ಕುಲಭೂಷಣ್ ಕುರಿತ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪು| ಜಾಧವ್’ಗೆ ರಾಜತಾಂತ್ರಿಕ ಸಂಪರ್ಕ ಪಡೆಯಲು ಪಾಕ್ ಅನುಮತಿ| ಪಾಕಿಸ್ತಾನದ ಕಾನೂನುಗಳ ಪ್ರಕಾರ ರಾಜತಾಂತ್ರಿಕ ಸಂಪರ್ಕಕ್ಕೆ ಅನುಮತಿ| ಪಾಕ್ ವಿಯೆನ್ನಾ ಒಪ್ಪಂದ ಉಲ್ಲಂಘನೆ ಮಾಡಿದೆ ಎಂದು ಹರಿಹಾಯ್ದಿದ್ದ ಐಸಿಜೆ|
ಇಸ್ಲಾಮಾಬಾದ್(ಜು.19): ಕುಲಭೂಷಣ್ ಜಾಧವ್ ಕುರಿತ ಅಂತಾರಾಷ್ಟ್ರಿಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಕುಲಭೂಷಣ್ ಜಾಧವ್’ಗೆ ರಾಜತಾಂತ್ರಿಕ ಸಂಪರ್ಕ ಪಡೆಯಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ.
ಪಾಕಿಸ್ತಾನದ ಕಾನೂನುಗಳ ಪ್ರಕಾರ ಕುಲಭೂಷಣ್ ಜಾಧವ್’ಗೆ ರಾಜತಾಂತ್ರಿಕ ಸಂಪರ್ಕ ಹೊಂದಲು ಅನುಮತಿ ನೀಡಲಾಗುವುದು. ಇದಕ್ಕಾಗಿ ವಿಧಾನಗಳನ್ನು ರೂಪಿಸಲಾಗುತ್ತಿದೆ ಎಂದು ಪಾಕ್ ವಿದೇಶಾಂಗ ಕಚೇರಿ ಸ್ಪಷ್ಟಪಡಿಸಿದೆ.
ವಿಯೆನ್ನಾ ಸಮಾವೇಶದ 36ನೇ ಪರಿಚ್ಚೇದದ ನಿಯಮಗಳನ್ನು ಪಾಕಿಸ್ತಾನ ಉಲ್ಲಂಘಿಸಿದೆ ಎಂದು ಅಂತಾರಾಷ್ಟ್ರೀಯ ನ್ಯಾಯಾಲಯ ತೀರ್ಪು ನೀಡಿದ್ದು, ಈ ಹಿನ್ನೆಲೆಯಲ್ಲಿ ಜಾಧವ್’ಗೆ ರಾಜತಾಂತ್ರಿಕ ಸಂಪರ್ಕ ಪಡೆಯಲು ಪಾಕ್ ಅನುಮತಿ ನೀಡುವ ಅನಿವಾರ್ಯತೆಗೆ ಸಿಲುಕಿದೆ.