ಸಲಿಂಗಿ ಜೋಡಿಯಲ್ಲಿ ಒಬ್ಬಳು ಗರ್ಭಿಣಿ? ಬೆಂಗಳೂರಿನಲ್ಲಿ ಕುತೂಹಲದ ಘಟನೆ- ಏನಿದರ ಅಸಲಿಯತ್ತು?

Published : Jan 08, 2026, 10:46 PM IST
Girl Pregnant

ಸಾರಾಂಶ

ಬೆಂಗಳೂರಿನಲ್ಲಿ ಸಲಿಂಗಿ ಜೋಡಿಯೊಬ್ಬರಲ್ಲಿ ಯುವತಿಯೊಬ್ಬಳು ಗರ್ಭಿಣಿಯಾಗಿದ್ದಾಳೆ ಎಂಬ ಸುದ್ದಿ ವೈರಲ್ ಆಗಿದೆ. ಆದರೆ, ಇದರ ಅಸಲಿಯತ್ತೇನು? ಯಾರೀ ಯುವತಿಯರು? ಈ ಸುದ್ದಿಯ ಹಿಂದೆ ಏನಿದೆ? ಇಲ್ಲಿದೆ ಕುತೂಹಲ

ಒಬ್ಬೊಬ್ಬರ ದೇಹದ ಪ್ರಕೃತಿಯನ್ನು ಒಂದೊಂದು ರೀತಿಯಿದೆ. ಇದು ನೈಸರ್ಗಿಕ ಪ್ರಕ್ರಿಯೆ. ಒಂದು ಗಂಡಿಗೆ ಒಂದು ಹೆಣ್ಣು ಎನ್ನುವುದು ಸಾಮಾನ್ಯವಾಗಿರುವ ಮಾತಾದರೂ, ಕೆಲವೊಬ್ಬರ ದೇಹ ಪ್ರಕೃತಿ ಹೇಗೆ ರೂಪುಗೊಂಡಿದೆ ಎಂದರೆ ಹೆಣ್ಣಿಗೆ ಹೆಣ್ಣು ಆಕರ್ಷಕವಾಗಿ ಕಂಡರೆ, ಗಂಡಿಗೆ ಗಂಡಿನ ಮೇಲೆ ವ್ಯಾಮೋಹ ಮೂಡುತ್ತದೆ. ಇದು ಅವರವರದ ದೇಹ ಪ್ರಕೃತಿಗೆ ಸಂಬಂಧಿಸಿದ್ದು. ಒಂದು ವೇಳೆ ಇದು ಗೊತ್ತಾಗಿ ಇದನ್ನು ತಪ್ಪಿಸಲು ಹೋಗುವ ಪಾಲಕರು, ಅವರ ಮದುವೆಯನ್ನು ಇನ್ನೊಬ್ಬರ ಜೊತೆ ಮಾಡಿಬಿಟ್ಟರೆ, ಆ ದಾಂಪತ್ಯದ ಭಯಾನಕತೆಯು ಹಲವಾರು ಬಾರಿ ಅಪರಾಧ ಕೃತ್ಯಕ್ಕೂ ಹೋಗುವುದು ಇದೆ. ಗಂಡಿಗೆ ಹೆಣ್ಣಿನ ಮೇಲೆ ಹಾಗೂ ಹೆಣ್ಣಿಗೆ ಗಂಡಿನ ಮೇಲೆ ಆಕರ್ಷಣೆಯೇ ಇರದಿದ್ದರೆ ಆ ಸಂಸಾರ ಹೇಗೆ ಸಾಗುವುದು ಎನ್ನುವುದು ಕೂಡ ಚರ್ಚಿಸಬೇಕಾಗಿರುವ ವಿಷಯವೇ.

ಕೋರ್ಟ್ ಹೇಳಿದ್ದೇನು?

ಆದರೂ ಸಮಾಜ ಸಲಿಂಗ ಕಾಮವನ್ನು ಒಪ್ಪುವುದಿಲ್ಲ. ಅಷ್ಟಕ್ಕೂ ಸಲಿಂಗಿಗಳು ಒಟ್ಟಿಗೇ ಇರುವುದು, ಒಟ್ಟಿಗೇ ಸಂಬಂಧ ಬೆಳೆಸುವುದು ತಲೆತಲಾಂತರಗಳಿಂದಲೂ ನಡೆಯುತ್ತಲೇ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಹೈಲೈಟ್‌ ಆಗುತ್ತಿದೆಯಷ್ಟೇ. ಸಲಿಂಗಿಗಳ ವಿವಾಹಕ್ಕೆ ಸುಪ್ರೀಂಕೋರ್ಟ್ ಅಕ್ಟೋಬರ್ 2023 ರಲ್ಲಿ ಕಾನೂನು ಮಾನ್ಯತೆ ನೀಡಲು ನಿರಾಕರಿಸಿದ್ದರೂ, ಅದಕ್ಕೂ ಮುನ್ನ ಅವರ ಹಕ್ಕುಗಳನ್ನು ಕೋರ್ಟ್ ಎತ್ತಿಹಿಡಿದಿದೆ, ಸಲಿಂಗ ಸಂಬಂಧಗಳು ಈಗ ಅಪರಾಧವಲ್ಲ ಎಂದು 2018 ರಲ್ಲಿ ಕೋರ್ಟ್ ಹೇಳಿದೆ.

ಸಲಿಂಗಿ ಗರ್ಭಿಣಿ?

ಆದರೆ ಈ ವಿಷಯ ಇದೀಗ ಮುನ್ನೆಲೆಗೆ ಮತ್ತೆ ಬಂದಿರುವ ಕಾರಣ ಏನೆಂದರೆ ಬೆಂಗಳೂರಿನಲ್ಲಿ ಒಟ್ಟಿಗೆ ವಾಸಿಸುತ್ತಿರುವ ಸಲಿಂಗಕಾಮಿ ದಂಪತಿಯಲ್ಲಿ ಒಬ್ಬಾಕೆ ಗರ್ಭಿಣಿಯಾಗಿದ್ದಾಳೆ ಎನ್ನುವ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಕೆಲವು ದಿನಗಳಿಂದ ಹಲ್‌ಚಲ್‌ ಸೃಷ್ಟಿಸುತ್ತಿದೆ. ಅವರ ಫೋಟೋಗಳನ್ನೂ ರಿವೀಲ್‌ ಮಾಡಲಾಗಿದೆ. ಈ ಜೋಡಿ ತಮ್ಮ ಗರ್ಭಧಾರಣೆಯ ಬಗ್ಗೆ ಸಾರ್ವಜನಿಕವಾಗಿ ವಿವರಗಳನ್ನು ಹಂಚಿಕೊಂಡಿಲ್ಲವಾದರೂ, ಇವರ ಜೋಡಿ ಹೊರಗೆ ಬಂದಾಗ ಈ ವಿಷಯ ಬೆಳಕಿಗೆ ಬಂದಿದೆ ಎನ್ನಲಾಗುತ್ತಿದೆ.

ಏನಿದರ ಅಸಲಿತ್ತು?

ಆದರೆ, ಇದು ಹೇಗೆ ಸಾಧ್ಯ ಎನ್ನುವ ಬಗ್ಗೆ ಅವರನ್ನು ಕೇಳಲು ಯಾರಿಗೂ ಧೈರ್‍ಯ ಇಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಇದರ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಇದು ಕೃತಕ ಬುದ್ಧಿಮತ್ತೆಯಿಂದ (AI) ರೂಪುಗೊಂಡಿರುವ ಫೋಟೋ ಆಗಿರುವಲ್ಲಿಯೂ ಯಾವುದೇ ಸಂದೇಹವಿಲ್ಲ. ಒಂದು ಸುಳ್ಳು ಸುದ್ದಿಯನ್ನು ಯಾರೋ ಒಬ್ಬರು ಶೇರ್‌ ಮಾಡಿದರೆ, ಅದು ನಿಜನೋ, ಸುಳ್ಳೋ ಎಂದು ತಿಳಿಯದೇ ಶೇರ್‌ ಆಗುತ್ತಲೇ ಇರುತ್ತದೆ. ಅದರಲ್ಲಿಯೂ ಇಂಥ ಸುದ್ದಿಗಳು ಮೊದಲ ಆದ್ಯತೆ ಪಡೆಯುತ್ತವೆ. ಅದರಲ್ಲಿಯೂ ನೋಡಲು ಸುಂದರ ಯುವತಿಯರಾಗಿದ್ದರೆ ಮುಗಿದೇ ಹೋಯ್ತು. ಅದಕ್ಕಾಗಿ ಸುಳ್ಳು ಸುದ್ದಿಗಳು ಕೂಡ ಸತ್ಯದ ತಲೆಯ ಮೇಲೆ ಹೊಡೆದಂತೆ ಪ್ರಸಾರ ಆಗುತ್ತಿರುತ್ತವೆ.

ಹೀಗೆ ಇರಬಹುದು ಆಕರ್ಷಣೆ!

ಅದೇ ರೀತಿ ಈ ಫೋಟೋ ಮತ್ತು ಸುದ್ದಿಗಳು ಕೂಡ ಫೇಕ್‌ ಆಗಿದ್ದಿರಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ. ಕೆಲವೊಮ್ಮೆ ಕೆಲವರು ದ್ವಿಲಿಂಗಿಗಳಾಗಿರುತ್ತಾರೆ. ಇದರ ಅರ್ಥ ಹೆಣ್ಣಾಗಿದ್ದರೆ, ಇನ್ನೋರ್ವ ಹೆಣ್ಣು ಮತ್ತು ಗಂಡಿನ ಮೇಲೂ ವ್ಯಾಮೋಹ ಇರುತ್ತದೆ, ಗಂಡಾಗಿದ್ದರೂ ಇದೇ ರೀತಿ ಎರಡೂ ಲಿಂಗಿಗಳ ಮೇಲೆ ಆಕರ್ಷಣೆ ಇರುತ್ತದೆ. ಅಂಥ ಸಂದರ್ಭಗಳಲ್ಲಿ ಸಲಿಂಗಿಗಳು ಒಟ್ಟಿಗೇ ಇದ್ದರೂ ಒಬ್ಬರು ಬೇರೊಬ್ಬರಿಂದ ಗರ್ಭ ಧರಿಸಿದರೆ ಅಚ್ಚರಿಯೇನಿಲ್ಲ. ಒಟ್ಟಿನಲ್ಲಿ ಈ ಫೋಟೋ ಮತ್ತು ಸುದ್ದಿ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ!

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Yash: ರಾಕಿಂಗ್ ಸ್ಟಾರ್ ಬಗ್ಗೆ ಗೀತು ಮೋಹನ್‌ದಾಸ್.. 'ಟಾಕ್ಸಿಕ್' ನಿರ್ದೇಶಕಿಯೇ ಹೀಗೆ ಹೇಳಿದ್ರು!?.. ವೈರಲ್ ಆಗ್ತಿದೆ ಟಾಕ್!
Chikkaballapur: ಅಣ್ಣನ ಜತೆ ಲಿವ್ ಇನ್ ಸಂಬಂಧ: ನೇಣು ಬಿಗಿದ ಸ್ಥಿತೀಲಿ ತಂಗಿ ರಾಮಲಕ್ಷ್ಮೀ ಪತ್ತೆ