ಕ್ರಿಕೆಟ್ ಫ್ಯಾನ್ಸ್‌ಗೆ ಬಿಸಿಸಿಐ ಶಾಕ್, ಚಿನ್ನದ ದರ ಏರಿಕೆಗೆ ಬ್ರೇಕ್: ಮಾ.16ರ ಟಾಪ್ 10 ಸುದ್ದಿ!

By Suvarna NewsFirst Published Mar 16, 2021, 4:58 PM IST
Highlights

ಕೊರೋನಾ ವೈರಸ್ ಹೆಚ್ಚಾಗುತ್ತಿರುವ ಕಾರಣ ಇದೀಗ 3ನೇ ಟಿ20 ಪಂದ್ಯಕ್ಕೆ ಅಭಿಮಾನಿಗಳಿಗೆ ಬಿಸಿಸಿಐ ಶಾಕ್ ನೀಡಿದೆ.  ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಸೂಚನೆ ನೀಡಿದ್ದ ಕೇಂದ್ರ ಇದೀಗ ಕೈಚೆಲ್ಲಿ ಕುಳಿತಿದೆ. ಸೀಡಿ ಲೇಡಿಯಿಂದ ಪ್ರಿಯಕರನಿಗೂ ಮೋಸ, ಮೋದಿ ಕೊರೋನಾ ಸಭೆಗೂ ಮುನ್ನ ಮತ್ತೆ ನಾಲ್ಕು ನಗರಗಳಲ್ಲಿ ಕರ್ಫ್ಯೂ ಸೇರಿದಂತೆ ಮಾರ್ಚ್ 16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

CM ಜೊತೆ ಮೋದಿ ಕೊರೋನಾ ಸಭೆಗೂ ಮುನ್ನ ಮತ್ತೆ 4 ನಗರಗಳಲ್ಲಿ ಕರ್ಫ್ಯೂ ಹೇರಿಕೆ!...

ಭಾರತದಲ್ಲಿ ಕೊರೋನಾ ವೈರಸ್ ಹೆಚ್ಚಾಗುತ್ತಿದೆ. ಅದರಲ್ಲಿ ಸುಮಾರು 6 ರಿಂದ 10 ರಾಜ್ಯಗಳಲ್ಲಿ ಕೊರೋನಾ ಮೀತಿ ಮೀರುತ್ತಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ತುರ್ತು ಸಭೆ ಕರೆದಿದ್ದಾರೆ. ಈ ಸಭೆಗೂ ಮುನ್ನವೇ ಮತ್ತೆ ನಾಲ್ಕು ನಗರಗಳಲ್ಲಿ ಕರ್ಫ್ಯೂ ಹೇರಿಕೆ ಮಾಡಲಾಗಿದೆ. ಇದೀಗ ಲಾಕ್‌ಡೌನ್ ಆತಂಕ ಎದುರಾುತ್ತಿದೆ.

CD ಪ್ರಕರಣ ಹಿಂದಿರುವ ಕಾಣದ ಕೈ ಯಾರದ್ದು? ಬಿಜೆಪಿಯಿಂದ ಮೊದಲ ಅಧಿಕೃತ ಹೇಳಿಕೆ!...

ದಿನೇ ದಿನೇ ತಿರುವು ಪಡೆದುಕೊಳ್ಳುತ್ತಿದೆ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ| ದೀರ್ಘ ಮೌನ ವಹಿಸಿದ್ದ ಬಿಜೆಪಿಯಿಂದ ಮೊದಲ ಅಧಿಕೃತ ಹೇಳಿಕೆ| ಒಂದೇ ಬಾಣದಿಂದ ಎರಡು ಹಕ್ಕಿಗಳಿಗೆ ಗುರಿ ಇಟ್ಟ ಬಿಜೆಪಿ

ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಿದ ಕೇಂದ್ರ!...

ದಿನೇದಿನೇ ದರ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕೆಂಬ ಕೂಗು ಕೇಳಿಬರುತ್ತಿರುವಾಗಲೇ, ‘ಕಚ್ಚಾ ತೈಲ, ಪೆಟ್ರೋಲ್‌, ಡೀಸೆಲ್‌, ವೈಮಾನಿಕ ಇಂಧನ, ನೈಸರ್ಗಿಕ ಅನಿಲಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಯಾವುದೇ ಪ್ರಸ್ತಾಪ ಸದ್ಯದ ಮಟ್ಟಿಗೆ ಇಲ್ಲ’ ಎಂದು ಕೇಂದ್ರ ಸರ್ಕಾರ ಅತ್ಯಂತ ಸ್ಪಷ್ಟಮಾತುಗಳಲ್ಲಿ ಹೇಳಿದೆ.

ಭಾರತ-ಇಂಗ್ಲೆಂಡ್‌ 3ನೇ ಟಿ20 ಪಂದ್ಯಕ್ಕೂ ಮುನ್ನ ಕ್ರಿಕೆಟ್‌ ಅಭಿಮಾನಿಗಳಿಗೆ ಬಿಗ್‌ ಶಾಕ್‌..!...

ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಟಿ20 ಸರಣಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದ್ದು, ಈಗಾಗಲೇ ಎರಡು ಪಂದ್ಯಗಳು ರೋಚಕ ಅಂತ್ಯವನ್ನು ಕಂಡಿವೆ. ಮೊದಲ ಪಂದ್ಯವನ್ನು ಇಂಗ್ಲೆಂಡ್‌ 8 ವಿಕೆಟ್‌ಗಳಿಂದ ಜಯಿಸಿದ್ದರೆ, ಎರಡನೇ ಪಂದ್ಯವನ್ನು ಭಾರತ 7 ವಿಕೆಟ್‌ಗಳಿಂದ ಜಯಿಸುವ ಮೂಲಕ ಇಂಗ್ಲೆಂಡ್‌ಗೆ ವಿರಾಟ್ ಪಡೆ ತಿರುಗೇಟು ನೀಡಿದೆ.

ಸುದೀಪ್‌ ಸಿನಿಮಾ ದೇಶದ ಗಮನ ಸೆಳೆಯಲಿ: ಬಿಎಸ್‌ವೈ...

ಸದಭಿರುಚಿಯ ಪರಿಪೂರ್ಣ ಮನರಂಜನೆ ನೀಡುವ ಸುದೀಪ್‌ ಚಿತ್ರಗಳು ದೇಶದ ಗಮನ ಸೆಳೆಯಲಿ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಶುಭ ಹಾರೈಸಿದ್ದಾರೆ.

ಬಹುದಿನದ ಬಳಿಕ ಚಿನ್ನದ ಓಟಕ್ಕೆ ಬಿತ್ತು ಬ್ರೇಕ್, ಹೀಗಿದೆ ಇಂದಿನ ರೇಟ್!...

ಏರಿಳಿತವಾಡುತ್ತಿದ್ದ ಚಿನ್ನದ ದರಕ್ಕೆ ಬ್ರೇಕ್| ಚಿನ್ನ ಖರೀದಿಗೆ ಒಳ್ಳೆಯ ಸಮಯ, ಬೆಳ್ಳಿಯೂ ಅಗ್ಗ| ಹೀಗಿದೆ ನೋಡಿ ಮಾರ್ಚ್ 16ರ ಗೋಲ್ಡ್ ರೇಟ್

ಸೀಡಿ ಲೇಡಿಯಿಂದ ಪ್ರಿಯಕರನಿಗೂ ಮೋಸ; ಎಳೆಎಳೆಯಾಗಿ ಬಿಚ್ಚಿಟ್ಟ ಲವ್ವರ್ ಬಾಯ್!...

ರಮೇಶ್ ಜಾರಕಿಹೊಳಿ ಸಿಡಿಯಲ್ಲಿರುವ ಯುವತಿ ಪ್ರಿಯಕರನಿಗೂ ಮೋಸ ಮಾಡಿದ್ದಾಳಂತೆ, ತಾನೂ ಮೋಸ ಹೋದ ಪರಿಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ ಯುವತಿ ಲವರ್! ಸೀಡಿ ರಿಲೀಸ್ ಆದ ಕೂಡಲೇ, ಪ್ರಿಯಕರನ ಜೊತೆ ಗೋವಾಗೆ ಹಾರಿದ್ದಾಳೆ ಯುವತಿ. 

ದತ್ತಿ ಇಲಾಖೆ ಎಲ್ಲಾ ದೇವಾಲಯ ಇದೀಗ ಆನ್‌ಲೈನ್ ಮ್ಯಾನೇಜ್ಮೆಂಟ್ ಸಿಸ್ಟಮ್‌ ಅಡಿಗೆ ತಂದ ಆಂಧ್ರ ಸರ್ಕಾರ!...

ದತ್ತಿ ಇಲಾಖೆಯಡಿಯಲ್ಲಿದ್ದ ಎಲ್ಲಾ ದೇವಸ್ಥಾನ, ಮಂದಿರಗಳನ್ನು ಇದೀಗ ದೇವಾಲಯ ನಿರ್ವಹಣಾ ವ್ಯವಸ್ಥೆ ಅಡಿ ತರುವ ಮಹತ್ವದ ನಿರ್ಧಾರವನ್ನು ಆಂಧ್ರ ಸರ್ಕಾರ ತೆಗೆದುಕೊಂಡಿದೆ.  . ವಿಶೇಷ ಅಂದರೆ ಈ ವ್ಯವಸ್ಥೆ ಸಂಪೂರ್ಣವಾಗಿ ಆನ್‌ಲೈನ್ ಸಿಸ್ಟಮ್ ಆಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

'2023ರಲ್ಲಿ ಮತ್ತೆ ಎಚ್‌ಡಿಕೆ ಸಿಎಂ : ಎಚ್‌ಡಿಕೆ ಬಳಿ ಇದ್ದ ಗ್ರಹಗಳು ಈಗ ಡಿಕೆಶಿ ಬಳಿ'...

ಮತ್ತೆ ರಾಜ್ಯದಲ್ಲಿ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗುವ ಬಗ್ಗೆ ಭವಿಷ್ಯ ನುಡಿಯಲಾಗಿದೆ.  ಏಕಾಂಗಿಯಾಗಿ ಅಧಿಕಾರಕ್ಕೇರಲಿದೆ ಎಂದು ಹೇಳಲಾಗಿದೆ. 

click me!