
ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಡಾ.ಅಂಬೇಡ್ಕರ್ ವಿವಾಹ ಯೋಜನೆಯಡಿ ಹೊಸದಾಗಿ ಮದುವೆಯಾಗುವ ಜೋಡಿಗಳಿ 2.50 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುತ್ತದೆ. ದಲಿತರನ್ನೂ ಒಳಗೊಂಡ ಅಂತರ್ಜಾತಿ ವಿವಾಹಕ್ಕೆ ಪ್ರೋತ್ಸಾಹ ಎನ್ನುವ ರೀತಿಯಲ್ಲಿ ಈ ಸಹಾಯಧನ ನೀಡಲಾಗುತ್ತದೆ. ನಾನ್ ಜ್ಯುಡಿಷಿಯಲ್ ಸ್ಟ್ಯಾಂಪ್ ಪೇಪರ್‌ನಲ್ಲಿ ಪ್ರೀ ಸ್ಟ್ಯಾಂಪ್ ರಶೀದಿಯನ್ನು ಪಡೆದ ಮೇಲೆ 1.50 ಲಕ್ಷ ರೂಪಾಯಿಯನ್ನು ಅರ್ಹ ದಂಪತಿಗಳಿಗೆ ಆರ್‌ಟಿಜಿಎಸ್/ನೆಫ್ಟ್ ಮೂಲಕ ದಂಪತಿಗಳ ಜಂಟಿ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ಉಳಿದ ಒಂದು ಲಕ್ಷ ರೂಪಾಯಿ ಮೊತ್ತವನ್ನು ಮೂರು ವರ್ಷಗಳ ಅವಧಿಗೆ ಫಿಕ್ಸಡ್ ಡೆಪಾಸಿಟ್‌ನಲ್ಲಿ ಇರಿಸಲಾಗುತ್ತದೆ.ಈ ಮೊತ್ತವನ್ನ ಮೂರು ವರ್ಷಗಳ ಅವಧಿ ಮುಗಿದ ಬಳಿಕ ಬಡ್ಡಿಯೊಂದಿಗೆ ದಂಪತಿಗೆ ನೀಡಲಾಗುತ್ತದೆ. ಇದರಲ್ಲಿ ಮದುವೆ ಕಾನೂನುಬದ್ಧ ಅಂತರ್ಜಾತಿ ವಿವಾಹ ಆಗಿರಬೇಕು.
ಇದಕ್ಕೆ ಇರುವ ಮಾನದಂಡಗಳೇನು ಅಂತಾ ನೋಡೋದಾದರೆ, ಈ ಪ್ರೋತ್ಸಾಹ ಧನ ಯೋಜನೆಯಡಿ ಪ್ರಯೋಜನ ಪಡೆಯಬೇಕಾದಲ್ಲಿ ಅಂತರ್ ಜಾತಿ ವಿವಾಹ ಕಡ್ಡಾಯವಾಗಿ ಆಗಿರಬೇಕು. ಸಂಗಾತಿಗಳಲ್ಲಿ ಒಬ್ಬರು ಕಡ್ಡಾಯವಾಗಿ ಪರಿಶಿಷ್ಟ ಜಾತಿಯವರಿಗೆ ಸೇರಿದವರಾಗಿರಬೇಕು. ಇಬ್ಬರೂ ಪರಿಶಿಷ್ಟ ಜಾತಿಯವರಾಗಿದ್ದರೆ, ಇದಕ್ಕೆ ಅರ್ಹರಾಗೋದಿಲ್ಲ. ಕಾನೂನು ಪ್ರಕಾರ ಮಾನ್ಯವಾಗಿ ಮದುವೆಯಾಗಿರಬೇಕು ಅದರೊಂದಿಗೆ ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ನೋಂದಣಿ ಕಡ್ಡಾಯವಾಗಿ ಆಗಿರಬೇಕು. ಇಬ್ಬರಲ್ಲಿ ಯಾರಿಗೂ ಇದು 2ನೇ ಮದುವೆಯಾಗಿರಬಾರದು. ಇನ್ನು ಮದುವೆಯಾದ ಒಂದೇ ವರ್ಷದೊಳಗೆ ಅರ್ಜಿ ಸಲ್ಲಿಸಿದರೆ, ಮಾತ್ರವೇ ಈ ಪ್ರೋತ್ಸಾಹ ಧನಕ್ಕೆ ಅರ್ಹರಾಗಿರುತ್ತಾರೆ. ಮದುವೆಯಾಗುವ ಸಂಗಾತಿಗಳ ಪೈಕಿ ಒಬ್ಬರು ಕಡ್ಡಾಯವಾಗಿ ದಲಿತರಾಗಿರಬೇಕು. ಇನ್ನು ದಂಪತಿಗಳ ವಾರ್ಷಿಕ ಆದಾಯ 5 ಲಕ್ಷ ರೂಪಾಯಿಗಿಂತಲೂ ಕಡಿಮೆ ಇರಬೇಕು ಹಾಗಿದ್ದಲ್ಲಿ ಮಾತ್ರವೇ ಈ ಪ್ರೋತ್ಸಾಹ ಧನ ಸಿಗಲಿದೆ.
ಅರ್ಜಿಯ ನಮೂನೆ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, 1955ರ ಹಿಂದೂ ವಿವಾಹ ಕಾಯ್ದೆ ಅನ್ವಯ ಮದುವೆಯ ಪ್ರಮಾಣ ಪತ್ರ, ಇದೇ ಕಾಯ್ದೆಯ ಅಡಿಯಲ್ಲಿ ಧರ್ಮದ ಪ್ರಮಾಣ ಪತ್ರ, ಸಂಸದ/ಶಾಸಕರಿಂದ ಶಿಫಾರಸು ಪ್ರಮಾಣ ಪತ್ರ, ಅರ್ಜಿದಾರರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ಫೋಟೋ ಅಗತ್ಯ ದಾಖಲೆಗಳಾಗಿದೆ. ಇವುಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸಲ್ಲಿಕೆ ಮಾಡಿದರೆ, ಇದರ ಪರಿಶೀಲನೆ ಮಾಡಿ ಹಣ ಮಂಜೂರು ಮಾಡುತ್ತಾರೆ.
Extramarital Affair: ಮದುವೆ ಆದ್ಮೇಲೆ ಪರಪುರುಷನ ಜೊತೆ ಸಂಬಂಧ ತಪ್ಪಲ್ಲವಂತೆ!
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2013 ರಲ್ಲಿ ಸಾಮಾಜಿಕ ಏಕೀಕರಣದ ಅಂತರ್ ಜಾತಿ ವಿವಾಹಗಳ ಕಾರ್ಯಕ್ರಮಕ್ಕಾಗಿ ಡಾ. ಅಂಬೇಡ್ಕರ್ ಯೋಜನೆಯನ್ನು ಪ್ರಾರಂಭಿಸುವುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.