KPCC ಪಟ್ಟಕ್ಕಾಗಿ ಸರ್ಕಸ್, ವಿಶ್ವಕಪ್‌ನಲ್ಲಿ 20 ತಂಡಕ್ಕೆ ಚಾನ್ಸ್; ಜ.14ರ ಟಾಪ್ 10 ಸುದ್ದಿ!

Suvarna News   | Asianet News
Published : Jan 14, 2020, 04:49 PM IST
KPCC ಪಟ್ಟಕ್ಕಾಗಿ ಸರ್ಕಸ್, ವಿಶ್ವಕಪ್‌ನಲ್ಲಿ 20 ತಂಡಕ್ಕೆ ಚಾನ್ಸ್; ಜ.14ರ ಟಾಪ್ 10 ಸುದ್ದಿ!

ಸಾರಾಂಶ

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕಾಗಿ ರಾಜ್ಯ ಕಾಂಗ್ರೆಸ್‌ನಲ್ಲಿ ಕಸರತ್ತು ನಡೆಯುತ್ತಿದೆ. ಸಿದ್ದರಾಮಾಯ್ಯ ಆಪ್ತನಿಗೆ ಕೆಪಿಸಿಸಿ ಪಟ್ಟ ಕಟ್ಟಲು ಸಿದ್ದರಾಮಯ್ಯ ಲಾಬಿ ಶುರು ಮಾಡಿದ್ದಾರೆ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗದಂತೆ ನೋಡಿಕೊಳ್ಳಲು ಹಿಂದಿನ ಸರ್ಕಾರದ ಯೋಜನೆಯನ್ನು ಬಿಎಸ್ ಯಡಿಯೂರಪ್ಪ ಸ್ಥಗಿತಗೊಳಿಸಿದ್ದಾರೆ. ಪ್ರಭಾವಿ ಸ್ವಾಮೀಜಿಯ ಅಸತಿ ಕತೆ ಬಯಲಾಗಿದೆ. ಕ್ಷಮೆ ಕೇಳಿದ ಶಶಿ ತರೂರ್, ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಸೇರಿದಂತೆ ಜನವರಿ 14ರ ಟಾಪ್ 10 ಸುದ್ದಿ ಇಲ್ಲಿವೆ.

ಕೆಪಿಸಿಸಿ ಅಧ್ಯಕ್ಷ ಹುದ್ದೆ: ಗಂಟೆಗಟ್ಟಲೇ ಮಾತುಕತೆ ನಡೆದ್ರೂ ಬಾಯ್ಬಿಡದ ಸಿದ್ದು

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿಕೆ ಶಿವಕುಮಾರ್‌ ಹಾಗೂ ಎಂಬಿ ಪಾಟೀಲ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಹುತೇಕ ಡಿಕೆಶಿಗೆ ಕೆಪಿಸಿಸಿ ಪಟ್ಟ ಕಟ್ಟಲಾಗುತ್ತದೆ ಎಂದು ಹೇಳಲಾಗುತ್ತಿದ್ದರೂ ಸಿದ್ದರಾಮಯ್ಯ ತಮ್ಮ ಆಪ್ತ ನಾಯಕನಿಗೆ ಪಟ್ಟ ಕಟ್ಟಲು  ದೆಹಲಿಯಲ್ಲಿ ಇನ್ನಿಲ್ಲಿದ ಕಸರತ್ತು ನಡೆಸಿದ್ದಾರೆ.

ಕೇಜ್ರಿಗೆ SORRY ಎಂದ ತರೂರ್: ಬಳಿಸಿದ ಪದವಾದರೂ ಏನು?...

ದೆಹಲಿ ಸಿಎಂ ಕೇಜ್ರಿವಾಲ್ 'ಯಾವುದೇ ಜವಾಬ್ದಾರಿಗಳನ್ನು ನಿಭಾಯಿಸದೇ ಅಧಿಕಾರ ಅನುಭವಿಸುತ್ತಿದ್ದಾರೆ' ಎಂದು ಶಶಿ ತರೂರ್ ಗಂಭೀರ ಆರೋಪ ಮಾಡಿದ್ದರು. ತರೂರ್ ಅವರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಮಹಿಳೆಯರಿಗೆ ನಿದ್ರೆ ಮಾತ್ರೆ ಕೊಡುವ ಮಾಜಿ ಡಿಸಿಎಂ ಆಪ್ತ ಸ್ವಾಮೀಜಿ 'ಲೀಲೆ' ಸ್ಫೋಟ

ಇದು ರಾಜ್ಯದ ಪ್ರಭಾವಿ ಸ್ವಾಮೀಜಿಯ ಸ್ಫೋಟಕ ಕತೆ. ಪ್ರಭಾವಿ ರಾಜಕಾರಣಿಗಳ ಮನೆಪೂಜೆಗೆ ಇವರೇ ಪೂಜಾರಿ. ಜ್ಯೋತಿಷಿಯ ಅಸಲಿ ಕತೆಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ. ಸಂತೋಷ್ ಕುಮಾರ್ ಅಲಿಯಾಸ್ ಸ್ವಾಮಿ ಸುಂದರ್ ಕತೆಯನ್ನು ನೀವೇ ನೋಡಿ. 

ಸಿದ್ದು ಸರ್ಕಾರದ ಯೋಜನೆಗೆ ಕತ್ತರಿ: BPL ಕುಟುಂಬ ಸದಸ್ಯರಿಗೆ ಸಂಕ್ರಾಂತಿ ಶಾಕ್!...

ಸಂಕ್ರಾಂತಿ ಹಬ್ಬಕ್ಕೂ ಮುನ್ನ ಬಿಪಿಎಲ್ ಕುಟುಂಬ ಸದಸ್ಯರಿಗೆ ಸರ್ಕಾರ ಶಾಕಿಂಗ್ ಸುದ್ದಿಯೊಂದನ್ನು ನೀಡಿದೆ. ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಕತ್ತರಿ ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಇದರಿಂದ ಸರ್ಕಾರ ಬೊಕ್ಕಸಕ್ಕೆ ಉಳಿತಾಯ ಮಾಡಲು ಸಜ್ಜಾಗಿದೆ. 

ಹೆಂಡ್ತಿಗೆ ವಂಚಿಸಿದ ಭಂಡ ಗಂಡನಿಗೆ ಸಿಕ್ತು ಸರಿಯಾದ ಶಿಕ್ಷೆ

ತ್ನಿಯ ಗಮನಕ್ಕೆ ಬರದೇ 2ನೇ ವಿವಾಹವಾಗಿ ಮೊದಲ ಪತ್ನಿಗೆ ಹಿಂಸೆ ನೀಡಿದ್ದ ಅಪರಾಧಿಗೆ ಇಲ್ಲಿನ ಸಿಜೆಎಂ ನ್ಯಾಯಾಲಯ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 10,000 ದಂಡ ವಿಧಿಸಿ ಆದೇಶಿಸಿದೆ. ನಗರದ ನಿವಾಸಿ ಸತೀಶ ಗಣಪತಿ ಜೋಶಿ ಶಿಕ್ಷೆಗೆ ಒಳಗಾದವರು.

ಟಿ20 ವಿಶ್ವಕಪ್ ಟೂರ್ನಿಗೆ 20 ತಂಡಗಳಿಗೆ ಅವಕಾಶ..?

023-31ರ ಅವಧಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗಳಲ್ಲಿ 16ರ ಬದಲು 20 ತಂಡಗಳನ್ನು ಕಣಕ್ಕಿಳಿಸಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಚಿಂತನೆ ನಡೆಸುತ್ತಿದೆ ಎಂದು ಪ್ರತಿಷ್ಠಿತ ಟೆಲಿ ಗ್ರಾಫ್ ಪತ್ರಿಕೆ ವರದಿ ಮಾಡಿದೆ. 

ಐಷಾರಾಮಿ ಹೋಟೆಲ್‌ನಲ್ಲಿ ‘ದೊಡ್ಡವರಿಗೆ’ ಬಲೆ ಬೀಸ್ತಿದ್ದ ಬಿಗ್ ಬಾಸ್ ಸ್ಪರ್ಧಿಯ ಮಾಜಿ ಲವರ್!

ನಟಿ ಮಣಿಯರಿಗೂ ಈ ಸೆಕ್ಸ್ ಸ್ಕ್ಯಾಂಡಲ್ ಗಳಿಗೂ ಅವಿನಾಭಾವ ಸಂಬಂಧ ಎಂದೇ ಹೇಳಬಹುದು. ಬಿಗ್ ಬಾಸ್ ಸ್ಪರ್ಧಿಯೊಬ್ಬರ ಮಾಜಿ ಪ್ರೇಯಸಿಯೊಬ್ಬರನ್ನು ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ.

ಪೌರತ್ವ ಕಾಯ್ದೆಗೆ ಬೇಸರ ವ್ಯಕ್ತಪಡಿಸಿದ ಮೈಕ್ರೋಸಾಫ್ಟ್ ಸಿಇಒ!

ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಹೊತ್ತಿನಲ್ಲೇ, ಭಾರತೀಯ ಮೂಲದ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಾದೆಳ್ಲಾ ಕಾಯ್ದೆ ವಿರೋಧಿಸುವ ಮೂಲಕ ತಾವೂ ಕೂಡಾ ವಿವಾದಕ್ಕೆ ಧುಮುಕಿದ್ದಾರೆ.

ಸಿಎಎ ವಿರೋಧಿಸಿದ ದೇಶದಿಂದ 'ಎಣ್ಣೆ' ಆಮದು ನಿಲ್ಲಿಸಿದ ಭಾರತ: ಸತ್ಯ ಹೇಳಿದ್ದಕ್ಕೆ 'ಶಿಕ್ಷೆ'?

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಕೇವಲ ಭಾರತ ಮಾತ್ರವಲ್ಲದೇ, ಹೊರ ದೇಶಗಳಲ್ಲೂ ಪ್ರಭಾವ ಬೀರುತ್ತಿದೆ. ಸಿಎಎ ಜಾರಿ ಸರಿಯಲ್ಲ ಎಂದು ಮಲೇಶಿಯಾ ಪ್ರಧಾನಿ ಮಹಾತಿರ್ ಮೊಹ್ಮದ್ ಅಭಿಪ್ರಾಯಪಟ್ಟಿದ್ದಾರೆ.

ಕೇವಲ 2 ಸಾವಿರ ರೂ.ಗೆ ಬುಕ್ ಮಾಡಿ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್!

ಜಾಜ್ ಆಟೋಮೊಬೈಲ್ ಕಂಪನಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಬಹುನಿರೀಕ್ಷಿತ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದೆ. ಹಲವು ವಿಶೇಷತೆಗಳೊಂದಿಗೆ ನೂತನ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಮಾರಾಟಕ್ಕೆ ಲಭ್ಯವಿದೆ. ಆಕರ್ಷಕ ಬಣ್ಣ, ಅತ್ಯುತ್ತಮ ರೆಟ್ರೋ ಶೈಲಿ ವಿನ್ಯಾಸದಿಂದ ಇತರ ಎಲ್ಲಾ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಭಿನ್ನವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೆಸ್ಸಿ ಕಿಕ್ ಮಾಡಿದ ಚೆಂಡಿಗಾಗಿ ಕಿತ್ತಾಡಿದ ಅಭಿಮಾನಿಗಳು: ವೀಡಿಯೋ ಭಾರಿ ವೈರಲ್
ಕರ್ನಾಟಕಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆ 5 ಕೋಟಿ ಮಾನವ ದಿನ ಕಡಿತ; ಪ್ರಿಯಾಂಕ್ ಖರ್ಗೆ ಆರೋಪ