿಸಿ ಉತ್ತಮ ಅನುಭವ ಪಡೆಯಬಹುದು.
ವಿವಾಹದ ನಂತರ ಲೈಫ್ ಚೆನ್ನಾಗಿರಬೇಕಂದ್ರೆ ಈ ರೀತಿ ಹಣ ಮ್ಯಾನೇಜ್ ಮಾಡಿ
ಉತ್ತಮ ಲೈಂಗಿಕ ಕ್ರಿಯೆ(Sex) ಹೊಂದಿರುವ ದಂಪತಿಗಳು ಬೆಡ್’ರೂಮ್ ಆಚೆಗೂ ಅದ್ಭುತವಾದ ಗೆಳೆತನ(Friendship)ವನ್ನು ಹೊಂದಿರುತ್ತಾರೆ. ನ್ಯಾಯಯುತವಾಗಿ ಕೆಲಸಗಳನ್ನು ವಿಭಜಿಸಿಕೊಳ್ಳುತ್ತಾರೆ, ಒಬ್ಬರನ್ನೊಬ್ಬರು ಪ್ರೋತ್ಸಾಹಿಸಿಕೊಳ್ಳುತ್ತಾರೆ. ಉತ್ತಮ ಕೇಳುಗರಾಗಿರುತ್ತಾರೆ. ಹಾಗೆಯೇ ಒಂದು ಟೀಂ ಆಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದು ನಿಮ್ಮ ಲೈಂಗಿಕ ಅಭ್ಯಾಸ(Practice)ಗಳನ್ನು ಸುಧಾರಿಸುತ್ತದೆ ಮತ್ತು ದಿನದ ಕೊನೆಯಲ್ಲಿ ನೀವಿಬ್ಬರೂ ಪ್ರಣಯ(Love)ಕ್ಕೆ ಸಿದ್ಧರಾಗುವಂತೆ ಮಾಡುತ್ತದೆ.
ಹೀಗಾಗಿ ನಿಮ್ಮ ಲೈಂಗಿಕತೆ ಕೇವಲ ಅಷ್ಟಕ್ಕೇ ಸೀಮಿತ ಆಗದೇ ಇರಲಿ. ಅದಕ್ಕೆ ಪೂರಕವಾಗಿ ಬದುಕೂ ಬದಲಾಗಲಿ. ಇದರಿಂದ ನೀವು ಕಳೆದುಕೊಳ್ಳೋದು ಏನೂ ಇಲ್ಲ. ಬದಲಿಗೆ ಗಳಿಸಿಕೊಳ್ಳೋದು ಸಾಕಷ್ಟಿದೆ. ಎಲ್ಲಕ್ಕಿಂತ ಮಿಗಿಲಾದ ಖುಷಿ, ಉತ್ಸಾಹ, ಬದುಕುವ ಮನಸ್ಸು ಎಲ್ಲ ನಿಮಗೆ ಸಿಗುತ್ತದೆ.