ಕಾಲ್ ಯು ಬ್ಯಾಕ್ ಎನ್ನದೆ ಮೈದಾನದಿಂದಲೇ ಅನುಷ್ಕಾಗೆ ಕೊಹ್ಲಿ ವಿಡಿಯೋ ಕಾಲ್, ಪ್ರೀತಿ ಅಂದ್ರಿದು!

By Roopa Hegde  |  First Published Jul 1, 2024, 4:21 PM IST

ಇಡೀ ಜಗತ್ತೇ ಇವರನ್ನು ಕೊಂಡಾಡ್ತಿದ್ರೆ ಇವರು ಮಾತ್ರ ತಮ್ಮ ಪುಟ್ಟ ಪ್ರಪಂಚದ ಜೊತೆ ಸಂಭ್ರಮಿಸುತ್ತಿದ್ರು. ವಿಡಿಯೋ ಕಾಲ್ ಮಾಡಿ ಪತ್ನಿ ಜೊತೆ ಗೆದ್ದ ಖುಷಿ ಹಂಚಿಕೊಂಡಿದ್ರು. ವಿರಾಟ್ ಈ ಪ್ರೀತಿ ಪಾಠವನ್ನು ಪ್ರತಿಯೊಬ್ಬರೂ ಕಲಿಯಬೇಕಿದೆ. ಯಾರಿಗೆ ಮೊದಲು ಆದ್ಯತೆ ನೀಡ್ಬೇಕು ಎಂಬುದನ್ನು ತಿಳಿಯಬೇಕಿದೆ.  
 


ಟಿ20 ವಿಶ್ವಕಪ್ ಭಾರತದ ಮಡಿಲಿಗೆ ಬರ್ತಿದ್ದಂತೆ ಭಾರತೀಯರು ಹುಚ್ಚೆದ್ದು ಕುಣಿದಿದ್ದಾರೆ. ಆ ಸಂತೋಷ, ಸಂಭ್ರಮಾಚರಣೆ ಇನ್ನೂ ಕಾಣಸಿಗ್ತಿದೆ.. ಮೈದಾನದಲ್ಲಿ ಸಂಭ್ರಮಾಚರಣೆ ನಡೆಯುತ್ತಿದ್ದರೆ ವಿಶ್ವಕಪ್ ಮುಡಿಗೇರಿಸಿಕೊಳ್ಳಲು ಕಾರಣವಾದ, ಮ್ಯಾನ್ ಆಫ್ ದಿ ಮ್ಯಾಚ್ ಗೆದ್ದ ವಿರಾಟ್ ಕೊಹ್ಲಿ ಮಾತ್ರ ಮೊಬೈಲ್ ಹಿಡಿದು ನಿಂತಿದ್ರು. ವಿಡಿಯೋ ಕಾಲ್ ಮಾಡಿ ಪತ್ನಿ ಅನುಷ್ಕಾ ಜೊತೆ ಮಾತನಾಡ್ತಾ ಭಾವುಕರಾಗಿದ್ದರು. ಮೈದಾನದಲ್ಲಿ ಸಾವಿರಾರು ಮಂದಿ ಇದ್ರೂ, ಸಂಭ್ರಮಿಸಲು, ಬ್ಯುಸಿ ಎನ್ನಲು ದೊಡ್ಡ ಕಾರಣವಿದ್ರೂ ಕೊಹ್ಲಿ ಮಾಡಿದ ಕೆಲಸ ಮಾತ್ರ ಅಧ್ಬುತವಾಗಿತ್ತು. ಇದನ್ನೇ ಪ್ರೀತಿಯ ಆದ್ಯತೆ ಅನ್ನೋದು.  

ಪ್ರತಿ ದಿನ ನಾವು ಮಾಡೋದು ಸಣ್ಣಪುಟ್ಟ ಕೆಲಸವಾದ್ರೂ ನಮಗೆ ಪ್ರೀತಿ (Love) ಪಾತ್ರರ ಜೊತೆ ಮಾತನಾಡಲು ಸಮಯವಿರೋದಿಲ್ಲ. ನಾನು ಬ್ಯುಸಿ, ಆಮೇಲೆ ಮಾಡ್ತೇನೆ, ನಾಳೆ ಮಾಡ್ತೇನೆ ಅಂತಿರ್ತೇವೆ. ಆದ್ರೆ ಕೊಹ್ಲಿ (Kohli) ಎಷ್ಟೇ ಬ್ಯುಸಿ ಇದ್ರೂ ಮೊದಲು ಆದ್ಯತೆ ನೀಡಿದ್ದು ಪತ್ನಿಗೆ. ಅವರ ಜೊತೆ ತಮ್ಮ ಖುಷಿಯನ್ನು ಹಂಚಿಕೊಂಡ ನಂತ್ರವೇ ಕೊಹ್ಲಿ ಮೈದಾನದಲ್ಲಿ ಉಳಿದವರ ಜೊತೆ ಸಂಭ್ರಮಿಸಿದ್ದು. 

Tap to resize

Latest Videos

ಸಂಜಯ್ ದತ್ ಹೋಲುವ ಕರೀಷ್ಮಾ ಕಪೂರ್ ಪುತ್ರ: ಪ್ರಪಂಚದಲ್ಲಿ ಒಂದೇ ರೀತಿ 7 ಜನ ಇರ್ತಾರಂತೆ..!

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ (Anushka) ಶರ್ಮಾರಿಂದ ಮೈದಾನದ ಹೊರಗೆ ಕಲಿಯೋದು ಸಾಕಷ್ಟಿದೆ. ಅನುಷ್ಕಾ ಶರ್ಮಾ ಮೈದಾನಕ್ಕೆ ಬಂದ್ರೆ ಟೀಂ ಇಂಡಿಯಾ ಸೋಲುತ್ತೆ ಎನ್ನುವ ಆರೋಪ ಆಗಾಗ ಕೇಳಿ ಬರ್ತಿರುತ್ತದೆ. ಇದನ್ನು ಲೆಕ್ಕಿಸದೆ ಅನುಷ್ಕಾ ಸದಾ ವಿರಾಟ್ ಹಿಂದೆ ಬರ್ತಾರೆ. ಮೈದಾನದಲ್ಲಿ ಪಂದ್ಯ ಮುಗಿಯುವವರೆಗೆ ಇದ್ದು, ಕೊಹ್ಲಿಯನು ಪ್ರೋತ್ಸಾಹಿಸ್ತಾರೆ, ಗೆಲುವನ್ನು ಸಂಭ್ರಮಿಸ್ತಾರೆ. ಆದ್ರೆ ವಿಶ್ವಕಪ್ ಫೈನಲ್ ನಲ್ಲಿ ಅನುಷ್ಕಾ ಗೈರಾಗಿದ್ದರು. ಇದನ್ನು ಕೊಹ್ಲಿ ಮಿಸ್ ಮಾಡಿಕೊಳ್ತಿದ್ದರು ಅನ್ನೋದನ್ನು ಅವರ ವರ್ತನೆಯಲ್ಲೇ ತಿಳಿಯಬಹುದು.

ವಿರಾಟ್ ಕೊಹ್ಲಿಗೆ ಅನುಷ್ಕಾ ಸಂಪೂರ್ಣ ಬೆಂಬಲವಾಗಿ ನಿಂತಿದ್ದಾರೆ. ವೃತ್ತಿಯಿಂದ ದೂರವಿದ್ದು, ಮಕ್ಕಳನ್ನು ಸಂಭಾಳಿಸಿಕೊಂಡು, ಸೋತಾಗ ಕೊಹ್ಲಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದ ಅನುಷ್ಕಾ ಶರ್ಮಾ. ವಿಶ್ವಕಪ್ ನಲ್ಲಿ ಕೂಡ ಕೊಹ್ಲಿ ಕಳಪೆ ಫಾರ್ಮ್ ಬಗ್ಗೆ ಟೀಕೆಗಳು ಕೇಳಿ ಬಂದಿದ್ದವು. ಆ ಸಮಯದಲ್ಲಿ ಕೂಡ ಕೊಹ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದ್ದು ಪ್ರೀತಿಯ ಮಡದಿ. ಪತ್ನಿಯಿಂದಲೇ ನಾನು ಹೀಗಿರೋದು ಅಂತಾ ಕೊಹ್ಲಿ ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸಂದರ್ಭ ಯಾವುದೇ ಇರಲಿ ವಿರಾಟ್, ಅನುಷ್ಕಾರನ್ನು ನೆನೆಯದೆ ಬಿಡೋದಿಲ್ಲ. ಅಭ್ಯಾಸದ ಮಧ್ಯೆ, ಪತ್ನಿಗೆ ಕರೆ ಮಾಡಿ ಊಟದ ಬಗ್ಗೆ ವಿಚಾರಿಸಿದ್ದ ಅನೇಕ ವಿಡಿಯೋಗಳು ವೈರಲ್ ಆಗಿವೆ. ಈಗ ಕೊಹ್ಲಿಯ ವಿಡಿಯೋಕಾಲ್ ವಿಡಿಯೋ ಎಲ್ಲರ ಮನಸ್ಸು ಗೆದ್ದಿದೆ.

ಕೊಹ್ಲಿ ತಮ್ಮ ಖುಷಿಯನ್ನು ವಿಡಿಯೋ ಕಾಲ್ ಮೂಲಕ ಹೇಳಿದ ನಂತ್ರ ಅನುಷ್ಕಾ ಶರ್ಮಾ, ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ವಿರಾಟ್ ಫೋಟೋ ಜೊತೆ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ಈಗ ವಿರಾಟ್ ಕೊಹ್ಲಿ, ಅನುಷ್ಕಾ ಪೋಸ್ಟ್ ಗೆ ಉತ್ತರ ನೀಡಿದ್ದಾರೆ. ವಿರುಷ್ಕಾ ಇರುವ ಫೋಟೋ ಹಾಕಿದ ಕೊಹ್ಲಿ, ಮೈ ಲವ್. ನೀನಿಲ್ಲದೆ ಇದೆಲ್ಲ ಸಾಧ್ಯವಿರಲಿಲ್ಲ. ನನ್ನನ್ನು ವಿನಮ್ರಗೊಳಿಸಿರುವ ನೀನು ಪ್ರಾಮಾಣಿಕವಾಗಿ ಸರಿ ತಪ್ಪುಗಳನ್ನು ಹೇಳುತ್ತೀಯಾ. ನಾನು ನಿನಗೆ ಸದಾ ಕೃತಜ್ಞನಾಗಿದ್ದೇನೆ. ಈ ಗೆಲುವು ನನ್ನದಷ್ಟೇ ಅಲ್ಲ ನಿನ್ನದು. ಧನ್ಯವಾದಗಳು ಎಂದು ಕೊಹ್ಲಿ ಬರೆದಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸಪ್ತಪದಿಯ ಜೊತೆಗೇ ಎಂಟನೇ ಹೆಜ್ಜೆ ಇಟ್ಟ ಸೀತಾ-ರಾಮ: ವನವಾಸಕ್ಕೆ ಕಳುಹಿಸಲು ಮಾಸ್ಟರ್​ ಪ್ಲ್ಯಾನ್​!

ಇದಕ್ಕೂ ಮೊದಲು, ಅನುಷ್ಕಾ ಶರ್ಮಾ ಅವರು ಟ್ರೋಫಿಯೊಂದಿಗೆ ವಿರಾಟ್ ಕೊಹ್ಲಿಯ ಫೋಟೋ ಹಂಚಿಕೊಂಡಿದ್ದರು. ಅದರಲ್ಲಿ ನಟಿ, ನಾನು ಈ ಮನುಷ್ಯನನ್ನು ಪ್ರೀತಿಸುತ್ತೇನೆ (ವಿರಾಟ್ ಕೊಹ್ಲಿ) ಎಂದು ಶೀರ್ಷಿಕೆ ಹಾಕಿದ್ದರು. ನಿಮ್ಮನ್ನು ನನ್ನ ಮನೆ ಎಂದು ಕರೆಯಲು ನಾನು ಧನ್ಯ. ಈಗ ಒಂದು ಲೋಟ ಸ್ಪಾರ್ಕಲಿಂಗ್ ನೀರನ್ನು ಕುಡಿಯುವ ಮೂಲಕ ಸಂಭ್ರಮಿಸಿ ಎಂದು ಪೋಸ್ಟ್ ಹಾಕಿದ್ದರು. 

 
 
 
 
 
 
 
 
 
 
 
 
 
 
 

A post shared by Virat Kohli (@virat.kohli)

click me!