
ನವದೆಹಲಿ: ಲಿವ್-ಇನ್ ಸಂಬಂಧ ಅನ್ನೋದು ಕೇವಲ ಟೈಮ್ ಪಾಸ್ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಪೊಲೀಸ್ ರಕ್ಷಣೆಗಾಗಿ ಮನವಿ ಸಲ್ಲಿಸಿದ ಅಂತರ್‌ಧರ್ಮೀಯ ಜೋಡಿಯ ಮನವಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ಈ ರೀತಿ ಹೇಳಿದೆ. ಲಿವ್ ಇನ್ ರಿಲೇಶನ್ ಶಿಪ್‌ಗಳು ಸಾಮಾನ್ಯವಾಗಿ ತಾತ್ಕಾಲಿಕವಾಗಿರುತ್ತವೆ ಮತ್ತು ದುರ್ಬಲವಾಗಿರುತ್ತವೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದೆ.ದೆ.
ಜೋಡಿಯ ಮನವಿಯನ್ನು ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಮೊಹಮ್ಮದ್ ಅಜರ್ ಹುಸೇನ್ ಇದ್ರಿಸಿ ನೇತೃತ್ವದ ಪೀಠ, ಗೌರವಾನ್ವಿತ ಸುಪ್ರೀಂ ಕೋರ್ಟ್ ಹಲವಾರು ಪ್ರಕರಣಗಳಲ್ಲಿ ಲಿವ್-ಇನ್ ಸಂಬಂಧವನ್ನು ಮಾನ್ಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಎರಡು ತಿಂಗಳ ಅವಧಿಯಲ್ಲಿ 20-22 ವರ್ಷಗಳ ವಯಸ್ಸಿನಲ್ಲಿ, ಜೋಡಿ ತಮ್ಮ ಅಂತಹ ತಾತ್ಕಾಲಿಕ ಸಂಬಂಧದ ಬಗ್ಗೆ ಗಂಭೀರವಾಗಿ ಯೋಚಿಸಲು ಸಾಧ್ಯವಾಗುತ್ತದೆ ಎಂದು ನಾವು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿದೆ.
ಚೆನ್ನಾಗಿ ಅಡುಗೆ ಮಾಡಲು ಹೆಂಡತಿಗೆ ಬರೋದಿಲ್ಲ ಎನ್ನುವುದು ಕ್ರೌರ್ಯವಲ್ಲ ಎಂದ ಕೇರಳ ಹೈಕೋರ್ಟ್!
ಭಾರತೀಯ ದಂಡನೆಯ ಸೆಕ್ಷನ್ 366 (ಮಹಿಳೆಯನ್ನು ಅಪಹರಿಸುವುದು, ಅಪಹರಣ ಮಾಡುವುದು ಅಥವಾ ಮದುವೆಗೆ ಒತ್ತಾಯಿಸುವುದು) ಅಡಿಯಲ್ಲಿ ಯುವತಿಯ ಚಿಕ್ಕಮ್ಮ, ಪುರುಷನ ವಿರುದ್ಧ ದಾಖಲಿಸಿದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಜೋಡಿ ಪೊಲೀಸ್ ರಕ್ಷಣೆ ಕೋರಿ ಅರ್ಜಿ ಸಲ್ಲಿಸಿದ್ದರು. ಮಾತ್ರವಲ್ಲ, ಮಹಿಳೆ ತನ್ನ ವಯಸ್ಸನ್ನು (20) ಉಲ್ಲೇಖಿಸಿ ತನ್ನ ಭವಿಷ್ಯವನ್ನು ನಿರ್ಧರಿಸುವ ಹಕ್ಕನ್ನು ಹೊಂದಿದ್ದಾಳೆ ಎಂದು ಹೇಳಿದರು. ಈ ವಿಚಾರದಲ್ಲಿ ತನ್ನ ತಂದೆ ಪ್ರಕರಣ ದಾಖಲಿಸಿಲ್ಲ ಎಂದು ಆಕೆ ವಾದಿಸಿದ್ದಾಳೆ.
ಮಹಿಳೆಯ ಚಿಕ್ಕಮ್ಮ, ಆ ವ್ಯಕ್ತಿ ರೋಡ್-ರೋಮಿಯೋ ಮತ್ತು ಅಲೆಮಾರಿ, ಅವನಿಗೆ ಭವಿಷ್ಯವಿಲ್ಲ. ಯುವತಿಯ ಜೀವನವನ್ನು ಹಾಳುಮಾಡುತ್ತಾನೆ ಎಂದು ಆರೋಪಿಸಿದ್ದಾರೆ. ಐಪಿಸಿ ಸೆಕ್ಷನ್ 366ರ ಅಡಿಯಲ್ಲಿ ಅಪಹರಣದ ಅಪರಾಧವನ್ನು ಆರೋಪಿಸಿ ವ್ಯಕ್ತಿಯ ವಿರುದ್ಧದ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಜೋಡಿ ಅಲಹಾಬಾದ್ ಹೈಕೋರ್ಟ್‌ಗೆ ಮೊರೆ ಹೋಗಿದ್ದರು. ಕುಟುಂಬದ ವಿರುದ್ಧ ಪೊಲೀಸ್ ರಕ್ಷಣೆಯನ್ನು ಕೋರಿದರು, ಆದರೆ ಈ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿತು.
ಪ್ರೀತಿ ಮಾಡುವಾಗ 'ಲೈಂಗಿಕ ಕ್ರಿಯೆ' ನಡೆಸುವುದು ರೇಪ್ ಅಲ್ಲ: ಕೋರ್ಟ್‌ನಿಂದ ಮಹತ್ವದ ತೀರ್ಪು
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.