Bengaluru: ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಸುಳ್ಳು ವಂಚನೆಯ ಕಥೆ ಕಟ್ಟಿದ ಕಿಲಾಡಿ ಪತಿ

Published : May 14, 2026, 07:32 AM IST
Husband Wife

ಸಾರಾಂಶ

ಉದ್ಯಮಿಯೊಬ್ಬರು ರೀಲ್ಸ್ ಸ್ಟಾರ್ ತನ್ನಗೆ ಬ್ಲ್ಯಾಕ್‌ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾಳೆಂದು ದೂರು ನೀಡಿದ್ದರು. ಆದರೆ, ಇದೀಗ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಪತಿಯೇ ಈ ಸುಳ್ಳು ಕಥೆ ಕಟ್ಟಿದ್ದಾನೆ ಎಂದು ಉದ್ಯಮಿಯ ಪತ್ನಿಯೇ ಪೊಲೀಸರಿಗೆ ಪತ್ರ ಬರೆದು ಗಂಭೀರ ಆರೋಪ ಮಾಡಿದ್ದಾರೆ.

ಬೆಂಗಳೂರು: ಆಂಧ್ರಪ್ರದೇಶದ ಉದ್ಯಮಿಗೆ ರೀಲ್ಸ್ ಸ್ಟಾರ್ ವಂಚನೆ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ತನ್ನ ಅನೈತಿಕ ಸಂಬಂಧ ಮುಚ್ಚಿಕೊಳ್ಳಲು ಪತಿಯೇ ವಂಚನೆ ಕೃತ್ಯದ ಸುಳ್ಳು ಕತೆ ಕಟ್ಟಿದ್ದಾರೆ ಎಂದು ಉದ್ಯಮಿ ಪತ್ನಿ ಗಂಭೀರ ಆರೋಪ ಮಾಡಿದ್ದಾರೆ. ತನ್ನ ಪತಿಯಿಂದ ಆರೋಪಿತ ಯುವತಿ ಹಣ ಕೇಳಿಲ್ಲ. ಬ್ಲ್ಯಾಕ್‌ಮೇಲ್ ಕಥೆ ಸಂಪೂರ್ಣ ಸುಳ್ಳಾಗಿದ್ದು, ತನ್ನ ಗಂಡನೇ ಹುಸಿ ಕಥೆ ಸೃಷ್ಟಿಸಿದ್ದಾನೆ’ ಎಂದು ಆರೋಪಿಸಿ ಜಯನಗರ ಪೊಲೀಸರಿಗೆ ಉದ್ಯಮಿ ಪತ್ನಿ ಹರ್ಷಿತಾ ಪತ್ರ ಬರೆದಿದ್ದಾರೆ.

ತನ್ನ ಲೈಂಗಿಕ ಸಂಬಂಧ ಮುಚ್ಚಿಹಾಕಲು ಯುವತಿಯನ್ನು ಬ್ಲ್ಯಾಕ್‌ಮೇಲರ್ ಎಂದು ಕಾರ್ತಿಕ್ ಬಿಂಬಿಸಿದ್ದಾರೆ. ತನಗೆ ಆ ಯುವತಿ ಕಳಿಸಿದ್ದ ಕೆಲವು ಸಾಕ್ಷ್ಯಗಳನ್ನು ನೋಡಿದಾಗ ತನಗೆ ಮಾನಸಿಕ ಆಘಾತವಾಯಿತು. ಹಲವು ಯುವತಿಯರ ಜತೆ ಕಾರ್ತಿಕ್ ಅನೈತಿಕ ಸಂಬಂಧ ಹೊಂದಿದ್ದಾರೆ ಎಂದು ದೂರಿದ್ದಾರೆ. 

ಗಂಡ ಉದ್ಯಮಿ ಅಲ್ಲ ಎಂದ ಪತ್ನಿ

ಎಚ್‌.ಕೆ.ಫಾರ್ಮಾ ಕಾಸ್ಮೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯಲ್ಲಿ ಹರ್ಷಿತಾ ನಿರ್ದೇಶಕರಾಗಿದ್ದಾರೆ. ಕಾರ್ತಿಕ್ ಯಾವುದೇ ಬ್ಯುಸಿನೆಸ್ ಮ್ಯಾನ್ ಅಲ್ಲ. ಆತ ಕೇವಲ ಪತ್ನಿ ಹರ್ಷಿತಾ ಒಡೆತನದ ಕಾಸ್ಮೆಟಿಕ್ ಕ್ಲಿನಿಕ್‌ನ ಮಾರ್ಕೆಟಿಂಗ್ ನೋಡಿಕೊಳ್ಳುತ್ತಿದ್ದ. ಕಳೆದ ವರ್ಷ ಆತನಿಗೆ ಕನ್ನಡದ ರೀಲ್ಸ್ ಸ್ಟಾರ್ ಪರಿಚಯವಾಗಿತ್ತು. ಬಳಿಕ ಮದುವೆ ಆಗುವುದಾಗಿ ನಂಬಿಸಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ವಂಚಿಸಿದ್ದ ಎಂದು ಆರೋಪಿಸಲಾಗಿದೆ.

1.2 ಕೋಟಿ ವಂಚನೆ ಆರೋಪ ಮಾಡಿದ್ದ ಉದ್ಯಮಿ

ಆದರೆ ತನಗೆ ಬ್ಲ್ಯಾಕ್‌ಮೇಲ್ ಮಾಡಿ 1.2 ಕೋಟಿ ರು.ಹಣ ವಸೂಲಿ ಮಾಡಿದ್ದಾಳೆ ಎಂದು ಆರೋಪಿಸಿ ರೀಲ್ಸ್ ಸ್ಟಾರ್‌ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರನ್ವಯ ರೀಲ್ಸ್ ಸ್ಟಾರ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಈಗ ಬ್ಲ್ಯಾಕ್‌ಮೇಲ್ ಪ್ರಕರಣಕ್ಕೆ ಉದ್ಯಮಿ ಪತ್ನಿ ಟ್ವಿಸ್ಟ್ ನೀಡಿದ್ದು, ತಮ್ಮ ಪತಿ ಮೇಲೆಯೇ ಪೊಲೀಸರಿಗೆ ಆಕೆ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಷ್ಟೇ ಕೆಣಕಿದ್ರೂ ಕೋಪ ಬರಲ್ವಂತೆ ಈ 3 ರಾಶಿಯ ಮಹಿಳೆಯರಿಗೆ, ಇವರದ್ದು ಪ್ರೀತಿಯೇ ಜೀವಾಳ
ಅಸೂಯೆಯಿಂದ ನಮ್ಮನ್ನು ಕೆಳಗೆ ಇಳಿಸಲು ಪ್ರಯತ್ನಿಸುವವರ ಬಲೆಯಿಂದ ಪಾರಾಗಲು ಏನ್ ಮಾಡ್ಬೇಕು?