ನಿವೇದಿತಾಳಿಗೆ ಹೊಸ ವೃತ್ತಿ, ಉಗ್ರರು ಬಿಚ್ಚಿಟ್ರು ಸ್ಫೋಟಕ ಮಾಹಿತಿ; ಜ.12ರ ಟಾಪ್ 10 ಸುದ್ದಿ!

By Suvarna News  |  First Published Jan 12, 2020, 5:07 PM IST

ಕರ್ನಾಟಕದಲ್ಲಿ ಭಯೋತ್ಪಾದಕ ಜಾಲ ಹಬ್ಬಿಕೊಳ್ಳುತ್ತಿದ್ದು, ಬಂಧಿತ ಶಂಕಿತ ಉಗ್ರನೊಬ್ಬ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ಪೌರತ್ವ ಕಾಯ್ದೆ ವಿರೋಧ ಸದ್ಯಕ್ಕೆ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಇದೀಗ ಚುನಾವಣಾ ಚಾಣಾಕ್ಯ ಪ್ರಶಾಂತ್ ಕಿಶೋರ್ ಮಾಡಿದ ಟ್ವೀಟ್ ಬಿಜೆಪಿಗೆ ನಡುಕ ತರಿಸಿದೆ. ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. ನಟಿಗೆ ಮುತ್ತಿಟ್ಟ ಅಭಿಮಾನಿ, ಸಂಕ್ರಾತಿಗೆ ಮೋದಿ ಶಾ ಹೊಸ ಪ್ಲಾನ್ ಸೇರಿದಂತೆ ಜನವರಿ 12ರ ಟಾಪ್ 10 ಸುದ್ದಿ ಇಲ್ಲಿವೆ.


ನಾನಂತು CAAಗೆ ದಾಖಲೆ ಕೊಡಲ್ಲ ಎಂದ ಶಾಸಕ

Tap to resize

Latest Videos

ನಾನು ನನ್ನ ಪೌರತ್ವವನ್ನು ಯಾಕೆ ಸಾಬೀತು ಪಡಿಸಬೇಕು. ನನ್ನ ಬಳಿ ಯಾರೇ ಬಂದು ದಾಖಲೆ ಕೇಳಿದರೂ ಕೊಡುವುದಿಲ್ಲ. ನನ್ನನ್ನು ಕೇಳುವ ಅಧಿಕಾರ ನಿಮಗಿಲ್ಲ ಅಂತ ಹೇಳಿ ಕಳುಹಿಸುತ್ತೇನೆ ಎಂದು ಕೊಳ್ಳೇಗಾಲ ಕ್ಷೇತ್ರದ ಶಾಸಕ ಎನ್‌. ಮಹೇಶ್‌ ಪೌರತ್ವ ತಿದ್ದುಪಡಿ ಕಾಯಿದೆಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಚಾಣಕ್ಯನ ಒಂದು ಟ್ವೀಟ್: ಇಕ್ಕಟ್ಟಿನಲ್ಲಿ ಸಿಎಂ, ಬಿಜೆಪಿ ತತ್ತರ!

ಜೆಡಿಯು ನಾಯಕ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪೌರತ್ವ ಕಾಯ್ದೆ ಹಾಗೂ NRC ಬಹಿಷ್ಕರಿಸುವ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಇದಕ್ಕಾಗಿ ಅವರು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಗೆ ಧನ್ಯವಾದ ತಿಳಿಸಿದ್ದಾರೆ ಹಾಗೂ ಬಿಹಾರದಲ್ಲಿ NPR ಜಾರಿಯಾಗಲು ಅವಕಾಶ ನೀಡುವುದಿಲ್ಲ ಎಂಬ ಆಶ್ವಾಸನೆ ನೀಡಿದ್ದಾರೆ. 

ರಾಜ್ಯಪಾಲರ ಮಾತಿನಂತೆ ರಾಜ್ಯದಲ್ಲಿ 220 ಕಾಲೇಜುಗಳಿಗೆ ಬೀಗ?

ಗುಣಾತ್ಮಕ ಶಿಕ್ಷಣ ನೀಡುವುದಕ್ಕಾಗಿ ನ್ಯಾಕ್‌ನಿಂದ ‘ಎ’ ಶ್ರೇಣಿ ಪಡೆಯದ ಸರ್ಕಾರಿ ಕಾಲೇಜುಗಳನ್ನು ಮುಚ್ಚುವುದೇ ಲೇಸು ಎಂದಿದ್ದ ರಾಜ್ಯಪಾಲ ವಿ.ಆರ್. ವಾಲಾ ಹೇಳಿಕೆಯನ್ನು ಅನುಷ್ಠಾನ ಮಾಡುವುದಾದರೆ ರಾಜ್ಯದಲ್ಲಿ ಕೇವಲ ಹತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕಾಲೇಜುಗಳನ್ನು ಮುಚ್ಚಬೇಕಾಗುತ್ತದೆ!

ದ. ಭಾರತದಲ್ಲಿ ಉಗ್ರ ಜಾಲ, ಶಂಕಿತ ಉಗ್ರರು ಬಿಚ್ಚಿಟ್ರು ಸ್ಫೋಟಕ ಸತ್ಯ!

ಕರ್ನಾಟಕದಲ್ಲಿ ಭಯೋತ್ಪಾದಕ ಜಾಲ ಹಬ್ಬಿಕೊಳ್ಳುತ್ತಿದ್ದು, ಬಂಧಿತ ಶಂಕಿತ ಉಗ್ರನೊಬ್ಬ ಸ್ಫೋಟಕ ಸತ್ಯ ಬಾಯ್ಬಿಟ್ಟಿದ್ದಾನೆ. ದಕ್ಷಿಣ ಭಾರತದಲ್ಲಿ ಉಗ್ರ ಜಾಲ  ವಿಸ್ತರಣೆಗೆ ಯತ್ನಿಸುತ್ತಿರುವ ಬಗ್ಗೆಯೂ ಮಾಹಿತಿಬ ನೀಡಿದ್ದಾನೆ. ಈ ವಿಚಾರ ಕೇಳಿ ಜಿಹಾದಿಗಳನ್ನ ಬಂಧಿಸಿದ ತಮಿಳುನಾಡು ಪೊಲೀಸರಿಗೇ ಶಾಕ್ ಆಗಿದೆ. 

ಟಿ20 ಮಹಿಳಾ ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟ; ಕರ್ನಾಟಕದ ಇಬ್ಬರಿಗೆ ಸ್ಥಾನ!

ಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡ ಪ್ರಕಟಗೊಂಡಿದೆ. 15 ಸದಸ್ಯರ ಬಲಿಷಅಠ ತಂಡವನ್ನು ಬಿಸಿಸಿಐ ಪ್ರಕಟಿಸಿದೆ. ಹರ್ಮನ್‌ಪ್ರೀತ್ ಕೌರ್‌ಗೆ ತಂಡವನ್ನು ಮುನ್ನಡೆಸಲಿದ್ದಾರೆ. ಸ್ಮೃತಿ ಮಂದನಾ ಉಪನಾಯಕಿಯಾಗಿ ಜವಾಬ್ದಾರಿ ನಿರ್ವಹಿಸಲಿದ್ದಾರೆ. 

ಕಿರುತೆರೆಗೆ ನಿವೇದಿತಾ ಗುಡ್‌ ಬೈ, ಗಗನ ಸಖಿಯಾಗಿ ಜರ್ನಿ ಶುರು!

ಬಿಗ್ ಬಾಸ್ ಬಾರ್ಬಿ ಡಾಲ್ ನಿವೇದಿತಾ ಗೌಡ ಗಗನ ಸಖಿಯಾಗಿ ಹೊಸ ವೃತ್ತಿ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವಿಚಾರವನ್ನು ಅಭಿಮಾನಿಗಳೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಹಂಚಿಕೊಂಡಿದ್ದಾರೆ.

ಅಯ್ಯೋ! ಫೋಟೋ ಕೇಳಿ ನಟಿಗೆ ಮುತ್ತಿಟ್ಟ ಅಭಿಮಾನಿ.

ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವ ಸಾರಾ ಎಷ್ಟೇ ಬ್ಯುಸಿ ಇದ್ದರು ವರ್ಕೌಟ್ ಮಾಡುವುದನ್ನು ತಪ್ಪಿಸುವುದಿಲ್ಲ. ಈ ವೇಳೆ ಆಕೆಗಾಗಿ ಅಭಿಮಾನಿಗಳು ಕಾದು ಫೋಟೋ ಹಾಗೂ ಆಟೋಗ್ರಾಫ್ ಪಡೆಯುತ್ತಾರೆ. ಇತ್ತೀಚಿಗೆ ಜಿಮ್‌ನಿಂದ ಸಾರಾ ಹೊರ ಬರುವಾಗ ಅಭಿಮಾನಿಯೊಬ್ಬ ಫೋಟೋ ಕೇಳಿ ಮುತ್ತಿಡಲು ಪ್ರಯತ್ನಿಸಿದ ಘಟನೆ ನಡೆದಿದೆ.

ತೆರಿಗೆದಾರರೇ ಗಮನಿಸಿ: ಐಟಿಆರ್‌ಗೆ ಸಂಬಂಧಿಸಿದ 10 ಪ್ರಮುಖ ಅಂಶ!

ಆದಾಯ ತೆರಿಗೆ ಇಲಾಖೆ ಇದೀಗ ನಿಮ್ಮ ಗಳಿಕೆ ಮತ್ತು ಹೂಡಿಕೆಗಳ ಬಗ್ಗೆ ಮಾತ್ರವಲ್ಲದೆ ಹೊಸ ಆದಾಯ ತೆರಿಗೆ ರಿಟರ್ನ್ (ಐಟಿಆರ್) ರೂಪಗಳಲ್ಲಿನ ನಿಮ್ಮ ಖರ್ಚುಗಳ ಬಗ್ಗೆಯೂ ತಿಳಿದುಕೊಳ್ಳಲು ಬಯಸಿದೆ. ಐಟಿಆರ್-1 ಮತ್ತು ಐಟಿಆರ್-4 ಫಾರ್ಮ್‌ಗಳ ಮೂಲಕ ಹೊಸ ನಿಯಮ ಜಾರಿಗೆ ತರಲಾಗಿದೆ.

CCD ಸಿದ್ಧಾರ್ಥ ಅಣ್ಣನ ಮಗ, ಮಾಜಿ ಶಿಕ್ಷಣ ಸಚಿವರ ಮೊಮ್ಮಗ 'ರಮಣ್' ಸಿನಿ ಫ್ಯಾಶನ್!

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ರಾಧಾ ರಮಣ' ಧಾರಾವಾಹಿ ಅಭಿಮಾನಿಗಳ ಮನಸ್ಸು ಗೆದ್ದು ಟಾಪ್‌ ರೇಟಿಂಗ್ ಪಡೆದುಕೊಂಡಿತ್ತು. ರಮಣ್‌ ಎಂದೇ ಖ್ಯಾತಿ ಪಡೆದ ಸ್ಕಂದಾ ಅಶೋಕ್‌ ರಿಯಲ್‌ ಲೈಫ್ ಇಂಟರೆಸ್ಟಿಂಗ್ ವಿಚಾರಗಳು ಈ ಸ್ಟೋರಿಯಲ್ಲಿದೆ.

ವಿರೋಧಿಗಳೆಲ್ಲಾ ಧೂಳಿಪಟ: ಸಂಕ್ರಾಂತಿಗೆ ಮೋದಿ, ಶಾ ಗಾಳಿಪಟ!

ಮಕರ ಸಂಕ್ರಾಂತಿ ಹಬ್ಬಕ್ಕಾಗಿ ಲುಧಿಯಾನದ ಮಾರುಕಟ್ಟೆಯಲ್ಲಿ ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ರಾರಾಜಿಸುತ್ತಿವೆ. ಜೋಡಿ ನಂ.1 ಹೆಸರಲ್ಲಿ ಮೋದಿ-ಶಾ ಅವರ ಭಾವಚಿತ್ರವುಳ್ಳ ಗಾಳಿಪಟಗಳು ಭರ್ಜರಿ ಮಾರಾಟವಾಗುತ್ತಿವೆ.

click me!