ಧೋನಿಗೇ ಫ್ಯಾನ್ಸ್‌ ಅಂದ್ರೆ ಅವರಪ್ಪನ ಮೀರಿಸೊ ಫ್ಯಾನ್ಸ್‌ ಮಗಳು ಝಿವಾಗಿದ್ದಾರೆ!

Suvarna News   | Asianet News
Published : Jan 04, 2020, 10:41 AM IST
ಧೋನಿಗೇ ಫ್ಯಾನ್ಸ್‌ ಅಂದ್ರೆ ಅವರಪ್ಪನ ಮೀರಿಸೊ ಫ್ಯಾನ್ಸ್‌ ಮಗಳು ಝಿವಾಗಿದ್ದಾರೆ!

ಸಾರಾಂಶ

ಈ ಮಗುವಿಗೆ ಕೇವಲ ನಾಲ್ಕು ವರ್ಷ. ಆಗಲೇ ಲಕ್ಷಾಂತರ ಅಭಿಮಾನಿಗಳು ಈಕೆಗಿದ್ದಾರೆ. ಅಂದಹಾಗೆ ಇವಳ ಹೆಸರು ಜೀವಾ ಸಿಂಗ್‌ ಧೋನಿ. ಇತ್ತೀಚೆಗೆ ಈ ಬಾಲೆ ಮುದ್ದಾಗಿ ಮಲೆಯಾಳಂ ಹಾಡು ಹಾಡಿದ್ದೇ ಮಿಲಿಯಾಂತರ ಅಭಿಮಾನಿಗಳನ್ನು ಸಂಗ್ರಹಿಸಿದ್ದಾಳೆ.  

ಈಗೀಗ ಬಾಲಿವುಡ್‌, ಸ್ಯಾಂಡಲ್‌ವುಡ್‌ಗಳಲ್ಲಿ ಸೆಲೆಬ್ರಿಟಿ ಮಕ್ಕಳದ್ದೇ ಹವಾ. ಸ್ಯಾಂಡಲ್‌ವುಡ್‌ನಲ್ಲಿ ಯಶ್‌ ಮಗಳು ಐರಾ ಸದಾ ಜನರ ನಾಲಿಗೆ ಮೇಲೆ ನಲಿಯುತ್ತಿದ್ದರೆ ಬಾಲಿವುಡ್‌ನಲ್ಲಿ ಕರೀನಾ-ಸೈಪ್‌ ಮಗ ತೈಮೂರ್‌, ಶಾಹಿದ್‌ ಕಪೂರ್‌-ಮೀರಾ ರಜಪೂತ್‌ ಮಗಳು ಮಿಶಾ ಕಪೂರ್‌ ಇತ್ಯಾದಿ ಸೆಲೆಬ್ರಿಟಿ ಮಕ್ಕಳು ಒಂದಿಲ್ಲೊಂದು ಕಾರಣಕ್ಕೆ ಮುನ್ನಲೆಗೆ ಬರುತ್ತಲೇ ಇದ್ದಾರೆ. ಆದರೆ ಈ ಮಕ್ಕಳಿಗಿಂತ ತುಸು ಭಿನ್ನ ಟೀಮ್‌ ಇಂಡಿಯಾದ ಮಾಜಿ ಕಪ್ತಾನ ಮಹೇಂದ್ರ ಸಿಂಗ್‌ ಧೋನಿ ಹಾಗೂ ಸಾಕ್ಷಿ ಸಿಂಗ್‌ ಧೋನಿ ಮಗಳು ಜೀವಾ ಧೋನಿ.

ಅಪ್ಪನ ಮುದ್ದು ಕೂಸುಮರಿ

ಕ್ಯಾಪ್ಟನ್‌ಗಿರಿ ಬಿಟ್ಟ ಮೇಲಿಂದ ಬಿಂದಾಸ್‌ ಆಗಿ ಮಗಳ ಜೊತೆಗೆ ಕಳೆಯುತ್ತಿದ್ದಾರೆ ಮಹೇಂದ್ರ ಸಿಂಗ್‌ ಧೋನಿ. ದಶಕದ ಹಿಂದೆ ಹುಡುಗಿಯರ ಹಾಟ್‌ ಪೇವರೆಟ್‌ ಆಗಿದ್ದ ಧೋನಿ ಸದ್ಯಕ್ಕೀಗ ಮಗಳ ಲೈಪ್‌ಟೈಮ್‌ ಅಭಿಮಾನಿ. ಅವಳ ಜೊತೆಗೆ ಕಳೆವ ಪ್ರತೀ ಕ್ಷಣವನ್ನೂ ಅವಿಸ್ಮರಣೀಯವಾಗಿಸಲು ಹೊರಟಿರೋ ಅಪ್ಪಟ ಅಪ್ಪ. ಮೊದಲೆಲ್ಲ ಕ್ರಿಕೆಟ್‌ ಮೈದಾನದಲ್ಲೇ ಮಗಳನ್ನೆತ್ತಿಕೊಂಡು ಸಂಭ್ರಮಿಸಿ ಅಭಿಮಾನಿಗಳ ಕಣ್ಣಲ್ಲಿ  ಗ್ರೇಟ್‌ ಪಾದರ್‌ ಅನಿಸಿಕೊಂಡಿದ್ದರು. ಈಗ ಮನೆಯೇ ಬಯಲಾಗಿದೆ. ಬ್ಯಾಟ್‌ ಬೀಸ್ತಿದ್ದ ಅಪ್ಪ ಮಗಳ ಜೊತೆಗೆ ಚೆಂಡಾಟ ಆಡ್ತಿದ್ದಾರೆ.

ಕಾರು ತೊಳೆದು ಸುಸ್ತಾದ ಧೋನಿಗೆ ಪುತ್ರಿ ಝಿವಾ ಮಸಾಜ್!

ಮಗಳಿಗಾಗಿ ಇನ್‌ಸ್ಟಾ ಪೇಜ್‌

ಮಗಳು ಜೀವಾಗಾಗಿ ಜೀವ ಬಿಡೋ ಧೋನಿ-ಸಾಕ್ಷಿ ಅವಳಿಗಾಗಿ ಒಂದು ಇನ್‌ಸ್ಟಾ ಪೇಜ್‌ ಕ್ರಿಯೇಟ್‌ ಮಾಡಿದ್ದಾರೆ. ಈ ಪೇಜ್‌ಗೆ ನೀವು ವಿಸಿಟ್‌ ಮಾಡಿದರೆ ಒಮ್ಮೆ ಶಾಕ್‌ ಆಗ್ತೀರಿ. ಈ ಮುದ್ದು ಮಗುವಿನ ಪೇಜ್‌ಗೆ ಇರುವ  ಪಾಲೋವರ್ಸ್‌ 1.5 ಮಿಲಿಯನ್‌. ಅಂದರೆ 15 ಲಕ್ಷ. ಎಂಥಾ ಸೆಲೆಬ್ರಿಟಿಗಾದ್ರೂ ಈ ಪರಿ ಅಭಿಮಾನಿಗಳಿರೋದು ಕಷ್ಟ. ಆದರೆ ಆ ಚಾನ್ಸ್‌ ಸೆಲೆಬ್ರಿಟಿ ಮಗಳಿಗೆ ಸಿಕ್ಕಿದೆ. ಈ ಪೇಜ್‌ನಲ್ಲಿ ಎರಡು ಭಾಗಗಳಿವೆ.

 

ಒಂದರಲ್ಲಿ ಜೀವಾಳ ವೈವಿಧ್ಯಮಯ ಚಟುವಟಿಕೆಗಳು. ಇನ್ನೊಂದರಲ್ಲಿ ಆಕೆಯ ರೋಡ್‌ ಟ್ರಿಪ್‌ನ ಡೀಟೈಲ್‌. ಇದಲ್ಲದೇ ನೂರಾರು ಪೋಸ್ಟ್‌ಗಳು. ಒಂದರಲ್ಲಿ ಇವಳು ಅಪ್ಪನಿಗೆ ಮಸಾಜ್‌ ಮಾಡುತ್ತಿದ್ದಾಳೆ. ಎಳೆಯ ಕೈಗಳ ಸ್ಪರ್ಶಕ್ಕೆ ಕರಗಿಹೋಗಿದ್ದಾರೆ ದೈತ್ಯ ಕ್ರಿಕೆಟಿಗ. ಈ ವೀಡಿಯೋವನ್ನು ಬಹಳ ಜನ ಲೈಕ್‌ ಮಾಡಿದ್ದಾರೆ. ಅದೇ ರೀತಿ ಧೋನಿ ಮಗಳ ಕೂದಲನ್ನು ಬ್ಲೋಡ್ರೈ ಮೂಲಕ ಒಣಗಿಸೋ ವೀಡಿಯೋ ಸಹ ಸಖತ್‌ ಪನ್ನಿ. ಸಮುದ್ರ ದಡದಲ್ಲಿ ಮರಳಾಟ ಆಡೋ ಅಪ್ಪ, ಮಗಳು, ನಾಯಿಯನ್ನು ಮುದ್ದಾಡೋ ಜೀವಾ, ಬ್ಯಾಗ್‌ ಹಾಕ್ಕೊಂಡು ಸ್ಕೂಲ್‌ಗೆ ಹೊರಟಿರೋದು ಹೀಗೆ. ಈ ಮಗುವಿನ ಆ್ಯಕ್ಟಿವಿಟಿ ನೋಡೋ ಮೂಲಕ ತಮ್ಮನೆಯ ಪಾಪುವನ್ನು ನೆನೆಸಿಕೊಳ್ತಿರೋ ಲಕ್ಷಾಂತರ ಅಭಿಮಾನಿಗಳು ಜೀವಾಪಾಪುಗೆ ಬಹುಪರಾಕ್‌ ಹೇಳಿದ್ದಾರೆ.

ಮಲೆಯಾಳಂ ಹಾಡು ವೈರಲ್‌ ಆಯ್ತು

ಈ ವಾರ ಸಖತ್‌ ವೈರಲ್‌ ಆಗಿದ್ದು ಜೀವಾ ಹಾಡಿರೋ ಮಲೆಯಾಳಂ ಹಾಡು. ಸುಮಾರು ಐದು ಲಕ್ಷ ಜನ ಈ ಎರಡು ಹಾಡುಗಳನ್ನು ಲೈಕ್‌ ಮಾಡಿದ್ದು ಮೀಡಿಯಾಗಳಲ್ಲಿ ಭಾರೀ ಸುದ್ದಿಯಾಯ್ತು. ಅಷ್ಟಕ್ಕೂ ಜೀವಾಗೆ ಈ ಮಲೆಯಾಳಿ ಹಾಡನ್ನು ಯಾರು ಹೇಳಿಕೊಟ್ರು ಅಂತ ಮಾಧ್ಯಮದವ್ರು ಹುಡುಕಿದಾಗ ಸಿಕ್ಕಿದ್ದು ಶೈಲಾ ಆಂಟಿ. ಇವರು ಜೀವಾಳ ಅಜ್ಜಿ. ಅವರು ಮೂಲತಃ ಕೇರಳದವರು. ತಮ್ಮ ಮಾತೃಭಾಷೆಯ ಸಿನಿಮಾದ ಪದ್ಯವನ್ನು ಪುಟಾಣಿ ಮೊಮ್ಮಗಳಿಗೆ ಕಲಿಸಿ ಅದನ್ನು ಸೋಷಲ್‌ ಮೀಡಿಯಾದಲ್ಲಿ ಹಾಕೋ ಮೂಲಕ ಅವರೂ ಸುದ್ದಿಯಾಗಿದ್ದಾರೆ.

 

PREV

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಸುಂದರ ದೇಶದಲ್ಲಿ ಬಾಡಿಗೆಗೆ ಸಿಗ್ತಾನೆ ಗಂಡ, ಗಂಟೆಗೆ ಇಷ್ಟಿದೆ ಸಂಬಳ!
ಮದುವೆ ಮುಂದೂಡಿಕೆ ಆದ 12 ದಿನಗಳ ಬಳಿಕ ಸೋಶಿಯಲ್‌ ಮೀಡಿಯಾದಲ್ಲಿ ಮೊದಲ ಪೋಸ್ಟ್‌ ಮಾಡಿದ ಸ್ಮೃತಿ, ಕೈಯಲ್ಲಿದ್ದ ರಿಂಗ್‌ ಮಾಯ!