ಈ ಪ್ರೀತಿಗೇ ಕಣ್ಣೂ ಇಲ್ಲ..3 ವರ್ಷದ ಪ್ರೀತಿಯ ಬಳಿಕ 18 ವರ್ಷದ ಹುಡುಗಿಯನ್ನು ಮದುವೆಯಾದ 78ರ ಅಜ್ಜ!

By Santosh Naik  |  First Published Oct 5, 2022, 9:23 PM IST

18 ವರ್ಷದ ಹಲೀಮಾ ಅಬ್ದುಲ್ಲಾ ಮತ್ತು 78 ವರ್ಷದ ರೈತ ರಶಾದ್ ಮಂಗಾಕೋಪ್ ಇಬ್ಬರೂ ಕಳೆದ ಮೂರು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ, ಇಷ್ಟು ಶೀಘ್ರವಾಗಿ ಮದುವೆಯಾಗುತ್ತದೆ ಎನ್ನುವ ವಿಚಾರ ಇಬ್ಬರಿಗೂ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.


ನವದೆಹಲಿ (ಅ.5): ಇದು ಸೋಷಿಯಲ್‌ ಮಮೀಡಿಯಾದಲ್ಲಿ ಇತ್ತೀಚೆಗೆ ವೈರಲ್‌ ಆಗಿರುವ ಸುದ್ದಿ. ಈ ದಂಪತಿಗಳು ಮೊದಲ ಭೇಟಿಯಾಗಿದ್ದು ಭೋಜನ ಕೂಟವೊಂದರಲ್ಲಿ 18 ವರ್ಷದ ಹಲೀಮಾ ಅಬ್ದುಲ್ಲಾ ಹಾಗೂ 78 ವರ್ಷದ ರೈತ ರಶಾದ್‌ ಮಂಗಾಕೋಪ್‌ ಅವರಿಗೆ ತಾವು ಇಷ್ಟು ಶೀಘ್ರವಾಗಿ ಸನಿಹವಾಗುತ್ತೇವೆ ಎನ್ನುವ ಒಂದು ಸಣ್ಣ ಅಂದಾಜು ಕೂಡ ಇರಲಿಲ್ಲ. ಆದರೆ, ದಿ ಮಿರರ್‌ ಪತ್ರಿಕೆಯ ವರದಿಯ ಪ್ರಕಾರ ಈ ಎರಡೂ ಕುಟುಂಬಗಳು ಇವರಿಬ್ಬರ ಪ್ರೀತಿಗೆ ಒಪ್ಪಿಗೆಯ ಮುದ್ರೆ ನೀಡಿದ್ದು, ಅವರ ಸಮ್ಮುಖದಲ್ಲಿಯೇ ವಿವಾಹವಾಗಿದ್ದಾರೆ. ಮೂರು ವರ್ಷಗಳ ಕಾಲ ಪ್ರೀತಿ ಮಾಡುತ್ತಿದ್ದ ಅಜ್ಜ ಹಾಗೂ ಹುಡುಗಿಯ ನಡುವೆ 60 ವರ್ಷಗಳ ವಯಸ್ಸಿನ ಅಂತರವಿದೆ. ಆದರೆ, ಪ್ರೀತಿಗೆ ಕಣ್ಣಿಲ್ಲ ಎಂದು ಹೇಳ್ತಾರಲ್ಲ. ಅದೇ ರೀತಿ ಇಬ್ಬರ ನಡುವಿನ ಪ್ರೀತಿ ಮನಸ್ಸಿನಿಂದ ಆರಂಭವಾಗಿದೆ. 78 ವರ್ಷದ ರಶಾದ್‌ ಮಂಗಾಕೋಪ್‌ಗಾಗಲಿ, 18 ವರ್ಷದ ಹಲೀಮಾ ಅಬ್ದುಲ್ಲಾಗಾಗಲಿ ಜೀವನದಲ್ಲಿ ಹಿಂದೆಂದೂ ಪ್ರೀತಿ ಆಗಿರಲಿಲ್ಲ. ಪರಸ್ಪರ ನೋಡಿದ ಮೊದಲ ದಿನವೇ ಪ್ರೀತಿಯಲ್ಲಿ ಬಿದ್ದಿದ್ದಾಗಿ ಇಬ್ಬರೂ ಹೇಳಿದ್ದಾರೆ. ಇಬ್ಬರೂ ಕೂಡ ಪಿಲಿಪ್ಪಿನ್ಸ್‌ ಮೂಲದವರಾಗಿದ್ದಾರೆ. ಮದುವೆ ಸಮಾರಂಭದಲ್ಲಿ ಇವರಿಬ್ಬರ ಮೊದಲ ಭೇಟಿಯ ಮುನ್ನ ಇಬ್ಬರೂ 3 ವರ್ಷಗಳ ಕಾಲ ಪ್ರೀತಿಯಲ್ಲಿದ್ದರು. ಆದರೆ, ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧಾರ ಮಾಡಿದಾಗ ಎರಡೂ ಕುಟುಂಬಗಳು ವಧು-ವರರನ್ನು ಬೆಂಬಲಿಸಿವೆ. 

ಅವಿವಾಹಿತ ಎನ್ನುವ ಕಾರಣಕ್ಕಾಗಿಯೇ ಹುಟ್ಟಿದ ಪ್ರೀತಿ: ರಶಾದ್‌ ಇಲ್ಲಿಯವರೆಗೂ ಮದುವೆಯಾಗಿಲ್ಲ ಎನ್ನುವ ಕಾರಣಕ್ಕಾಗಿಯೇ ಹಲೀಮಾ ಪ್ರೀತಿಯಲ್ಲಿ (Love) ಬಿದ್ದಿದ್ದಾರೆ. ಇದೇ ವಿಚಾರವನ್ನು ಮನೆಯವರಿಗೆ ಹೇಳಿದಾಗ, ಹುಡುಗಿಯ ಮನೆಯವರೂ ಕೂಡ ಈ ನಿರ್ಧಾರವನ್ನು ಒಪ್ಪಿಕೊಂಡಿದ್ದಾರೆ. ಈ ಜೋಡಿಯ ಲವ್ ಸ್ಟೋರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮದುವೆಯ ನಂತರ, ದಂಪತಿಗಳು ಸಾಧ್ಯವಾದಷ್ಟು ಬೇಗ ತಮ್ಮ ಕುಟುಂಬವನ್ನು ಪ್ರಾರಂಭಿಸಲು (Rashed Mangacop) ಬಯಸುತ್ತಾರೆ. ಅವರಿಬ್ಬರೂ ಇಸ್ಲಾಮಿಕ್ ಪದ್ಧತಿಯ ಪ್ರಕಾರ ವಿವಾಹವಾಗಿದ್ದಾರೆ. ಆದಾಗ್ಯೂ, ಫಿಲಿಪೈನ್ಸ್‌ನಲ್ಲಿ ವಯಸ್ಸಿನ ಅಂತರ ವಿವಾಹವು ತುಂಬಾ ಸಾಮಾನ್ಯವಾಗಿದೆ.

ಇದು ಪಾಕಿಸ್ತಾನದ ದಿಲ್ ಚಾಹ್ತಾ ಹೈ.. 70 ವರ್ಷದ ಅಜ್ಜಿಯನ್ನು ವಿವಾಹವಾದ 37 ವರ್ಷದ ಯುವಕ!

ಇಸ್ಲಾಮಿಕ್‌ ಪದ್ದತಿಯ ಪ್ರಕಾರ ವಿವಾಹ: ರಶಾದ್‌ ಈವರೆಗೂ ಒಮ್ಮೆಯೂ ಪ್ರೀತಿಯಲ್ಲಿ ಬಿದ್ದಿಲ್ಲ, ಈವರೆಗೂ ವಿವಾಹವಾಗದೆಯೇ ಉಳಿದುಕೊಂಡಿದ್ದರು. ಹಲೀಮಾ (Halima Abdullah) ಜೊತೆ ಅವರದ್ದು ಮೊದಲ ಪ್ರೀತಿಯಾಗಿದೆ. ಮೂರು ಸಂತೃಪ್ತ ಪ್ರೀತಿಯ ವರ್ಷಗಳನ್ನು ಕಂಡ ಬಳಿಕ ಇಬ್ಬರೂ ಇಸ್ಲಾಮಿಕ್‌ ಪದ್ಧತಿಯ (Islamic Law) ಅನ್ವಯ ಆಗಸ್ಟ್‌ 25 ರಂದು ವಿವಾಹವಾಗಿದ್ದರು. 'ವರ ನನ್ನ ತಂದೆಯ ಸಹೋದರ. ಭೋಜನ ಕೂಟವೊಂದರಲ್ಲಿ ಇವರಿಬ್ಬರು ಮೊದಲು ಭೇಟಿಯಾಗಿದ್ದರು. ವಧುವಿನ ತಂದೆ, ನನ್ನ ಅಂಕಲ್‌ನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ' ಎಂದು ರಶಾದ್ ಮಂಗಾಕೋಪ್‌ನ ಸಹೋದರ ಮಗ ಬೆನ್‌ ಮಂಗಾಕೋಪ್‌ ಹೇಳಿದ್ದಾರೆ.

Tap to resize

Latest Videos

61 ವರ್ಷದ ಶಂಶದ್‌ನನ್ನು ಪ್ರೀತಿಸಿ ಮದುವೆಯಾದ 18 ವರ್ಷದ ಆಲಿಯಾ, ವೈರಲ್ ಅದ ಲವ್‌ ಸ್ಟೋರಿ!

ಪಿಲಿಪ್ಪಿನ್ಸ್‌ ಕಾನೂನಿನಲ್ಲಿ ಇದೆ ಒಪ್ಪಿಗೆ: ಮೊದಲು ಪ್ರೀತಿಯಲ್ಲಿ ಬಿದ್ದಿದ್ದು ಹುಡುಗಿ. ನನ್ನ ಅಂಕಲ್‌ಗೆ ವಯಸ್ಸಾಗಿದೆ ಆದರೆ ಈವರೆಗೂ ಮದುವೆ ಆಗಿರಲಿಲ್ಲ. ಆದರೆ, ಅವರು ಉತ್ತಮ ವ್ಯಕ್ತಿ. ಹಲೀಮಾ ಅವರ ಮೊದಲ ಪತ್ನಿ. ಇವರ ಜೋಡಿ ಬಹಳ ಸುಂದರವಾಗಿದೆ' ಎಂದು ಬೆನ್‌ (Ben Mangacop) ಹೇಳಿದ್ದಾರೆ. ಪಿಲಿಪ್ಪಿನ್ಸ್‌ನ (Philippines) ಕಾನೂನಿನ ಪ್ರಕಾರ, 21 ವರ್ಷಕ್ಕಿಂತ ಕೆಳಗಿನ ವ್ಯಕ್ತಿಗಳು ಮದುವೆಯಾಗಬಹುದು. ಆದರೆ. ಇದಕ್ಕಾಗಿ ಎರಡೂ ಕುಟುಂಬಗಳ ಒಪ್ಪಿಗೆ ಅನಿವಾರ್ಯ. ಈ ಜೋಡಿಗೆ ಕ್ರಾಮೆನ್‌ ಟೌನ್‌ನಲ್ಲಿ (Carmen town) ಹೊಸ ಮನೆಯನ್ನೂ ನೀಡಲಾಗಿದೆ. ಶೀಘ್ರದಲ್ಲಿಯೇ ತಮ್ಮ ಸಂಸಾರವನ್ನು ಆರಂಭ ಮಾಡುವುದಾಗಿ ಹೊಸ ಜೋಡಿ ಹೇಳಿದೆ.

click me!