RCBಗೆ ಕನ್ನಡಿಗರ ಚಾಲೆಂಜ್, ವಿಫಲವಾಯ್ತು ಚೀನಾ ರಿವೇಂಜ್: ಸೆ.24ರ ಟಾಪ್ 10 ಸುದ್ದಿ!

Published : Sep 24, 2020, 05:31 PM ISTUpdated : Sep 24, 2020, 05:33 PM IST
RCBಗೆ ಕನ್ನಡಿಗರ ಚಾಲೆಂಜ್, ವಿಫಲವಾಯ್ತು ಚೀನಾ ರಿವೇಂಜ್: ಸೆ.24ರ ಟಾಪ್ 10 ಸುದ್ದಿ!

ಸಾರಾಂಶ

ಕೊರೋನಾ ಮಹಾಮಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿಯಾಗಿದ್ದು, ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ.  ಟೈಮ್‌ ಮ್ಯಾಗಜೀನ್‌ನ 100 ಮಂದಿ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ಥಾನ ಪಡೆದಿದಾರೆ. ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ ನಡೆಸಿದೆ. ಐಶ್ವರ್ಯ ರೈ ಶೋಗೆ 10 ಕೋಟಿ ರೂಪಾಯಿ ನೀಡಿದ್ದ ಪಾಕಿಸ್ತಾನ ಮಾಜಿ ಅಧ್ಯಕ್ಷ, ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್ ಸೇರಿದಂತೆ ಸೆಪ್ಟೆಂಬರ್ 24ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ದಿಲ್ಲಿಯ ಲಿಂಗಾಯತ ರುದ್ರಭೂಮಿಯಲ್ಲಿ ಅಂಗಡಿ ಅಂತ್ಯಕ್ರಿಯೆ : 50ಜನರಿಗೆ ಅವಕಾಶ...

ಕೊರೋನಾ ಮಹಾಮಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಬಲಿಯಾಗಿದ್ದು, ಅವರ ಅಂತ್ಯಕ್ರಿಯೆ ದೆಹಲಿಯಲ್ಲಿ ನಡೆಯಲಿದೆ. ಅಲ್ಲಿನ ಲಿಂಗಾಯತ ರುದ್ರಭೂಮಿಯಲ್ಲಿ ಅಂತಿಮ ವಿಧಿ ವಿಧಾನಗಳು ನಡೆಯಲಿದೆ. 50 ಜನರಿಗೆ ಮಾತ್ರವೇ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಅವಕಾಶವಿದೆ. 

‘ಟೈಮ್‌’ ಪ್ರಭಾವಿಗಳ ಪಟ್ಟಿಯಲ್ಲಿ ಮೋದಿ ಜತೆ ಆಯುಷ್ಮಾನ್‌, ಬಿಲ್ಕಿಸ್‌!...

ಅಮೆರಿಕದ ಪ್ರತಿಷ್ಠಿತ ಟೈಮ್‌ ಮ್ಯಾಗಜೀನ್‌ನ 100 ಮಂದಿ ಜಾಗತಿಕ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಲ್ಕನೇ ಬಾರಿ ಸ್ಥಾನ ಪಡೆದಿದ್ದಾರೆ. ಮೋದಿ ಜತೆ ಇನ್ನೂ ನಾಲ್ಕು ಮಂದಿ ಭಾರತೀಯರಾದ ಬಾಲಿವುಡ್‌ ನಟ ಆಯುಷ್ಮಾನ್‌ ಖುರಾನಾ, 82 ವರ್ಷದ ಹೋರಾಟಗಾರ್ತಿ ಬಿಲ್ಕಿಸ್‌, ವೈರಾಲಜಿಸ್ಟ್‌ ರವೀಂದ್ರ ಗುಪ್ತಾ ಹಾಗೂ ಗೂಗಲ್‌ ಕಂಪನಿಯ ಸಿಇಒ ಸುಂದರ್‌ ಪಿಚೈ ಕೂಡ ಸ್ಥಾನ ಪಡೆದಿದ್ದಾರೆ.

ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿಗೆ ಚೀನಾ ವಿಫಲ ಯತ್ನ!...

ಗಡಿಯಲ್ಲಿ ನಿರಂತರವಾಗಿ ಭಾರತದ ಭೂಭಾಗಗಳನ್ನು ಕಬಳಿಸಲು ಹಾಗೂ ಭಾರತೀಯ ಯೋಧರ ಮೇಲೆ ಆಗಾಗ ದಾಳಿ ನಡೆಸಲು ಯತ್ನಿಸುತ್ತಿರುವ ಚೀನಾ ಬಾಹ್ಯಾಕಾಶದಲ್ಲೂ ಭಾರತದ ಮೇಲೆ ದಾಳಿ ನಡೆಸಲು ಹಲವು ಬಾರಿ ಯತ್ನಿಸಿ ವಿಫಲವಾಗಿದೆ ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಅಪರೂಪದ ಫೋಟೋ ಹಂಚಿಕೊಂಡು ಸುರೇಶ್ ಅಂಗಡಿಯವರನ್ನ ಸ್ಮರಿಸಿದ ಮೋದಿ...

ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿಯವರು ವಿಧಿವಶರಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂತಾಪ ಸೂಚಿಸಿದ್ದಾರೆ.

ಮತ್ತೆ ಲಾಕ್‌ಡೌನ್‌ ಬಗ್ಗೆ ಸುಳಿವು ಕೊಟ್ಟ ಸಚಿವ...

ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಲ್ ಲಾಕ್‍ಡೌನ್ ಮಾತು ಕೇಳಿ ಬಂದಿದೆ. ಇದರ ಬೆನ್ನಲ್ಲೇ ಸಚಿವರು ಅವರು ಮತ್ತೆ ಲಾಕ್‍ಡೌನ್ ಮಾಡುವ ಕುರಿತ ಸುಳಿವನ್ನು ನೀಡಿದ್ದಾರೆ.

IPL 2020: ಪಂಜಾಬ್ ವಿರುದ್ಧದ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ..?...

ಕರ್ನಾಟಕದ ಆಟಗಾರರಿಂದಲೇ ಕೂಡಿರುವ ಕಿಂಗ್ಸ್ ಇಲೆವನ್ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದ್ದು, ದುಬೈನ ಅಂತಾರಾಷ್ಟ್ರೀಯ ಮೈದಾನ ಹೈವೋಲ್ಟೇಜ್ ಪಂದ್ಯಕ್ಕೆ ಸಾಕ್ಷಿಯಾಗುವ ಸಾಧ್ಯತೆ. ಇಂದಿನ ಪಂದ್ಯಕ್ಕೆ ವಿರಾಟ್ ಕೊಹ್ಲಿ ಒಂದು ಬದಲಾವಣೆ ಮಾಡಿಕೊಂಡು ಕಣಕ್ಕಿಳಿಯುವ ಸಾಧ್ಯತೆಯಿದೆ.

ಪತಿಯನ್ನೇ ಅರೆಸ್ಟ್ ಮಾಡಿಸಿದ ಪೂನಂ; 12 ದಿನಕ್ಕೇ ಸಾಕಾಯ್ತಾ ಸಂಸಾರ?...

ಮಾದಕ ನಟಿ ಪೂನಂ ಪಾಂಡೆ ಹಾಗೂ ಸ್ಯಾಮ್‌ ವೈವಾಹಿಕ ಜೀವನಕ್ಕೆ ಕಾಲಿಟ್ಟು ಗೋವಾದಲ್ಲಿ ಎಂಜಾಯ್ ಮಾಡುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ಏನಾಯ್ತೋ ಏನೋ, ಪೂನಂ ಪತಿಯ ವಿರುದ್ಧ ದೌರ್ಜನ್ಯವೆಸಗಿದ ಆರೋಪ ಮಾಡಿದ್ದು, ಬಂಧನ ಮಾಡಿಸಿದ್ದಾರೆ. ಸಂಸಾರ ಜೀವನ 12 ದಿನಕ್ಕೇ ಸಾಕಾಯ್ತಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಡ್ರಗ್ಸ್ ಶೆಟ್ಟಿ ತಂದ ಸಂಕಟ, ಆ್ಯಂಕರ್ ಅನುಶ್ರೀಗೆ ಸಿಸಿಬಿ ನೋಟಿಸ್!...

ಮಂಗಳೂರು/ ಬೆಂಗಳೂರು(ಸೆ. 24) ಖ್ಯಾತ ನಿರೂಪಕಿ, ನಟಿ ಅನುಶ್ರೀಗೂ ಸ್ಯಾಂಡಲ್‌ವುಡ್ ಡ್ರಗ್ಸ್ ಘಾಟು ಬಡಿದಿದೆ.  ಡ್ರಗ್ಸ್ ಪ್ರಕರಣಕ್ಕೆ ಸಂಧಿಸಿದ ಅನುಶ್ರೀಗೆ ಸಿಸಿಬಿ ನೋಟಿಸ್ ನೀಡಿದೆ. ಮಂಗಳೂರಿನ ಸಿಸಿಬಿ ಪೊಲೀಸರ ಬಂಧನದಲ್ಲಿರುವ ಡ್ಯಾನ್ಸರ್ ಕಿಶೋರ್ ಶೆಟ್ಟಿ ನೀಡಿದ ಮಾಹಿತಿ ಆಧರಿಸಿ ನೋಟಿಸ್ ಜಾರಿ ಮಾಡಲಾಗಿದ್ದು ಇನ್ನುವರೆಗೆ ನೋಟಿಸ್ ಅನುಶ್ರೀ ಕೈಸೇರಿಲ್ಲ ಎನ್ನಲಾಗಿದೆ.

HPಯಿಂದ ವಿದ್ಯಾಭ್ಯಾಸ,ಕಚೇರಿ ಕೆಲಸ ಸುಲಭವಾಗಿಸುವ ಆಲ್ ಇನ್ ಒನ್ ಪಿಸಿ ಬಿಡುಗಡೆ!...

ಆಧುನಿಕ ಗ್ರಾಹಕರಿಗೆ ಕಂಪ್ಯೂಟಿಂಗ್ ಅನುಭವವನ್ನು ಮರುವ್ಯಾಖ್ಯಾನಿಸುವ ನಿಟ್ಟಿನಲ್ಲಿ HP ಆಲ್-ಇನ್-ಒನ್ ಪಿಸಿ ಗಳನ್ನು (AIO) ಬಿಡುಗಡೆ ಮಾಡಿದೆ.  ಮನೆಯಲ್ಲೇ ಇದ್ದುಕೊಂಡು ಕುಟುಂಬ, ಸಹಪಾಠಿಗಳು ಮತ್ತು ಸ್ನೇಹಿತರೊಂದಿಗೆ ಕಚೇರಿ ಕೆಲಸಗಳನ್ನು ಮಾಡುವುದು, ಕಲಿಯುವುದು ಮತ್ತು ಆಟವಾಡಲು ಗ್ರಾಹಕರಿಗೆ ಪರ್ಸನಲ್ ಕಂಪ್ಯೂಟರ್ ಅತ್ಯಂತ ಅಗತ್ಯವಾದ ಸಾಧನವಾಗಿದೆ. 

ಪಾಕಿಸ್ತಾನಿ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಐಶ್ವರ್ಯಾ ರೈ ಶೋಗೆ 10 ಕೋಟಿ ರೂ ನೀಡಿದ್ದರಂತೆ!...

ಬಾಲಿವುಡ್‌ನ ದಿವಾ ಐಶ್ವರ್ಯಾ ರೈ ಇಡೀ ವಿಶ್ವದಲ್ಲೇ ಫೇಮಸ್‌. ಜಗತ್ತಿನದ್ಯಾಂತ ಅಭಿಮಾನಿಗಳನ್ನು ಹೊಂದಿದ್ದಾರೆ ಈ ನಟಿ. ಇದಕ್ಕೆ ಪಾಕಿಸ್ತಾನ ಕೂಡ ಹೊರತಾಗಿಲ್ಲ. ವರದಿಗಳ ಪ್ರಕಾರ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ತಮ್ಮ ದೇಶದಲ್ಲಿ ಪ್ರದರ್ಶನ ನೀಡಲು ಐಶ್ವರ್ಯಾ ರೈಗೆ 10 ಕೋಟಿ ರೂ ನೀಡಿದ್ದರಂತೆ. ಇದಕ್ಕೆ ಸಂಬಂಧಿಸಿದ ಹಳೆ ವಿಡೀಯೊ ಒಂದು ಹೊರಬಂದಿದೆ. 

ಭಾರತದಲ್ಲಿ ವಾಹನ ಸಬ್‌ಸ್ಕ್ರಿಪ್ಶನ್ ಆರಂಭಿಸಿದ ಮಾರುತಿ ; ಸುಲಭವಾಗಿ ಪಡೆಯಿರಿ ಕಾರು!...

ಭಾರತದಲ್ಲೀಗ ಕಾರು ಸಬ್‌ಸ್ಕ್ರಿಪ್ಶನ್(ಚಂದಾದಾರಿಕೆ) ಪ್ಲಾನ್‌ಗಳು ಹೆಚ್ಚಾಗುತ್ತಿದೆ. ಬಹುತೇಕ ಕಂಪನಿಗಳು ಇದೀಗ ಸಬ್‌ಸ್ಕ್ರಿಪ್ಶನ್ ಮೂಲಕ ಗ್ರಾಹಕರಿಗೆ ಕಾರು ನೀಡುತ್ತಿದೆ. ಕಾರು ಖರೀದಿ ಮಾಡಬೇಕಿಲ್ಲ, ಡೌನ್‌ಪೇಮೆಂಟ್ ಸಮಸ್ಯೆ, ವಿಮೆ , ನಿರ್ವಹಣೆ ಕಿರಿಕಿರಿ ಇಲ್ಲದೆ ಕಾರು ಪಡೆಯಬಹುದು. ಇದೀಗ ಮಾರುತಿ ಸುಜುಕಿ ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಕಾರು ಸಬ್‌ಸ್ಕ್ರಪ್ಶನ್ ಆರಂಭಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ
ಮೆಹಂದಿ ಗಿಡ ಪೂಜಿಸಿದರೆ ಇಷ್ಟೆಲ್ಲಾ ಲಾಭವಿದೆಯೇ?: ಪೂಜೆಗೆ ಇದೇ ಸರಿಯಾದ ದಿನ!