ಸ್ಯಾಂಡಲ್‌ವುಡ್‌ಗೆ ಕೊರೋನಾಘಾತ: ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ: ಜು. 15ರ ಟಾಪ್ 10 ಸುದ್ದಿ!

By Suvarna NewsFirst Published Jul 15, 2020, 4:46 PM IST
Highlights

ಕೊರೋನಾತಂಕ ನಡುವೆ ದೇಶ ಅತ್ತ ಚಿನಾ ಹೊಸ ಖ್ಯಾತೆ ತೆಗೆದಿದ್ದು, ಭಾರತ ಜೊತೆಗಿನ ಸಂಘರ್ಷದಲ್ಲಿ ಹತರಾದ ಸೈನಿಕರ ಅಂತ್ಯಕ್ರಿಯೆಗೆ ಹಿಂದೇಟು ಹಾಕಿದೆ. ರಾಜಸ್ಥಾನ ರಾಜಕೀಯದಲ್ಲೂ ರೋಚಕ ತಿರುವು ಪಡೆದಿದ್ದು, ಪೈಲಟ್‌ ತಾನು ಬಿಜೆಪಿ ಸೇರಲ್ಲ, ಇದು ತನ್ನ ವಿರುದ್ಧ ನಡೆದ ಷಡ್ಯಂತ್ರ ಎಂದು ಸ್ಪಷ್ಟನೆ ನೀಡಿದ್ದಾರೆ. ಹೀಗಿರುವಾಗ ಇತ್ತ ಕರ್ನಾಟಕದಲ್ಲಿ ಈಗಾಗಲೇ ಪ್ರಕಟಗೊಂಡ ಪಿಯುಸಿ ಫಲಿತಾಂಶದಲ್ಲಿ ಅನೇಕ ಕಷ್ಟಗಳನ್ನೆದುರಿಸಿ ಸಾಧನೆ ಮಾಡಿದವರು ಇತರವಿದ್ಆಐರ್ಥಿಗಳಿಗೆ ಮಾದರಿಯಾಗಿದ್ದಾರೆ. ಇಲ್ಲಿದೆ ನೋಡಿ ಜುಲೈ 15ರ ಟಾಪ್ ಹತ್ತು ಸುದ್ದಿಗಳು

ಮತ್ತೆ ಹೊಸ ಹಾದಿ ಹಿಡಿದ ಪೈಲಟ್, ಗಾಂಧಿ ಕುಟುಂಬಸ್ಥರನ್ನು ಸಂಪರ್ಕಿಸಲು ಯತ್ನ!

ರಾಜಸ್ಥಾನದಲ್ಲಿ ರಾಜಕೀಯ ಹೈಡ್ರಾಮಾ ಮತ್ತೆ ಮುಂದುವರೆದಿದೆ. ಮಂಗಳವಾರ ಕಾಂಗ್ರೆಸ್ ಪಕ್ಷ ಡಿಸಿಎಂ ಹಾಗೂ ರಾಜ್ಯ ಅಧ್ಯಕ್ಷ ಸ್ಥಾನದಿಂದ ಪೈಲಟ್‌ರನ್ನು ಕೆಳಗಿಳಿಸಿತ್ತು, ಹೀಗಿರುವಾಗ ಸಚಿನ್ ಪೈಲಟ್ ಮುಂದಿನ ನಡೆ ಏನಾಗಿರಬಹುದೆಂಬ ವಿಚಾರ ಭಾರೀ ಕುತೂಹಲ ಮೂಡಿಸಿತ್ತು. ಹೀಗಿರುವಾಗಲೇ ಪೈಲಟ್ ಬುಧವಾರ ಬೆಳಗ್ಗೆ ನಾನು ಇವತ್ತಿಗೂ ಕಾಂಗ್ರೆಸ್ಸಿಗ ಎಂದ ನುಡಿದಿದ್ದಾರೆ. ಅವರ ಈ ಮಾತುಗಳಿಂದ ಅವರಿನ್ನೂ ಗಾಂಧೀ ಕುಟುಂಬ ಸದಸ್ಯರನ್ನು ಭೇಟಿಯಾಗಲು ಯತ್ನಿಸುತ್ತಿದ್ದಾರೆ ಹಾಗೂ ಬಿಜೆಪಿಗೆ ಸೇರ್ಪಡೆಯಾಗುವ ವದಂತಿ ಗಾಂಧೀ ಕುಟುಂಬದಿಂದ ಅವರನ್ನು ದೂರ ಮಾಡಲು ಹೆಣೆದ ಕುತಂತ್ರ ಎಂಬ ಅನುಮಾನ ಹುಟ್ಟಿಸಿದೆ. 

10ನೇ ತರಗತಿ ಫಲಿತಾಂಶ ಪ್ರಕಟ: ನಿಮ್ಮ ರಿಸಲ್ಟ್ ಇಲ್ಲಿ ಪರಿಶೀಲಿಸಿ

ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‍ಇ) 10ನೇ ತರಗತಿ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ ಪೋಖ್ರಿಯಲ್, ಫಲಿತಾಂಶ ಪ್ರಕಟಿಸಿರುವ  ಬಗ್ಗೆ ಖಚಿತಪಡಿಸಿದ್ದಾರೆ.

ಸ್ಯಾಂಡಲ್‌ವುಡ್‌ಗೆ ಕೊರೋನಾಘಾತ; ನಟ ಧ್ರುವ ಸರ್ಜಾ, ಪತ್ನಿ ಪ್ರೇರಣಾಗೆ ಸೋಂಕು

ಸ್ಯಾಂಡಲ್ ವುಡ್ ಗೆ ಮತ್ತೊಂದು ಶಾಕಿಂಗ್ ನ್ಯೂಸ್ ಬಂದಿದೆ.  ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ಇರುವುದು ದೃಢವಾಗಿದೆ. ಟ್ವೀಟ್ ಮಾಡಿರುವ ಧ್ರುವ, ನನಗೆ ಹಾಗೂ ನನ್ನ ಪತ್ನಿಗೆ ಕೊರೋನಾ ಸೋಂಕು ದೃಢವಾಗಿದೆ. ಸದ್ಯ ಕೊರೋನಾ ಲಕ್ಷಣಗಳು ಸಣ್ಣ ಪ್ರಮಾಣದಲ್ಲಿ ಕಂಡು ಬಂದಿದ್ದರಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ನಿಮ್ಮೆಲ್ಲರ ಹಾರೈಕೆ ಇರಲಿ ಎಂದು  ಕೇಳಿಕೊಂಡಿದ್ದಾರೆ

ಗಲ್ವಾನ್‌ನಲ್ಲಿ ಹತ ತನ್ನ ಯೋಧರ ಅಂತ್ಯಸಂಸ್ಕಾರಕ್ಕೂ ಚೀನಾ ಕ್ಯಾತೆ!

ಲಡಾಖ್‌ನ ಗಲ್ವಾನ್‌ ಕಣಿವೆಯಲ್ಲಿ ಕಾಲುಕೆರೆದು ಜಗಳಕ್ಕೆ ಬಂದು ಭಾರತೀಯ ಯೋಧರ ಕೈಯಲ್ಲಿ ಭಾರೀ ಪೆಟ್ಟು ತಿಂದಿದ್ದ ಚೀನಾ, ಇದೀಗ ತನ್ನ ಯೋಧರ ಅಂತ್ಯಸಂಸ್ಕಾರಕ್ಕೇ ಕ್ಯಾತೆ ತೆಗೆದಿರುವ ವಿಷಯ ಬೆಳಕಿಗೆ ಬಂದಿದೆ.

ಪ್ರವಾಹದ ನೀರಿಗಿಳಿದು ನೂರಾರು ಜೀವ ರಕ್ಷಿಸಿದ ಬಿಜೆಪಿ ಶಾಸಕ

ಭಾರಿ ಪ್ರವಾಹಕ್ಕೆ ಅಸ್ಸಾಂ ತತ್ತರಿಸಿ ಹೋಗುತ್ತಿದೆ. ಒಂದು ಕಡೆ ಕೊರೋನಾ ಇನ್ನೊಂದು ಕಡೆ ವರುಣನ ಆರ್ಭಟ. ಪರಿಹಾರ ಕಾರ್ಯಗಳು ಸಮರೋಪಾದಿಯಲ್ಲಿ ನಡೆಯುತ್ತಿದ್ದು ಈ ಶಾಸಕರು ಮಾತ್ರ  ನಿಜವಾದ ಜನಸೇವೆಯಲ್ಲಿ ತೊಡಗಿದ್ದಾರೆ.

ಹೇಗಿದೆ ಬಿಗ್‌ಬಿ ಆರೋಗ್ಯ? ಇನ್ನೆಷ್ಟು ದಿನ ಆಸ್ಪತ್ರೆ ವಾಸ? ಇಲ್ಲಿದೆ ವಿವರ

ಕೊರೋನಾ ಸೋಂಕಿಗೆ ಒಳಗಾದ ಕಾರಣ ಅಮಿತಾಬ್ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್‌ರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಮಿತಾಬ್‌ ಐಸೋಲೇಶನ್‌ ವಾರ್ಡ್‌ನಲ್ಲಿದ್ದಾರೆ. ಅಭಿಷೇಕ್ ಅವರನ್ನು ಈಗ ಸಾಮಾನ್ಯ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದೆ. ಆಸ್ಪತ್ರೆಗೆ ಸಂಬಂಧಿಸಿದ ಮೂಲವೊಂದು ಇಬ್ಬರ ಆರೋಗ್ಯದ ಬಗ್ಗೆ ಮಾಹಿತಿಯನ್ನು ನೀಡಿದೆ. ಇಬ್ಬರ ಮೇಲೆ ಚಿಕಿತ್ಸೆಯ ಉತ್ತಮ ಪರಿಣಾಮ ಬೀರಿದ್ದು, ಆರೋಗ್ಯ ಸ್ಥಿರವಾಗಿದೆ. ವರದಿಗಳ ಪ್ರಕಾರ, ಅವರು ಕನಿಷ್ಠ ಏಳು ದಿನಗಳವರೆಗೆ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ. ಅದೇ ಸಮಯದಲ್ಲಿ, ಅಮಿತಾಬ್ ಸೊಸೆ ಐಶ್ವರ್ಯಾ ರೈ ಮತ್ತು ಮೊಮ್ಮಗಳು ಆರಾಧ್ಯ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಎಂಸಿ ತಂಡ ಇಬ್ಬರ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಿದೆ.

ಓದು ಬೇಡ ಎಂದವ ವಿಜಯಪುರಕ್ಕೇ ಫಸ್ಟ್!

ಮಕ್ಕಳ ಮದುವೆ, ಕೃಷಿಗೆ, ವಿದ್ಯಾಭ್ಯಾಸಕ್ಕೆ ಲಕ್ಷಾಂತರ ರು. ಸಾಲ ಮಾಡಿ ಸೋತು ಹೋಗಿದ್ದ ತಂದೆಗೆ ನೆರವಾಗುವ ಉದ್ದೇಶದಿಂದ ತನ್ನ ವಿದ್ಯಾಭ್ಯಾಸವನ್ನೇ ಅರ್ಧಕ್ಕೆ ನಿಲ್ಲಿಸಬೇಕೆಂದಿದ್ದ ಮಾಳಪ್ಪ ನಿಂಗಪ್ಪ ಹೊಸಮನಿ ಇದೀಗ ಪಿಯುಸಿ ಪರೀಕ್ಷೆಯಲ್ಲಿ ಹುಬ್ಬೇರಿಸುವಂಥ ಸಾಧನೆ ಮೆರೆದಿದ್ದಾರೆ.

ಉಸಿರಾಡಲಾಗದೇ ಒದ್ದಾಟ, ಕೊರೋನಾಗೆ ಜಿಲ್ಲಾಧಿಕಾರಿ ಬಲಿ!

ಮಾರಕ ಕೊರೋನಾಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಐಎಎಸ್ ಅಧಿಕಾರಿ ಬಲಿಯಾಗಿದ್ದಾರೆ. ಹೂಗ್ಲಿ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ 33 ವರ್ಷದ ದೇಬದತ್ತ ರೇ ಉಸಿರಾಟದ ಸಮಸ್ಯೆಯಿಂದ ಸೋಮವಾರ ಸಾವನ್ನಪ್ಪಿದ್ದಾರೆ. ಕೊರೋನಾ ಪಾಸಿಟಿವ್ ಬಂದಿದ್ದರಿಂದ ಅವರು ಹೋಂ ಕ್ವಾರಂಟೈನ್‌ನಲ್ಲಿದ್ದರು. ಆದರೆ ಭಾನುವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ. 

ಅಂಗವೈಕಲ್ಯ, ಬಡತನವನ್ನೂ ಮೀರಿ ಪಿಯುಸಿ ಕಲಿತ ಬಂಟ್ವಾಳದ 'ಭಾಗ್ಯ'..!

 ಒಂದು ಕಡೆ ಬಡತನ, ಮತ್ತೊಂದು ಕಡೆ ಅಂಗ ವೈಕಲ್ಯ ಇವೆಲ್ಲವನ್ನೂ ಮೀರಿ ಈ ಹುಡುಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೪೬೭ ಅಂಕ ಪಡೆದಿರುವುದು, ಮನಸ್ಸಿದ್ರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದ್ದಾಳೆ.

ಭೂಮಿ ಸಮೀಪ ಹಾದು ಹೋಗಲಿದೆ ಅಪರೂಪದ ಧೂಮಕೇತು, ಮಿಸ್ ಮಾಡಲೇಬೇಡಿ..!

ಇತ್ತೀಚಿಗೆ ಗುರುತಿಸಿದ ನಿಯೋವೈಸ್ ಧೂಮಕೇತು ಸೂರ್ಯನ ಸುತ್ತು ಮುಗಿಸಿ ಜುಲೈ 22 ರಂದು ಭೂಮಿಗೆ ಸಮೀಪದಲ್ಲಿ ಹಾದು ಹೋಗಲಿದೆ. ಈ ಧೂಮಕೇತು ಸುಮಾರು ಜುಲೈ 25 ರವರೆಗೆ ಪಶ್ಚಿಮ ಆಕಾಶದಲ್ಲಿ ಸಂಜೆಯಾದೊಡನೆ ಬರೀ ಕಣ್ಣಿಗೆ ಕಾಣುತ್ತದೆ. 

click me!