ನಿಜವಾದ ಪ್ರೀತಿಗೆ ಸೋಲಿಲ್ಲ. ಒಬ್ಬ ವ್ಯಕ್ತಿ ಹೃದಯದಿಂದ ಪ್ರೀತಿ ಮಾಡ್ತಿದ್ದರೆ ಅದು ಸಿಕ್ಕೇ ಸಿಗುತ್ತೆ. ಕೆಲವೇ ದಿನಗಳಲ್ಲಿ ಆ ಪ್ರೀತಿ ಭಗ್ನವಾಗಲು ಸಾಧ್ಯವಿಲ್ಲ. ಏನೇ ಬಂದ್ರೂ ಇಬ್ಬರು ಜೊತೆಗಿರ್ತಾರೆ. ಅದಕ್ಕೆ ಅಮೆರಿಕಾ ಅಧ್ಯಕ್ಷ ಹಾಗೂ ಅವರ ಪತ್ನಿ ಸಾಕ್ಷ್ಯ.
ವ್ಯಾಲಂಟೈನ್ಸ್ ಡೇ ಮುಗಿದಿದೆ. ಆದ್ರೆ ಪ್ರೇಮಿಗಳಿಗೆ ವರ್ಷ ಪೂರ್ತಿ ವ್ಯಾಲಂಟೈನ್ಸ್ ಆಗಿರುತ್ತೆ. ಸಾಮಾನ್ಯ ಜನರಿಗೆ ಸೆಲೆಬ್ರಿಟಿಗಳ ಮೇಲೆ ಒಂದು ಕಣ್ಣಿರುತ್ತೆ. ಅವರ ಪ್ರೇಮದ ಬಗ್ಗೆ ತಿಳಿದುಕೊಳ್ಳುವ ಕುತೂಹಲ ವಿರುತ್ತದೆ. ಕೆಲವರು ಸೆಲೆಬ್ರಿಟಿಗಳ ಪ್ರೀತಿಯನ್ನೇ ಪಾಲಿಸಲು ಮುಂದಾಗ್ತಾರೆ. ಸೆಲೆಬ್ರಿಟಿಗಳ ಪ್ರೇಮಕಥೆಯೇ ಪ್ರೇರಣೆಯಾಗಿರುತ್ತದೆ. ಸಧ್ಯಕ್ಕೆ ಅಮೆರಿಕ ರಾಷ್ಟ್ರಪತಿ ಜೋ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಅವರ ಲವ್ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಮೆರಿಕ (America) ರಾಷ್ಟ್ರಪತಿ ಜೋ ಬೈಡನ್ (Joe Biden) ಮತ್ತು ಫಸ್ಟ್ ಲೇಡಿ ಜಿಲ್ ಬೈಡೆನ್ ಪ್ರೇಮಕಥೆ (Love Story) : ಅಮೆರಿಕ ರಾಷ್ಟ್ರಪತಿಯಾಗಿರುವ ಜೋ ಬೈಡೆನ್ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಅವರು ಹಾಗೂ ಅವರ ಪತ್ನಿ ಜಿಲ್ ಬೈಡನ್ ಅವರ ಮೊದಲ ಭೇಟಿ, ಡೇಟಿಂಗ್ ಕುರಿತು ಹೇಳಿಕೊಂಡಿದ್ದಾರೆ.
ಹೆಂಡ್ತಿ ಗರ್ಭಿಣಿಯಾಗಲು ತನ್ನ ವೀರ್ಯವನ್ನು ತಂದೆಯ ವೀರ್ಯದೊಂದಿಗೆ ಬೆರೆಸಿದ ವ್ಯಕ್ತಿ!
ಪ್ರೇಮಿಗಳ ದಿನದಂದು ‘ಮೀಟ್ ಕ್ಯೂಟ್ NYC’ ಮೂಲಕ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ಜೋ ಬೈಡನ್ ಹಾಗೂ ಅವರ ಪತ್ನಿ ಜಿಲ್ ಬೈಡನ್ ಇಬ್ಬರೂ ತಮ್ಮ ಪ್ರೇಮಕಥೆಯ ಬಗ್ಗೆ ಮಾತನಾಡಿದ್ದಾರೆ. ಜೋ ಬೈಡನ್ ಅವರು, ನಮ್ಮಿಬ್ಬರ ಮೊದಲ ಭೇಟಿ ನನ್ನ ಅಣ್ಣನ ಸಹಾಯದಿಂದ ಆಯಿತು. ನಾವು ಮೊದಲ ಬಾರಿ ಒಂದು ಬ್ಲೈಂಡ್ ಡೇಟ್ ನಲ್ಲಿ ಭೇಟಿಯಾದೆವು. ನನ್ನ ಅಣ್ಣ ನನಗೆ ಫೋನ್ ಮಾಡಿ, ನಾನು ಅವಳ ಜೊತೆ ಶಾಲೆಗೆ ಹೋಗುತ್ತೇನೆ. ಅವಳು ಬಹಳ ಸುಂದರವಾಗಿದ್ದಾಳೆ. ಅವಳಿಗೆ ರಾಜಕೀಯ ಎಂದರೆ ಇಷ್ಟವಿಲ್ಲ ಎಂದು ಹೇಳಿದ್ದ ಎಂದು ತಮ್ಮ ಮೊದಲ ಭೇಟಿಯ ಬಗ್ಗೆ ಹೇಳಿಕೊಂಡಿದ್ದಾರೆ.
ಎಂಥಾ.. ಮಕ್ಕಳನ್ನ ಹೆತ್ತುಬಿಟ್ಟೆ ಪಂಕಜಾಕ್ಷೀ; ಆಸ್ತಿಗಾಗಿ ಹೆತ್ತ ತಾಯಿಯನ್ನೇ ಗೃಹ ಬಂಧನದಲ್ಲಿಟ್ಟ ಮಕ್ಕಳು
ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ ಮೊದಲ ಮಹಿಳೆ ಜಿಲ್ ಬೈಡೆನ್ ಅವರು, ಬ್ಲೈಂಡ್ ಡೇಟ್ ನಲ್ಲಿ ಭೇಟಿಯಾದ ನಂತರ ಬೈಡನ್ ಅವರು ಒಂದು ಶನಿವಾರ ನನಗೆ ಕರೆ ಮಾಡಿ ನಾನು ಬೈಡನ್ ಎಂದು ಹೇಳಿದರು. ಅದಕ್ಕೆ ನಾನು ನಿಮಗೆ ನನ್ನ ಫೋನ್ ನಂಬರ್ ಹೇಗೆ ಸಿಕ್ಕಿತು ಎಂದು ಕೇಳಿದೆ. ನನ್ನ ಪ್ರಶ್ನೆಗೆ ಉತ್ತರ ಕೊಡದೇ ಬೈಡನ್, ಇವತ್ತು ರಾತ್ರಿ ನೀನು ನನ್ನ ಜೊತೆ ಹೊರಗಡೆ ಬರುತ್ತೀಯಾ ಎಂದು ಕೇಳಿದರು. ಆಗ ನಾನು ಕ್ಷಮಿಸಿ, ನಾನು ಈಗಾಗಲೇ ಬೇರೆಯೊಬ್ಬರ ಜೊತೆ ಡೇಟ್ ನಲ್ಲಿದ್ದೇನೆ ಎಂದೆ ಆ ಡೇಟ್ ಮುರಿದೆ ಎಂದು ಜಿಲ್ ಹೇಳಿದ್ದಾರೆ.
ಡೇಟ್ ಮುರಿದಳು ಆದರೆ ಹೃದಯ ಗೆದ್ದಳು ಎಂದ ಬೈಡೆನ್ : ನಾನು ಡೇಟ್ ಗೆ ಕರೆದಾಗ ಜಿಲ್ ಅದಕ್ಕೆ ಒಪ್ಪದೇ ಆ ಡೇಟ್ ಮುರಿದಳು ಆದರೆ ನನ್ನ ಹೃದಯ ಗೆದ್ದಳು ಎಂದು ರಾಷ್ಟ್ರಪತಿ ಜೋ ಬೈಡೆನ್ ಹೇಳಿಕೊಂಡಿದ್ದಾರೆ. ಎರಡು ಬಾರಿ ಭೇಟಿ ಆಗ್ತಿದ್ದಂತೆ ಈ ಹುಡುಗಿ ಜೊತೆಯೇ ನನ್ನ ಮದುವೆ ಎಂದು ಬೈಡನ್ ನಿರ್ಧರಿಸಿದ್ದರು. ಮದುವೆಯಾಗುವ ಮೊದಲು ಬೈಡೆನ್ ಅವರು 5 ಬಾರಿ ನನಗೆ ಪ್ರಪೋಸ್ ಮಾಡಿದ್ದಾರೆ. ನಾವಿಬ್ಬರೂ ಒಟ್ಟಿಗೇ ಇದ್ದು 48 ವರ್ಷವಾಗಿದೆ. ಇನ್ನು ಮುಂದೆಯೂ ನಾವು ಜೊತೆಯಲ್ಲೇ ಇರುತ್ತೇವೆ ಎಂದು ಜಿಲ್ ಬೈಡೆನ್ ಹೇಳಿದ್ದಾರೆ.
ಇವರ ಮೊದಲ ಭೇಟಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಈವರೆಗೆ ಏಳು ಮಿಲಿಯನ್ ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅನೇಕರು ಕಮೆಂಟ್ ಮಾಡ್ತಿದ್ದಾರೆ. ಇದು ಎಷ್ಟು ಪ್ರೀತಿಯ ಹಾಗೂ ಪ್ರೇರಣೆಯ ಕಥೆಯಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.