99ರ ಈ ಅಜ್ಜಿಗೆ 30ರ ಗೆಳೆಯ | ಕೊರೋನಾ ಕಾಲದಲ ಸುಂದರ ಸ್ನೇಹ
ಅಹಮದಾಬಾದ್(ಮೇ.06): ಕೊರೋನಾ ಸಂದರ್ಭ ಬಹಳಷ್ಟು ಅಚ್ಚರಿ ಮೂಡಿಸೋ ಘಟನೆಗಳು ನಡೆಯುತ್ತಿವೆ. 99ರ ಅಜ್ಜಿಗೆ 30 ವರ್ಷದ ಯುವ ಆಪ್ತ ಗೆಳೆಯನಾಗಿದ್ದಾನೆ. ಇವರೀಗ ಆತ್ಮೀಯ ಸ್ನೇಹ ಜೀವಿಗಳು..! ಇದು ಕೊರೋನಾ ಎಫೆಕ್ಟ್.
ಸಾಮುಬೆನ್ ಚೌಹಾಣ್‌ಗೆ 99 ವರ್ಷ. 1200 ಬೆಡ್‌ಗಳಿದ್ದ ಕೊರೋನಾ ಆಸ್ಪತ್ರೆಯಲ್ಲಿ ಸಾಮುಬೆನ್ ಮೊದಲ ಬಾರಿ ಮನೆಯವರನ್ನು ಬಿಟ್ಟು ದೂರಾಗಿದ್ದರು, ಅಲ್ಲಿ ಅವರಿಗೆ ಹತ್ತಿರವಾಗಿದ್ದು 30 ವರ್ಷದ ಯುವಕ. ಸಾಮುಬೆನ್ ಆತಂಕ ನೋಡಿ ಅವರಿಗೆ ಧೈರ್ಯ ತುಂಬಿ ಸ್ನೇಹಿತನಾದ ಯುವಕ ಈಗ ಅವರ ಬೆಸ್ಟ್‌ಫ್ರೆಂಡ್.
undefined
ಕೊರೋನಾದಿಂದ ಮಗನ ಕೆಲ್ಸ ಹೋಯ್ತು: ತುತ್ತು ಅನ್ನಕ್ಕಾಗಿ ಮತ್ತೆ ಕೆಲಸಕ್ಕೆ ಬಂದ 73ರ ವೃದ್ಧ
ಸಾಮುಬೆನ್ ಆಸ್ಪತ್ರೆಗೆ ದಾಖಲಾದಾಗ ಶೇ 90ರಷ್ಟು ಆಕ್ಸಿಜನ್ ಮಟ್ಟವಿತ್ತು. ಆಕೆಯನ್ನು ಖಾಸಗಿ ವಾಹನದಲ್ಲೇ ಆಸ್ಪತ್ರೆಗೆ ಕರೆತಂದಿದ್ದರು ಮನೆಯವರು. ಆದರೆ ಒಂಟಿತನಕ್ಕೇನು ಮಾಡೋದು ? ಮನೆಯವರಿಗೆ ಎಂಟ್ರಿ ಇಲ್ವಲ್ಲಾ ? ಹೀಗಿದ್ದರೂ 4 ದಿನದಲ್ಲಿ ಚೇತರಿಸಿ ಮನೆಗೆ ಹೋದ್ರು ಸಾಮುಬೆನ್. ಅದಕ್ಕೆ ಕಾರಣ ಫ್ರೆಂಡ್‌ಶಿಪ್.
ಬೇಸರದಲ್ಲಿದ್ದ ಸಾಮು ಅವರನ್ನು ಮಾಲಿಕ್ ಮಾತನಾಡಿಸಿದ್ದ. ವಿಡಿಯೋ ಕಾಲ್ ಮಾಡಿ ಕುಟುಂಬದ ಜೊತೆ ಮಾತಾಡೋಕೆ ಅವಕಾಶ ಮಾಡ್ಕೊಡ್ತಿದ್ದ. ಅಂತೂ ಈಗ ಅಜ್ಜಿ ಮತ್ತು ಯುವ ಸ್ನೇಹಿತರು. ಇಂತಹ ಬಹಳಷ್ಟು ಮನ ಮಿಡಿಯುವ ಕಥೆಗಳು ಕೊರೋನಾ ವಾರ್ಡ್‌ನಲ್ಲಿದೆ. ಕೊರೋನಾ ಒಂದೇ ಅಲ್ಲವೇ, ಅದೇ ಜನರನ್ನು ಒಂದು ಮಾಡಿದೆ ಎನ್ನುತ್ತಾರೆ ಸಿವಿಲ್ ಆಸ್ಪತ್ರೆ ಅಧಿಕಾರಿಗಳು. ಕೊರೋನಾ ಜನರನ್ನು ಒಂಟಿಯಾಗಿಸುತ್ತೆ, ಯಾರನ್ನೂ ಜೊತೆಯಾಗೋಕೆ ಬಿಡದು. ದೈಹಿಕ ಆರೋಗ್ಯದ ಜೊತೆ ರೋಗಿಗೆ ಮಾನಸಿಕ ಆರೋಗ್ಯ ಬೇಕಾಗುತ್ತದೆ ಎಂದಿದ್ದಾರೆ.