ಬಲಿಷ್ಠ ಭಾರತ ತಂಡ ಪ್ರಕಟ, ಕೋತಿ ದಾಳಿಯಿಂದ ಬಚಾವ್ ಆದ ಶಾಸಕ; ಡಿ.16ರ ಟಾಪ್ 10 ಸುದ್ದಿ!

By Suvarna NewsFirst Published Dec 16, 2020, 4:33 PM IST
Highlights

ಮಾಜಿ ರಾಷ್ಟ್ರಪತಿ ದಿ. ಪ್ರಣಬ್‌ ಮುಖರ್ಜಿ ಆತ್ಮಕಥನ ಇದೀಗ ಮಕ್ಕಳ ವಾಗ್ವಾದಕ್ಕೆ ಕಾರಣವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಪ್ರಧಾನಿ ಮೋದಿ ಶುಭಕೋರಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟಗೊಂಡಿದೆ.   ಹೋರಿಯಿಂದ ಗುಮ್ಮಿಸಿಕೊಂಡ ಶಾಸಕ ರೇಣುಕಾಚಾರ್ಯ ಇದೀಗ ಕೋತಿಯಿಂದ ಬಚಾವ್ ಆಗಿದ್ದಾರೆ. ಕೆಜಿಎಫ್2 ದರ್ಬಾರ್, ಪ್ರಿಯಾಂಕ ಗಾಂಧಿ ಸುಳ್ಳು ಬಯಲು ಸೇರಿದಂತೆ ಡಿ.16ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಪ್ರಣಬ್‌ ಪುಸ್ತಕ ಬಿಡುಗಡೆ: ಪುತ್ರ, ಪುತ್ರಿಯ ನಡುವೆ ನಡುವೆ ಟ್ವೀಟರ್‌ ವಾರ್‌!...

ಮಾಜಿ ರಾಷ್ಟ್ರಪತಿ ದಿ. ಪ್ರಣಬ್‌ ಮುಖರ್ಜಿ ಅವರ ‘ದಿ ಪ್ರೆಸಿಡೆಂಶ್ಶಿಯಲ್‌ ಇಯರ್‌’ ಆತ್ಮಕಥನದ ಅಂತಿಮ ಭಾಗ ಬಿಡುಗಡೆಗೆ ಸಂಬಂಧಿಸಿದಂತೆ ಪುತ್ರ, ಮಾಜಿ ಸಂಸದ ಅಭಿಜಿತ್‌ ಮುಖರ್ಜಿ ಮತ್ತು ಪುತ್ರಿ ಶರ್ಮಿಷ್ಠ ಮುಖರ್ಜಿ ನಡುವೆ ಮಂಗಳವಾರ ವಾಗ್ವಾದ ನಡೆದಿದೆ. ಅಭಿಜಿತ್‌ ಮುಖರ್ಜಿ, ‘ಪುಸ್ತಕದ ಆಯ್ದ ಭಾಗಗಳನ್ನು ಉದ್ದೇಶಪೂರ್ವಕವಾಗಿಯೇ ಬಿಡುಗಡೆ ಮಾಡಲಾಗಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪಿಎಂ ಮೋದಿ!...

ಕರ್ನಾಟಕ ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಗೆ ಇಂದು ಹುಟ್ಟುಹಬ್ಬದ ಸಂಭ್ರಮ, ಹೀಗಿರುವಾಗ ಸಿಎಂ ಯಡಿಯೂರಪ್ಪ ಸೇರಿ ರಾಜ್ಯದ ಅನೇಕ ರಾಜಕೀಯ ಗಣ್ಯರು ಅವರಿಗೆ ಹುಟ್ಟುಹಬ್ಬದ ಶುಭಾಶಯತ ಕೋರಿದ್ದಾರೆ. ಹೀಗಿರುವಾಗಲೇ ಅತ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡಾ ಟ್ವೀಟ್ ಮಾಡಿ ಶುಭ ಕೋರಿರುವುದು ವಿಶೇಷವಾಗಿದೆ. 

ಕರ್ನಾಟಕದ ಶೇ.21ರಷ್ಟು ಹೆಣ್ಣು ಮಕ್ಕಳಿಗೆ ಬಾಲ್ಯವಿವಾಹ!...

ಕರ್ನಾಟದಲ್ಲಿ ಶೇ.21.3ರಷ್ಟುಹೆಣ್ಣು ಮಕ್ಕಳು 18 ವರ್ಷ ಪೂರ್ಣಗೊಳ್ಳುವ ಮುಂಚೆಯೇ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ ಎಂಬ ಆಘಾತಕಾರಿ ವರದಿಯನ್ನು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ಬಹಿರಂಗಗೊಳಿಸಿದೆ.

ಭಾರತ-ಆಸ್ಟ್ರೇಲಿಯಾ 1ನೇ ಟೆಸ್ಟ್: ಬಲಿಷ್ಠ ಪ್ಲೇಯಿಂಗ್ 11 ಪ್ರಕಟಿಸಿದ ನಾಯಕ ಕೊಹ್ಲಿ!...

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಾಳೆಯಿಂದ(ಡಿ.17ರಿಂದ ಆರಂಭಗೊಳ್ಳುತ್ತಿದೆ. ಆಡಿಲೇಡ್‌ನಲ್ಲಿ ನಡೆಯುತ್ತಿರುವ ಈ ಮಹತ್ವದ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಡೇ ಅಂಡ್ ನೈಟ್ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾದ ಹೊಸ ಸಂಪ್ರದಾಯದಂತೆ ಒಂದು ದಿನ ಮೊದಲೇ ಆಡೋ ಹನ್ನೊಂದರ ಬಳಗವನ್ನು ಪ್ರಕಟಿಸಿದೆ.

ರಜನಿ ದರ್ಬಾರ್ ಮೀರಿಸಿದ KGF2: ದಾಖಲೆಯ ಟ್ವೀಟ್...

ಕೆಜಿಎಫ್‌ ಚಾಪ್ಟರ್‌ 2 ಇದೀಗ ದಕ್ಷಿಣ ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದಿದೆ. ಈ ವರ್ಷ ಅತೀ ಹೆಚ್ಚು ಟ್ವೀಟ್‌ ಆದ ಹತ್ತು ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಲೀಸ್ಟ್‌ನಲ್ಲಿ ಕೆಜಿಎಫ್‌ 2 ಸೇರಿಕೊಂಡಿದೆ.

ಕೋತಿ ದಾಳಿಯಿಂದ ಶಾಸಕ ರೇಣುಕಾಚಾರ್ಯ ಬಚಾವ್...!...

ಈ ಹಿಂದೆ ಹೋರಿಯಿಂದ ಗುಮ್ಮಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದ ಹೊನ್ನಾಳಿ ಬಿಜೆಪಿ ಶಾಸಕ ಎಂ.ಪಿ. ರೇಣುಕಾಚಾರ್ಯ ಇದೀಗ ಕೋತಿ ದಾಳಿಯಿಂದ ಎಸ್ಕೇಪ್ ಆಗಿದ್ದಾರೆ. 

DGP ಆದೇಶ; ತಮ್ಮ ತಮ್ಮ ವಾಹನ ತಪಾಸಣೆ ನಡೆಸಿದ ಪೊಲೀಸ್!...

ವಾಹನ ಮಾಡಿಫಿಕೇಶನ್ ಮಾಡಿದ ಹಲವು ಮಾಲೀಕರು ದುಬಾರಿ ದಂಡ ತೆತ್ತು ಕೈಸುಟ್ಟುಕೊಂಡಿದ್ದಾರೆ. ಇದೀಗ ನೊಟೀಸ್ ನೀಡಿರುವುದು ಸಾರ್ವಜನಿಕರಿಗಲ್ಲ, ಬದಲಾಗಿ ಪೊಲೀಸರಿಗೆ. ಪೊಲೀಸರ ವಾಹನ ಟ್ರಾಫಿಕ್ ನಿಯಮ ಉಲ್ಲಂಘಿಸಬಾರದು ಎಂದು DGP ಆದೇಶಿಸಿದ್ದಾರೆ. 

Fact Check: ಭಾರತೀಯ ರೈಲ್ವೇ ಅದಾನಿಗೆ ಮಾರಿದ ಮೋದಿ: ಪ್ರಿಯಾಂಕಾ ಸುಳ್ಳು ಬಯಲು!...

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಮೋದಿ ಸರ್ಕಾರವನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾ ಮೂಲಕ ರೈತರಿಗೆ ತಪ್ಪು ಮಾಹಿತಿ ಹಬ್ಬಿಸುವ ಯತ್ನವನ್ನೂ ನಡೆಸುತ್ತಿದ್ದಾರೆ. ಅವರು ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಶೇರ್ ಮಾಡುತ್ತಾ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರಲ್ಲಿ ಭಾರತೀಯ ರೈಲ್ವೆಯನ್ನು ಅದಾನಿಗೆ ಮಾರಿದ್ದಾರೆಂಬ ಆರೋಪ ಮಾಡಲಾಗಿದೆ. ಆದರೆ ಫ್ಯಾಕ್ಟ್‌ ಚೆಕ್ ನಡೆಸಿದಾಗ ಈ ವಿಡಿಯೋ ಹಿಂದಿನ ಸತ್ಯ ಬೇರೆಯೇ ಇದೆ ಎಂದು ತಿಳಿದು ಬಂದಿದೆ. 

ವರನ ಗೆಳೆಯರು ಮಾಡಿದ ಕೆಲ್ಸಕ್ಕೆ ಮಂಟಪದಿಂದ ಎದ್ದು ಹೋದ ವಧು: ವರ ಪೆಚ್ಚು...

ಇನ್ನೇನು ತಾಳಿ ಕಟ್ಟಿ ಮದ್ವೆಯಾಗ್ಬೇಕಿತ್ತು. ಆದ್ರೆ ವರನ ಗೆಳೆಯರು ಮಾಡಿದ ಕೆಲಸದಿಂದ ವಧು ಮದ್ವೇನೇ ಬೇಡ ಎಂದಳು. ನಂತರ ಆಗಿದ್ದೇನು..? ಇಲ್ಲಿ ಓದಿ

ಹಾವುಗಳಿಗೆ ರಕ್ಷಕನಾಗಿದ್ದ ಉರಗ ತಜ್ಞನಿಗೆ ವಿಷ ಜಂತುವಿನಿಂದಲೇ ಸಾವು..!...

ಹಿಡಿದ ಹಾವಿನೊಂದಿಗೆ ಆಟವಾಡುತ್ತಿದ್ದ ವೇಳೆ ಅದೇ ಹಾವು ಕಚ್ಚಿ ಉರಗ ತಜ್ಞನೊಬ್ಬ ಸಾವನ್ನಪ್ಪಿದ ಘಟನೆ ಬಾಗಲಕೋಟೆಯಲ್ಲಿ ಮಂಗಳವಾರ ನಡೆದಿದೆ.

click me!