ಲಸಿಕೆ ಸಿಕ್ತೋ, ಇಲ್ವೋ.. ಆದ್ರೆ ಕೊರೋನಾದಿಂದ ಕಾಪಾಡಿಕೊಳ್ಳಲು ಈ 3 ಅಗತ್ಯ!

By Suvarna NewsFirst Published May 15, 2021, 5:06 PM IST
Highlights

* ದೇಶದಲ್ಲಿ ಕೊರೋನಾ ಎರಡನೇ ಅಲೆ ದಾಳಿ 

* ಲಸಿಕೆ ಪಡೆದ ಬಳಿಕ ಕೊರೋನಾ ಮಾರ್ಗಸೂಚಿ ಪಾಲಿಸಿ, ಇಲ್ಲದಿದ್ದರೆ ಕೊರೋನಾ ಅಪಾಯ ಕಟ್ಟಿಟ್ಟ ಬುತ್ತಿ

* ಕೊರೋನಾದಿಂದ ಕಾಪಾಡಿಕೊಳ್ಳಲು ಈ 3 ಅಗತ್ಯ: ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಟ್ವೀಟ್

ನವದೆಹಲಿ(ಮೇ.15): ದೇಶದಲ್ಲಿ ಕೊರೋನಾ ಎರಡನೇ ಅಲೆ ದಾಳಿ ಇಟ್ಟಿದೆ. ಹೀಗಿರುವಾಗಲೇ ದೇಶಾದ್ಯಂತ 18 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಿ ಆಗಿದೆ. ಲಸಿಕೆ ಪಡೆದ ಬಳಿಕ ಕೊರೋನಾ ಮಾರ್ಗಸೂಚಿ ಪಾಲಿಸಿ, ಇಲ್ಲದಿದ್ದರೆ ಕೊರೋನಾ ಅಪಾಯ ಕಟ್ಟಿಟ್ಟ ಬುತ್ತಿ ಎಂದು ತಜ್ಞರು ಪದೇ ಪದೇ ಎಚ್ಚರಿಸುತ್ತಿದ್ದಾರೆ. ಇನ್ನು ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ವಿಜಯ್ ರಾಘವನ್ ಟ್ವೀಟ್ ಮಾಡಿ ಕೊರೋನಾ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ. 

ಲಸಿಕೆ ಹಾಕಿಸಿಕೊಂಡಿದ್ದೀರೋ, ಇಲ್ವೋ ಮಾಸ್ಕ್ ತಪ್ಪದೇ ಹಾಕಿ

ನೀವು ಲಸಿಕೆ ಹಾಕಿಸಿಕೊಂಡಿದ್ದೀರೋ ಇಲ್ವೋ.. ಆದರೆ ಮಾಸ್ಕ್, ಸಾಮಾಜಿಕ ಅಂತರ ಹಾಗೂ ವೆಂಟಿಲೇಷನ್ ಈ ಮೂರು ವಿಚಾರಗಳು ಕೊರೋನಾ ತಡೆಯಲು ಅತ್ಯಗತ್ಯ. ಜನರು ತಮ್ಮ ಈ ಮೂರು ಸುರಕ್ಷಾ ಕವಚ ಎಂದಿಗೂ ದೂರ ಮಾಡಬೇಡಿ ಎಂದು ರಾಘವನ್ ಟ್ವೀಟ್ ಮಾಡಿದ್ದಾರೆ.

Very important, whether vaccinated or not: Masks, physical distancing, ventilation. These interventions are also immediately critical for lowering pressures on the healthcare system, during this surge. Adherence essential at the personal and community levels. By all.

— Principal Scientific Adviser, Govt. of India (@PrinSciAdvGoI)

ಕೊರೋನಾ ಪ್ರಕರಣದಲ್ಲಿ ಇಳಿಕೆ

ಭಾರತದಲ್ಲಿ ಶನಿವಾರ 3,26,098 ಹೊಸ ಕೊರೋನಾ ಪ್ರಕರಣ ಹಾಗೂ 3,980 ಪ್ರಕರಣ ದಾಖಲಾಗಿವೆ. ಕೇಂದ್ರ ಆರೋಗ್ಯ ಇಲಾಖೆ ಕೊಟ್ಟ ಈ ಅಂಕಿ ಅಂಶಗಳು ಕಳೆದ 24 ಗಂಟೆಯಲ್ಲಿ 31,000 ಪ್ರಕರಣಗಳು ಕಡಿಮೆಯಾಗಿರುವುದಾಗಿ ತಿಳಿಸಿದೆ.

ಕೊರೋನಾ ಮೂರನೇ ಅಲೆ ಬರುವುದು ಖಚಿತ

ಕೇಂದ್ರ ಸರ್ಕಾರ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೊರೋನಾದ ಮೂರನೇ ಅಲೆಯನ್ನು ತಡೆಯಲು ಸಾಧ್ಯವಿಲ್ಲ. ಆದರೆ ಇದು ಯಾವಾಗ ಬರುತ್ತದೆ ಎನ್ನಲು ಸಾಧ್ಯವಿಲ್ಲ. ಹೀಗಾಗಿ ನಾವು ಮೊದಲೇ ತಯಾರಾಗಿರಬೇಕು. ಸೋಂಕು ಹೆಚ್ಚುತ್ತಿದ್ದಂತೆಯೇ ಜನರ ರೋಗ ನಿರೋಧಕ ಶಕ್ತಿಯೂ ಹೆಚ್ಚಲಿ ಎಂದಿದ್ದಾರೆ. 

click me!