ಮದ್ವೆಯಾದವರಿಗಿಂತ ಅವಿವಾಹಿತೆ ಹೆಚ್ಚು ಬದುಕ್ತಾಳೆ, ಆದರೆ, ಗಂಡಸು ಮದ್ವೆಯಾದ್ರೇ ಬದುಕೋದು ಹೆಚ್ಚು!

By Roopa Hegde  |  First Published Jul 15, 2024, 3:58 PM IST

ವಿವಾಹಿತ ಹಾಗೂ ಅವಿವಾಹಿತ ಇದ್ರಲ್ಲಿ ಯಾರು ಸುಖಿಗಳು ಎನ್ನುವ ಪ್ರಶ್ನೆಗೆ ಬಹುತೇಕ ಉತ್ತರವಿಲ್ಲ. ಆದ್ರೆ ಈ ಬಗ್ಗೆ ಆಗಾಗ ಅಧ್ಯಯನ ನಡೆಯುತ್ತಿರುತ್ತದೆ. ಹೊಸ ಅಧ್ಯಯನದಲ್ಲಿ ಅವಿವಾಹಿತೆ ಹಾಗೂ ವಿವಾಹಿತ ಲಕ್ಕಿ ಎನ್ನಲಾಗ್ತಿದೆ.
 


ಗಂಡನ ಜೊತೆ ಸೆಲ್ಫಿ ತೆಗೆದು ಸ್ಟೇಟಸ್‌ಗೆ ಹಾಕಿದ್ರೆ ಆ ಮಹಿಳೆ ಎಷ್ಟು ಆರಾಮಾಗಿದ್ದಾಳೆ, ಖುಷಿಯಾಗಿದ್ದಾಳೆ, ಅದಕ್ಕೆ ಮದುವೆ ಆಗ್ಬೇಕು ಅನ್ನೋದು ಅಂತ ಹಿರಿಯರು ಅವಿವಾಹಿತರಿಗೆ ಬುದ್ಧಿವಾದ ಹೇಳ್ತಾರೆ. ಆದ್ರೆ ಆ ಸ್ಟೇಟಸ್ ಹಾಕಿರೋ ಮಹಿಳೆಗಿಂತ ಸ್ಟೇಟಸ್ ನೋಡ್ತಿರೋ ಅವಿವಾಹಿತೆ ತುಂಬಾ ಖುಷಿಯಾಗಿರ್ತಾಳಂತೆ. ಇದನ್ನು ನಾವು ಹೇಳ್ತಿಲ್ಲ. ಇದ್ರ ಬಗ್ಗೆ ನಡೆದ ಅಧ್ಯಯನಗಳು ಹೇಳ್ತಿವೆ. ವಿವಾಹಿತ ಮಹಿಳೆಗಿಂತ ಅವಿವಾಹಿತ ಮಹಿಳೆ ಸಂತೋಷವಾಗಿರ್ತಾಳೆ. ಆಕೆ ಜೀವಿತಾವಧಿ ಹೆಚ್ಚು. ಅದೇ ಪುರುಷರ ವಿಷ್ಯದಲ್ಲಿ ಇದು ಉಲ್ಟಾ. ಇಲ್ಲಿ ಅವಿವಾಹಿತ ಪುರುಷನಿಗಿಂತ ವಿವಾಹಿತ ಪುರುಷರು ಹೆಚ್ಚು ವರ್ಷ ಬದುಕುತ್ತಾರೆ. ಇದಕ್ಕೆ ನಾನಾ ಕಾರಣ ಇದೆ. 

ವಿವಾಹಿತ (Married) ಮಹಿಳೆಗಿಂತ ಅವಿವಾಹಿತ ಮಹಿಳೆ ಹೆಚ್ಚು ಕಾಲ ಬದುಕುತ್ತಾಳೆ : ಮಾನಸಿಕ (Mental) ನೆಮ್ಮದಿ ಬಹಳ ಮುಖ್ಯ. ಎಲ್ಲ ವಿವಾಹಿತ ಮಹಿಳೆಗೆ ಇದು ಸಿಗುತ್ತೆ ಎನ್ನಲು ಸಾಧ್ಯವಿಲ್ಲ. ಆಕೆಗೆ ತಕ್ಕ ವರ ಸಿಕ್ಕಲ್ಲಿ ಬಾಳು ಹಸನಾಗುತ್ತದೆ. ಅದೇ ಸದಾ ಕಿರಿಕಿರಿ ನೀಡುವ, ಚಿತ್ರಹಿಂಸೆ (Torture) ಕೊಡುವ ಪತಿ ಸಿಕ್ಕಾಗ, ಒತ್ತಡ ಹೆಚ್ಚಾಗುತ್ತದೆ. ಇದು ಆಕೆಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ. ತಪ್ಪು ವ್ಯಕ್ತಿ ಕೈ ಹಿಡಿಯುವ ಮಹಿಳೆಗಿಂತ ಮದುವೆಯಾಗದೆ ಒಂಟಿಯಾಗಿರುವ ಮಹಿಳೆ ಆರಾಮವಾಗಿ ಜೀವನ ನಡೆಸುತ್ತಾಳೆ. ಆದ್ರೆ ವಿವಾಹಿತ ಮಹಿಳೆ ಆತಂಕ, ಒತ್ತಡದಿಂದ ಬಳಲುತ್ತಾಳೆ. 

Latest Videos

undefined

ನನ್ನ ಹೆಂಡ್ತಿ ಹಿಸ್ಟರಿ ಚೆಕ್ ಮಾಡ್ತಾಳೆ ಅಂತ ಗೋಳಾಡ್ತಿದ್ದ ಗಂಡಂದಿರ ಮನವಿಗೆ ಸ್ಪಂದಿಸಿದ ಜೊಮ್ಯಾಟೋ

ವಿವಾಹಿತ ಮಹಿಳೆ, ಮನೆ ಹಾಗೂ ವೃತ್ತಿಯನ್ನು ಯಾವುದೇ ದೂರಿಲ್ಲದೆ ನಿರ್ವಹಿಸಲು ಸಾಧ್ಯವೇ ಇಲ್ಲ. ಪ್ರತಿಯೊಂದು ಕೆಲಸ ಮಾಡುವಾಗ್ಲೂ ಆಕೆ ಪತಿಯ ಒಪ್ಪಿಗೆ ಪಡೆಯಬೇಕು. ಕುಟುಂಬಸ್ಥರು, ಮಕ್ಕಳ ಜವಾಬ್ದಾರಿ ಹೊರಬೇಕು. ಹೊರಗಿನ ಕೆಲಸ ಮಾಡುವ ಮಕ್ಕಳು, ಮನೆಯವರ ಆರೋಗ್ಯ, ಆಹಾರದ ಬಗ್ಗೆ ಕಾಳಜಿವಹಿಸಬೇಕು. ಆದ್ರೆ ಅವಿವಾಹಿತ ಮಹಿಳೆಗೆ ಇದ್ಯಾವ ಟೆನ್ಷನ್ ಇರೋದಿಲ್ಲ. ತನ್ನ ಕೆಲಸ ಮಾಡಲು ಆಕೆ ಸ್ವತಂತ್ರಳು. ವಿವಾಹಿತ ಮಹಿಳೆ ಮೇಲೆ ಬೀಳುವ ದೀರ್ಘ ಜವಾಬ್ದಾರಿ ಆಕೆ ಮಾನಸಿಕ ಆರೋಗ್ಯದ ಮೇಲೆ ದೊಡ್ಡ ಮಟ್ಟದಲ್ಲಿ ಪರಿಣಾಮ ಬೀರುತ್ತದೆ. ಬರೀ ಮಾನಸಿಕ ಮಾತ್ರವಲ್ಲ ದೈಹಿಕ ಆರೋಗ್ಯ ಕೂಡ ಹದಗೆಡುತ್ತದೆ. ಆಕೆ ತನಗಿಂತ ತನ್ನ ಮನೆಯವರ ಮೇಲೆ ಹೆಚ್ಚು ಗಮನ ಹರಿಸುವ ಕಾರಣ, ವಿವಾಹಿತ ಮಹಿಳೆ ಆರೋಗ್ಯ ಹಾಳಾಗ್ತಿರೋದು ಆಕೆಗೆ ಗಮನಕ್ಕೆ ಬರೋದಿಲ್ಲ.

ವೈಜ್ಞಾನಿಕ ಅಧ್ಯಯನದ ಅಂಕಿ – ಅಂಶದ ಪ್ರಕಾರ, ವಿಚ್ಛೇದನ ಪಡೆದ ಮಹಿಳೆ, ವಿಚ್ಛೇದನದ ನಂತ್ರ ಹೆಚ್ಚು ಸಂತೋಷವಾಗಿರ್ತಾಳೆ. ಹೆಚ್ಚಿನ ನೆಮ್ಮದಿಯನ್ನು ಅನುಭವಿಸ್ತಾಳೆ. ಉಸಿರುಗಟ್ಟಿಸುವ ಮದುವೆಯಿಂದ ಹೊರ ಬಂದ ಆಕೆ ನೆಮ್ಮದಿ ಕಾಣಲು ಶುರು ಮಾಡ್ತಾಳೆ. ಒಂಟಿ ಮಹಿಳೆಯನ್ನು ಗಟ್ಟಿಗಿತ್ತಿ ಎನ್ನಬಹುದು. ಯಾಕೆಂದ್ರೆ ಆಕೆಯೇ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುವ ಕಾರಣ ಎಲ್ಲಿ ಹೇಗೆ ನಡೆದುಕೊಳ್ಳಬೇಕೆಂಬುದು ಆಕೆಗೆ ತಿಳಿದಿರುತ್ತದೆ. ಮನೆಯಲ್ಲಿ ಅನೇಕ ಪಾತ್ರಗಳನ್ನು ನಿರ್ವಹಿಸುವ ಮೂಲಕ ಆನಂದವನ್ನು ಪಡೆಯುತ್ತಾಳೆ.

ಅವಿವಾಹಿತ ಪುರುಷರಿಗಿಂತ ವಿವಾಹಿತ ಪುರುಷರ ಜೀವಿತಾವಧಿ ಹೆಚ್ಚು : ಇನ್ನು ಪುರುಷರ ವಿಷ್ಯಕ್ಕೆ ಬಂದ್ರೆ, ಇಲ್ಲಿ ವಿವಾಹಿತರಿಗಿಂತ ಅವಿವಾಹಿತರು ಹೆಚ್ಚು ಸಮಸ್ಯೆಗೆ ಒಳಗಾಗ್ತಾರೆ. ವಿವಾಹಿತರು ತಮ್ಮ ಭಾವನೆಗಳನ್ನು ಸಂಗಾತಿ ಮುಂದೆ ಹಂಚಿಕೊಳ್ತಾರೆ. ಆದ್ರೆ ಅವಿವಾಹಿತರಿಗೆ ಇದು ಸಾಧ್ಯವಾಗೋದಿಲ್ಲ. ಇದ್ರಿಂದಾಗಿ ಅವರು ಮಾನಸಿಕ ಒತ್ತಡಕ್ಕೆ ಒಳಗಾಗ್ತಾರೆ. 

ನಿವೃತ್ತಿ ಜೀವನದಲ್ಲಿ ಪುರುಷರು ಸಂಗಾತಿಯನ್ನು ಬಯಸುವುದು ಹೆಚ್ಚು. ವೃದ್ಧಾಪ್ಯದಲ್ಲಿ ತಮ್ಮನ್ನು ನೋಡಿಕೊಳ್ಳಲು ಪತ್ನಿಯ ಅಗತ್ಯವಿದೆ ಎಂಬುದು ಅವರ ಅರಿವಿಗೆ ಬರುತ್ತದೆ. ಹಾಗೆಯೇ ಅವರು ಈ ಸಮಯದಲ್ಲಿ ವಿಶ್ರಾಂತಿ ಬಯಸ್ತಾರೆ. ಆದ್ರೆ ವಿವಾಹಿತ ಮಹಿಳೆಯರಿಗೆ ನಿವೃತ್ತಿ ಎನ್ನುವುದೇ ಇಲ್ಲ. ಹಾಗಾಗಿಯೇ ಅವರು ಮತ್ತಷ್ಟು ಒತ್ತಡದ ಜೀವನ ನಡೆಸುತ್ತಾರೆ.

ಲವ್ವರ್‌ದೇ ಪ್ಲಾನ್.. ಮದ್ವೆ ಮಾಡ್ಕೊಂಡು ಲಕ್ಷ ಲಕ್ಷ ಹಣ, ಚಿನ್ನಾಭರಣ ಜೊತೆ ಪ್ರೇಮಿ ಜೊತೆ ಕಾಲ್ಕಿತ್ತ ವಧು!

ಸಂಶೋಧನೆ, ಮದುವೆಯ ಹೆಚ್ಚಿನ ಲಾಭ ಪುರುಷರಿಗಿದೆ, ಮಹಿಳೆಯರಿಗೆ ನಷ್ಟ ಎಂಬುದನ್ನು ಹೇಳಿದೆ. ಹಾಗಂತ ಇದು ಎಲ್ಲರ ಜೀವನದಲ್ಲಿ ಸತ್ಯವಾಗ್ಬೇಕು ಎಂದಿಲ್ಲ. ಒಳ್ಳೆಯ ಸಂಗಾತಿ ಪಡೆದ ಅದೆಷ್ಟೋ ಮಹಿಳೆಯರು ಸುಖ ಜೀವನ ನಡೆಸುತ್ತಿದ್ದಾರೆ.   

click me!