ಟೆನಿಸ್ ಲೋಕದ ಸುಂದರಿ ಶರಪೋವಾ; ದಿಢೀರ್ ನಿವೃತ್ತಿ ಹಿಂದಿದೆ ಕಹಿ ಅಧ್ಯಾಯ!

By Suvarna News  |  First Published Feb 29, 2020, 5:54 PM IST

5 ಗ್ರ್ಯಾಂಡ್ ಸ್ಲಾಂ ಪ್ರಶಸ್ತಿ ಮುಡಿಗೇರಿಸಿಕೊಂಡ ರಷ್ಯಾ ಟೆನಿಸ್ ಸುಂದರಿ ಮರಿಯಾ ಶರಪೋವಾ ಫೀನಿಕ್ಸ್‌ನಂತ ಎದ್ದು ಬರಲಿದ್ದಾರೆ ಅಂದುಕೊಂಡ ಬೆನ್ನಲ್ಲೇ ಆಕೆ ದಿಢೀರ್ ನಿವೃತ್ತಿ ಹೇಳಿ ಎಲ್ಲರಿಗೂ ಶಾಕ್ ನೀಡಿದಳು.  5ನೇ ವರ್ಷಕ್ಕೆ ಟೆನಿಸ್ ಕೋರ್ಟ್‌ಗೆ ಲಗ್ಗೆ ಇಟ್ಟ ಮರಿಯಾ ಹಲವು ಏಳು-ಬೀಳಿನ ಹಾದಿ ಕಂಡಿದ್ದಾರೆ. ಆದರೆ ನಿವೃತ್ತಿ ಮಾತ್ರೂ ಯಾರೂ ಊಹಿಸಿರಲಿಲ್ಲ. ಗಪ್‌ಚುಪ್ ಪ್ರೀತಿಯಿಂದ ಡೇಟಿಂಗ್, ಟೆನಿಸ್ ಪಟುವಿನಿಂದ ಚಾಂಪಿಯನ್..ಹೀಗೆ ಮರಿಯಾ ಹೆಜ್ಜೆ ಗುರುತಿನ ಪುಟ ಇಲ್ಲಿದೆ. 


ರಮಾಕಾಂತ್ ಆರ್ಯನ್, ಸುವರ್ಣನ್ಯೂಸ್

ಶೆರ್ಪಿ ರಿಟೈರ್ಡ್​ ಆದ್ಯಾ...

Latest Videos

ಅವಳು ಗೆಲುವುಗಳನ್ನ ಮೀರಿದ ಸುಂದರಿ. ಗೆಲುವುಗಳ ಕಿರೀಟಕ್ಕೆ ಅವಳ ಸೌಂದರ್ಯವೇ ಗರಿ. 5 ಗ್ರಾಂಡ್​ ಸ್ಲಾಂಗಳನ್ನ ಗೆದ್ದರೂ ಅದಕ್ಕಿಂತ ಅವಳ ಅಂದವೇ ತಲೆ ಕೆಡಿಸಿಬಿಡುತ್ತಿತ್ತು. ಈಗಷ್ಟೇ 32 . ಅದ್ಯಾಕೋ 28 ವರ್ಷಗಳ ಟೆನಿಸ್​ ಸಾಕು ಅಂತ ಎದ್ದು ನಡೆದುಬಿಟ್ಟಿದ್ದಾಳೆ. ಹೆಸರು ಮರಿಯಾ ಶರಪೋವ. ತುಂಬ ಹುಡುಗರು ಎದೆಗಪ್ಪಿಕೊಂಡಂತ ಪ್ರೀತಿಯಿಂದ ಶೆರ್ಪಿ ಎನ್ನುತ್ತಿದ್ದರಷ್ಟೇ!

ಅಂತ ನೀಳ ಕಾಲ್ಗಳ ಇನ್ನೊಬ್ಬ ಚಲುವೆ ಟೆನಿಸ್​ ಅಂಗಳದಲ್ಲಿ ಕಂಡಿದ್ದು ತುಂಬ ಅಪರೂಪ. ರಷ್ಯಾದ ಈ ಹುಡುಗಿ ಆರು ಅಡಿ ಎರಡು ಇಂಚು ಉದ್ದವಿದ್ದಾಳೆ. ನಮ್ಮ ಹೃತಿಕ್ ರೋಷನ್​ ಇದ್ದಾನಲ್ಲಾ ,ಅವನಿಗಿಂತ 2 ಇಂಚು ಕಮ್ಮಿ ಅಷ್ಟೇ. ಟೆನಿಸ್​ಗೆ ವರ ಪಡೆದು ಸಿಗುವಂತ ಹೈಟ್ ಅದು. ಈ ಹುಡುಗಿ ಕೋರ್ಟ್​ ಕವರ್​ ಮಾಡುತ್ತಿದ್ದುದ್ದೇ ಒಂದು ಮ್ಯಾಜಿಕ್​. ಟೆನಿಸ್​ ಜೀವನ ಪೂರ್ತಿ ಕಾಡಿದ ಎಡಗೈ ನೋವಿಗೆ ಕಣ್ಣೀರು ಹಾಕುತ್ತಲೇ ವಿದಾಯ ಹೇಳಿಬಿಟ್ಟಿದ್ದಾಳೆ. ಅವಳೆಂದರೆ ಅಷ್ಟೇನಾ?

ಇದನ್ನೂ ಓದಿ: ಸೌಂದರ್ಯದ ಖನಿ ಮಾರ್ಟಿನ್ ಹಿಂಗಿಸ್ ಇನ್ನೊಂದು ಮುಖ

5 ವರ್ಷದ ಹುಡುಗಿ ಇದ್ದಾಗಿನಿಂದ ಟೆನಿಸ್​ ಆಡಿದ ರಷ್ಯಾದ ಧೃವತಾರೆ ಅವಳು. 17 ನೇ ವಯಸ್ಸಿಗೆ 3 ಗ್ರಾಂಡ್​ ಸ್ಲಾಂಗಳ ಮೇಲೆ ಚಿನ್ನದ ಅಕ್ಷರಗಳಲ್ಲಿ ತನ್ನ ಹೆಸರನ್ನ ಬರೆಸಿದ್ದವಳು. ಮೆಂಟಲಿ ತುಂಬಾನೆ ಟಫ್ ಎನಿಸುವಂತ ಹುಡುಗಿ.

ಅದಕ್ಕೆ ಫ್ರೆಂಚ್​ ಓಪನ್​ ಎಂಥಾ ಸಾಕ್ಷಿ ಗೊತ್ತಾ? ಫ್ರೆಂಚ್​ ಓಪನ್​ ಬಗ್ಗೆ ನಿನಗೆ ಏನನ್ನಿಸುತ್ತೆ ಶರ್ಪಿ ಅಂತ ಕೇಳಿದರೆ, ಏನು ಹೇಳಿದ್ದಳು. ಅಯ್ಯೋ ಅದು ಹೇಗ್ರಿ ಅಲ್ಲಿ ಆಡೋದು? ಹಸುವನ್ನ ಐಸ್​ ಮೇಲೆ ನಿಲ್ಲಿಸಿದಂತೆ ಆಗುತ್ತೆ ಆ ಆವೆ ಮಣ್ಣಿನ ಅಂಕಣ ಎಂದಿದ್ದಳು. ನೋಡಿದರೆ 2012 ಮತ್ತು 2014 ರಲ್ಲಿ ಅದೇ ಫ್ರೆಂಚ್​ ಓಪನ್​ ಗ್ರಾಂಡ್​ ಸ್ಲಾಂ ಗೆದ್ದು ಜಿಂಕೆಯಂತೆ ಕುಣಿದಿದ್ದಳು.

ಇದನ್ನೂ ಓದಿ: ಲಿಯಾಂಡರ್ ಎನ್ನುವ ವಂಡರ್​ ಹುಡುಗ; ಟೆನಿಸ್ ಜಗತ್ತನ್ನೇ ತನ್ನತ್ತ ತಿರುಗಿಸಿದ ಸಲಗ!.

ಅಪ್ಸರೆಯಂತ ಶರಪೋವಾಗೆ ಬಾಯ್​ಫ್ರೆಂಡ್​ಗಳಿಗೆ ಬರವಿತ್ತಾ? ಬ್ಯುಸಿನೆಸ್​ಮನ್​ನಿಂದ ಹಿಡಿದು ಟೆನಿಸ್​ ಹುಡುಗರವರೆಗೂ ಅವಳನ್ನ ಕಾಡಿದವರಿದ್ದಾರೆ, ಅವಳೇ ಕಾಡಿದ್ದಾಳೆ. ಅವಳು ಅಂತ ನೀಳಕಾಯದ ಬೆರಗು !

ಸದ್ಯ ಅವಳು ಅಲೆಕ್ಸಾಂಡರ್​ ಗಿಲ್ಸ್ಕ್​ ಎಂಬ ಪ್ಯಾಡಲ್​ 8 ಸಹ ಸಂಸ್ಥಾಪಕನೊಂದಿಗೆ ತುಂಬ ಓಡಾಡುತ್ತಿದ್ದಾಳೆ. 2018 ರ ಒಂದು ಸುಂದರ ಮಾರ್ಚ್​ನಿಂದ ಪ್ರೇಮಾಂಕುರ. ಇವನು ಬೆವರ್ಲಿ ಹಿಲ್ಸ್​ನ ಆರ್ಟ್​ ಗ್ಯಾಲರಿಯಲ್ಲಿ ಸಿಕ್ಕವನು. ಬ್ರಿಟನ್​ನ ರಾಜಕುಮಾರ ಪ್ರಿನ್ಸ್​ ಹ್ಯಾರಿಯೊಂದಿಗೆ ಕಾಲೇಜಿಗೆ ಜೊತೆಯಾಗಿ ಹೆಜ್ಜೆ ಇಟ್ಟವನು. ಮೊದಲು ಮಿಶಾ ನೋನೋಳನ್ನ ಮದುವೆಯಾಗಿದ್ದ. ಈ ಮಿಶಾ ನೋನೋ ಪ್ರಿನ್ಸ್​ ಹ್ಯಾರಿಗೂ, ಮೇಘನ್​ ಮಾರ್ಕೆಲ್​ಗೂ ಗಂಟು ಹಾಕಿದವಳು.

ಇದನ್ನೂ ಓದಿ: ಬಳಸಿದ ಪದಕ್ಕೆ ಕ್ಷಮೆ ಇಲ್ಲ, ಬಾಂಗ್ಲಾ ಪ್ರಶಸ್ತಿ ಗೆದ್ದರೂ ಬುದ್ಧಿ ಬಿಟ್ಟಿಲ್ಲ !.

ಇದಕ್ಕೂ ಮೊದಲು 5 ವರ್ಷಗಳ ಕಾಲ ಟೆನಿಸ್​ ಆಟಗಾರ ಗ್ರಿಗರ್​ ಡಿಮಿಟ್ರೋವ್​ನ ತೋಳಬಂಧಿಯಾಗಿದ್ದಳು ಶರಪೋವ. 2013ರ ಒಂದು ಮ್ಯಾಚ್​ನಲ್ಲಿ ಶೆರ್ಪಿ ಆಟ ನೋಡಿ ಅವಳಿಗೆ ಈ ಮೇಲ್​ ಮಾಡಿದ್ದ ಈ ಡಿಮಿಟ್ರೋವ್​. ಶೆರ್ಪಿಗೆ ಶಾಕ್​ ಏನ್​ ಗೊತ್ತಾ? ಈ ಚಿಕ್ಕ ಹುಡುಗನಿಗೆ ಇನ್ನೂ ಮದುವೆ ಆಗೋ ಏಜ್​ ಆಗಿದ್ಯಾ ಅಂತ. ಎರಡು ವರ್ಷ ಹಾಗೆ ಬಿಟ್ಟೂ ಬಿಡದ ಹಾಗೆ ಅವನ ಎದೆಗವಚಿಕೊಂಡೇ ಸುತ್ತಾಡಿದಳು. ಸುಂದರ ಅವನು. 2015ರಲ್ಲಿ ಒಂದು ಮ್ಯಾಚ್‌ನಲ್ಲಿ ಶರಪೋವ, ಸೆರೇನಾಗೆ ಸೋತುಬಿಡುತ್ತಾಳೆ. ಇದೇ ಸೆರೇನಾನನ್ನೂ ಬಿಡದೆ ಡೇಟ್​ ಮಾಡಿದ್ದವನು ಡಿಮಿಟ್ರೋವ್​. ಆಮೇಲೆ ಹಾಗೆ ಹಾರಿಹೋದ. ದುಂಬಿ!

ಇದನ್ನೂ ಓದಿ: ವಾರಕ್ಕೆ 150 ಐ ಫೋನ್ ಕೊಳ್ಳುವ ತಾಕತ್ತು ಇರುವವನ ಬಳಿ ಮುರುಕಲು ಫೋನು..!

ಇದಕ್ಕೂ ಮೊದಲು 2009ರಲ್ಲಿ ಸಾಶಾ ಎಂಬ ಬ್ಯಾಸ್ಕೆಟ್​ಬಾಲ್​ ಪ್ಲೇಯರ್​ ಜೊತೆ ಶರಪೋವ ತುಂಬಾ ಸೀರಿಯಸ್ಸಾದ ಲವ್ವಲ್ಲಿದ್ದಳು. ನೋಡೋಕೆ ಟಾಮ್​ ಕ್ರೂಸ್​ನಂಥ ಸುಂದರ ಅವನು. ಟೆನಿಸ್​ ಅಂಕಣದಲ್ಲಿ ಶರ್ಪಿ ಪ್ರತೀ ಹೊಡೆತಕ್ಕೂ ಮುನ್ನ ಹೃದಯವಿದ್ರಾವಕವಾಗಿ ಚೀರುತ್ತಿದ್ದರೆ, ಪ್ರೇಕ್ಷಕರ ಗ್ಯಾಲರಿಯಲ್ಲಿ ಅವಳಿಗಿಂತ ಜೋರಾಗಿ ಅರಚುತ್ತಿದ್ದವನು ಸಾಶಾ. ಅವಳ ಬಾಳಲ್ಲಿ ಅವನಷ್ಟು ಕಾಡಿದ ಹುಡುಗ ಇನ್ನೊಬ್ಬನಿಲ್ಲ. 2010 ರಲ್ಲಿ ಇಬ್ಬರೂ ಉಂಗುರ ಬದಲಾಯಿಸಿಕೊಂಡರು. ಆದರೆ ಅದೇಕೋ ದೂರಾದಳು..ಹೃದಯಗಳು ಮುರಿದ ಸದ್ದೂ ಕೇಳದಂತೆ!

ಯಶಸ್ವಿ ಜೈಸ್ವಾಲ್ ಮಾರಿದ್ದು ಪಾನಿಪುರಿ, ಪಾಕ್‌ ವಿರುದ್ಧ ಹೊಡೆದಿದ್ದು ಸೆಂಚುರಿ..!

ಇದಕ್ಕಿಂತ ಒಂದು ವರ್ಷಕ್ಕೆ ಟಿವಿ ಪ್ರೊಡ್ಯೂಸರ್​ ಚಾರ್ಲಿ ಎಬೆರ್​ಸೋಲ್​ನೊಂದಿಗೆ ಶರಪೋವ ಡೇಟಿಂಗ್​ ಮಾಡಿದ್ದಳು. ಇದೇ ಎಬೆರ್​ಸೋಲ್​ಗೆ ಮರಿಯಾ ಶರಪೋವ ಒಂದೇ ವರ್ಷಕ್ಕೆ ಬೋರ್​ ಆಗಿಬಿಟ್ಟಿದ್ದಳು. ಆಮೇಲೆ ಅವನು ಬ್ರಿಟ್ನಿ ಸ್ಪಿಯರ್ಸ್​ಳನ್ನ ತನ್ನ ತೋಳ ತೆಕ್ಕೆಗೆ ಎಳೆದುಕೊಂಡಿದ್ದ. ಶೆರ್ಪಿಗೆ ಸಹಿಸಲಾರದ ನೋವು ಕೊಟ್ಟು.

ಲೈಫ್‌ನಲ್ಲಿ ನೀನು ಏನೂ ಆಗೊಲ್ಲ ಎನಿಸಿಕೊಂಡವರು ಶಾರ್ದೂಲ್ ಕಥೆಯನ್ನೊಮ್ಮೆ ಓದಿ

2006ರಲ್ಲಿ ಆಂಡಿ ರಾಡಿಕ್​ನೊಂದಿಗೆ ಶರಪೋವ ತುಂಬಾ ಕಾಣಿಸಿಕೊಂಡಿದ್ದಳು. ಅಭಿಮಾನಿಗಳು ರೊಡಪೋವಾ ಎಂದು ಇಬ್ಬರ ಹೆಸರು ಸೇರಿಸಿ ಕರೆಯವಷ್ಟು. ಲವ್​ ಇಸ್ ಇನ್​ ದಿ ಏರ್​ ಎನ್ನುವ ಟೀ ಶರ್ಟ್​ ಹಾಕಿಕೊಂಡೇ ಅವನಾಡುವ ಮ್ಯಾಚ್​ ನೋಡುತ್ತಿದ್ದಳು. ಅದೂ ಬರೀ ಟೆನಿಸ್​ ಆಗಿರಲಿಲ್ಲ. ಲವ್​ ಆಲ್​!

'ಸೂಪರ್' ಓವರ್ ಗೆಲುವಿನ ರೂವಾರಿ, ಕಲ್ಲು ಮುಳ್ಳಿನ ಹಾದಿಯಲ್ಲಿ ಶಮಿ ಸವಾರಿ!.

ಆದರೆ ರಾಡಿಕ್​ ಅದೇಕೋ ನಮ್ಮಿಬ್ಬರ ನಡುವೆ ಅಂಥದ್ದೇನೂ ಇಲ್ಲ ಎಂದು ಎದ್ದು ನಡೆದಿದ್ದ. ಪ್ರೇಮದ ಅಮಲ ಹೊಗೆ ಕಂಡಿತ್ತು. ಘಮ ಕಾಣಿಸಲಿಲ್ಲ. ಈಗ ಅವನಿಗೆ ಎರಡು ಮಕ್ಕಳು. ಹೆಂಡತಿ ಹೆಸರು ಬ್ರೂಕ್ಲಿನ್​ ಡೆಕರ್​!

ಶೆರ್ಪಿಗೆ ಸರಿಯಾಗೆ ಹದಿನೆಂಟು ತುಂಬಿದ ಬರ್ತ್​ ಡೇ ಪಾರ್ಟಿಯಲ್ಲಿ ಗಂಟು ಬಿದ್ದವನು ಅದ್ಭುತ ಪಾಪ್​ ಸಿಂಗರ್​ ಲೆವೈನ್​. ತುಂಬ ಕಡಿಮೆ ದಿನಗಳಿಗೆ ಅವಳು ನನಗೆ ಬೇಡ ಎಂದು ಬಿಟ್ಟಿದ್ದ. ಕೊಟ್ಟ ಕಾರಣ ಏನು ಗೊತ್ತಾ? ಅವಳು ಸೆಕ್ಸ್​ನಲ್ಲಿ ತುಂಬ ಬ್ಯಾಡ್​, ಇಂತ ಹುಡುಗಿಯೊಂದಿಗೆ ನಾನಿರಲ್ಲ ಎಂದ. ಕಾಮಿ!

ಇರಲಿ ಮತ್ತೆ ಅಂಕಣದ ಆಟಕ್ಕೆ ಬರುತ್ತೇನೆ...
ಅದೇಕೋ ಗೊತ್ತಿಲ್ಲ. ಆಸ್ಟ್ರೇಲಿಯನ್​ ಓಪನ್​ನಲ್ಲಿ ಸತತ ಮೂರನೇ ವರ್ಷವೂ ಮೊದಲ ಸುತ್ತಿನಲ್ಲೇ ಹೊರನಡೆದುಬಿಟ್ಟಳು. ಈ ವರ್ಷ ಟೆನಿಸ್ಸೇ ಸಾಕೆಂದುಬಿಟ್ಟಳು. ಹೌದು ಅವಳ ಪಾಲಿಗೆ ಆಸ್ಟ್ರೇಲಿಯನ್​ ಓಪನ್​ ಎಂಥ ಅಪಶಕುನ ಗೊತ್ತಾ. ಒಂದು ಮರಾಮೋಸ ಆಸ್ಟ್ರೇಲಿಯನ್​ ಓಪನ್​ನಿಂದಲೇ ಶುರುವಾಗಿತ್ತು.

ನಿಮಗೆ Football ಇಷ್ಟ ಇಲ್ಲದೇ ಇದ್ರೂ ಸುನಿಲ್ ಚೆಟ್ರಿ ಬಗ್ಗೆ ಓದಲೇಬೇಕು..!

ಅದು 2016ರ ಜನವರಿ. ಆಸ್ಟ್ರೇಲಿಯನ್​ ಓಪನ್​ ಶುರುವಾಗಲಿಕ್ಕೆ ಕೆಲವೇ ದಿನಗಳು ಬಾಕಿ ಇದ್ದವು. ಡೋಪಿಂಗ್​ ಟೆಸ್ಟ್​ ಕೊಟ್ಟು ಬಂದಿದ್ದಳು ಶರಪೋವ. ಅದರ ಫಲಿತಾಂಶ ಬಂದಿದ್ದು ಜೂನ್​ 8 , 2016. ಎಂತ ರಿಸಲ್ಟ್​ ಗೊತ್ತಾ? ಶರಪೋವಾ ಕುಸಿದೇ ಅತ್ತುಬಿಟ್ಟಿದ್ದಳು. ಶರಪೋವ ನೀನು, ವಾಡಾದಿಂದ ನಿಷೇಧಿಸಲ್ಪಟ್ಟ ಮೆಲ್ಡೋನಿಯಮ್​ ನಂತ ಉದ್ದೀಪನ ತೆಗೆದುಕೊಂಡು ಆಡಿದ್ದೀಯ, ನಿನ್ನನ್ನ ಟೆನಿಸ್​ ನಿಂದ 20 ತಿಂಗಳು ಬ್ಯಾನ್​ ಮಾಡಿದ್ದೇವೆ ಅಂತ ಅಂತಾರಾಷ್ಟ್ರೀಯ ಟೆನಿಸ್​ ಫೆಡರೇಷನ್​ ಹೇಳಿಬಿಟ್ಟಿತ್ತು.

ಕಡಲೂರಿಗೆ ಮುತ್ತಾದ ರಾಹುಲ್, ಯಶಸ್ಸಿನ ಹಿಂದಿವೆ ನೂರಾರು ಸವಾಲ್

ಅವಳ ಕರ್ಮಕ್ಕೆ ಅಲ್ಲಿಯವರೆಗೂ ಮೆಲ್ಡೋನಿಯಮ್​ ಬ್ಯಾನ್​ ಆಗಿರಲಿಲ್ಲ. ಅದೇ ವರ್ಷದ ಜನವರಿ ಒಂದರಿಂದ ಮಾತ್ರ ಅದು ಬ್ಯಾನ್​ ಆಗಿತ್ತು.
ಶರಪೋವ ಹೋರಾಡಿ 20 ತಿಂಗಳ ನಿಷೇಧವನ್ನ 15 ತಿಂಗಳಿಗೆ ತಗ್ಗಿಸಿದ್ದಳು.

ಎಂತ ಯಾತನಾಮಯ ದಿನಗಳವು ಗೊತ್ತಾ? ಅಪ್ಪ ಪಟ್ಟಿದ್ದ ಅಷ್ಟೂ ಕಷ್ಟ ನೆನಪಾಗಿ ಕಣ್ಣೀರಲ್ಲೇ ಕರಗಿ ಹೋಗಿದ್ದಳು ಹುಡುಗಿ. ಅವರಪ್ಪ ಯೂರಿ ಅದೇಕೋ ತುಂಬ ನೆನಪಾಗಿದ್ದರು. ಮಗಳನ್ನ ಟೆನಿಸ್​ ಲೋಕದ ಚಾಂಪಿಯನ್​ ಮಾಡಬೇಕೆಂದು ರಷ್ಯಾದಿಂದ ಕೇವಲ 700 ಡಾಲರ್​ ಜೇಬಲ್ಲಿಟ್ಟುಕೊಂಡು ಫ್ಲೋರಿಡಾಗೆ ಬಂದಿಳಿದವರು ಯೂರಿ. ಹೆಗಲ ಮೇಲೆ 7 ವರ್ಷದ ಮಗಳಿದ್ದಳು ಶರಪೋವ. ಮಗಳಿಗೆ ಅಮೆರಿಕದಲ್ಲಿ ತರಬೇತಿ ಕೊಡಿಸಿ ಎಂದು ಹೇಳಿದ್ದವರು ಯಾರು ಗೊತ್ತಾ? ಟೆನಿಸ್​ ಲೋಕದ ಅಚ್ಚಳಿಯದ ಹೆಸರು ಮಾರ್ಟಿನಾ ನವ್ರಾಟಿಲೋವ.

ಕ್ರಿಕೆಟ್ ಜಗತ್ತಿನ ಮಣ್ಣಿನ ಹುಡುಗ: ಬೌಲಿಂಗ್‌ಗೆ ನಿಂತರೆ ಸೈನಿ ಹಸಿದ ಗಿಡುಗ!.

ಏಳೇ ವರ್ಷದ ಕಂದಮ್ಮ ಶರಪೋವ, ಅಮ್ಮ ಎಲೆನಾರನ್ನ ಬಿಟ್ಟು ಎರಡು ವರ್ಷ ಇದ್ದಳು. ಅಮ್ಮನಿಗೆ ವಿಸಾ ಮತ್ತು ಭಾಷೆ ಸಮಸ್ಯೆ ಇದ್ದ ಕಾರಣ ಬರಲಾಗಿರಲಿಲ್ಲ. ಅವಳೊಂದಿಗೆ ಇದ್ದದ್ದು ಜೀವನ ಮುಡಿಪಾಗಿಟ್ಟಿದ್ದ ಅಪ್ಪ ಮತ್ತು ನಂಬಿದ್ದ ಟೆನಿಸ್​ ಮಾತ್ರ!

11 ವರ್ಷದವಳಾಗುವಷ್ಟರಲ್ಲಿ ಶರಪೋವ ನೈಕ್​ ಎನ್ನುವ ವಿಶ್ವ ಪ್ರಸಿದ್ಧ ಬ್ರಾಂಡ್​ಗೆ ಸೈನ್​ ಹಾಕಿದ್ದಳು. ಅವಳ ಟೆನಿಸ್​ ಹಾಗೆ ಬೆಳೆದಿತ್ತು. ಮುಂದಿನ 6 ವರ್ಷಗಳಲ್ಲಿ ಅವಳು ಮೂರು ಗ್ರಾಂಡ್​ ಸ್ಲಾಂ ಒಡತಿ. ಇಲ್ಲಿಯವರೆಗೆ 39 ಮಿಲಿಯನ್​ ಡಾಲರ್​ಗಳು ಅವಳಿಗೆ ಕೇವಲ ಬಹುಮಾನದ ರೂಪದಲ್ಲಿಯೇ ಬಂದಿವೆ. ಫೋರ್ಬ್ಸ್​ ಒಂದು ಕಡೆ ಬರೆಯುತ್ತೆ. ಸತತ 11 ವರ್ಷಗಳಿಗೆ ಅವಳಷ್ಟು ಹಣ ಪಡೆದ ಆಟಗಾರ್ತಿ ವಿಶ್ವದಲ್ಲೇ ಇರಲಿಲ್ಲ ಅಂತಾ! ಟೆನಿಸ್​ ಏಂಜಲ್​ಗೆ ಅಷ್ಟು ಬೇಡವಾ?

ಹಿಂಗಿದ್ದ ನನ್ನ ಲೈಫ್​ ಎಲ್ಲಿಗೆ ಬಂದು ನಿಂತಿದೆ. ನನ್ನದಲ್ಲದ ತಪ್ಪಿಗೆ ಎಂತ ಕೆಟ್ಟ ಹೆಸರು ತಂದುಕೊಂಡೆ ಎಂದು ನೊಂದುಕೊಂಡಿದ್ದಳು ಶರಪೋವ. ಅಪ್ಪನ ಶ್ರಮವೆಲ್ಲಾ ನೆನೆದು ಶರಪೋವ ಕರಗಿದ್ದಳು.

ಆಮೇಲೆ ಅವಳು 26 ಏಪ್ರಿಲ್​ 2017 ಕ್ಕೆ ಮತ್ತೆ ಟೆನಿಸ್​ಗೆ ಮರಳಿದಳು ಹಿಂದಿನ ಮ್ಯಾಜಿಕ್​ ಅವಳನ್ನ ಬಿಟ್ಟು ಹೋಗಿತ್ತು. ಅದೇ ನೋವಿನಲ್ಲೇ ಈಗ ವಿದಾಯವನ್ನು ಬರೆದುಬಿಟ್ಟಿದ್ದಾಳೆ.
ಇನ್ನೊಂದು ವಿಷಯ. ಶೆರ್ಪಿಗೆ ಅವಳ ಗಾಯದ ನೋವಿಗಿಂತ ಕಾಡಿದವಳು ಸೆರೇನಾ ವಿಲಿಯಮ್ಸ್!.

ಇಬ್ಬರೂ 22 ಬಾರಿ ಫೇಸ್​ ಟು ಫೇಸ್​ ಆಗಿದ್ದಾರೆ. ಶೆರ್ಪಿ ಗೆದ್ದಿದ್ದು 2 ಬಾರಿ ಮಾತ್ರ. ಸೆರೇನಾ 20 ಬಾರಿ ಗೆದ್ದು ಬೀಗಿದ್ದಾಳೆ. ದೈತ್ಯಳವಳು.
ಸೆರೇನಾ ಮತ್ತು ನಿನ್ನ ಫ್ರೆಂಡ್​ಶಿಪ್​ ಬಗ್ಗೆ ಏನಾದರೂ ಹೇಳು ಶೆರ್ಪಿ ಅಂದರೆ ಏನನ್ನಬೇಕವಳು.. ಯುದ್ಧಭೂಮಿಯಲ್ಲಿ ನಾನು ಸ್ನೇಹ ಮಾಡಿಕೊಳ್ಳಲ್ಲ ಎಂದಳು..ಅಂತಾ ಸಿಟ್ಟು.

ಇರಲಿ ಶೆರ್ಪಿ ರಿಟೈರ್ಡ್​ ಆಗುತ್ತಿರೋದು ಟೆನಿಸ್​ನಿಂದ ಮಾತ್ರ. ಫ್ಯಾಷನ್​ ಲೋಕದಿಂದಲ್ಲ. ಫ್ಯಾಷನ್​ ಮ್ಯಾಗಝೀನ್​ಗಳಲ್ಲಿ ಅವಳ ಫೋಟೋ ಇಲ್ಲವೆಂದರೆ ವಯಸಿನ ಹುಡುಗರಿಗಂತೂ ಆ ಮ್ಯಾಗಝೀನ್​ ಬೇಡ. ಅವಳು ಮಾಡದ ಫ್ಯಾಷನ್​ ಪರೇಡ್​, ಫ್ಯಾಷನ್​ ಪರೇಡ್​ ಅಲ್ಲವೇ ಅಲ್ಲ. ಮತ್ತೆ ಸಿಗು ಶೆರ್ಪಿ..ಟೇಕ್​ ಕೇರ್​....

#NewsIn100Seconds ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"

click me!