ದಂಡ ನೋಡಿ ಬೈಕ್ ಸುಟ್ಟ, ನಟಿಗೆ ಪ್ರಶ್ನೆ ಕೇಳಿ ಅಭಿಮಾನಿ ಕೆಟ್ಟ; ಇಲ್ಲಿವೆ ಸೆ.06ರ ಟಾಪ್ 10 ಸುದ್ದಿ ಇಲ್ಲಿವೆ!

By Web DeskFirst Published Sep 6, 2019, 5:08 PM IST
Highlights

ರಾಜ್ಯ ಹಾಗೂ ರಾಷ್ಟ್ರ ರಾಜಕೀಯಕ್ಕಿಂತ ಇದೀಗ ಟ್ರಾಫಿಕ್ ನಿಯಮ ಹಾಗೂ ದಂಡವೇ ಹೆಚ್ಚು ಸದ್ದು ಮಾಡುತ್ತಿದೆ. ದಂಡ ಮೊತ್ತ ಕೇಳಿ ಬೈಕ್‌ಗೆ ಬೆಂಕಿ ಹಚ್ಚಿದ ಘಟನೆ ವರದಿಯಾಗಿದ್ದರೆ, ದಂಡ ತಪ್ಪಿಸಿಕೊಳ್ಳಲು ಸವಾರರ ನಾನಾ ಉಪಾಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಹೊರತು ಪಡಿಸಿದರೆ, ರಷ್ಯಾಗೆ ತೆರಳಿದ ಪ್ರಧಾನಿ ಮೋದಿ ಸೋಫಾದಿಂದ ದಿಢೀರ್ ಎದ್ದು ವಿಶ್ವದ ಗಮನಸೆಳೆದಿದ್ದಾರೆ. ಇತ್ತ ಅಭಿಮಾನಿಯೊರ್ವ ಕಿಚ್ಚ ಸುದೀಪ್‌ಗೆ ವಿಶೇಷ ಗಿಫ್ಟ್ ನೀಡಿದ್ದರೆ, ನಟಿ ಇಲಿಯಾನ ಅಭಿಮಾನಿಗೆ ಹಿಗ್ಗಾ ಮುಗ್ಗಾ ಜಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯನ ಮೇಲೆ ಕೊಲೆ ಬೆದರಿಕೆ ಆರೋಪ ಕ್ರಿಕೆಟ್ ವಲಯವನ್ನೇ ಬೆಚ್ಚಿ ಬೀಳಿಸಿದೆ. ಸೆ.06 ರಲ್ಲಿ ರಾಜ್ಯ ಹಾಗೂ ದೇಶದಲ್ಲಿ ಸಂಚಲನ ಮೂಡಿಸಿದ ಟಾಪ್ 10 ಸುದ್ದಿಗಳು ಇಲ್ಲಿವೆ.

1 ಮೋದಿಯಿಂದ ಫೋಟೋ ಸೆಷನ್ ಲೇಟ್: ಪ್ರಧಾನಿ ಸೋಫಾದಿಂದ ಎದ್ದಿದ್ದೇಕೆ?

5ನೇ ಪೂರ್ವ ಆರ್ಥಿಕ ವೇದಿಕೆ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಗೆ ತೆರಳಿದ್ದ ಪ್ರಧಾನಿ ಮೋದಿ, ಕೊನೆಯಲ್ಲಿ ಫೋಟೋ ಸೆಷನ್’ನಲ್ಲಿ ಸರಳತೆ ಮೆರೆದು ಗಮನ ಸೆಳೆದಿದ್ದಾರೆ. ರಷ್ಯಾದ ವ್ಲಾಡಿವೋಸ್ಟಾಕ್'ನಲ್ಲಿ  ನಡೆದ ಶೃಂಗಸಭೆ ಬಳಿಕ ಫೋಟೋ ಸೆಷನ್ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮೋದಿ ಅವರಿಗೆ ಕೂರಲು ದುಬಾರಿ ಸೋಫಾ ವ್ಯವಸ್ಥೆ ಮಾಡಲಾಗಿತ್ತು. ಆದರೆ ಮೋದಿ ಈ ಸೋಫಾದಿಂದ ದಿಢೀರ್ ಎದ್ದು ವಿಶ್ವದ ಗಮನಸೆಳೆದರು.


2 ಡಿಕೆಶಿಗಿಲ್ಲ ಕೈ ನಾಯಕರ ಬೆಂಬಲ? ಹಿಂದೇಟು ಹಾಕಲು ಇದೇ ಕಾರಣ!

ಹವಾಲಾ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪಕ್ಷದ ಪ್ರಭಾವಿ ನಾಯಕ ಡಿ.ಕೆ.ಶಿವಕುಮಾರ್‌ಗೆ ಬೆಂಬಲ ಕೊಡುವ ವಿಚಾರವಾಗಿ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟವಾಗಿದೆ. ದಿನೇಶ್ ಗುಂಡೂ ರಾವ್ ನಡೆಯನ್ನು ಹಿರಿಯ ನಾಯಕರು ಟೀಕಿಸಿದ್ದಾರೆ. ಅದಕ್ಕೆ ಅವರು ಕಾರಣಗಳನ್ನೂ ಕೊಟ್ಟಿದ್ದಾರೆ.

3 ಮಂಗಳೂರು: IAS ಸಸಿಕಾಂತ್ ಸೆಂಥಿಲ್ ರಾಜೀನಾಮೆ

ಐಎಎಸ್ ಅಧಿಕಾರಿಗಳು ಸರಣಿಯಾಗಿ ರಾಜೀನಾಮೆ ನೀಡುವ ಬೆಳವಣಿಗೆ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಐಎಎಸ್ ಸಸಿಕಾಂತ್ ಸೆಂಥಿಲ್ ಅವರು ರಾಜೀನಾಮೆ ನೀಡಿದ್ದಾರೆ. ದಕ್ಷ ಅಧಿಕಾರಿಯಾಗಿದ್ದ ಸಸಿಕಾಂತ್ ಸೆಂಥಿಲ್ ತಮ್ಮ ರಾಜೀನಾಮೆ ವೈಯಕ್ತಿಕ ನಿರ್ಧಾರ ಎಂದು ತಿಳಿಸಿದ್ದರೂ, ತಮ್ಮ ಕ್ಷೇತ್ರದಲ್ಲಿ ಕೆಲಸ ಮಾಡುವ ಸವಾಲುಗಳ ಬಗ್ಗೆಯೂ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ.


4 ಮೈಸೂರು ರಾಜರ ಬೆಂಗಳೂರು ಅರಮನೆ ಈ ವಿಷ್ಯ ನಿಮ್ಗೆ ಗೊತ್ತಿರ್ಲಿಕ್ಕಿಲ್ಲ!

ಬೆಂಗಳೂರು ಅರಮನೆ ಅನ್ನೋಕಿಂತ ಬ್ಯಾಂಗ್ಳೂರ್ ಪ್ಯಾಲೇಸ್ ಎಂದರೆ ಹೆಚ್ಚು ಜನರಿಗೆ ತಿಳಿದೀತು. ಒಂದು ಕಾಲದಲ್ಲಿ ಮೈಸೂರು ಮಹಾರಾಜರ ನೆಚ್ಚಿನ ಬೇಸಿಗೆ ಮನೆಯಾಗಿದ್ದ ಬೆಂಗಳೂರು ಅರಮನೆ ಇಂದು ಅದ್ಧೂರಿ ಮದುವೆಗಳಿಗೆ ಸಾಕ್ಷಿಯಾಗುತ್ತಾ, ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿ ಉಳಿದಿದೆ. ಈಗ ಕೂಡಾ ಮೈಸೂರು ರಾಜ ಮನೆತನದ ಆಸ್ತಿಯಾಗಿಯೇ ಉಳಿದಿದೆ. ಇದರ ಕುರಿತು ಬಹುತೇಕರಿಗೆ ತಿಳಿದಿರದ 5 ವಿಷಯಗಳು ವಿವರ ಈ ಸ್ಟೋರಿಯಲ್ಲಿ.


5 ಕ್ರಿಕೆಟ್ ಮುಖ್ಯಸ್ಥನಿಗೆ ಜೀವ ಬೆದರಿಕೆ; 2011ರ ವಿಶ್ವಕಪ್ ತಂಡದ ಕ್ರಿಕೆಟಿಗನ ಮೇಲೆ ಆರೋಪ!

 2011ರ ವಿಶ್ವಕಪ್ ಟೂರ್ನಿ ಬಳಿಕ ಹಲವು ದಿಗ್ಗಜ ಕ್ರಿಕೆಟಿಗರು ಟೀಂ ಇಂಡಿಯಾದಿಂದ ದೂರ ಉಳಿದರು. ಇದರಲ್ಲಿ ವೇಗಿ ಮುನಾಫ್ ಪಟೇಲ್ ಕೂಡ ಒಬ್ಬರು. 2011ರ ವಿಶ್ವಕಪ್ ಟೂರ್ನಿಯಲ್ಲಿ ಪ್ರಮುಖ ಬೌಲರ್ ಆಗಿ ಗುರುತಿಸಿಕೊಂಡಿದ್ದ ಮುನಾಫ್ ಪಟೇಲ್ ವಿರುದ್ಧ ಈಗಾಗಲೇ ಹಲವು ಆರೋಪಗಳಿವೆ. ಇದೀಗ ಕ್ರಿಕೆಟ್ ಮುಖ್ಯಸ್ಥನಿಗೆ ಕೊಲೆ ಬೆದರಿಕೆ ಹಾಕಿದ ಆರೋಪಕ್ಕೆ ಮುನಾಫ್ ಪಟೇಲ್ ಗುರಿಯಾಗಿದ್ದಾರೆ.


6 ಇದೇನು ಅಭಿಮಾನ! ಕಿಚ್ಚ ಸುದೀಪ್ ಗಾಗಿ ಲೈಬ್ರರಿ ಕಟ್ಟಿಸಿದ ಅಭಿಮಾನಿ!

ಕಿಚ್ಚ ಸುದೀಪ್ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ. ಸ್ಯಾಂಡಲ್ ವುಡ್ ಮಾತ್ರವಲ್ಲ ಎಲ್ಲಾ ಸಿನಿಮಾ ಇಂಡಸ್ಟ್ರಿಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ. ಸುದೀಪ್ ಅಭಿಮಾನಿಯೊಬ್ಬ ಕಿಚ್ಚ ಸುದೀಪ್ ಗಾಗಿ ಲೈಬ್ರರಿಯೊಂದನ್ನು ಕಟ್ಟಿಸಿದ್ದಾರೆ. ಗ್ರಂಥಾಲಯಕ್ಕೆ ಕಿಚ್ಚ ಸುದೀಪ್ ಹೆಸರನ್ನೇ ಇಟ್ಟಿದ್ದಾರೆ. 

 

7 'ನೀವು ಕನ್ಯತ್ವ ಕಳೆದುಕೊಂಡಿದ್ದು ಯಾವಾಗ'? ಎಂದವನಿಗೆ ಚಳಿ ಬಿಡಿಸಿದ ಇಲಿಯಾನ!

ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿರುವ ಇಲಿಯಾನ ಡಿಸೋಜಾ ಇನ್ಸ್ಟಾಗ್ರಾಮ್ ನಲ್ಲಿ 'Ask me Anything' ಎಂದು ಅಭಿಮಾನಿಗಳಲ್ಲಿ ಕೇಳಿದ್ದರು. ಆಗ ಅಭಿಮಾನಿಯೊಬ್ಬ ಅಶ್ಲೀಲವಾಗಿ ಪ್ರಶ್ನೆಯೊಂದನ್ನು ಕೇಳುತ್ತಾನೆ. ಅದಕ್ಕೆ ಇಲಿಯಾನ ಕೊಟ್ಟ ಉತ್ತರ ಮುಟ್ಟಿ ನೋಡುಕೊಳ್ಳುವಂತಿದೆ. 


8 ಬ್ರಾಡ್‌ಬ್ಯಾಂಡ್‌ ಮಾರುಕಟ್ಟೆಗೆ ಜಿಯೋ ದಾಳಿ; ಉಚಿತ ಟಿವಿ ಕೂಡಾ ತಗೊಳ್ಳಿ!

ಕಡಿಮೆ ದರದಲ್ಲಿ 4G ಇಂಟರ್‌ನೆಟ್‌ ನೀಡುವ ಮೂಲಕ ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ್ದ ರಿಲಯನ್ಸ್‌ ಜಿಯೋ, ಈಗ ಅಗ್ಗದ ದರದಲ್ಲಿ ಬ್ರಾಡ್‌ಬ್ಯಾಂಡ್‌, ಕೇಬಲ್‌ ಟೀವಿ, ದೂರವಾಣಿ ಕರೆ, ಇ-ಕಾಮರ್ಸ ಖರೀದಿ ವೇದಿಕೆ ಎಲ್ಲವನ್ನೂ ಒಳಗೊಂಡ ಜಿಯೋ ಗಿಗಾ ಫೈಬರ್‌ ಸೇವೆಯನ್ನು ಪರಿಚಯಿಸಿದೆ.


9 ದ್ವಿಚಕ್ರ ಸವಾರನಿಗೆ ದುಬಾರಿ ದಂಡ; ಮೊತ್ತ ಕೇಳಿ ಬೈಕನ್ನೇ ಸುಟ್ಟ!

ಹೆಲ್ಮೆಟ್ ಹಾಕದೆ, ಸಿಗ್ನಲ್ ನೋಡದೆ, ಒನ್ ವೇ, ಪಾರ್ಕಿಂಗ್ ಗಮನಿಸದೆ, ನಾವು ನಡೆದಿದ್ದೇ ದಾರಿ ಎಂದು ಸವಾರಿ ಮಾಡುತ್ತಿದ್ದ ವಾಹನ ಸವಾರರು ಇದೀಗ ಟ್ರಾಫಿಕ್ ನಿಯಮ ಪಾಲಿಸುವಂತಾಗಿದೆ. ಒಂದೆರಡು ಸಿಗ್ನಲ್ ಜಂಪ್ ಮಾಡಿದರೆ ಸಾಕು ದಂಡ 20,000 ರೂಪಾಯಿ ದಾಟಿರುತ್ತೆ. ಹೀಗೆ ನಿಯಮ ಉಲ್ಲಂಘಿಸಿದ ಬೈಕ್ ಸವಾರ ದಂಡ ಮೊತ್ತ ಕೇಳಿ ತನ್ನ ಬೈಕನ್ನೇ ಸುಟ್ಟ ಘಟನೆ ನಡೆದಿದೆ.


10 ಹೊಸ ಟ್ರಾಫಿಕ್ ರೂಲ್ಸ್: ವಾಹನ ಸವಾರರ ಐಡಿಯಾಗೆ ಪೊಲೀಸರೇ ದಂಗು!

ಹೊಸ ಟ್ರಾಫಿಕ್ ನಿಯಮ ಹಾಗೂ ದಂಡ ಇದೀಗ ಭಾರಿ ಚರ್ಚಗೆ ಗ್ರಾಸವಾಗಿದೆ. ಒಂದೆಡೆ ಹೊಸ ನಿಯಮಕ್ಕೆ ಮೆಚ್ಚುಗೆ ವ್ಯಕ್ತವಾಗಿದ್ದರೆ, ಮತ್ತೊಂದೆಡೆ ದಂಡ ಮೊತ್ತ ಹೆಚ್ಚಾಯಿತು, ತಕ್ಷಣವೇ ನಿಯಮ ಹಿಂಪಡೆಯುವಂತೆ ಆಕ್ರೋಶ ಕೂಡ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಭಾರಿ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಉಪಾಯಗಳನ್ನು ಕಂಡುಹಿಡಿಯುತ್ತಿದ್ದಾರೆ. ಇದೀಗ ದ್ವಿಚಕ್ರ ವಾಹನ ಸವಾರರ ಹೊಸ ಐಡಿಯಾ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
 

click me!