ಇಸ್ರೇಲ್ ನಲ್ಲಿ 13 ವರ್ಷದ ಬಾಲಕಿಯರ ಮದುವೆ ನಡೆಯುತ್ತೆ. ಕಡಿಮೆ ವಯಸ್ಸಿನಲ್ಲೇ ಅವರು ಮಕ್ಕಳನ್ನು ಹೊಂದುತ್ತಾರೆ. ನಂತ್ರ ನಾನಾ ಕಾರಣಕ್ಕೆ ಪತಿಯಿಂದ ಬೇರೆಯಾಗುವ ಕೆಲ ಮಹಿಳೆಯರಿಗೆ ನೆಮ್ಮದಿ ಜೀವನ ಕಷ್ಟಸಾಧ್ಯ. ಆದ್ರೆ ಇಲ್ಲೊಬ್ಬ ಮಹಿಳೆಗೆ ಕೊನೆಗೂ ಆಕೆ ಬಯಸಿದ್ದು ಸಿಕ್ಕಿದೆ.
ಅಮ್ಮ – ಮಗಳ ಸಂಬಂಧವನ್ನು ಅಕ್ಷರದಲ್ಲಿ ಹೇಳಲು ಸಾಧ್ಯವಿಲ್ಲ. ಮಾತು, ಪದಗಳಿಗೆ ಮೀರಿದ ಬಾಂಧವ್ಯ ಅದು. ಏನೇ ಕಳೆದುಕೊಂಡ್ರು ತಾಯಂದಿರು ತಮ್ಮ ಕರುಳಿನ ಬಳ್ಳಿಯನ್ನು ಎಂದಿಗೂ ಬಿಡುವುದಿಲ್ಲ. ಅವರ ರಕ್ಷಣೆ ತಾಯಂದಿರ ಹೊಣೆಯಾಗಿರುತ್ತದೆ. ಸದಾ ಗೂಡಿನಲ್ಲಿಟ್ಟು ಮಕ್ಕಳನ್ನು ಕಾಯುವ ಜವಾಬ್ದಾರಿ ಹೊರುತ್ತಾರೆ ಅಮ್ಮಂದಿರು. ಹೊತ್ತು – ಹೆತ್ತ ಮೇಲೂ ಕೆಲ ತಾಯಂದಿರ ಅದೃಷ್ಟ ಕೆಟ್ಟಿರುತ್ತದೆ. ಮಕ್ಕಳ ಜೊತೆ ಆಟವಾಡ್ತಾ ಅವರನ್ನು ಬೆಳೆಸುವ ಭಾಗ್ಯ ಸಿಗೋದಿಲ್ಲ. ಎಷ್ಟೋ ವರ್ಷಗಳ ನಂತ್ರ ಮಕ್ಕಳು ಕಣ್ಮುಂದೆ ಬಂದಾಗ ಅವರಿಗೆ ಸ್ವರ್ಗ ಸಿಕ್ಕ ಅನುಭವವಾಗುತ್ತದೆ. ಸಂತೋಷಕ್ಕೆ ಮಿತಿ ಇರೋದಿಲ್ಲ. ಎಲ್ಲವನ್ನೂ ಮರೆತು ಅವರು ಮಕ್ಕಳನ್ನು ಅಪ್ಪಿಮುದ್ದಾಡುತ್ತಾರೆ. ಈ ಮಹಿಳೆ ಕೂಡ 17 ವರ್ಷಗಳ ಕಾಲ ಮಗಳಿಲ್ಲದೆ ಜೀವನ ನಡೆಸಿದ್ದಳು. ಕೊನೆಗೂ ಆಕೆಯ ಆಸೆ ಈಡೇರಿದೆ. ಮಗಳನ್ನು ನೋಡುವ, ಆಕೆಯನ್ನು ಮುದ್ದಾಡುವ ಭಾಗ್ಯ ಸಿಕ್ಕಿದೆ.
17 ವರ್ಷಗಳ ನಂತ್ರ ಮಗಳನ್ನು ಭೇಟಿಯಾದ ಅಮ್ಮ : ಇರಾನ್ (Iran) ನಲ್ಲಿ ಈ ಘಟನೆ ನಡೆದಿದೆ. ಸೆತಾರೆಹ್ ಫಾರುಕಿ ತನ್ನ ಮಗಳನ್ನು ಮದುವೆ (Marriage) ಯಾಗಲು 17 ವರ್ಷ ಕಾದಿದ್ದಾಳೆ. ಸೆತಾರೆಹ್ ಗೆ ಬಾಲ್ಯ ವಿವಾಹವಾಗಿತ್ತು. ಇದೇ ಆಕೆ ಹಾಗೂ ಆಕೆ ಮಗಳನ್ನು ಬೇರೆ ಮಾಡಿತ್ತು. ಸೆತಾರೆಹ್ ಗೆ 15 ವರ್ಷವಾಗಿತ್ತು. ಆಗ್ಲೆ ಸೆತಾರೆಹ್ ಫಾರುಕಿಗೆ ಮದುವೆ ಮಾಡಲಾಗಿತ್ತು. ಸೆತಾರೆಹ್ ಫಾರುಕಿ ಪ್ರಕಾರ ಆಕೆಗೆ ಬಾಲ್ಯ ವಿವಾಹ (Child Marriage) ಇಷ್ಟವಿರಲಿಲ್ಲ. ಮನೆಯವರೆಲ್ಲ ಒತ್ತಾಯ ಮಾಡಿ ಆಕೆಗೆ ಮದುವೆ ಮಾಡಿದ್ದರು. ಬರೀ ಮದುವೆ ಆಗಿದ್ದು ಮಾತ್ರವಲ್ಲ 16ನೇ ವಯಸ್ಸಿನಲ್ಲೇ ಆಕೆಗೆ ಒಂದು ಮಗು ಜನಿಸಿತ್ತು.
ವಿವಾಹಿತನಿಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರವಾಗಿ ಅಪ್ಪ ಅಮ್ಮನಿಗೂ ತಿಳಿಸದೇ ರಹಸ್ಯವಾಗಿ ಮದ್ವೆಯಾಗಿದ್ದ ನಟಿ
ಮದುವೆಯಾದ ಸಮಯದಲ್ಲಿ ನಾನು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧಳಿರಲಿಲ್ಲ. ಕುಟುಂಬಸ್ಥರು ನನಗೆ ಒತ್ತಾಯ ಮಾಡಿ ಮದುವೆ ಮಾಡಿಸಿದ್ದರು. ಇದಾದ ಒಂದೇ ವರ್ಷಕ್ಕೆ ನನಗೆ ಮಗುವಾಯ್ತು. ನನಗೆ 17 -18 ವರ್ಷ ವಯಸ್ಸಾದ ವೇಳೆ ನನಗೆ ಬಾಲ್ಯ ವಿವಾಹವಾಗಿದೆ ಎಂಬ ಸತ್ಯ ಗೊತ್ತಾಯ್ತು ಎಂದು ಸೆತಾರೆಹ್ ಫಾರುಕಿ ಹೇಳಿದ್ದಾಳೆ.
ಸೆತಾರೆಹ್ ಫಾರುಕಿ ಪ್ರಕಾರ ಆಕೆ ಹಾಗೂ ಆಕೆ ಪತಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮತಬೇಧದಿಂದಾಗಿ ಬೇರೆಯಾದ್ರು. ಆಕೆ ಮಗಳನ್ನು ಕೂಡ ದೂರ ಮಾಡಲಾಗಿತ್ತು. ಸೆತಾರೆಹ್ ಫಾರುಕಿ ಮಗಳಿಗೆ 8 ವರ್ಷವಾದಾಗ ಆಕೆ ತನ್ನ ತಾಯಿಯಿಂದ ದೂರವಾಗಿದ್ದಳು.
2016ರಲ್ಲಿ ಸೆತಾರೆಹ್ ಫಾರುಕಿ ಮಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಹುಡುಕಲು ಶುರು ಮಾಡಿದ್ದಳು. ಕೊನೆಗೂ ಮಗಳು ಸೆಪಿದಿಹಾ, ಸೆತಾರೆಹ್ ಫಾರುಕಿಗೆ ಸಿಕ್ಕಿದ್ದಾಳೆ. ಮಗಳು ಸೆಪಿದಿಹಾ ವಯಸ್ಸು 26 ವರ್ಷ. ಅತ್ತ ಸೆಪಿದಿಹಾ ಕೂಡ ತನ್ನ ತಾಯಿಯನ್ನು ಹುಡುಕುತ್ತಿದ್ದಳು. ಇನ್ಸ್ಟಾಗ್ರಾಮ್ ನಲ್ಲಿ ಸೆಪಿದಿಹಾ ತನ್ನ ತಾಯಿಯನ್ನು ಪತ್ತೆ ಮಾಡಿದ್ದಾಳೆ. ತಾಯಿ – ಮಗಳ ಮಿಲನ ಜರ್ಮನಿಯಲ್ಲಿ ಆಯ್ತು. ಈ ಸಮಯದಲ್ಲಿ ತಾಯಿ ಸೆತಾರೆಹ್ ಫಾರುಕಿ ನಿರಾಶ್ರಿತರ ತಾಣದಲ್ಲಿ ವಾಸವಾಗಿದ್ದಳು.
ಭಕೂಟ ದೋಷವಿದ್ರೆ ಪತಿ-ಪತ್ನಿ ಸಂಬಂಧ ಅಷ್ಟಕ್ಕಷ್ಟೆ; ನಿವಾರಿಸ್ಕೊಳೊಕೆ ದಾರಿ ಇವೆ
ಇರಾನ್ ನಲ್ಲಿದೆ ಈ ಕಾನೂನು : ಬಾಲ್ಯ ವಿವಾಹವನ್ನು ಮಾನ್ಯ ಮಾಡಿರುವ ದೇಶಗಳಲ್ಲಿ ಇರಾನ್ ಕೂಡ ಒಂದು. ಹುಡುಗಿಯರಿಗೆ 13 ವರ್ಷಕ್ಕೆ ಹಾಗೂ ಹುಡುಗರಿಗೆ 15 ವರ್ಷಕ್ಕೆ ಮದುವೆ ಮಾಡುವ ಅವಕಾಶವಿದೆ. ಕಾನೂನಿನ ಒಪ್ಪಿಗೆ ಪಡೆದು ಇದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಕೂಡ ಮದುವೆ ಮಾಡುವ ಅವಕಾಶ ಈ ದೇಶದಲ್ಲಿದೆ. ಮಾಹಿತಿ ಪ್ರಕಾರ, ಇರಾನಿ ನಲ್ಲಿ ನಡೆಯುವ ಪ್ರತಿ ಐದು ಮದುವೆಗಳಲ್ಲಿ ಒಂದು ಅಪ್ರಾಪ್ತರದ್ದಾಗಿರುತ್ತದೆ.
ಇರಾನ್ ನಲ್ಲಿ ಕೆಲ ಕಾನೂನು ಕಠಿಣವಾಗಿದೆ. ಅವಿವಾಹಿತ ಜೋಡಿ (Unmarried Couple) ಡೇಟಿಂಗ್‌ಗೆ ಹೋಗಲು ಅಥವಾ ಕೈ ಹಿಡಿದು ನಡೆಯಲು ಅನುಮತಿ ಇಲ್ಲ. ಇದಕ್ಕೆ ವಿರುದ್ಧವಾಗಿ ನಡೆದ್ರೆ ದಂಡ ವಿಧಿಸುವುದಲ್ಲದೆ ಕಠಿಣ ಶಿಕ್ಷೆಯಾಗುತ್ತದೆ.