ಸಂಸತ್ತಿನಲ್ಲಿ ಇಡಲಾದ ಮಹಾಲೇಖಪಾಲಕರ ವರದಿಯಲ್ಲಿ ಶಾಕಿಂಗ್ ವರದಿ!

Published : Sep 24, 2020, 04:40 PM IST
ಸಂಸತ್ತಿನಲ್ಲಿ ಇಡಲಾದ ಮಹಾಲೇಖಪಾಲಕರ ವರದಿಯಲ್ಲಿ ಶಾಕಿಂಗ್ ವರದಿ!

ಸಾರಾಂಶ

ಸಾರ್ವಜನಿಕ ಉದ್ದಿಮೆಗಳು ನಿರ್ಮಿಸಿದ ಶೇ.11 ರಷ್ಟು ಶೌಚಾಲಯಗಳು ಕಾಣೆ!| ಸಂಸತ್ತಿನ ಮುಂದೆ ಇಡಲಾದ ಮಹಾಲೇಖಪಾಲಕರ ವರದಿಯಲ್ಲಿ ಬಹಿರಂಗ| ಶೇ.30ರಷ್ಟುಶೌಚಾಲಯಗಳು ಉಪಯೋಗಕ್ಕೆ ಲಾಯಕ್ಕಿಲ್ಲ

ನವದೆಹಲಿ(ಸೆ.24): ಶಾಲೆಗಳಲ್ಲಿ ಸಾರ್ವಜನಿಕ ಉದ್ದಿಮೆಗಳು ನಿರ್ಮಿಸಿದೆ ಎನ್ನಲಾದ ಶೇ.11ರಷ್ಟುಶೌಚಾಲಯಗಳು ಇಲ್ಲ ಎಂದು ಸಂಸತ್ತಿನ ಮುಂದೆ ಇಡಲಾದ ಮಹಾಲೇಖಪಾಲಕರ ವರದಿಯಲ್ಲಿ ಗೊತ್ತಾಗಿದೆ.

ವರದಿಯ ಪ್ರಕಾರ ಉದ್ದಿಮೆಗಳು ಹೇಳಿಕೊಂಡ ಶೇ.11ರಷ್ಟುಶೌಚಾಲಯಗಳು ನಿರ್ಮಾಣವಾಗಿಲ್ಲ ಅಥವಾ ಅರ್ಧ ನಿರ್ಮಾಣವಾಗಿದೆ. ಇನ್ನು ಶೇ.30ರಷ್ಟುಶೌಚಾಲಯಗಳು ಉಪಯೋಗಕ್ಕೆ ಲಾಯಕ್ಕಿಲ್ಲ ಎಂದು ಹೇಳಿದೆ.

ಸರ್ಕಾರಿ ಶಾಲೆಗಳಲ್ಲಿ ಹುಡುಗ ಹಾಗೂ ಹುಡುಗಿಯರಿಗೆ ಪ್ರತ್ಯೇಕ ಶೌಚಾಲಯ ನಿರ್ಮಾಣ ಮಾಡಲು ಸಾರ್ವಜನಿಕ ಉದ್ದಿಮೆಗಳ ಸಹಕಾರದೊಂದಿಗೆ ಕೇಂದ್ರ ಸರ್ಕಾರ ‘ಸ್ವಚ್ಛ ವಿದ್ಯಾಲಯ ಅಭಿಯಾನ’ವನ್ನು ಜಾರಿಗೆ ತಂದಿತ್ತು. ಇದರನ್ವಯ ಸಾರ್ವಜನಿಕ ಉದ್ದಿಮೆಗಳು ತಮ್ಮ ಸಾರ್ವಜನಿಕ ಹೊಣೆಗಾರಿಕೆ ನಿಧಿಯಿಂದ ಶೌಚಾಲಯ ನಿರ್ಮಾಣ ಮಾಡಬೇಕಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌