ಬ್ರೇಕ್ ಅಪ್ ನಂತ್ರ ಜನರು ವಿಚಿತ್ರವಾಗಿ ಆಡ್ತಾರೆ. ಕೆಲವರ ವರ್ತನೆಯನ್ನು ಅರ್ಥ ಮಾಡ್ಕೊಳ್ಳೋದು ಕಷ್ಟ. ಇಲ್ಲೊಬ್ಬ ತನ್ನ ಖಾತೆ ಖಾಲಿಯಾದ್ರೂ ಪರವಾಗಿಲ್ಲ ಅಂತ ಎಕ್ಸ್ ಗೆ ಹಣ ಹಾಕಿ ಹಿಂಸೆ ನೀಡ್ತಿದ್ದಾನೆ.
ಬ್ರೇಕ್ ಅಪ್ (Break up) ನೋವನ್ನು ಮರೆಯೋದು ಸುಲಭವಲ್ಲ. ಆದ್ರೆ ಅದೇ ಜೀವನದ ಕೊನೆಯಲ್ಲ. ಹಾಗಾಗಿ ಬಹುತೇಕರು ಅದನ್ನು ಮರೆತು ಮುಂದೆ ಹೋಗ್ತಾರೆ. ಮತ್ತೆ ಕೆಲವರು ಅದ್ರ ನೆನಪಿನಲ್ಲೇ ಜೀವನ ಮುಂದುವರೆಸ್ತಾರೆ. ಆದ್ರೆ ಮತ್ತೊಂದಿಷ್ಟು ಮಂದಿ ಸೇಡು ತೀರಿಸಿಕೊಳ್ಳುವವರೆಗೂ ಬಿಡೋದಿಲ್ಲ. ಸೋಶಿಯಲ್ ಮೀಡಿಯಾ (Social Media)ದಲ್ಲಿ ಇಂಥ ವ್ಯಕ್ತಿಗಳ ಬಗ್ಗೆ ಆಗಾಗ ಚರ್ಚೆ ಆಗ್ತಿರುತ್ತದೆ. ಈಗ ಯುವತಿಯೊಬ್ಬಳು ತಮ್ಮ ಮಾಜಿ ಬಾಯ್ ಫ್ರೆಂಡ್ (Ex Boyfriend) ಹೇಗೆ ಹಿಂಸೆ ನೀಡ್ತಿದ್ದಾರೆ ಎಂಬುದನ್ನು ಹೇಳಿದ್ದಾಳೆ. ಬ್ರೇಕ್ ಅಪ್ ನಂತ್ರ ಆಕೆ ಮಾಜಿ, ಗೂಗಲ್ ಪೇ (Google Pay)ನಲ್ಲಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡ್ತಿದ್ದಾನಂತೆ. ಅದನ್ನು ಓದಿದ ನೆಟ್ಟಿಗರು ತಮಾಷೆ ಮಾಡಲು ಶುರು ಮಾಡಿದ್ದಾರೆ.
ಆಯುಷಿ ಎಂಬುವವರು ತಮ್ಮ ಎಕ್ಸ್ ಖಾತೆ @ShutupAyushiiiದಲ್ಲಿ ಮಾಜಿ ಬಾಯ್ ಫ್ರೆಂಡ್ ಬಗ್ಗೆ ಬರೆದಿದ್ದಾಳೆ. ಆತನ ನಂಬರನ್ನು ಎಲ್ಲ ಕಡೆ ಬ್ಲಾಕ್ ಮಾಡಿದ್ದಾಳೆ. ಸೋಶಿಯಲ್ ಮೀಡಿಯಾದಲ್ಲಿ ಆತನ ಅಕೌಂಟ್ ಬ್ಲಾಕ್ ಆಗಿದೆ. ಎಲ್ಲ ದಾರಿ ಮುಗಿದ ಮೇಲೆ ಮಾಜಿ, ಗೂಗಲ್ ಪೇಯನ್ನು ಆಯ್ಕೆ ಮಾಡ್ಕೊಂಡಿದ್ದಾನೆ. ಆಕೆ ಪ್ರಕಾರ, ನಿಮಿಷಕ್ಕೆ ಒಂದು ರೂಪಾಯಿಯಂದೆ ಗೂಗಲ್ ಪೇನಲ್ಲಿ ಹಣ ಕಳಿಸ್ತಿದ್ದಾನೆ ಮಾಜಿ. ಎಲ್ಲ ಕಡೆ ಆತನನ್ನು ಬ್ಲಾಕ್ ಮಾಡಿದ ಮೇಲೆ ಗೂಗಲ್ ಪೇನಲ್ಲಿ ಪ್ರತಿ ನಿಮಿಷಕ್ಕೆ ಒಂದು ರೂಪಾಯಿ ಸೆಂಡ್ ಮಾಡ್ತಿದ್ದಾನೆ ಎಂದು ಶೀರ್ಷಿಕೆ ಹಾಕಿರುವ ಆಯುಷಿ, ಕೊನೆಯಲ್ಲಿ ಅಳುವ ಎಮೋಜಿ ಹಾಕಿದ್ದಾಳೆ.
ಇನ್ ರಿಲೇಷನ್ ಶಿಪ್ ಎಂದ ವಿಜಯ್ ದೇವರಕೊಂಡ, ಕನ್ನಡ ನಟಿಯೊಂದಿಗೆ ನಂಟಾ?
ಎಕ್ಸ್ ಖಾತೆಯ ಈ ಪೋಸ್ಟ್ ವೈರಲ್ ಆಗಿದೆ. ಲಕ್ಷಾಂತರ ಮಂದಿ ಪೋಸ್ಟ್ ನೋಡಿದ್ದಾರೆ. ಸಾವಿರಾರು ಲೈಕ್ಸ್ ಬಂದಿದೆ. ಹಾಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಒಂದು ನಿಮಿಷಕ್ಕೆ ಆತ ಒಂದು ರೂಪಾಯಿ ಕಳಿಸಿದ್ರೆ ಎಷ್ಟು ಹಣವಾಯ್ತು ಎಂಬುದನ್ನು ಲೆಕ್ಕ ಹಾಕಿದ್ದಾರೆ. ನಿಮ್ಮ ಮಾಜಿ ಇದೇ ಕೆಲಸ ಮುಂದುವರೆಸಿದ್ರೆ ತಿಂಗಳಿಗೆ ನೀವು 40 ಸಾವಿರಕ್ಕಿಂತ ಹೆಚ್ಚು ಸಂಪಾದನೆ ಮಾಡ್ಬಹುದು. ಏನೂ ಕೆಲಸ ಮಾಡದೆ ಕುಳಿತಲ್ಲೇ ಹಣ ಬರುತ್ತೆ ಅಂದ್ರೆ ಟೆನ್ಷನ್ ಏಕೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಿಮಿಷದ ಲೆಕ್ಕದಲ್ಲಿ ನೋಡೋದಾದ್ರೆ ನೀವು ದಿನಕ್ಕೆ 1440 ರೂಪಾಯಿ ಪಡೆಯುತ್ತೀರಿ ಎಂದು ಇನ್ನೊಬ್ಬರು ಹೇಳಿದ್ದಾರೆ.
'ಮಕ್ಕಳ ಕತ್ತು ಹಿಸುಕುವಾಗಲೂ ಮನಸ್ಸು ಕರಗಲಿಲ್ಲವಾ..' ಗಂಡನ ಮೇಲಿನ ಅನುಮಾನಕ್ಕೆ ಮಕ್ಕಳನ್ನು ಕೊಂದ ಪಾಪಿ ತಾಯಿ!
ಪ್ರತಿ 10 ಸಾವಿರ ರೂಪಾಯಿ ನಂತ್ರ ಅನ್ಲಾಕ್ ಮಾಡಿ. ಮತ್ತೆ ಅವರಿಗೆ ಹಾಯ್ ಹೇಳಿ ಬ್ಲಾಕ್ ಮಾಡಿ. ಇದನ್ನು ರಿಪಿಟ್ ಮಾಡಿದ್ರೆ ಯಶಸ್ಸು ನಿಮಗೆ ಸಿಗುತ್ತದೆ ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ. ಎರಡು ದಿನ ಮಾಡ್ತಾನೆ, ಹಣ ಖಾಲಿ ಆದ್ಮೇಲೆ ಆತನೇ ಸುಮ್ಮನಾಗ್ತಾನೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಆತ ಹೀಗೆ ಮೂರು ವರ್ಷ ಕಳಿಸಿದ್ರೆ ಜೋಮೋಟೋ ಓನರ್ ಬಳಿ ಇರುವಷ್ಟು ಹಣ ನಿಮ್ಮದಾಗುತ್ತದೆ, ಅವರನ್ನು ಅಲ್ಲೂ ಬ್ಲಾಕ್ ಮಾಡಿ, ಈಗ ಎಷ್ಟು ಹಣ ಸಂಪಾದನೆಯಾಗಿದೆ?, ಬಂದ ಹಣವನ್ನು ಏನ್ ಮಾಡ್ಬೇಕು ಎಂಬುದು ಗೊತ್ತಾಗ್ತಿಲ್ಲ ಎಂದಾದ್ರೆ ಮ್ಯೂಚ್ಯುವಲ್ ಫಂಡ್ನಲ್ಲಿ ಹೂಡಿಕೆ ಮಾಡಿ, ಶಾಪಿಂಗ್ ಮಾಡಿ ಹೀಗೆ ಬಳಕೆದಾರರು ನಾನಾ ಸಲಹೆಗಳನ್ನು ನೀಡ್ತಾ ತಮಾಷೆ ಮಾಡ್ತಿದ್ದಾರೆ.
ಇದು ಕೇಳಲು ಚೆಂದ. ಆದ್ರೆ ಅನುಭವಿಸಿದವರಿಗೆ ಅದ್ರ ಕಷ್ಟ ಗೊತ್ತಾಗುತ್ತದೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಹುಡುಗಿಯೊಬ್ಬಳು ಬ್ರೇಕ್ ಅಪ್ ಆದ್ಮೇಲೆ ಫುಡ್ ಡೆಲಿವರಿ ಆಪ್ನಲ್ಲಿ ಕೆಲಸ ಮಾಡುವ ಮಾಜಿ, ನನ್ನ ಲೊಕೇಶನ್ ಟ್ರ್ಯಾಕ್ ಮಾಡಿ ಕೆಟ್ಟ ಕೆಟ್ಟ ಮೆಸ್ಸೇಜ್ ಮಾಡ್ತಾನೆ ಎಂದಿದ್ದಳು. ಹುಡುಗಿ ಪರ ನಿಂತಿದ್ದ ನೆಟ್ಟಿಗರು, ಇಂಟರ್ನೆಟ್ ದುರ್ಬಳಕೆ ಬಗ್ಗೆ ಮಾತನಾಡಿದ್ದರು.
Blocked him from everywhere now he is sending 1rs on gpay every fkin minute😭
— Ayushi (@ShutupAyushiii)