ಡೇವಿಸ್ ಕಪ್ ಟೂರ್ನಿಯ ಭಾರತ ವಿರುದ್ಧದ ಪಂದ್ಯಕ್ಕೆ ಕ್ರೊವೇಷಿಯಾ ತಂಡ ಪ್ರಕಟವಾಗಿದ್ದು, ಯುಎಸ್ ಓಪನ್‌ನ ಮಾಜಿ ಚಾಂಪಿಯನ್ ಮರಿನ್ ಸಿಲಿಚ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.
ನವದೆಹಲಿ(ಫೆ.28): ಭಾರತ ವಿರುದ್ಧ ಡೇವಿಸ್ ಕಪ್ ವಿಶ್ವ ಗುಂಪು ಅರ್ಹತಾ ಪಂದ್ಯಕ್ಕೆ ಕ್ರೊವೇಷಿಯಾ ತಂಡ ಪ್ರಕಟಗೊಂಡಿದ್ದು, ಯುಎಸ್ ಓಪನ್‌ನ ಮಾಜಿ ಚಾಂಪಿಯನ್ ಮರಿನ್ ಸಿಲಿಚ್ ಸ್ಥಾನ ಪಡೆದಿದ್ದಾರೆ.
Confirmed: Croatia & Uzbekistan
🇭🇷 🇺🇿 pic.twitter.com/N4pnXdiMJU
ಡೇವಿಸ್ ಕಪ್: ಭಾರತ ತಂಡದಲ್ಲಿ ಲಿಯಾಂಡರ್ ಪೇಸ್‌ಗೆ ಸ್ಥಾನ
ಮುಂದಿನ ವಾರ ಜಾಗ್ರೆಬ್‌ನಲ್ಲಿ ಪಂದ್ಯ ನಡೆಯಲಿದೆ. ಮಾಜಿ ವಿಶ್ವ ನಂ.3 ಆಟಗಾರನಿಂದ ಭಾರತೀಯ ಆಟಗಾರರು ಕಠಿಣ ಸ್ಪರ್ಧೆ ಎದುರಿಸಲಿದ್ದಾರೆ. ಸಿಲಿಚ್ 2008ರಲ್ಲಿ ಕೊನೆ ಬಾರಿಗೆ ಡೇವಿಸ್ ಕಪ್‌ನಲ್ಲಿ ಆಡಿದ್ದರು. ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಉತ್ತಮ ಪ್ರದರ್ಶನ ತೋರಿ ಕ್ರೊವೇಷಿಯಾ ಚಾಂಪಿಯನ್ ಪಟ್ಟಕ್ಕೇರಲು ನೆರವಾಗಿದ್ದರು.
ಡೇವಿಸ್ ಕಪ್: ಪಾಕ್ ವಿರುದ್ಧ ಭಾರತ ಕ್ಲೀನ್ ಸ್ವೀಪ್
ಡಬಲ್ಸ್ ವಿಭಾಗದಲ್ಲೂ ಕ್ರೊವೇಷಿಯಾ ಪ್ರಬಲ ಆಟಗಾರರನ್ನು ಕಣಕ್ಕಿಳಿಸಲಿದೆ ವಿಶ್ವ ನಂ.10 ಇವಾನ್ ಡೊಡಿಗ್ ಹಾಗೂ ವಿಶ್ವ ನಂ.16 ಮೇಟ್ ಪಾವಿಚ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಜೋಡಿಗೆ ಪೇಸ್-ಬೋಪಣ್ಣ ಜೋಡಿ ಸವಾಲೊಡ್ಡಲಿದ್ದಾರೆ.