ಕ್ಷಮಾ ಬಿಂದು ಬಳಿಕ ಮತ್ತೊಂದು ಸೋಲೋಗಮಿ ! ದೈಹಿಕ ಸಂಪರ್ಕ ಮಾಡಲು ಪುರುಷರೇ ಬೇಕಾಗಿಲ್ಲ ಎಂದ ನಟಿ

By Suvarna NewsFirst Published Aug 21, 2022, 9:38 AM IST
Highlights

ಮದುವೆ ಅಂದ್ಮೇಲೆ ಹುಡುಗ–ಹುಡುಗಿ ಇರ್ಲೇಬೇಕು. ಇತ್ತೀಚಿನ ದಿನಗಳಲ್ಲಿ ಹುಡುಗಿ- ಹುಡುಗಿ, ಹುಡುಗ–ಹುಡುಗನ ಮದುವೆ ಕೂಡಾ ನಡೆಯುತ್ತೆ. ಅಷ್ಟೇ ಅಲ್ಲ, ಇತ್ತೀಚಿಗೆ ಗುಜರಾತ್‌ನ ಕ್ಷಮಾ ಬಿಂದು ತನ್ನನ್ನೇ ತಾನು ಮದುವೆಯಾಗಿದ್ದು ಎಲ್ಲೆಡೆ ಅಚ್ಚರಿ ಮೂಡಿಸಿತ್ತು. ಹಾಗೆಯೇ ಹಿಂದಿ ಕಿರುತೆರೆ ನಟಿಯೊಬ್ಬರು ಸ್ವಯಂ ವಿವಾಹವಾಗಿದ್ದು, ದೈಹಿಕ ಸಂಪರ್ಕ ಮಾಡಲು ಪುರುಷರೇ ಬೇಕಾಗಿಲ್ಲ ಎಂದಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಇತ್ತೀಚಿನ ದಿನಗಳಲ್ಲಿ ಸೊಲೋಗಮಿ ಎಂಬ ಪದ ಭಾರಿ ಸದ್ದು ಮಾಡುತ್ತಿದೆ. ತಿಂಗಳುಗಳ ಹಿಂದೆ ಗುಜರಾತಿನ ಕ್ಷಮಾ ಬಿಂದು ಸೊಲೋಗಮಿ ಮದುವೆಯಾಗಿ ಸುದ್ದಿಗಳ ಕೇಂದ್ರ ಬಿಂದುವಾಗಿದ್ದರು. ವರನನ್ನು ವರಿಸಲು ಇಷ್ಟವಿಲ್ಲದ ಕಾರಣ, ಏಕಾಂಗಿಯಾಗಿ ಜೀವಿಸಲು ನಿರ್ಧರಿಸಿದ ಕ್ಷಮಾ ಬಿಂದು ಸ್ವಯಂ ವಿವಾಹದ ನಿರ್ಧಾರ ತೆಗೆದುಕೊಂಡಿದ್ದರು. ಭಾರತದಲ್ಲಿ ತನ್ನನ್ನು ತಾನು ಮದುವೆಯಾದ ಮೊದಲ ಮಹಿಳೆ ಇವರು. ಈ ಸ್ವಯಂ-ವಿವಾಹದ ಪರಿಕಲ್ಪನೆಯನ್ನು ಸೋಲೋಗಮಿ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಸೋಲೋಗಮಿ ವಿವಾಹ ನಡೆದಿದ್ದು ಕೂಡ ಇದೇ ಮೊದಲು. ಅದೇ ರೀತಿ ಹಿಂದಿ ಕಿರುತೆರೆ ನಟಿ ಕನಿಷ್ಕಾ ಸೋನಿ ಸ್ವಯಂ ವಿವಾಹವಾಗಿದ್ದಾರೆ. ಪವಿತ್ರ ರಿಶ್ತಾ ಮತ್ತು ದಿಯಾ ಔರ್ ಬಾತಿ ಹಮ್ ಎಂಬ ಟಿವಿ ಕಾರ್ಯಕ್ರಮಗಳಲ್ಲಿ ನಟಿಸಿ ಹೆಚ್ಚು ಹೆಸರುವಾಸಿಯಾದ ನಟ, ಆಗಸ್ಟ್ 6ರಂದು ತನ್ನನ್ನು ಮದುವೆಯಾಗಿರುವುದಾಗಿ ಘೋಷಿಸಿಕೊಂಡರು.

ಸೋಲೋಗಮಿ ಎಂದರೇನು ?
ಸೊಲೊಗಮಿ ಎಂದರೆ ಒಬ್ಬ ವ್ಯಕ್ತಿಯು ತನ್ನನ್ನು ತಾನೇ ಮದುವೆ (Marriage)ಯಾಗುವುದು ಎಂದರ್ಥ. ಸೊಲೊಗಾಮಿಯನ್ನು ಒಟೊಗಾಮಿ ಎಂದೂ ಸಹ ಕರೆಯಲಾಗುತ್ತದೆ. ಸೊಲೊಗಾಮಿ ಆಗುವವರು ಇದು ತಮ್ಮ ಮೌಲ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ತಮ್ಮನ್ನು ತಾವು ಪ್ರೀತಿಸುವ ಒಂದು ಮಹತ್ತರ ಹೆಜ್ಜೆ ಎಂದು ಅವರು ಹೇಳುತ್ತಾರೆ. ಇದನ್ನು ಸ್ವಯಂ-ವಿವಾಹ ಎಂದೂ ಕರೆಯಬಹುದು. 

Sologomy ಅಂದ್ರೇನು ? ಇದಕ್ಕಿದ್ಯಾ ಕಾನೂನು ಮಾನ್ಯತೆ ?

ನಾನೇ  ಶಿವ, ನಾನೇ ಶಕ್ತಿ ಎಲ್ಲವೂ ನನ್ನೊಳಗೆ ಇದೆ
'ನನ್ನನ್ನು ನಾನೇ ಮದುವೆಯಾಗಿದ್ದೇನೆ. ನನ್ನ ಎಲ್ಲಾ ಕನಸುಗಳನ್ನು ನಾನು ಸ್ವಂತವಾಗಿ ಈಡೇರಿಸಿಕೊಂಡಿದ್ದೇನೆ ಮತ್ತು ನಾನು ಪ್ರೀತಿಸುತ್ತಿರುವ ಏಕೈಕ ವ್ಯಕ್ತಿ ನಾನೇ. ನಾನು ಯಾವಾಗಲೂ ಒಂಟಿ (Alone)ಯಾಗಿ ಮತ್ತು ನನ್ನ ಗಿಟಾರ್‌ನೊಂದಿಗೆ ಏಕಾಂತದಲ್ಲಿ ಸಂತೋಷವಾಗಿರುತ್ತೇನೆ. ನಾನು ದೇವತೆ, ಸ್ಟ್ರಾಂಗ್ ಮತ್ತು ಪವರ್‌ಫುಲ್, ಶಿವ ಮತ್ತು ಶಕ್ತಿ ಎಲ್ಲವೂ ನನ್ನೊಳಗೆ ಇದೆ, ಧನ್ಯವಾದಗಳು" ಎಂದು ನಟಿ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬರೆದು ಅವರು ಮಂಗಳಸೂತ್ರ ಮತ್ತು ಸಿಂಧೂರ್ ಧರಿಸಿರುವ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್ ವೈರಲ್ ಆದ ನಂತರ, ಸಾಮಾಜಿಕ ಮಾಧ್ಯಮ ಬಳಕೆದಾರರು ಏಕಾಂಗಿಯಾಗಿ ಮದುವೆಯಾಗಿರುವ ಆಕೆಯ ನಿರ್ಧಾರಕ್ಕಾಗಿ ಅವಳನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಇತ್ತೀಚೆಗೆ, ನಟಿ ಮತ್ತೊಂದು ಪೋಸ್ಟ್ ಅನ್ನು ಪೋಸ್ಟ್ ಮಾಡಿದ್ದು, ಅಲ್ಲಿ ಪುರುಷನ ಬದಲು ತನ್ನನ್ನು ಮದುವೆಯಾಗುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಅಗೌರವಗೊಳಿಸಿದ್ದಕ್ಕಾಗಿ ತನ್ನನ್ನು ಹೀಯಾಳಿಸಿದ ಜನರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಮಹಿಳೆಗೆ ಲೈಂಗಿಕತೆಗಾಗಿ ಪುರುಷನ ಅಗತ್ಯವಿಲ್ಲ
ಕನಿಷ್ಕಾ ಸಿಂಧೂರ ಮತ್ತು ಮಾಂಗಲ್ಯ ಧರಿಸಿರುವ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ವೀಡಿಯೊದಲ್ಲಿ ಮಾತನಾಡಿ, ನನ್ನ  ಪೋಸ್ಟ್‌ನಲ್ಲಿ ನಾನು ನನ್ನನ್ನು ಮದುವೆಯಾದ ಬಗ್ಗೆ ಪ್ರಸ್ತಾಪಿಸಿದಾಗ ವಿಚಿತ್ರ ರೀತಿಯ ಕಾಮೆಂಟ್‌ಗಳು ಬಂದಿವೆ. ಈ ಮದುವೆ ಬಗ್ಗೆ ನಾನು ದೃಢ ನಿರ್ಧಾರ ತೆಗೆದುಕೊಂಡಿದ್ದೆ. ನಾನು ವಿಜ್ಞಾನವನ್ನು ಕಡೆಗಣಿಸಿದ್ದೇನೆ ಎಂದು ಬಹಳಷ್ಟು ಜನರು ಹೇಳಿದ್ದಾರೆ. ಅವರು ನನ್ನ ಲೈಂಗಿಕ ಜೀವನದ ಬಗ್ಗೆ ಕೇಳುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನವು ಸಾಕಷ್ಟು ಬೆಳೆದಿದೆ. ಮಹಿಳೆಗೆ ಲೈಂಗಿಕತೆ (Sex)ಗಾಗಿ ಪುರುಷನ ಅಗತ್ಯವಿಲ್ಲ ಎಂದು ನಾನು ನಿಮಗೆ ಪ್ರಾಮಾಣಿಕವಾಗಿ ಹೇಳುತ್ತೇನೆ ಎಂದಿದ್ದಾರೆ.

ಸೊಲೊಗಾಮಿಯ ಅರ್ಥ ನಿಮಗೆ ತಿಳಿದಿದೆಯೇ? ಯಾಕೆ ಈ ಟ್ರೆಂಡ್ ಹೆಚ್ಚುತ್ತಿದೆ?

ನನ್ನನ್ನು ನಾನು ಪ್ರೀತಿಸುತ್ತಿರುವುದರಿಂದ ಸ್ವಯಂ ಮದುವೆಯಾದೆ
ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಕನಿಷ್ಕಾ ಹೀಗೆ ಬರೆದಿದ್ದಾರೆ, 'ನೀವು ನನ್ನ ಸ್ವಯಂ ವಿವಾಹದ ನಿರ್ಧಾರದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಎತ್ತುತ್ತಿರುವಿರಿ ಎಂದು ನನಗೆ ತಿಳಿದಿದೆ, ನಾನು ಭಾರತೀಯ ಸಂಸ್ಕೃತಿಯನ್ನು ನಿಜವಾಗಿಯೂ ನಂಬುತ್ತೇನೆ. ಆದರೆ ನಾನು ಏಕಾಂತದಲ್ಲಿ ವಾಸಿಸಲು ನಿರ್ಧರಿಸಿದೆ. ಮದುವೆ ಎಂದರೆ ಲೈಂಗಿಕತೆ ಮಾತ್ರವಲ್ಲ. ಅದು ಪ್ರೀತಿ ಮತ್ತು ಪ್ರಾಮಾಣಿಕತೆಯ ಸಂಬಂಧವಾಗಿದೆ. ಮತ್ತು ಮದುವೆಯಲ್ಲಿ ಈಗ ಆ ನಂಬಿಕೆಯಿದೆ ಎಂದು ನನಗೆ ಅನಿಸುತ್ತಿಲ್ಲ. ಆದ್ದರಿಂದ ಪ್ರೀತಿಯನ್ನು ಹೊರಗಿನ ಪ್ರಪಂಚದಲ್ಲಿ ಹುಡುಕಲು ಕಷ್ಟವಾದಾಗ, ಒಂಟಿಯಾಗಿ ಬದುಕುವುದು ಮತ್ತು ನನ್ನನ್ನು ಪ್ರೀತಿಸುವುದು ಉತ್ತಮ ಎಂದು ನಿರ್ಧರಿಸಿದೆ.

ಇದು ನನ್ನ ಪೂರ್ಣ ಹೃದಯ ಮತ್ತು ಆತ್ಮದಿಂದ ಪೂರ್ಣ ಪ್ರಜ್ಞಾಪೂರ್ವಕ ಮನಸ್ಸಿನಿಂದ ತೆಗೆದುಕೊಂಡ ನಿರ್ಧಾರ. ನಾನು ಈಗ ಯುಎಸ್‌ಎಯಲ್ಲಿದ್ದೇನೆ ಮತ್ತು ನನ್ನ ವೃತ್ತಿಜೀವನದತ್ತ ಗಮನಹರಿಸುತ್ತಿದ್ದೇನೆ. ಈ ಬಗ್ಗೆ ನನಗೆ ಸಂತೋಷವಾಗಿದೆ' ಎಂದು ಕನಿಷ್ಕಾ ಸೋನಿ ಹೇಳಿದ್ದಾರೆ.

ಮುಂಬೈ ವಿಶ್ವವಿದ್ಯಾನಿಲಯದಿಂದ ಫೈನಾನ್ಸ್‌ನಲ್ಲಿ MBA ಮುಗಿಸಿದ ಕನಿಷ್ಕಾ ಸೋನಿ, 2007ರಲ್ಲಿ ಹಾಡುವ ರಿಯಾಲಿಟಿ ಶೋ ಸಿಂಗರ್‌ನಲ್ಲಿ ಭಾಗವಹಿಸಿದಾಗ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಫಿಯರ್ ಫ್ಯಾಕ್ಟರ್: ಖತ್ರೋನ್ ಕೆ ಖಿಲಾಡಿ 2 ನಲ್ಲಿ ಅತಿಥಿ ಸ್ಪರ್ಧಿಯಾಗಿದ್ದರು. ನಂತರ ಕನಿಷ್ಕಾ ತಮಿಳು ಚಿತ್ರಗಳಲ್ಲಿ ಕಾಣಿಸಿಕೊಂಡಳು. 2013 ರಲ್ಲಿ ಪಥವೇರಂ ಕೊಡಿ ಚಿತ್ರ, ಮತ್ತು ದೇವರಾಯ ಮತ್ತು ಯುವರಾಜಯಂ ಚಿತ್ರಗಳನ್ನು ಮಾಡಿದರು. ಅವರು ದೋ ದಿಲ್ ಏಕ್ ಜಾನ್, ಪವಿತ್ರಾ ರಿಶ್ತಾ, ದಿಯಾ ಔರ್ ಬಾತಿ ಹಮ್ ಮತ್ತು ದೇವೋನ್ ಕೆ ದೇವ್...ಮಹಾದೇವ್ ನಂತಹ ಟಿವಿ ಶೋಗಳಲ್ಲಿ ನಟಿಸಿದ್ದಾರೆ.

click me!