ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಡಿಯೋಗಳು ಯರ್ರಾಬಿರ್ರಿ ವೈರಲ್ ಆಗ್ತವೆ. ಕೋಟ್ಯಾಂತರ ಮಂದಿ ಇದನ್ನು ವೀಕ್ಷಣೆ ಮಾಡ್ತಾರೆ, ಲಕ್ಷಾಂತರ ಮಂದಿ ಲೈಕ್ ಒತ್ತುತ್ತಾರೆ. ಈಗ ಒಬ್ಬನ ನೋವಿನ ಸಾಂಗ್ ಕೂಡ ಇಷ್ಟೇ ಸದ್ದು ಮಾಡ್ತಿದೆ.
ನಾನು ನಂದಿನಿ…ಬೆಂಗಳೂರಿಂದ ಬಂದಿನಿ ಹೇಳೋ ಹಾಡು ಯಾರಿಗೆ ಗೊತ್ತಿಲ್ಲ ಹೇಳಿ? ಎಲ್ಲರ ಬಾಯಲ್ಲೂ ಈ ಹಾಡು ಕೇಳಿ ಬರ್ತಿದೆ. ಸಾಮಾಜಿಕ ಜಾಲತಾಣದ ಪವರ್ ಹಾಗಿದೆ. ಒಂದೇ ದಿನದಲ್ಲಿ ಒಬ್ಬ ವ್ಯಕ್ತಿಯನ್ನು ಪ್ರಸಿದ್ಧಿಗೊಳಿಸುವ ಇಲ್ಲವೆ ಟ್ರೋಲ್ ಮಾಡುವ ಶಕ್ತಿಯನ್ನು ಸಾಮಾಜಿಕ ಜಾಲತಾಣ ಹೊಂದಿದೆ. ಇಲ್ಲಿ ಅನೇಕರು ಬಂದು ಹೋಗ್ತಾರೆ. ಮತ್ತೆ ಕೆಲವರು ವರ್ಷಾನುಗಟ್ಟಲೆ ನೆಲೆ ನಿಲ್ಲುತ್ತಾರೆ. ಹೊಸ ಹೊಸ ಪ್ರಯೋಗಗಳನ್ನು ಮಾಡಿ ಲೈಕ್ಸ್, ವೀವ್ಸ್ ಪಡೆಯುವ ಜನರ ಸಂಖ್ಯೆ ಸಾಕಷ್ಟಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ (Video) ಹಾಕುವವರ ಫೆವರೆಟ್ ಕನ್ಟೆಂಟ್ ನಲ್ಲಿ ಪ್ರೀತಿ ಕೂಡ ಸೇರಿದೆ. ಪ್ರೀತಿ (Love), ಪ್ರೀತಿಯಲ್ಲಿ ಮೋಸ, ಪತ್ನಿ, ಪತ್ನಿ ವರ್ತನೆ, ಗರ್ಲ್ ಫ್ರೆಂಡ್ ಖರ್ಚು ಹೀಗೆ ಹುಡುಗಿಗೆ ಸಂಬಂಧಿಸಿದ ಅನೇಕ ವಿಷ್ಯಗಳು ಇಲ್ಲಿ ಪ್ರಾಮುಖ್ಯತೆ ಪಡೆದಿವೆ. ಗರ್ಲ್ ಫ್ರೆಂಡ್ (Girlfriend) ತನ್ನ ಬಾಯ್ ಫ್ರೆಂಡ್ ಜೇಬಿಗೆ ಕತ್ತರಿ ಹಾಕ್ತಾಳೆ ಎನ್ನುವುದು ಬಹುತೇಕರ ಆರೋಪ. ಇದನ್ನು ತಮಾಷೆಗೆ ತೆಗೆದುಕೊಳ್ಳುವವರೂ ಇದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಗರ್ಲ್ ಫ್ರೆಂಡ್ ಖರ್ಚಿನ ಬಗ್ಗೆ ವಿಡಿಯೋ ಪೋಸ್ಟ್ ಮಾಡಿದ್ದಾನೆ. ಗರ್ಲ್ ಫ್ರೆಂಡ್ ಏನೆಲ್ಲ ಬೇಡಿಕೆ ಇಡ್ತಾಳೆ, ನಾನು ಹೇಗೆಲ್ಲ ಕಷ್ಟ ಅನುಭವಿಸ್ತೇನೆ ಎಂಬುದನ್ನು ಪದ್ಯದ ಮೂಲಕ ಹೇಳುವ ಪ್ರಯತ್ನವನ್ನು ಆತ ಮಾಡಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಹಿಂದಿಯ ದಿಲ್ವಾಲೆ ಚಿತ್ರದ ಹಾಡೊಂದರ ರಾಗದಲ್ಲಿ ಈ ಹಾಡನ್ನು ಹಾಡ್ತಿದ್ದಾರೆ. ಜೀತಾ ತಾ ಜಿಸ್ಕೆ ಲಿಯೇ ರಾಗದಲ್ಲಿ ಈ ಹಾಡಿದೆ.
ಸೆಕ್ಸ್ ನಂತರ ಹೊಟ್ಟೆ ಸೆಳೆತ ಕಾಣಿಸಿಕೊಂಡರೇನು ಕಾರಣ?
ದಿಲ್‌ವಾಲೆ ಚಿತ್ರದ ಹಾಡನ್ನು ಬದಲಿಸಿಕೊಂಡಿರುವ ವ್ಯಕ್ತಿ, ಗರ್ಲ್ ಫ್ರೆಂಡ್ ಗೆ ರೀಚಾರ್ಜ್ ಮಾಡುವ ನೋವನ್ನು ಹಾಡಿನ ಮೂಲಕ ವ್ಯಕ್ತಪಡಿಸಿದ್ದಾನೆ. ಆ ವಿಡಿಯೋದಲ್ಲಿ ತನ್ನ ಗರ್ಲ್ ಫ್ರೆಂಡ್ ರೀಚಾರ್ಜ್‌ನಿಂದ ಹೇಗೆ ಸಾಲ ಮಾಡಿಕೊಂಡಿದ್ದೇನೆ ಎಂಬ ನೋವಿದೆ. ಸಾಲ ನೀಡಿದವರು ಹಣ ವಾಪಸ್ ಕೇಳ್ತಿದ್ದು, ಅದನ್ನು ಮರುಪಾವತಿ ಮಾಡಲಾಗ್ತಿಲ್ಲ ಎಂಬುದನ್ನು ಕೂಡ ಹಾಡಿನ ಮೂಲಕ ಹೇಳಿದ್ದಾನೆ.
Simplyeedits ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಇದ್ರಲ್ಲಿ ನೀವು ಹಿಂದಿಯಲ್ಲಿ ಆತ ಕವಿತೆ ಬರೆದಿರೋದನ್ನು ನೋಡ್ಬಹುದು. ನಂತ್ರ ಅದರ ಮೇಲೆ ಕೈ ಇಡ್ತಾ ವ್ಯಕ್ತಿ ಹಾಡ್ತಿದ್ದಾನೆ. ಎಷ್ಟು ಖರ್ಚಿದೆ ನನ್ನ ತಲೆ ಮೇಲೆ, ಅದನ್ನು ಹೇಗೆ ತೀರಿಸಬೇಕು ಎಂದು ಹಾಡು ಶುರುವಾಗುತ್ತದೆ. ಸಾಲಗಾರರು ಹೇಗೆ ತನ್ನ ಹಿಂದೆ ಬಿದ್ದಿದ್ದಾರೆ ಎಂಬುದನ್ನು ಹಾಡಿನಲ್ಲಿ ಹೇಳುವ ವ್ಯಕ್ತಿ, ಕೊನೆಯಲ್ಲಿ ಈ ಎಲ್ಲ ಸಾಲವಾಗಿದ್ದು, ಹುಡುಗಿಯೊಬ್ಬಳಿಗೆ ರಿಚಾರ್ಜ್ ಮಾಡ್ತಿದ್ದ ಕಾರಣ ಎಂದು ಬರೆದಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊ ವೇಗವಾಗಿ ವೈರಲ್ ಆಗಿದೆ. ಒಂದು ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ಈ ವಿಡಿಯೋವನ್ನು ವೀಕ್ಷಿಸಲಾಗಿದೆ. ೧೭ ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಅನೇಕ ಬಳಕೆದಾರರು ಈ ವಿಡಿಯೋಕ್ಕೆ ಕಮೆಂಟ್ ಮಾಡಿದ್ದಾರೆ. ದಿಲ್ವಾಲೆ ಸಿನಿಮಾವನ್ನು ಇನ್ನೊಮ್ಮೆ ನೋಡ್ಬೇಕು. ಆದ್ರೆ ಅದ್ರಲ್ಲಿ ಅಜಯ್ ದೇವಗನ್ ಯಾವುದೇ ಸಾಲ ಮಾಡಿರಲಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಅನೇಕ ಸಾಲಗಾರರನ್ನು ನಾನು ನೋಡಿದ್ದೇನೆ. ಆದ್ರೆ ಹುಡುಗಿಗೆ ರಿಚಾರ್ಜ್ ಮಾಡಿಸೋಕೆ ಇಷ್ಟೆಲ್ಲ ಸಾಲ ಮಾಡಿದ್ದನ್ನು ನಾನು ಇದೇ ಮೊದಲ ಬಾರಿ ನೋಡ್ತಿದ್ದೇನೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ. ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಎಂದು ಬಹುತೇಕ ಬಳಕೆದಾರರು ಈತನನ್ನು ಮೆಚ್ಚಿಕೊಂಡಿದ್ದಾರೆ. ಇನ್ನೊಬ್ಬರು ವರ್ಜಿನಲ್ ಸಾಂಗ್ ಏನಿತ್ತು ಅನ್ನೋದನ್ನೇ ಮರೆತಿದ್ದೇನೆಂದು ಕಮೆಂಟ್ ಮಾಡಿದ್ದಾರೆ.