
ಹೈದರಾಬಾದ್‌ನ ದಿಶಾ ಹತ್ಯಾಚಾರ ದೇಶಕ್ಕೇ ಆಘಾತ ನೀಡಿದೆ. ಹತ್ಯಾಚಾರದ ವಿವರಗಳು ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿವೆ. ವೈದ್ಯೆಯನ್ನು ಗ್ಯಾಂಗ್‌ರೇಪ್ ಮಾಡಿ ದುಪ್ಪಟ್ಟಾದಿಂದ ಕತ್ತು ಹಿಸುಕಿ ಕೊಂದ ಬಳಿಕವೂ ಶವದ ಮೇಲೆ ಆರೋಪಿಗಳು ಮತ್ತೆ ರೇಪ್ ನಡೆಸಿದ್ದರೆಂಬ ಆಘಾತಕಾರಿ ವಿಚಾರವನ್ನು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ.
ಕಾಗೆಗಳ ಶವ ಸಂಭೋಗ: ಇದೆಂತಾ ವಿಚಿತ್ರ ನಡುವಳಿಕೆಯ ಪ್ರಯೋಗ!
ಇದೆಂತಾ ಕ್ರೂರತೆ ಇರಬೇಕು? ಅಥವಾ ಇದೊಂದು ಮಾನಸಿಕ ಕಾಯಿಲೆಯೇ? ವಿಕೃತ ಮನಸ್ಸುಗಳು ಒಂದೆಡೆ ಸೇರಿದಾಗ ಪೈಶಾಚಿಕ ವರ್ತನೆಗೆ ಮಿತಿಯೇ ಇರುವುದಿಲ್ಲವೇ ಮುಂತಾದ ಪ್ರಶ್ನೆಗಳು ಕುಟುಕುತ್ತವೆ. ಹೀಗೆ ಶವಸಂಭೋಗಕ್ಕೆ ಮನೋ ವೈದ್ಯಕೀಯ ಭಾಷೆಯಲ್ಲಿ ನೆಕ್ರೋಫೀಲಿಯಾ ಎನ್ನಲಾಗುತ್ತದೆ.
ಏನಿದು ನೆಕ್ರೋಫೀಲಿಯಾ ?
ಶವಗಳ ಕಡೆ ಆಕರ್ಷಿತರಾಗುವುದು, ಅದರೊಂದಿಗೆ ಸಂಭೋಗ ನಡೆಸುವುದಕ್ಕೆ ನೆಕ್ರೋಫೀಲಿಯಾ ಎನ್ನಲಾಗುತ್ತದೆ. ಈ ವರ್ತನೆ ಕಪ್ಪೆಗಳು, ಸರೀಸೃಪಗಳು, ಪಕ್ಷಿಗಳು ಹಾಗೂ ಕೆಲ ಪ್ರಾಣಿಗಳಲ್ಲೂ ಕಂಡುಬರುತ್ತದೆ. ಇತ್ತೀಚೆಗಷ್ಟೇ ಕಾಗೆಗಳ ಶವಸಂಭೋಗ ದೊಡ್ಡ ಸುದ್ದಿಯಾದದ್ದು ನೆನಪಿರಬೇಕಷ್ಟೇ. ಆದರೆ, ಮನುಷ್ಯರಲ್ಲಿ ಇಂಥದೊಂದು ವರ್ತನೆ ಬಹಳ ಅಪರೂಪ. ಹಾಗಂಥ ಇತಿಹಾಸ ಕೆದಕಿದರೆ, ಸೈಕೋಗಳ ಕ್ರೈಂ ಫೈಲ್ ತೆರೆದರೆ ಇಂಥ ವಿಕೃತಿಯ ಒಂದಿಷ್ಟು ಉದಾಹರಣೆಗಳು ಸಿಗುತ್ತವೆ.
ಕಾರಣಗಳೇನು?
ಇಂಥದೊಂದು ಹುಚ್ಚಿಗೆ ಅತ್ಯಂತ ಸಾಮಾನ್ಯ ಕಾರಣವೆಂದರೆ, ಇಲ್ಲಿ ಶವವು ಯಾವುದೇ ತಿರಸ್ಕಾರವನ್ನು ತೋರುವುದಿಲ್ಲ, ತಮ್ಮ ಬಯಕೆಗಳಿಗೆ ನೋ ಎನ್ನುವುದಿಲ್ಲ ಎಂಬುದು. ಆದರೆ, ನೆಕ್ರೋಫೈಲ್‌ಗಳ ವರ್ತನೆ ಅಭ್ಯಸಿಸಿದವರಿಗೆ ಇಲ್ಲಿ ಒಂದಕ್ಕಿಂತ ಹೆಚ್ಚಿನ ಕಾರಣಗಳು ಸಿಕ್ಕಿವೆ. ಅವೆಂದರೆ,
- ಶೇ.68ರಷ್ಟು ನೆಕ್ರೋಫೈಲ್‍ಗಳು ಯಾವುದಕ್ಕೂ ತಡೆಯೊಡ್ಡದ ಪಾರ್ಟ್ನರ್ ಬೇಕೆಂಬ ಕಾರಣಕ್ಕೆ ಶವದೊಂದಿಗೆ ಸಂಭೋಗ ನಡೆಸುತ್ತಾರೆ.
- ಶೇ.21ರಷ್ಟು ಶವಸಂಭೋಗಿಗಳಿಗೆ ತಾವು ಕಳೆದುಕೊಂಡ ಸಂಗಾತಿಯೊಂದಿಗೆ ಸೇರುವ, ಅವರು ಸತ್ತ ಬಳಿಕವೂ ಅವರನ್ನು ಹೊಂದುವ ಬಯಕೆ.
- ಇನ್ನು ಶೇ.15ರಷ್ಟು ಜನರು ಸತ್ತ ದೇಹಗಳು ತಮಗೆ ಆಕರ್ಷಕವೆನಿಸುತ್ತವೆ ಎಂದು ತಿಳಿಸಿದ್ದಾರೆ.
- ಶೇ.15ರಷ್ಟು ನೆಕ್ರೋಫೈಲ್‌ಗಳು ಏಕಾಂಗಿತನ ಕಳೆದುಕೊಳ್ಳಲು ಶವದೊಂದಿಗೆ ಬದುಕಿದ್ದ ಉದಾಹರಣೆಗಳಿವೆ.
- ಇನ್ನು ಶೇ.12ರಷ್ಟು ಈ ವಿಕೃತಿಯವರು ಶವದ ಮೇಲಾದರೂ ತಮ್ಮ ಅಧಿಕಾರ ಚಲಾಯಿಸಿ ತಮ್ಮ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಇರಾದೆ ಹೊಂದಿದ್ದರೆಂದು ತಿಳಿದುಬಂದಿದೆ.
ಗತ ಲೈಂಗಿಕ ಸಂಬಂಧದ ಬಗ್ಗೆ ಸಂಗಾತಿ ಹೇಳಿ ಕೊಂಡಾಗ....!?
ಹೆಣದೊಂದಿಗೆ 7 ವರ್ಷ ಸಂಸಾರ ಮಾಡಿದ!
ಇದೊಂದು ಬಹಳ (ಕು)ಖ್ಯಾತಿ ಪಡೆದ ನೆಕ್ರೋಫೀಲಿಯಾ ಉದಾಹರಣೆ. ಜರ್ಮನಿಯ ಕಾರ್ಲ್ ತಾಂಜ್ಲರ್ ಎಂಬ ರೇಡಿಯಾಲಜಿ ಟೆಕ್ನಾಲಜಿಸ್ಟ್ ತನ್ನ 52ನೇ ವಯಸ್ಸಿನಲ್ಲಿ ಚಿಕಿತ್ಸೆ ಬೇಡಿ ಬಂದ ಅಮೆರಿಕನ್ ಬೆಡಗಿ ಎಲೆನಾ ಹೆಲೆನ್ ಎಂಬ 21 ವರ್ಷದಾಕೆಯ ಮೇಲೆ ಇನ್ನಿಲ್ಲದ ಮೋಹ ಬೆಳೆಸಿಕೊಂಡಿದ್ದ. ಆಕೆ ಈತನ ಮೋಹಪಾಶಕ್ಕೆ ಸಿಲುಕಲಿಲ್ಲ. ಟಿಬಿಯಿಂದ ಸಾವನ್ನಪ್ಪುತ್ತಾಳೆ. ಹಾಗೆ ಆಕೆ ಸತ್ತ ಎರಡು ವರ್ಷದ ಬಳಿಕ ತಾಂಜ್ಲರ್ ಅವಳ ಕೊಳೆತ ಶವವನ್ನು ಹೊರಗೆತ್ತಿ ಮನೆಗೆ ತೆಗೆದುಕೊಂಡು ಹೋಗಿ, ಅದಕ್ಕೆ ಬಟ್ಟೆ ತೊಡಿಸಿ, ವಾಸನೆ ಬಾರದಂತೆ ಒಂದಿಷ್ಟು ಔಷಧಿಗಳನ್ನು ಸಿಂಪಡಿಸಿ, ಅದರೊಂದಿಗೆ ಏಳು ವರ್ಷಗಳ ಕಾಲ ಜೀವನ ನಡೆಸಿದ್ದ ಎಂಬುದು ತಿಳಿದುಬಂದಿದೆ.
ಆತ ಆಕೆಯ ಯೋನಿಗೆ ಪೇಪರ್ ಕೊಳವೆ ಇಟ್ಟುಕೊಂಡು ಸಂಭೋಗ ನಡೆಸುತ್ತಿದ್ದ ಎಂಬ ವಿಷಯ ವೈದ್ಯಲೋಕವನ್ನೇ ಬೆಚ್ಚಿಸಿತ್ತು. ಇನ್ನು ಅಮೆರಿಕನ್ ಮಹಿಳೆಯೊಬ್ಬಳು ತಾಯಿಗೆ ಬರುತ್ತಿದ್ದ ಪೆನ್ಶನ್ ಹಣಕ್ಕಾಗಿ ತಾಯಿ ಸತ್ತು ಎರಡು ವರ್ಷಗಳೇ ಕಳೆದರೂ ಆಕೆಯ ಶವವನ್ನು ಸೋಫಾ ಮೇಲೆ ಕೂರಿಸಿ, ನೋಡಿದವರನ್ನು ವಂಚಿಸುತ್ತಿದ್ದ ಸುದ್ದಿ ಕೂಡಾ ಸದ್ದು ಮಾಡಿತ್ತು. ಇತ್ತೀಚೆಗೆ ಕರಾಚಿಯಲ್ಲೊಬ್ಬ ರಿಯಾಜ್ ಎಂಬಾತ ಮಹಿಳಾ ಶವಗಳನ್ನು ಸಮಾಧಿಯಿಂದ ಹೊರತೆಗೆದು ಅದರೊಂದಿಗೆ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದುದು ಪಾಕಿಸ್ತಾನಿಯರಿಗೆ ವಿಚಿತ್ರವೆನಿಸಿತ್ತು. ಇಷ್ಟಕ್ಕೂ ಇತಿಹಾಸದಲಲ್ಲಿ ಹುಡುಕಿದರೆ ಪ್ರಾಚೀನ ಈಜಿಪ್ಟಿಯನ್ನರ ಕಾಲದಲ್ಲೇ ಈ ಕಾಯಿಲೆಯ ವರ್ತನೆಗೆ ಉದಾಹರಣೆಗಳಿವೆ. ಕಿಂಗ್ ಹೆರೋಡ್ ತನ್ನ ಎರಡನೇ ಪತ್ನಿ ಸತ್ತ ಬಳಿಕ ಆಕೆಯನ್ನು ಜೇನಿನಲ್ಲಿ ಕೋಟೋ ಮಾಡಿ ಸುಮಾರು 7 ವರ್ಷಗಳ ಕಾಲ ಶವದೊಂದಿಗೆ ಬದುಕಿದ್ದ ಎನ್ನಲಾಗುತ್ತದೆ. ಹೀಗೆ ನೆಕ್ರೋಫೀಲಿಯಾ ಹೊಂದಿದ್ದವರಲ್ಲಿ ಅರ್ಧದಷ್ಟು ಜನರಿಗೆ ಪರ್ಸನಾಲಿಟಿ ಡಿಸಾರ್ಡರ್ ಇದ್ದರೆ, ಶೇ.11ರಷ್ಟು ಜನರು ಸಂಪೂರ್ಣ ಸೈಕೋಟಿಕ್ ಆಗಿದ್ದರು.
ಪ್ರಾಣಿಗಳಲ್ಲಿ ನೆಕ್ರೋಫೀಲಿಯಾ
1960ರಲ್ಲಿ ಸತ್ತ ಅಳಿಲಿನ ಜೊತೆ ಸಂಭೋಗ ಮಾಡುತ್ತಿದ್ದ ಡೇವ್ ಎಂಬ ಅಳಿಲನ್ನು ನೋಡಿದ ರಾಬರ್ಟ್ ಡಿಕರ್‌ಮ್ಯಾನ್ ಎಂಬಾತ ಇದಕ್ಕೆ ಡೇವಿಯನ್ ಬಿಹೇವಿಯರ್ ಎಂದು ಕರೆದ. ಈಗಲೂ ಕೂಡಾ ಪ್ರಾಣಿಗಳಲ್ಲಿ ಈ ಶವಸಂಭೋಗ ಕಂಡುಬಂದರೆ ಅದನ್ನು ಡೇವಿಯನ್ ಬಿಹೇವಿಯರ್ ಹೆಸರಿನಲ್ಲೇ ಕರೆಯಲಾಗುತ್ತದೆ. ಕಾಗೆಗಳಲ್ಲಿ ಶೇ.4ರಷ್ಟು ಸಂದರ್ಭಗಳಲ್ಲಿ ಈ ಶವಸಂಭೋಗ ದಾಖಲಾಗಿದೆ. ಕೆಲ ಹೆಣ್ಣು ಕೀಟಗಳು ಕೂಡಾ ಗಂಡನ್ನು ಸಾಯಿಸಿ ಅದರೊಂದಿಗೆ ಸಂಭೋಗ ನಡೆಸಿ ಬಳಿಕ ಅದನ್ನು ತಿನ್ನುವ ಅಭ್ಯಾಸ ಇಟ್ಟುಕೊಂಡಿರುವುದು ಕಂಡುಬಂದಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.