
ಬಾಲಿವುಡ್ ನಟಿ ಕೃತಿ ಸನನ್ ಬಹಳ ಸಮಯದ ಬಳಿಕ ತಮ್ಮ ಡೇಟಿಂಗ್ ಲೈಫ್ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಹಾಟ್ ಬ್ಯೂಟಿ, ಎನ್‌ಆರ್‌ಐ ಮಿಲಿಯನೇರ್‌ನ ಉತ್ತರಾಧಿಕಾರಿ ಕಬೀರ್ ಬಹಿಯಾ ಅವರೊಂದಿಗೆ ರಿಲೇಷನ್‌ಷಿಪ್‌ನಲ್ಲಿ ಇದ್ದಾರೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ತಮ್ಮ ಜನ್ಮದಿನವನ್ನು ಗ್ರೀಸ್‌ನಲ್ಲಿ ಅವರ ಜೊತೆಯಲ್ಲಿಯೇ ಕೃತಿ ಸನನ್ ಆಚರಿಸ್ದದಾರೆ. ಇದರ ಬೆನ್ನಲ್ಲಿಯೇ ಕಬೀರ್ ಬಹಿಯಾ ಕುರಿತಾಗಿ ಕುತೂಹಲ ಹುಟ್ಟುಕೊಂಡಿದೆ. ಬುಧವಾರ, ಮಿಮಿ ನಟಿ ತನ್ನ ಗ್ರೀಸ್ ರಜೆಯ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ, ಸಹೋದರಿ ನೂಪುರ್ ಸನೋನ್ ಅವರೊಂದಿಗೆ ಭರ್ಜರಿಯಾಗಿ ಬರ್ತ್‌ಡೇಯನ್ನು ಕೃತಿ ಸನನ್ ಆಚರಿಸಿದ್ದಾರೆ. ಇದಾದ ಬಳಿಕ ಕಬೀರ್ ಬಹಿಯಾ ಕೂಡ ಇನ್ಸ್‌ಟಾಗ್ರಾಮ್‌ನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಇಬ್ಬರ ಪೋಸ್ಟ್‌ಗಳ ನಡುವೆ ಸಾಕಷ್ಟು ಹೋಲಿಕೆಗಳಿರುವ ಕಾರಣ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಭಿನ್ನ ಚಿತ್ರಗಳಲ್ಲಿ ಒಂದೇ ರೀತಿಯ ಕಪ್ಪು ಬಣ್ಣದ ಶ್ರಗ್ ಧರಿಸಿದ್ದರಿಂದ ಹಿಡಿದು, ಗ್ರೀಸ್ ದ್ವೀಪವಾದ ಮೈಕೋನೋಸ್‌ನಲ್ಲಿ ಒಟ್ಟಿಗೆ ಪಾರ್ಟಿ ಮಾಡುವವರೆಗೆ, ಅಭಿಮಾನಿಗಳು ಈಕೆಯ ಫೋಟೋದಲ್ಲಿನ ಇಂಚಿಂಚು ಹೋಲಿಕೆಗಳನ್ನೂ ಬಹಿರಂಗ ಮಾಡಿದ್ದಾರೆ. ಇಬ್ಬರೂ ಪರಸ್ಪರ ಡೇಟಿಂಗ್‌ನಲ್ಲಿದ್ದಾರೆ ಎನ್ನುವುದನ್ನು ಖಚಿತವಾಗಿ ಹೇಳಲು ಅಭಿಮಾನಿಗಳಿಗೆ ಹೆಚ್ಚಿನ ಸಮಯ ಕೂಡ ಬೇಕಾಗಲಿಲ್ಲ. ಇನ್ನೂ ಕೆಲವರು ಕೃತಿ ಸನನ್ ಅವರ ಬಾಯ್‌ಫ್ರೆಂಡ್‌ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ಬಗ್ಗೆ ಇಂಟರ್ನೆಟ್‌ಅನ್ನು ಭರ್ಜರಿಯಾಗಿ ಜಾಲಾಡಿದ್ದಾರೆ.
ಕದ್ದು ಮುಚ್ಚಿ ಸಿಗರೇಟ್ ಸೇದಲು ಹೋಗಿ ಜನರಿಗೆ ಸಿಕ್ಕಾಕೊಂಡ 'ಆದಿಪುರುಷ್' ನಟಿ ಕೃತಿ; ಪೋಸ್ಟ್ ವೈರಲ್!
1999ರ ನವೆಂಬರ್‌ನಲ್ಲಿ ಜನಿಸಿದ ಕಬೀರ್ ಬಹಿಯಾ ಯುಕೆ ಮೂಲದ ಉದ್ಯಮಿ ಎಂದು ಹೇಳಲಾಗುತ್ತದೆ, ಅವರು ಇಂಗ್ಲೆಂಡ್‌ನ ಬೋರ್ಡಿಂಗ್ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ. ಶ್ರೀಮಂತ ಕುಟುಂಬದಿಂದ ಬಂದಿರುವ ಅವರು ವರ್ಲ್ಡ್‌ವೈಡ್ ಏವಿಯೇಷನ್ ಮತ್ತು ಟೂರಿಸಂ ಲಿಮಿಟೆಡ್‌ನ ಸಂಸ್ಥಾಪಕರೂ ಆಗಿದ್ದಾರೆ. ಅವರು ಯುಕೆ ಮೂಲದ ಟ್ರಾವೆಲ್ ಏಜೆನ್ಸಿಯಾದ ಸೌಥಾಲ್ ಟ್ರಾವೆಲ್‌ನ ಮಾಲೀಕ ಕುಲ್ಜಿಂದರ್ ಬಹಿಯಾ ಅವರ ಪಪುತ್ರ. ಕುಲ್ಜಿಂದರ್ ಮತ್ತು ಅವರ ಕುಟುಂಬದ ನಿವ್ವಳ ಮೌಲ್ಯವು £ 427 ಮಿಲಿಯನ್ ಆಗಿತ್ತು, 2019 ರ ಸಂಡೇ ಟೈಮ್ಸ್ ಶ್ರೀಮಂತ ಪಟ್ಟಿಯನ್ನು ಉಲ್ಲೇಖಿಸಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ. ವರದಿಗಳನ್ನು ನಂಬುವುದಾದರೆ, 1990 ರಲ್ಲಿ ಜನಿಸಿದ ಕೃತಿ ಬಹಿಯಾಗಿಂತ ಒಂಬತ್ತು ವರ್ಷ ದೊಡ್ಡವಳಾಗಿದ್ದಾರೆ.
Highest Paid Actress: ಬಾಲಿವುಡ್‌ನ ಅತ್ಯಂತ ದುಬಾರಿ ನಟಿಯರು ಇವರು..!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.