ಕುಸ್ತಿ ಪಟು ಸಾಕ್ಷಿಗೆ ಸೋಲು, ಶೂಟಿಂಗ್ ವಿಶ್ವಕಪ್‌‌ನಿಂದ 6 ರಾಷ್ಟ್ರ ಹಿಂದಕ್ಕೆ!

By Chethan KumarFirst Published Feb 27, 2020, 10:27 AM IST
Highlights

ರಿಯೋ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆದ್ದಿದ್ದ ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಸೋಲು ಅನುಭವಿಸೋ ಮೂಲಕ ಟೊಕಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸುವುದು ಅನುಮಾನವೆನಿಸಿದೆ. ಇತ್ತ ಶೂಟಿಂಗ್ ವಿಶ್ವಕಪ್ ಟೂರ್ನಿಯಿಂದ 6 ರಾಷ್ಟ್ರಗಳು ಹಿಂದೆ ಸರಿದಿವೆ. ಎರಡು ಸುದ್ದಿಗಳ ವಿವರ ಇಲ್ಲಿದೆ. 
 

ನವದೆಹಲಿ(ಫೆ.27): ವಿಶ್ವವನ್ನೇ ವ್ಯಾಪಿಸಿಕೊಳ್ಳುತ್ತಿರುವ ಕೊರೋನಾ ವೈರಸ್‌ ಪರಿಣಾಮ ಮುಂದಿನ ತಿಂಗಳು ನವದೆಹಲಿಯಲ್ಲಿ ನಡೆಯಲಿರುವ ವಿಶ್ವಕಪ್‌ ಶೂಟಿಂಗ್‌ ಮೇಲು ಆಗಿದೆ. ಮಹಾಮಾರಿ ವೈರಸ್‌ ಭೀತಿಯಿಂದ ಚೀನಾ ಸೇರಿದಂತೆ ಒಟ್ಟು ಆರು ರಾಷ್ಟ್ರಗಳು ಪಾಲ್ಗೊಳ್ಳದಿರಲು ನಿರ್ಧರಿಸಿವೆ. 

ಭಾರತೀಯಳ ಜೊತೆ ಆಸೀಸ್ ಕ್ರಿಕೆಟಿಗ ಮ್ಯಾಕ್ಸ್‌ವೆಲ್ ನಿಶ್ಚಿತಾರ್ಥ!

ತೈವಾನ್‌, ಹಾಂಕಾಂಗ್‌, ಮಕಾವ್‌, ಉತ್ತರ ಕೊರಿಯಾ ಮತ್ತು ತುರ್ಕ್ಮೇನಿಸ್ತಾನವೂ ಪಂದ್ಯಾವಳಿಯಿಂದ ದೂರ ಸರಿದಿವೆ. ಮಾಚ್‌ರ್‍ 15-26ರ ತನಕ ಕರ್ಣಿ ಸಿಂಗ್‌ ಶೂಟಿಂಗ್‌ ರೇಂಜ್‌ನಲ್ಲಿ ಪಂದ್ಯಾವಳಿ ನಿಗದಿಯಾಗಿದೆ.

ಟ್ರಯಲ್ಸ್‌: ರಿಯೋ ಪದಕ ವಿಜೇತೆ ಸಾಕ್ಷಿಗೆ ಸೋಲು
ಲಖನೌ: 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಕುಸ್ತಿಪಟು ಸಾಕ್ಷಿ ಮಲಿಕ್‌, 2020ರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವುದು ಅನುಮಾನವೆನಿಸಿದೆ. ಮುಂದಿನ ತಿಂಗಳು ನಡೆಯಲಿರುವ ಏಷ್ಯನ್‌ ಒಲಿಂಪಿಕ್‌ ಅರ್ಹತಾ ಟೂರ್ನಿಯಲ್ಲಿ 62 ಕೆ.ಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಬುಧವಾರ ಆಯ್ಕೆ ಟ್ರಯಲ್ಸ್‌ ನಡೆಸಲಾಯಿತು. 

18 ವರ್ಷದ ಸೋನಂ ಮಲಿಕ್‌ ವಿರುದ್ಧ ಸಾಕ್ಷಿ ಸೋಲುಂಡು ಅಚ್ಚರಿ ಮೂಡಿಸಿದರು. ಮಾ.27ರಿಂದ 29ರ ವರೆಗೂ ಕಿರ್ಗಿಸ್ತಾನದ ಬಿಶ್ಕೇಕ್‌ನಲ್ಲಿ ಪಂದ್ಯಾವಳಿ ನಡೆಯಲಿದ್ದು, ಫೈನಲ್‌ ಪ್ರವೇಶಿಸುವ ಕುಸ್ತಿಪಟುಗಳು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿದ್ದಾರೆ.

click me!