ಅಪಘಾತ ಗಾಯಾಳು ರಕ್ಷಿಸಿದರೆ ಪುರಸ್ಕಾರ

By Web DeskFirst Published Aug 16, 2018, 8:45 AM IST
Highlights

- ರಸ್ತೆ ಅಪಘಾತಕ್ಕೀಡಾದವರನ್ನು ರಕ್ಷಿಸಿದರೆ ಕೇಂದ್ರದಿಂದ ಅವಾರ್ಡ್ 

- ನೆರವು ನೀಡಿದವರಿಗೆ ಜೀವನ್ ರಕ್ಷಕ್ ಪದಕ 

- ಕೇಂದ್ರದಿಂದ ಮಹತ್ತರ ಘೋಷಣೆ 

ನವದೆಹಲಿ (ಆ. 16): ರಸ್ತೆ ಅಪಘಾತದ ವೇಳೆ ನೆರವು ನೀಡಲು ಹೋದರೆ ಎಲ್ಲಿ ಪೊಲೀಸರಿಂದ ವಿಚಾರಣೆ ಎದುರಿಸಬೇಕಾಗುತ್ತೋ ಎಂಬ ಕಾರಣಕ್ಕೆ ಹೆಚ್ಚಿನವರು ಅದರ ಉಸಾಬರಿಗೇ ಹೋಗುವುದಿಲ್ಲ. ಹೀಗಾಗಿ ಈ ಭಯವನ್ನು ದೂರ ಮಾಡುವ ನಿಟ್ಟಿನಿಂದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಪಡೆಯಲು ನೆರವಾದವರಿಗೆ ಜೀವನ್ ರಕ್ಷಕ್ ಪದಕ ನೀಡಿ ಸನ್ಮಾನಿಸಲು ಸರ್ಕಾರ ಉದ್ದೇಶಿಸಿದೆ.

ಉತ್ತಮ ದಯಾಳುಗಳನ್ನು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡುವ ತಮ್ಮ ಸಚಿವಾಲಯದ ಶಿಫಾರಸನ್ನು ಗೃಹ ಸಚಿವಾಲಯ ಒಪ್ಪಿಕೊಂಡಿದೆ ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಂಗಳವಾರ ಹೇಳಿದ್ದಾರೆ. ನೀರಿನಲ್ಲಿ ಮುಳುಗುತ್ತಿರುವವರು, ಬೆಂಕಿ ಮತ್ತು ಗಣಿ ಅವಘಡಗಳಿಂದ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಿದವರಿಗೆ ಜೀವ ರಕ್ಷಕ ಪದಕ ನೀಡಿ ಗೌರವಿಸಲಾಗುತ್ತದೆ. ಅದನ್ನೀಗ ರಸ್ತೆ ಅಪಘಾತದಲ್ಲಿ ಜೀವ ಉಳಿಸಿದವರಿಗೂ ವಿಸ್ತರಿಸುವ ಪ್ರಸ್ತಾವನೆಗೆ ಸರ್ಕಾರ ಒಪ್ಪಿದೆ. 

click me!