ಸಲಿಂಗ ಸೆಕ್ಸ್‌ ಆರೋಪಿಗಳು ನಿರಾಳ

By Web DeskFirst Published Sep 7, 2018, 11:41 AM IST
Highlights

ಸಲಿಂಗ ಕಾಮ ಅಪರಾಧವಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಇದೀಗ ಸಲಿಂಗಿಗಳ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವವರು ಮತ್ತು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವವರು ನಿರಾಳರಾಗಬಹುದಾಗಿದೆ. 
 

ನವದೆಹಲಿ: ಸುಪ್ರೀಂಕೋರ್ಟ್‌ ‘ಸಲಿಂಗಕಾಮ ಅಪರಾಧವಲ್ಲ’ ಎಂದು ತೀರ್ಪು ನೀಡಿರುವುದರಿಂದ ಸಲಿಂಗಿಗಳ ಜೊತೆ ಸಮ್ಮತಿಯಿಂದ ಲೈಂಗಿಕ ಕ್ರಿಯೆ ನಡೆಸಿದ ಆರೋಪ ಎದುರಿಸುತ್ತಿರುವವರು ಮತ್ತು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸುತ್ತಿರುವವರು ನಿರಾಳರಾಗಬಹುದಾಗಿದೆ. 

ಗೋವಾದಂತಹ ಸ್ಥಳಗಳಲ್ಲಿ ಕೈ ಕೈ ಹಿಡಿದು ಓಡಾಡುತ್ತಿದ್ದ ಸಲಿಂಗಿಗಳು ಇನ್ನು ಮುಂದೆ ಯಾವುದೇ ಭಯವಿಲ್ಲದೇ ದೇಶದೆಲ್ಲೆಡೆ ಸುತ್ತಾಡಬಹುದು. ಸಲಿಂಗಕಾಮದ ಆರೋಪ ಎದುಸುತ್ತಿರುವ ಎಲ್ಲರಿಗೂ ಸುಪ್ರೀಂಕೋರ್ಟ್‌ ತೀರ್ಪು ಅನ್ವಯವಾಗಲಿದೆ. 

ಸಲಿಂಗಿಗಳ ಜೊತೆ ಲೈಂಗಿಕ ಕ್ರಿಯೆ ನಡೆಸಿದ ಆರೋಪಿಗಳು ಸುಪ್ರೀಂಕೋರ್ಟ್‌ ತೀರ್ಪನ್ನು ಉಲ್ಲೇಖಿಸಿ ತಮ್ಮ ಮೇಲಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ.

click me!