ಜಿರಳೆ ಅಂದ್ರೆ ವ್ಯಾಕ್, ಥೂ ಅನ್ನೋರೇ ಎಲ್ಲ. ಅಂಥಾದ್ರಲ್ಲಿ ಚೇತನ್ ಭಗತ್, ಡಾರ್ವಿನ್ ಥಿಯರಿಯನ್ನ ಕೋಟ್ ಮಾಡಿ ಜಿರಳೆಗಳಂತೆ ಬದುಕಿ ಅಂದಿದ್ಯಾಕೆ?
ಜಿರಳೆ ಕಂಡ್ರೆ ಜನ ಹೇಸಿಗೆ ಪಟ್ಟುಕೊಂಡು ಮುಖ ಸಿಂಡರಿಸುತ್ತಾರೆ. ಕೋಮಲ ಹುಡುಗೀರಂತೂ ಜಿರಳೆ ಕಂಡರೆ ಸಾಕು ದೊಡ್ಡ ಅನಾಹುತ ಆದಂತೆ ಕಿರಿಚಿಕೊಳ್ತಾರೆ. ಇದನ್ನೇ ಸಿನಿಮಾ ಸೀರಿಯಲ್‌ಗಳಲ್ಲಿ ರೊಮ್ಯಾಂಟಿಕ್ ಸೀಕ್ವೆನ್ಸ್‌ಗಳಲ್ಲಿ ಬಳಸಿಕೊಂಡು ಹುಡುಗೀರು ಹುಡುಗರ ಮೈ ಮೇಲೆ ಬೀಳೋ ಹಾಗೆ ಮಾಡ್ತಾರೆ. ಹಾಗೆ ರೊಮ್ಯಾನ್ಸ್‌ನಲ್ಲಿ ಬಿದ್ದು ಮದ್ವೆ ಆಯ್ತು ಅಂತಿಟ್ಕೊಳ್ಳಿ, ಅದೇ ಹೆಣ್ಣುಮಗಳಲ್ಲಿ ವೀರರಸ ಉಕ್ಕಿ ಹರಿದು, ಎಲ್ಲೇ ಅಡಗಿದ್ದರೂ ಜಿರಳೆಯನ್ನು ಹುಡುಕಿ ತೆಗೆದು ಸರ್ವನಾಶ ಮಾಡಿಬಿಡುತ್ತಾಳೆ. ಅವಳ ಸಿಟ್ಟು ಜಿರಳೆಯ ಮೇಲಾ, ಜಿರಳೆಯ ನೆವದಲ್ಲಿ ಆದ ರೊಮ್ಯಾನ್ಸ್‌ನಿಂದಾದ ಎಡವಟ್ಟಿನ ಬಗ್ಗೆಯಾ ಗೊತ್ತಿಲ್ಲ. ಜಿರಳೆ ಒಂದು ಟ್ರಾನ್ಸ್‌ಫಾರ್ಮೇಶನ್‌ಗೆ ಅಂತೂ ಕಾರಣವಾಗೋದು ಸತ್ಯ.
ಆದರೆ ವಿಷಯ ಅದಲ್ಲ. ಮನುಷ್ಯ ತನ್ನ ಜೀವನದಲ್ಲಿ ಯಶಸ್ಸು ಗಳಿಸಬೇಕು ಅಂದ್ರೆ ಜಿರಳೆಯಂತೆ ಬದುಕಬೇಕು ಎಂದು ಜನಪ್ರಿಯ ಲೇಖಕ ಚೇತನ್ ಭಗತ್ ತಮ್ಮ ಇತ್ತೀಚಿನ ಪುಸ್ತಕ ‘11 ರೂಲ್ಸ್ ಫಾರ್ ಲೈಫ್’ನಲ್ಲಿ ಬರೆದಿದ್ದಾರೆ. ಚಾರ್ಲ್ ಡಾರ್ವಿನ್ ಕೂಡ ಇದೇ ಮಾತು ಹೇಳಿದ್ದರು. ಹಾಗಾದರೆ ಇವರು ಮನುಷ್ಯನ ಜೀವನವನ್ನು ಜಿರಳೆಗೆ ಹೋಲಿಸಿದ್ದು ಯಾಕೆ ಎಂಬ ಪ್ರಶ್ನೆ. ಎಲ್ಲರೂ ಹೇವರಿಕೆಯಿಂದ ನೋಡುವ ಜಿರಳೆ ಹಾಗೆ ಬದುಕೋದು ಅಂದರೆ ಏನರ್ಥ ಅನ್ನೋದೇ ಇಲ್ಲಿ ಕೊಶ್ಚನ್ ಮಾರ್ಕ್. ಈ ಪ್ರಶ್ನೆಗೆ ಚೇತನ್ ಉತ್ತರವನ್ನೂ ಕೊಟ್ಟಿದ್ದಾರೆ. ಚೇತನ್ ಅವರ ಅವರ ‘11 ರೂಲ್ಸ್ ಫಾರ್ ಲೈಫ್’ ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿದ್ದು ಮಾರುಕಟ್ಟೆಗೆ ಬಂದಿದೆ. ಇದರಲ್ಲಿ ಯಶಸ್ಸು ಸಾಧಿಸಲು ಮನುಷ್ಯನಿಗೆ ಮಾರ್ಗದರ್ಶನ ನೀಡುವ ಹಲವು ಅಂಶಗಳಿವೆ.
ಮದುವೆ ಬಗ್ಗೆ ಕೋಪಗೊಂಡಾಗ ಪ್ರಭಾಸ್ ಅಮ್ಮನನ್ನು ಹ್ಯಾಂಡಲ್ ಮಾಡೋದು ಹೀಗಂತೆ ನೋಡಿ!
ಮನುಷ್ಯನ ಇತರೆಲ್ಲಾ ಪ್ರಾಣಿಗಳಿಂದ ಪಾಠ ಕಲಿಯುವುದಕ್ಕಿಂತ ಜಿರಳೆಯಿಂದ ಹಾಗೂ ಜಿರಳೆಯ ಬದುಕಿನಿಂದ ಪಾಠ ಕಲಿತರೆ ಸಾಕು, ಯಶಸ್ವಿ ಜೀವನ ತನ್ನದಾಗಿಸಿಕೊಳ್ಳುವುದು ಸುಳ್ಳಲ್ಲ ಎಂದು ಚೇತನ್ ಭಗತ್ ಬರೆದಿದ್ದಾರೆ. ಅದು ಯಾಕೆ ಅನ್ನೋದಕ್ಕೂ ಉತ್ತರ ಹೇಳಿದ್ದಾರೆ. ಚಾರ್ಲ್ಸ್ ಡಾರ್ವಿನ್ ಪ್ರಕಾರ (Darwin theory), ಪ್ರಕೃತಿಯಲ್ಲಿ ಉಳಿದುಕೊಂಡಿರುವ ಪ್ರಬಲ ಜೀವಿಗಳಲ್ಲಿ ಜಿರಳೆ (cockroach) ಕೂಡ ಒಂದು. ಇದು ಅತ್ಯಂತ ಬುದ್ಧಿವಂತ ಜೀವಿ ಕೂಡ ಹೌದು, ಜೊತೆಗೆ ಸನ್ನಿವೇಶದ ಸ್ವಭಾವಕ್ಕೆ ಹೊಂದಿಕೊಳ್ಳುವ ಜೀವಿಯೂ ಹೌದು. ಜಿರಳೆಯ ಹೆಸರನ್ನು ಹೇಳಿದರೆ ನಿಮಗೆ ಅಸಹ್ಯವಾಗಬಹುದು. ಜಿರಳೆಯನ್ನು ಹೊಗಳುವವರು ಹುಚ್ಚರಂತೆ ಕಾಣಿಸಬಹುದು. ಜಿರಳೆಗಳನ್ನು ಯಾರೂ ಇಷ್ಟಪಡುವುದಿಲ್ಲ. ಆದರೆ ಇತರ ಯಾವುದೇ ಜೀವಿಗಳಿಗೆ ಹೋಲಿಸಿದರೆ ಭೂಮಿಯ ಮೇಲೆ ದೀರ್ಘಕಾಲ ಉಳಿದಿರುವ ಜಾತಿಯಾಗಿದೆ.
ಜಿರಳೆ ಭೂಮಿಯ ಮೇಲಿನ ಎಲ್ಲಾ ಬದಲಾವಣೆಗಳಿಗೆ ಹೊಂದಿಕೊಳ್ಳಲು ಕಲಿತಿದೆ. ಹಾಗಾಗಿ ಈ ಜಾತಿಗಳು ನೂರಾರು ವರ್ಷಗಳಿಂದ ಈ ಭೂಮಿಯಲ್ಲಿ ಉಳಿದುಕೊಂಡಿವೆ. ಇವು ಪ್ರಕೃತಿಯ ಪ್ರತಿಯೊಂದು ಸ್ಥಿತಿ ಮತ್ತು ಬದಲಾವಣೆಯನ್ನು ತಡೆದುಕೊಳ್ಳುತ್ತವೆ. ಭೂಮಿಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ತಡೆದುಕೊಳ್ಳಲಾಗದೆ ಹಲವು ಜೀವಿಗಳು ಅಳಿವಿನಂಚಿನಲ್ಲಿವೆ. ಆದರೆ ಜಿರಳೆ ಪರಿಸ್ಥಿತಿಗೆ ಹೊಂದಿಕೊಂಡು ಬದುಕುತ್ತಿದೆ. ಅದಕ್ಕೇ ಬಲಿಷ್ಠ ಪ್ರಾಣಿಯನ್ನು ಆದರ್ಶವಾಗಿ ತೆಗೆದುಕೊಳ್ಳಬೇಡಿ. ಪರಿಸ್ಥಿತಿಗೆ ಅನುಗುಣವಾಗಿ ಪ್ರಕೃತಿಯಲ್ಲಿ ಬದುಕುವ ಜಿರಳೆಯನ್ನು ಆದರ್ಶವಾಗಿ ತೆಗೆದುಕೊಳ್ಳಿ ಎನ್ನುತ್ತಾರೆ ಚೇತನ್ ಭಗತ್.
ಸುಸ್ಸೂ ಮಾಡಿಕೊಂಡಂತೆ ಕಾಣೋ ಈ ಜೀನ್ಸ್ ಬೆಲೆ ಬರೋಬ್ಬರಿ 50,000 ರೂ! ಯಾರ್ರೀ ಧರಿಸ್ತಾರೆ?
ಚೇತನ್ ಪ್ರಕಾರ ನೀವು ಎಷ್ಟೇ ಬುದ್ಧಿವಂತರಾಗಿದ್ದರೂ ಅಥವಾ ಎಷ್ಟೇ ಬಲಶಾಲಿಯಾಗಿದ್ದರೂ ಪ್ರಕೃತಿಗೆ (nature) ನಿಮ್ಮ ಅಗತ್ಯವಿಲ್ಲ. ಇದನ್ನು ಕಲಿತು ಹೊಂದಿಕೊಂಡರೆ ಮಾತ್ರ ಈ ಪ್ರಕೃತಿಯಲ್ಲಿ ಬದುಕಲು ಸಾಧ್ಯ. ಇಲ್ಲದಿದ್ದರೆ ಇಡೀ ಜನಾಂಗವೇ ನಾಶವಾಗುತ್ತದೆ. ಶಕ್ತಿಶಾಲಿ ಡೈನೋಸಾರ್‌ಗಳು (dinosaur) ಅಳಿದು ಹೋದರೂ ಜಿರಳೆಗಳು ಇನ್ನೂ ಜೀವಂತವಾಗಿವೆ. ಅದೇ ರೀತಿ ಮನುಷ್ಯ ಜೀವನದಲ್ಲಿ ಯಶಸ್ವಿಯಾಗಲು ಹೊಂದಿಕೊಳ್ಳುವ ಮನಸ್ಥಿತಿ ಹೊಂದಿರಬೇಕು. ಪರಿಸ್ಥಿತಿಗಳು ಮತ್ತು ಸ್ವಭಾವಕ್ಕೆ ಅನುಗುಣವಾಗಿ ಒಬ್ಬನು ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕು. ಆಗ ಮಾತ್ರ ಅವನು ಏನನ್ನಾದರೂ ಸಾಧಿಸಲು ಸಾಧ್ಯ. ಜೀವನದಲ್ಲಿ, ಎಲ್ಲದರಲ್ಲೂ ಹೊಂದಿಕೊಂಡು, ಸಂದರ್ಭಗಳಿಗೆ ತಕ್ಕಂತೆ ಬದುಕುವುದನ್ನು ಕಲಿತರೆ, ಆ ವ್ಯಕ್ತಿ ಯಾವಾಗಲೂ ತನಗೆ ಬೇಕಾದುದನ್ನು ಸಾಧಿಸಬಹುದು ಎನ್ನುತ್ತಾರೆ ಚೇತನ್. ಈ ಮಾತಲ್ಲಿ ನಂಬಿಕೆ ಇದ್ದರೆ ಈ ಕ್ಷಣದಿಂದ ಜಿರಳೆಯಂತೆ ಬದುಕೋದು ಕಲಿಯಿರಿ.