
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಮತ್ತು ಇಂದೋರ್ ಸಂಗೀತಗಾರ ಪಲಾಶ್ ಮುಚ್ಚಲ್ ಅವರ ಹೈ-ಪ್ರೊಫೈಲ್ ಮದುವೆ ಮುರಿದು ಬಿದ್ದಿದೆ. ಮದುವೆಗೆ ಒಂದು ದಿನ ಇದೆ ಎನ್ನುವಾಗ ಸ್ಮೃತಿ ತಂದೆಗೆ ಆರೋಗ್ಯ ಸಮಸ್ಯೆ ಕಾಡಿತ್ತು. ನಂತ್ರ ಪಲಾಶ್, ಸ್ಮೃತಿಗೆ ಮೋಸ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆರಂಭದಲ್ಲಿ ಮದುವೆ ಮುಂದೂಡಲಾಗಿದೆ ಎನ್ನುವ ಸುದ್ದಿ ಹರಡಿದ್ರೂ ಮದುವೆ ಮುರಿದು ಬಿದ್ದಿದೆ ಎಂಬುದನ್ನು ಸ್ಮೃತಿ ಮಂಧಾನ ದೃಢಪಡಿಸಿದ್ದಾರೆ. ಅಷ್ಟೇ ಅಲ್ಲ ಈ ಕಷ್ಟದಿನಗಳನ್ನು ಮರೆತು ಮುನ್ನಡೆಯುವ ನಿರ್ಧಾರಕ್ಕೆ ಬಂದಿದ್ದಾರೆ. ಸ್ಮೃತಿ ಮಂಧಾನ ಮದುವೆ ಮಾತ್ರವಲ್ಲ, ಇನ್ನೇನು ತಾಳಿ ಕಟ್ಬೇಕು ಎನ್ನುವ ಸಮಯದಲ್ಲಿ ಅನೇಕ ಮದುವೆ ಮುರಿದುಬಿದ್ದಿದೆ. ಅಚ್ಚರಿ ಅಂದ್ರೆ ಇಂಧೋರ್ ಒಂದರಲ್ಲಿಯೇ ಬರೀ 40 ದಿನಗಳಲ್ಲಿ 150 ಮದುವೆ ಕ್ಯಾನ್ಸಲ್ ಆಗಿದೆ.
ಇದು ಮದುವೆ ಋತು. ಎಲ್ಲ ಕಡೆ ಮದುವೆ ಸಂಭ್ರಮ ಮನೆ ಮಾಡಿದೆ. ಇಂಧೋರ್ ಒಂದರಲ್ಲಿಯೇ 40 ದಿನಗಳಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಮದುವೆ ನಡೆದಿದೆ. ಆದ್ರೆ 150 ಮದುವೆ ಮುರಿದು ಬಿದ್ದಿದೆ. ಬಹುತೇಕ ಮದುವೆ ಮುರಿದು ಬೀಳಲು ಸೋಶಿಯಲ್ ಮೀಡಿಯಾ ಕಾರಣ ಎನ್ನುವ ಸತ್ಯ ಹೊರಬಿದ್ದಿದೆ. ಈಗಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಜೀವನದ ಒಂದು ಭಾಗವಾಗಿದೆ. ಅದ್ರ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ. ಸೋಶಿಯಲ್ ಮೀಡಿಯಾ ಬಳಸಿ ಜನರು ಶ್ರೀಮಂತರಾಗ್ತಿದ್ದಾರೆ. ಅದನ್ನೇ ವೃತ್ತಿ ಮಾಡ್ಕೊಂಡು ಹಣ ಸಂಪಾದನೆ ಮಾಡ್ತಿದ್ದಾರೆ. ಇದು ಅನೇಕರಿಗೆ ಮನರಂಜನೆ ನೀಡುವ ತಾಣವಾಗಿದೆ. ಆದ್ರೆ ಇದೇ ಸೋಶಿಯಲ್ ಮೀಡಿಯಾ ಅನೇಕರ ಮದುವೆ ರದ್ದಾಗಲು ಕಾರಣವಾಗಿದೆ.
ವಿಚ್ಚೇದನ ಪ್ರಕರಣದ ಕ್ಲೈಂಟ್ ಜೊತೆ ರೋಮ್ಯಾಂಟಿಕ್ ರಿಲೇಷನ್ ಶಿಪ್: ಮಹಿಳಾ ವಕೀಲೆಗೆ ಸುಪ್ರೀಂಕೋರ್ಟ್ ತರಾಟೆ
ನೂರು ಸುಳ್ಳು ಹೇಳಿ ಮದುವೆ ಮಾಡು ಎನ್ನುವ ಮಾತಿದೆ. ಸೋಶಿಯಲ್ ಮೀಡಿಯಾ ಎಲ್ಲ ಸುಳ್ಳುಗಳನ್ನು ಬಹಿರಂಗ ಮಾಡ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಹಾಕಿರುವ ಹಳೆ ಪೋಸ್ಟ್, ಕಮೆಂಟ್ ಗಳು ಇಬ್ಬರ ಮಧ್ಯೆ ಜಗಳಕ್ಕೆ ಕಾರಣವಾಗ್ತಿದೆ. ಮೆಹಂದಿ ಕಾರ್ಯಕ್ರಮ ಮುಗಿದ್ಮೇಲೆ, ಮದುವೆ ಮಂಟಪದಲ್ಲಿ ಮದುವೆ ರದ್ದಾದ ಅನೇಕ ಪ್ರಕರಣಗಳು ಇಂಧೋರ್ ನಲ್ಲಿ ಬೆಳಕಿಗೆ ಬಂದಿವೆ. ಒಂದು ಪ್ರಕರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ವೇಳೆ ಸೋಶಿಯಲ್ ಮೀಡಿಯಾ ಹಳೆ ಪೋಸ್ಟ್ ಬಗ್ಗೆ ಗಲಾಟೆಯಾಗಿದೆ. ಮದುವೆ ನಿಲ್ಲಿಸಿ ಹುಡುಗ ಗುಜರಾತ್ ಗೆ ವಾಪಸ್ ಆಗಿದ್ದಾನೆ. ಇನ್ನೊಂದು ಪ್ರಕರಣದಲ್ಲಿ ಸಂಗೀತ ಕಾರ್ಯಕ್ರಮದ ವೇಳೆ ವಧು ಪರಾರಿಯಾಗಿದ್ದಾಳೆ. ಆಕೆಗೆ ಬೇರೆ ಸಂಬಂಧವಿತ್ತು ಎಂಬುದು ಕೊನೆಯಲ್ಲಿ ಬಹಿರಂಗವಾಗಿದೆ. ವರದಿ ಪ್ರಕಾರ, ಶೇಕಡಾ 62ರಷ್ಟು ಮದುವೆ ಸೋಶಿಯಲ್ ಮೀಡಿಯಾದಿಂದ ರದ್ದಾಗಿದೆ. ಶೇಡಕಾ 17ರಷ್ಟು ಮದುವೆ, ಕುಟುಂಬದ ಸಮಸ್ಯೆ, ನಿಧನದಿಂದ ರದ್ದಾಗಿದೆ. ಶೇಕಡಾ 13ರಷ್ಟು ಮದುವೆ ವಿವಾದಗಳಿಂದ ರದ್ದಾದ್ರೆ ಶೇಕಡಾ 8ರಷ್ಟು ಮದುವೆ ರದ್ದಾಗಲು ಬೇರೆ ಕಾರಣಗಳಿವೆ.
ಉದ್ಯಮಕ್ಕೆ ನಷ್ಟ
ಇಂಧೋರ್ ನಲ್ಲಿ ಒಂದಲ್ಲ ಎರಡಲ್ಲ 150 ಮದುವೆ ರದ್ದಾಗಿರೋದು ಬರೀ ವಧು ಹಾಗೂ ವರನ ಕುಟುಂಬಕ್ಕೆ ಮಾತ್ರ ನಷ್ಟತಂದಿಲ್ಲ. ವೆಡ್ಡಿಂಗ್ ಪ್ಲಾನರ್, ಹೋಟೆಲ್ಗಳು, ಪಾರ್ಕ್, ಅಡುಗೆ ತಯಾರಕರು, ಬ್ಯಾಂಡ್ಗಳು,ಡೆಕೋರೇಟರ್, ಮೇಕಪ್ ಆರ್ಟಿಸ್ಟ್ ಸೇರಿದಂತೆ ಮದುವೆ ಉದ್ಯಮಕ್ಕೆ ಸಂಬಂಧಿಸಿದ ಪ್ರತಿಯೊಬ್ಬರಿಗೂ ನಷ್ಟವಾಗಿದೆ. ಈ ಮದುವೆಯಿಂದ ಸುಮಾರು 25 ಕೋಟಿ ರೂಪಾಯಿ ನಷ್ಟವಾಗಿದೆ.
ಜಗಳದ ಕಾರಣದಿಂದ ನಾವು ದೂರವಾಗಲು ಬಯಸಲಿಲ್ಲ, ಜಗಳವನ್ನೇ ದೂರಮಾಡಲು ಬಯಸಿದ್ದೇವೆ; ಸೋನಾಕ್ಷಿ ಸಿನ್ಹಾ!
ಬದಲಾದ ಕಾರಣ
ಹಿಂದೆ ಮದುವೆ ಮುರಿದು ಬೀಳಲು ವರದಕ್ಷಿಣೆ, ಆರ್ಥಿಕ ಸ್ಥಿತಿ ಕಾರಣವಾಗಿತ್ತು. ಆದ್ರೀಗ ಇನ್ಸ್ಟಾಗ್ರಾಮ್, ಎಕ್ಸ್, ಫೇಸ್ಬುಕ್ ಗಳು ಕಾರಣವಾಗ್ತಿದೆ. ಜನರು ಮದುವೆಗೆ ಮುನ್ನ ಇದ್ರ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸುವ ಅಗತ್ಯವಿದೆ. ಸೋಶಿಯಲ್ ಮೀಡಿಯಾ ಖಾತೆಯನ್ನು ಚೆಕ್ ಮಾಡಿಕೊಂಡಲ್ಲಿ, ಅವ್ರ ಬಗ್ಗೆ ಹೆಚ್ಚಿನ ಮಾಹಿತಿ ಪಡೆದಲ್ಲಿ ಮದುವೆ ರದ್ದಾಗೋದನ್ನು ನಿಲ್ಲಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.