ಚೀನಾದ ವೈದ್ಯನೊಬ್ಬ ತನ್ನ ಗೆಳತಿಗೆ ರಹಸ್ಯವಾಗಿ ಸ್ಲೀಪಿಂಗ್ ಮಾತ್ರೆಗಳನ್ನು ನೀಡಿ ನಂತರ ಗರ್ಭಪಾತ ಮಾತ್ರೆಗಳನ್ನು ನೀಡಿ ಆಕೆಗೆ ಅಬಾರ್ಷನ್ ಆಗುವಂತೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಬೀಜಿಂಗ್ (ಅಕ್ಟೋಬರ್ 24, 2023): ಚೀನಾದ ವೈದ್ಯರೊಬ್ಬರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದಕ್ಕೆ ಕಾರಣ ಗರ್ಭಿಣಿ ಪ್ರೇಮಿಗೆ ಮಾತ್ರೆಗಳನ್ನು ಕೊಡ್ತಿದ್ದ ಅಂತ. ಈ ಬಗ್ಗೆ ಚೀನಾದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಚೀನಾದ ವೈದ್ಯನೊಬ್ಬ ತನ್ನ ಗೆಳತಿಗೆ ರಹಸ್ಯವಾಗಿ ಸ್ಲೀಪಿಂಗ್ ಮಾತ್ರೆಗಳನ್ನು ನೀಡಿ ನಂತರ ಗರ್ಭಪಾತ ಮಾತ್ರೆಗಳನ್ನು ನೀಡಿ ಆಕೆಗೆ ಅಬಾರ್ಷನ್ ಆಗುವಂತೆ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ವೈದ್ಯ ಹಾಗೂ ಗರ್ಲ್‌ಫ್ರೆಂಡ್ ನವೆಂಬರ್ 2021 ರಿಂದ ರಿಲೇಷನ್‌ಶಿಪ್ ಹೊಂದಿದ್ದರು ಮತ್ತು ವಾಂಗ್ ಎಂಬ ಸರ್‌ನೇಮ್ ಹೊಂದಿರುವ ಮಹಿಳೆ ಈ ವರ್ಷ ಮೇ 14 ರಂದು ಗರ್ಭಿಣಿಯಾಗಿರುವುದನ್ನು ಕಂಡುಕೊಂಡರು.
ಇದನ್ನು ಓದಿ: ದೆಹಲಿಯಲ್ಲಿ ಸ್ವಿಜರ್ಲೆಂಡ್ ಮಹಿಳೆ ಹತ್ಯೆ: ಕೈಕಾಲು ಕಟ್ಟಿ, ಪ್ಲಾಸ್ಟಿಕ್ ಕವರ್‌ನಲ್ಲಿ ಡೆಡ್‌ಬಾಡಿ ಸುತ್ತಿದ ಪಾಗಲ್ ಪ್ರೇಮಿ!
34 ವರ್ಷದ ವಾಂಗ್ ಮೂತ್ರಶಾಸ್ತ್ರಜ್ಞರಾಗಿರುವ ತನ್ನ ಗೆಳೆಯನೊಂದಿಗೆ ತಾನು ಗರ್ಭಿಣಿಯಾಗಿರೋ ಸುದ್ದಿಯನ್ನು ಉತ್ಸಾಹದಿಂದ ಹಂಚಿಕೊಂಡರು. ಆದರೆ, ಬಾಯ್‌ಫ್ರೆಂಡ್ ಮಾತ್ರ ಇದಕ್ಕೆ ಸಂತೋಷವಾಗದೆ, ತನಗೆ ಮದುವೆ ಅಥವಾ ಮಕ್ಕಳು ಇಷ್ಟ ಆಗಲ್ಲ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೆ, ಗರ್ಭಧಾರಣೆಯನ್ನು ಕೊನೆಗೊಳಿಸುವಂತೆ ಮನವೊಲಿಸಲು ಪ್ರಯತ್ನಿಸಿದ್ದಾರೆ. ಮಗುವನ್ನು ಉಳಿಸಿಕೊಳ್ಳಲು ಗರ್ಲ್‌ಫ್ರೆಂಡ್ ಒತ್ತಾಯಿಸಿದಾಗ, ವೈದ್ಯರು ಆಕೆಯ ಗರ್ಭಧಾರಣೆಯನ್ನು ಅಂತ್ಯಗೊಳಿಸಲು ಪ್ಲ್ಯಾನ್ ಮಾಡಿದ್ದಾನೆ.
ಬಳಿಕ, ಇಬ್ಬರೂ ಭೇಟಿಯಾದಾಗ ಅಂಗಡಿಯೊಂದರಿಂದ ನೀರು ಹಾಗೂ ಕೋಕ್ ಬಾಟಲಿಯನ್ನು ಖರೀದಿಸಿ ಗರ್ಲ್‌ಫ್ರೆಂಡ್‌ಗೆ ಕೊಟ್ಟಿದ್ದಾರೆ. ಕೆಲವು ದಿನಗಳ ನಂತರ, ವಾಂಗ್ ತನ್ನ ಗೆಳೆಯನಿಂದ WeChat ಕರೆಯನ್ನು ಸ್ವೀಕರಿಸಿದ್ದು, ಆಕೆಗೆ ಇನ್ನೂ ರಕ್ತಸ್ರಾವವಾಗ್ತಿದ್ಯಾ ಎಂದು ಕೇಳಿದ್ದು, ಬಳಿಕ ಆಕೆಯ ಕೋಕ್‌ನಲ್ಲಿ ಗರ್ಭಪಾತದ ಮಾತ್ರೆ ಹಾಕಿದ್ದಾಗಿ ವೈದ್ಯ ಬಹಿರಂಗಪಡಿಸಿದ್ದಾರೆ.
ಇದನ್ನೂ ಓದಿ: ನವರಾತ್ರಿ ಉಪವಾಸ ಮಾಡ್ತಿದ್ದ ಅಣ್ಣ, ಅಕ್ಕನಿಂದ 15 ವರ್ಷದ ಸಹೋದರಿಯ ಬೆತ್ತಲೆಗೊಳಿಸಿ ಬರ್ಬರ ಹತ್ಯೆ!
ಕೆಲವು ದಿನಗಳ ನಂತರ, ಗರ್ಲ್‌ಫ್ರೆಂಡ್ ಫ್ಲ್ಯಾಟ್‌ಗೆ ಹೋದ ವೈದ್ಯ ಜತೆಗೆ ಊಟ ಮಾಡಿದ್ದಾರೆ. ಬಳಿಕ, ಆಕೆ ಇದ್ದಕ್ಕಿದ್ದಂತೆ ಸುಸ್ತಾಗಿ ಮಲಗಿದ್ದಾರೆ. ಬಳಿಕ, ಎಚ್ಚರವಾದಾಗ ವೈದ್ಯ ಔಷಧಿ ಬೆರೆಸಿರೋ ಪಾನೀಯ ಕೊಟ್ಟಿದ್ದು, ನಂತರ ಮರುದಿನ ಸಂಜೆ ಆಕೆಗೆ ಗರ್ಭಪಾತವಾಗಿದೆ.
ಬಳಿಕ, ಆಕೆಗೆ ಅರ್ಬಾಷನ್ ಮಾತ್ರೆ ನೀಡಿದ್ದಾಗಿ ಒಪ್ಪಿಕೊಂಡಿದ್ದು, ಅಲ್ಲದೆ, ಕ್ಷಮೆಯಾಚನೆಯ ಪತ್ರ ಬರೆದು ತನ್ನನ್ನು ಮದುವೆಯಾಗುವಂತೆ ಕೇಳಿಕೊಂಡ ಕಾರಣ ಆಕೆ ಪೊಲೀಸರಿಗೆ ದೂರು ಕೊಟ್ಟಿದ್ದ ಎಂದು ತಿಳಿದುಬಂದಿದೆ. ಆದರೆ, ಮದುವೆಯ ಭರವಸೆ ಸುಳ್ಳಾಗಿರುವುದನ್ನು ತಿಳಿದುಕೊಂಡ ಆಕೆ ಇತ್ತೀಚೆಗೆ ಪೊಲೀಸರಿಗೆ ಕರೆ ಮಾಡಿ ಘಟನೆಯ ಬಗ್ಗೆ ದೂರು ನೀಡಿದ್ದಾಳೆ.
ಈ ಸ್ಟೋರಿ ಚೀನಾದ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಬೆಚ್ಚಿಬೀಳಿಸಿದ್ದು, ಆತನಿಂದ ದೂರಹೋಗುವಂತೆ ಮಹಿಳೆಗೆ ಮನವಿ ಮಾಡಿಕೊಳ್ತಿದ್ದಾರೆ. ''ಬೇಗ ಓಡಿ ಹೋಗು. ಅವರು ಈ ಬಾರಿ ನಿಮಗೆ ಗರ್ಭಪಾತದ ಮಾತ್ರೆಗಳನ್ನು ನೀಡಿದ್ದಾರೆ, ಭವಿಷ್ಯದಲ್ಲಿ ಅವರು ನಿಮಗೆ ಏನು ತಿನ್ನಿಸ್ತಾರೋ ಯಾರಿಗೆ ತಿಳಿದಿದೆ’’ ಎಂದು ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ಚೀನಾದ ಮೇನ್‌ಲ್ಯಾಂಡ್‌ನಲ್ಲಿ ವೈದ್ಯಕೀಯ ದುರ್ಬಳಕೆಯ ಕುರಿತಾದ ಕತೆಗಳು ಸಾಮಾಜಿಕ ಮಾಧ್ಯಮದಲ್ಲಿ ಆಗಾಗ್ಗೆ ವೈರಲ್ ಆಗುತ್ತದೆ.
ಇದನ್ನೂ ಓದಿ: ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!