ಪ್ರೇಮಿಗಳ ಚುಂಬನ ಮಿಲನದ ಭಾವತೀವ್ರತೆಯನ್ನು ಹೆಚ್ಚಿಸುತ್ತದೆ, ಮನಸ್ಸಿನ ಪ್ರೀತಿಯ ಭಾವನೆಯನ್ನು ಪರಸ್ಪರ ಹಂಚಿಕೊಳ್ಳಲು ನೆರವಾಗುತ್ತದೆ. ಇದಲ್ಲದೆ, ಕಿಸ್ ಕೊಡುವುದು ಪಡೆಯುವುದರಿಂದ ಇನ್ನೂ ಹಲವಾರು ಆರೋಗ್ಯದ ಲಾಭಗಳಿವೆ ಗೊತ್ತಾ!
ಹಲ್ಲುಗಳ ಆರೋಗ್ಯಕ್ಕೆ ಒಳ್ಳೆಯದು
ಕೆಲವು ಕಾಸ್ಮೆಟಿಕ್ ವೈದ್ಯರ ಪ್ರಕಾರ, ಕಿಸ್ಸಿಂಗ್ ಲಾಲಾರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ, ಇದು ನಮ್ಮ ಹಲ್ಲುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಲಾಲಾರಸದ ಖನಿಜ ಅಯಾನುಗಳು ಹಲ್ಲಿನ ಕವಚದಲ್ಲಿನ ಸಣ್ಣ ಗಾಯಗಳ ದುರಸ್ತಿಗೆ ಉತ್ತೇಜನ ನೀಡುತ್ತವಂತೆ. ಆದರೆ ಚುಂಬಿಸಿಕೊಳ್ಳುವ ಮುನ್ನ ನಿಮ್ಮ ಬಾಯಿ ದುರ್ವಾಸನೆ ಹೊಂದಿಲ್ಲ ಎಂದು ಗ್ಯಾರಂಟಿ ಮಾಡಿಕೊಳ್ಳಬೇಕು.
ಮುತ್ತಿನ ಮತ್ತೇ ಗಮ್ಮತ್ತು. ಇದರ ಬಗ್ಗೆ ನಿಮಗೆಷ್ಟು ಗೊತ್ತು?
ರೋಗ ನಿರೋಧಕ ಶಕ್ತಿ
ಮಾನವನ ಬಾಯಿಯಲ್ಲಿ 700 ಕ್ಕೂ ಹೆಚ್ಚು ಬಗೆಯ ಬ್ಯಾಕ್ಟೀರಿಯಾಗಳಿರುತ್ತವೆ. ಆದರೆ ಇಬ್ಬರ ಬಾಯಿಯೂ ಒಂದೇ ರೀತಿ ಇರುವುದಿಲ್ಲ. ಆದ್ದರಿಂದ ಚುಂಬನದ ಮೂಲಕ ಲಾಲಾರಸದ ವಿನಿಮಯ ನಿಮ್ಮ ದೇಹಕ್ಕೆ ಹೊಸ ಬ್ಯಾಕ್ಟೀರಿಯಾವನ್ನು ಪರಿಚಯಿಸಬಹುದು, ಇತ್ತೀಚಿನ ಡಚ್ ಅಧ್ಯಯನವೊಂದರ ಪ್ರಕಾರ, ನಾವು 10 ಸೆಕೆಂಡುಗಳಿಗಿಂತ ಹೆಚ್ಚು ಕಾಲ ಚುಂಬಿಸಿದಾಗ, ಸುಮಾರು 80 ಮಿಲಿಯ ಬ್ಯಾಕ್ಟೀರಿಯಾಗಳು ನಮ್ಮ ಮತ್ತು ನಮ್ಮ ಸಂಗಾತಿಯ ನಡುವೆ ವರ್ಗಾವಣೆಯಾಗುತ್ತವೆ, ಇದು ಹೊಸ ಮತ್ತು ಕೆಲವೊಮ್ಮೆ ಒಳ್ಳೆಯ ಬ್ಯಾಕ್ಟೀರಿಯಾವನ್ನು ನಮ್ಮ ಬಾಯಿಗೆ ಪರಿಚಯಿಸುತ್ತದೆ.
ಆತಂಕವನ್ನು ಕಡಿಮೆ ಮಾಡುತ್ತದೆ
ಚುಂಬನದ ಪ್ರಾಥಮಿಕ ಆರೋಗ್ಯ ಪ್ರಯೋಜನಗಳಲ್ಲಿ ಒಂದು ಆಕ್ಸಿಟೋಸಿನ್ ಎಂಬ ಹಾರ್ಮೋನ್ ಬಿಡುಗಡೆ ಮಾಡುವ ಸಾಮರ್ಥ್ಯ. ಇದನ್ನು ಲವ್ ಹಾರ್ಮೋನ್ ಎಂದೇ ಕರೆಯಲಾಗುತ್ತದೆ. ವ್ಯಕ್ತಿಗಳಲ್ಲಿ ಶಾಂತತೆ, ವಿಶ್ರಾಂತಿ ಮತ್ತು ಅನುರಾಗದ ಭಾವನೆಯನ್ನು ಇದು ಉಂಟುಮಾಡುತ್ತದೆ. ಸಾಮಾನ್ಯವಾಗಿ ಮುನ್ನಲಿವು ಮತ್ತು ಮಿಲನದ ಉತ್ಕರ್ಷದ ಸಮಯದಲ್ಲಿ ಬಿಡುಗಡೆಯಾಗುತ್ತದೆ. ಒತ್ತಡಕ್ಕೆ ಸಂಬಂಧಿಸಿದ ಕಾರ್ಟಿಸೋಲ್ ಎಂಬ ರಾಸಾಯನಿಕ, ಕಿಸ್ಸಿಂಗ್‌ನಿಂದಾಗಿ ಕಡಿಮೆಯಾಗುವುದೂ ಕಂಡುಬಂದಿದೆಯಂತೆ.
ಪ್ರತಿರೋಧಕ ಶಕ್ತಿ ಹೆಚ್ಚಿಸೋ ಕಿಸ್ ಎಂಬ ಭಾವನಾತ್ಮಕ ಮದ್ದು
ಅಲರ್ಜಿ ಕಡಿಮೆಯಾಗುತ್ತದೆ
ಮೂಗಿನ ಅಥವಾ ಚರ್ಮದ ಅಲರ್ಜಿ, ತುರಿಕೆಯನ್ನು ಕಡಿಮೆ ಮಾಡುತ್ತದೆ. ಇದನ್ನು 2006ರಲ್ಲಿ ಅಲರ್ಜಿಸ್ಟ್ ಹಜೀಮ್ ಕಿಮಾಟಾ ಎಂಬವರು 24 ರೋಗಿಗಳನ್ನು ಅಧ್ಯಯನ ಮಾಡಿ ಕಂಡುಕೊಂಡರು. ಸಾಮಾನ್ಯವಾಗಿ ಅಲರ್ಜಿ ಇದ್ದಾಗ, ನಿರ್ದಿಷ್ಟ ಅಲರ್ಜಿಕಾರಕಕ್ಕೆ ಆ್ಯಂಟಿಬಾಡಿಯನ್ನು ದೇಹ ಉತ್ಪಾದಿಸುತ್ತೆ. ಚುಂಬನದ ನಂತರ, ಈ ಆ್ಯಂಟಿಬಾಡಿ ಕಡಿಮೆಯಾಗಿದ್ದು ಕಂಡುಬಂತು.
ರಕ್ತದೊತ್ತಡ ಕಡಿಮೆ ಮಾಡುತ್ತದೆ
ನಮ್ಮ ತುಟಿಗಳಲ್ಲಿ ಹಲವಾರು ಸೂಕ್ಷ್ಮ ರಕ್ತನಾಳಗಳಿವೆ. ಚುಂಬನದ ಸಮಯದಲ್ಲಿ ತುಟಿ ಹಿಗುತ್ತದೆ ಅರ್ಥಾತ್ ರಕ್ತನಾಳಗಳು ಹಿಗ್ಗುತ್ತವೆ. ಮುಖದ ಕಡೆಗೆ ಹೆಚ್ಚು ರಕ್ತ ಪಂಪ್ ಆಗುತ್ತದೆ. ಹೀಗಾಗಿ ದೇಹದ ಉಳಿದೆಡೆಗೆ ರಕ್ತ ಪರಿಚಲನೆ ಕಡಿಮೆಯಾಗುತ್ತದೆ. ಹೃದಯದ ಮೇಲಿನ ಹೊರೆ ಕಡಿಮೆಯಾಗುತ್ತದೆ, ಇದರ ಪರಿಣಾಮವಾಗಿ ರಕ್ತದೊತ್ತಡ ಕಡಿಮೆಯಾಗುತ್ತದೆ. ದೇಹದಲ್ಲಿ ಕಾರ್ಟಿಸೋಲ್ ಹಾರ್ಮೋನ್ ಮಟ್ಟವು ಕಡಿಮೆಯಾದಾಗ, ಬಿಪಿಯೂ ಇಳಿಯುತ್ತದೆ.
ನಿಮಗೆ ವಯಸ್ಸಾಗುವುದೇ ಇಲ್ಲ!
ಸಾಧ್ಯವಾದಷ್ಟು ಚುಂಬಿಸಲು ಮತ್ತೊಂದು ಕಾರಣ: ನಿಮ್ಮ ಮುಖಕ್ಕೆ ಹೆಚ್ಚಿನ ರಕ್ತದ ಹರಿವು ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಈ ಕಾಲಜೆನ್ ಹಾರ್ಮೋನ್ ಇದೆಯಲ್ಲ, ಇದು ವಯಸ್ಸಾಗುವುದನ್ನು ತಡೆಯುವಂಥ ಹಾರ್ಮೋನ್. ಹೆಚ್ಚಿನ ರಕ್ತದ ಹರಿವು, ರಕ್ತನಾಳಗಳ ಹಿಗ್ಗುವಿಕೆಯ ವೇಳೆ ಕಾಲಜನ್ ಮತ್ತು ಎಲಾಸ್ಟಿನ್ ಉತ್ಪಾದನೆ ಹೆಚ್ಚಾಗುತ್ತದೆ.
ಈ ಕಿಸ್ಸಿಂದ ವ್ಯಕ್ತಿತ್ವದ ಗುಟ್ಟೂ ಆಗುತ್ತೆ ರಟ್ಟು
ಮುಖದ ವ್ಯಾಯಾಮ
ನಿಮ್ಮ ತುಟಿಗಳನ್ನು ಅಲುಗಾಡಿಸಬೇಕಾದರೆ ಇಡೀ ಮುಖದ ಸ್ನಾಯುಗಳೇ ವ್ಯಾಯಾಮ ಮಾಡಬೇಕಾಗುತ್ತದೆ. ಕಾಲಜನ್ ಸ್ರಾವ ಹೆಚ್ಚಿಸುವುದಕ್ಕಾಗಿ ಸೌಂದರ್ಯಶಾಸ್ತ್ರಜ್ಞರು ಮತ್ತು ಚರ್ಮರೋಗ ತಜ್ಞರು ಮುಖಕ್ಕೆ ವ್ಯಾಯಾಮ ಮಾಡಲು ತರಬೇತಿ ನೀಡುತ್ತಾರೆ. ಭಾವೋದ್ರಿಕ್ತ ಚುಂಬನವು ಮುಖದ ವ್ಯಾಯಾಮವಲ್ಲದೆ ಇನ್ನೇನೂ ಅಲ್ಲ, ಸರಳವಾದ ಮುತ್ತಿನಿಂದಲೇ ಎರಡು ಕ್ಯಾಲೊರಿ ಬರ್ನ್ ಆಗುತ್ತೆ. ಇನ್ನು ನಾಲಿಗೆಯನ್ನೂ ಬಳಸಿ ದೀರ್ಘ, ಆಳವಾದ ಮುತ್ತು ನೀಡಿದರೆ ನಿಮಿಷಕ್ಕೆ ಸುಮಾರು 26 ಕ್ಯಾಲೊರಿ ಸುಡುತ್ತದೆ. ಮುಖದಲ್ಲಿ 43 ಮತ್ತು ನಾಲಿಗೆಯಲ್ಲಿ ಎಂಟು ಸ್ನಾಯುಗಳಿದ್ದು, ಅವುಗಳೆಲ್ಲವೂ ವ್ಯಾಯಾಮವಾಗುತ್ತದೆ.
ನಿಮ್ಮ ಸೆಕ್ಸ್ ಆಸಕ್ತಿ ಹೆಚ್ಚಿಸುತ್ತದೆ
ಇದು ಸ್ಪಷ್ಟವಾಗಿಯೇ ಇದೆಯಲ್ಲ! ಆಳವಾದ, ಪ್ಯಾಷನೇಟ್ ಆಗಿ ಮಾಡುವ ಕಿಸ್ಸಿಂಗ್‌ನಿಂದ ಮಿಲನ ಬಹಳ ಸುಖ, ಸಂತೃಪ್ತಿಕರವಾಗಿರುತ್ತದೆ. ಪುರುಷ ಲಾಲಾರಸವು ಟೆಸ್ಟೋಸ್ಟೆರಾನ್ ಎಂಬ ಲೈಂಗಿಕ ಹಾರ್ಮೋನ್ ಹೊಂದಿರುತ್ತದೆ, ಇದು ಕಾಮಾಸಕ್ತಿಯ ಮೇಲೆ ಪರಿಣಾಮ ಬೀರುತ್ತದೆ. ಇದು ಖಿನ್ನತೆ ಶಮನಕಾರಿ ಕೂಡ. ಮಹಿಳೆಯರಲ್ಲೂ ಇದು ವಿನಿಮಯವಾಗುತ್ತದೆ.