ವೆಂಟಿಲೇಟರ್ ಸಮಸ್ಯೆ ವರದಿಯಾಗುತ್ತಿರುವ ಕಾರಣ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಳುಹಿಸಿರುವ ವೈದ್ಯಕೀಯ ಸಲಕರಣೆ ಆಡಿಟ್‌ಗೆ ಆದೇಶಿಸಿದೆ. ಕೊರೋನಾಗೆ ಮಮತಾ ಬ್ಯಾನರ್ಜಿ ತಮ್ಮ ಬಲಿಯಾಗಿದ್ದಾರೆ. ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆಗೆ ಒತ್ತಡ ಹೆಚ್ಚಾಗಿದೆ. ಬೆಂಗಳೂರು ಸೋಂಕಿತನಿಗೆ ಚಹಲ್ ನೆರವು, ಕನ್ನಡ ಪೋಸ್ಟರ್ ನೋಡಿ ಸನ್ನಿ ಸಂಭ್ರಮ ಸೇರಿದಂತೆ ಮೇ.15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೇಂದ್ರದಿಂದ ಕಳುಹಿಸಿದ ವೆಂಟಿಲೇಟರ್ ಬಳಕೆ, ಆಡಿಟ್‌ಗೆ ಆದೇಶ: ರಾಜ್ಯಗಳಿಗೆ ಢವಢವ!...
ಕೊರೋನಾ ಎರಡನೇ ಅಲೆ ಕೇಂದ್ರದ ಜೊತೆ ರಾಜ್ಯ ಸರ್ಕಾರವವನ್ನೂ ಚಿಂತೆಗೀಡು ಮಾಡಿದೆ. ಹೀಗಿರುವಾಗ ಪಿಎಂ ಮೋದಿ ದೇಶದಲ್ಲಿ ಕೊರೋನಾದಿಂದ ಸೃಷ್ಟಿಯಾಗಿರುವ ಸಮಸ್ಯೆಗಳು ಹಾಗೂ ಲಸಿಕೆ ಅಭಿಯಾನದ ಸಮೀಕ್ಷೆ ನಡೆಸಲು ಇಂದು, ಶನಿವಾರ ಉನ್ನತ ಮಟ್ಟದ ಸಭೆ ಆರಂಭಿಸಿದ್ದಾರೆ.
ಬಂಗಾಳ CM ಮಮತಾ ಬ್ಯಾನರ್ಜಿ ಸಹೋದರ ಕೊರೋನಾಗೆ ಬಲಿ!...
ಕೊರೋನಾ ವೈರಸ್ ಪ್ರಕರಣ ಗಣನೀಯ ಏರಿಕೆಯಾಗುತ್ತಿದೆ. ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಮ್ಮ ಆಶಿಮ್ ಬ್ಯಾನರ್ಜಿ ಕೊರೋನಾಗೆ ಬಲಿಯಾಗಿದ್ದಾರೆ.
ಮನೆ ಮನೆಗೆ ಬಂದು ಜ್ವರದ ಸರ್ವೆ: ಕೊರೋನಾ ನಿಯಂತ್ರಣಕ್ಕೆ ಹೊಸ ಟೆಕ್ನಿಕ್...
COVID19 ಹರಡುವುದನ್ನು ತಡೆಯಲು ಆಂಧ್ರಪ್ರದೇಶ ಸರ್ಕಾರವು ಶನಿವಾರದಿಂದ ರಾಜ್ಯದಾದ್ಯಂತ ಜ್ವರಕ್ಕೆ ಮನೆ-ಮನೆ ಸಮೀಕ್ಷೆಯನ್ನು ಪ್ರಾರಂಭಿಸಿದೆ. ಸಮೀಕ್ಷೆಯ ಭಾಗವಾಗಿ, ಎಲ್ಲಾ ಜಿಲ್ಲೆಗಳ ಸಹಾಯಕ ನರ್ಸಿಂಗ್ ಮಿಡ್‌ವೈಫರಿ (ಎಎನ್‌ಎಂ) ಮತ್ತು ಆಶಾ ಕಾರ್ಮಿಕರು ಜ್ವರದಿಂದ ಬಳಲುತ್ತಿರುವ ಜನರನ್ನು ಗುರುತಿಸಲು ನಿಯೋಜಿಸಲಾಗಿದೆ.
ಬೆಂಗಳೂರು ಕೋವಿಡ್ ರೋಗಿಗೆ ಯುಜುವೇಂದ್ರ ಚಹಲ್ 2 ಲಕ್ಷ ರೂ ನೆರವು!...
ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಗೆ ಭಾರತೀಯ ಕ್ರಿಕೆಟಿಗ ಯಜುವೇಂದ್ರ ಚಹಲ್ 2 ಲಕ್ಷ ರುಪಾಯಿ ನೆರವು ನೀಡಿದ್ದಾರೆ.
ಬಿಡದಿ ತೋಟದ ಮನೆಯಲ್ಲಿ ಸಮಯ ಕಳೆಯುತ್ತಿರುವ ನಿಖಿಲ್ ಕುಮಾರಸ್ವಾಮಿ-ರೇವತಿ!...
ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಬಿಡದಿ ತೋಟದ ಮನೆಯಲ್ಲಿ ಕುಟುಂಬಸ್ಥರ ಜೊತೆ ಸಮಯ ಕಳೆಯುತ್ತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಸೀರೆಯುಟ್ಟ ಸನ್ನಿ: ಕನ್ನಡದಲ್ಲಿ ಬರ್ತ್‌ಡೇ ಪೋಸ್ಟರ್ ನೋಡಿ ನಟಿ ಖುಷ್...
ಸನ್ನಿ ಲಿಯೋನ್‌ಗೆ ಅಪಾರ ಅಭಿಮಾನಿ ಬಳಗವಿದೆ. ಎಲ್ಲ ಕಡೆ ಸನ್ನಿ ಲಿಯೋನ್ ಅಭಿಮಾನಿಗಳಿದ್ದಾರೆ. ಸನ್ನಿ ಲಿಯೋನ್ ಹೆಸರಲ್ಲಿ ಸಂಘಗಳು, ಸೋಷಿಯಲ್ ಮೀಡಿಯಾ ಪೇಜ್‌ಗಳು ಆಕ್ಟಿವ್ ಆಗಿವೆ.
ಕಾರ್ಯಕರ್ತರಿಗೆ, ಅಭಿಮಾನಿಗಳಲ್ಲಿ ಒಂದು ಮನವಿ ಮಾಡಿದ ದೇವೇಗೌಡ!...
ರಾಜ್ಯದ ಜನರು ಮಹಾ ಮಾರಿ ಕೊರೋನಾ ಸಂಕಷ್ಟದಲ್ಲಿರುವಾಗ ಸಡಗರ, ಸಂಭ್ರಮದಿಂದ ನನ್ನ ಹುಟ್ಟು ಹಬ್ಬ ಆಚರಿಸುವುದು ಬೇಡ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ್ರು ತಮ್ಮ ಕಾರ್ಯಕರ್ತರಿಗೆ ಹಾಗೂ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಪೊಲೀಸರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ವಿಚಾರಣೆ!...
ಕೊರೋನಾ ಪರಿಹಾರ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಕಾಂಗ್ರೆಸ್ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರನ್ನು ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡ ಶುಕ್ರವಾರ ವಿಚಾರಣೆ ನಡೆಸಿದೆ
'ಲಾಕ್ ಡೌನ್ ಇನ್ನೊಂದು ವಾರ ಮುಂದುರೆಸಬೇಕಿದೆ'...
ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇದರಿಂದ ರಾಜ್ಯ ಸರ್ಕಾರ ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಚಿಂತನೆಯಲ್ಲಿದೆ. ಇನ್ನು ಈ ಬಗ್ಗೆ ಕೃಷಿ ಸಚಿ ಬಿ ಸಿ ಪಾಟೀಲ್ ಪ್ರತಿಕ್ರಿಯಿಸಿದ್ದು ಲಾಕ್‌ಡೌನ್ ಮುಂದುವರಿಸುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕೊರೋನಾ ಪ್ರಕರಣ ಇಳಿದರೂ ರಾಷ್ಟ್ರ ರಾಜಧಾನಿಯಲ್ಲಿ ಶೇ. 96ರಷ್ಟು ಐಸಿಯು ಬೆಡ್ ಫುಲ್!...
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲ ದಿನಗಳಿಂದ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಹೀಗಿದ್ದರೂ ಗಮಭೀರ ಸ್ಥಿತಿಯಲ್ಲಿರುವ ರೋಗಿಗಳ ಸಂಖ್ಯೆ ಮಾತ್ರ ಇಳಿಕೆಯಾಗಿಲ್ಲ. ಹೌದು ಐಸಿಯುನಲ್ಲಿ ಚಿಕಿತ್ಸೆ ನೀಡಬೇಕಾದ ರೋಗಿಗಳ ಸಂಖ್ಯೆ ಬಹಳಷ್ಟು ಹೆಚ್ಚಿದೆ.