ಬಹಿರಂಗವಾಯ್ತು ನಟಿಯ ಬ್ರೇಕ್‌ಅಪ್ ಸೀಕ್ರೆಟ್, ಸರ್ಕಾರಕ್ಕೆ ಮಲ್ಯ 2ನೇ ರಿಕ್ವೆಸ್ಟ್; ಏ.16ರ ಟಾಪ್ 10 ಸುದ್ದಿ!

Suvarna News   | Asianet News
Published : Apr 16, 2020, 05:19 PM IST
ಬಹಿರಂಗವಾಯ್ತು ನಟಿಯ ಬ್ರೇಕ್‌ಅಪ್ ಸೀಕ್ರೆಟ್, ಸರ್ಕಾರಕ್ಕೆ ಮಲ್ಯ 2ನೇ ರಿಕ್ವೆಸ್ಟ್; ಏ.16ರ ಟಾಪ್ 10 ಸುದ್ದಿ!

ಸಾರಾಂಶ

ಭಾರತದಲ್ಲಿ ಕೊರೋನಾಗೆ ಮತ್ತಷ್ಟು ತೀವ್ರತೆ ನೀಡಿದ ದೆಹಲಿ ತಬ್ಲೀಘ್ ಜಮಾತ್ ಮತ್ತೆ ಸದ್ದು ಮಾಡುತ್ತಿದೆ. ಇದೀಗ ನಿಜಾಮುದ್ದೀನ್ ಮರ್ಕಜ್ ಮೌಲಾನ ಸಾದ್ ಸಂಬಂಧಿಗಳಿಗೂ ಕೊರೋನಾ ವಕ್ಕರಿಸಿದೆ. ರಾಜ್ಯದಲ್ಲಿ ಕೊರೋನಾ ನಡುವೆ ರವಿ ಪೂಜಾರಿ ಕೇಸ್ ಕುರಿತು ಇದೀಗ ಪೊಲೀಸರು ಮುತ್ತಪ್ಪ ರೈ ವಿಚಾರಣೆಗೆ ಮುಂದಾಗಿದ್ದಾರೆ. ಅತ್ತ ಲಂಡನ್‌ನಲ್ಲಿರುವ ವಿಜಯ್ ಮಲ್ಯ ಭಾರತ ಸರ್ಕಾರಕ್ಕೆ 2ನೇ ಮನವಿ ಮಾಡಿದ್ದಾರೆ. ಖ್ಯಾತ ನಟಿಯ ಲವ್ ಬ್ರೇಕಪ್ ಸೀಕ್ರೆಟ್, ಲಾಕ್‌ಡೌನ್‌ನಿಂದ ಕುಡುಕರ ಪಾಡು ಸೇರಿದಂತೆ ಏಪ್ರಿಲ್ 16ರ ಟಾಪ್ 10 ಸುದ್ದಿ ಇಲ್ಲಿವೆ.

ದೆಹಲಿ ಮರ್ಕಜ್ ಮುಖ್ಯಸ್ಥ ಮೌಲಾನಾ ಸಾದ್ ಸಂಬಂಧಿಗಳಿಗೂ ಕೊರೋನಾ


ಇಡಿ ದೇಶಕ್ಕೆ ಅರ್ಧ ಕರೋನಾ ಹಬ್ಬಿಸಿದ್ದು ದೆಹಲಿಯ ಜಮಾತ್ ಪ್ರಕರಣ ಎನ್ನುವುದು ಪದೇ ಪದೇ ವರದಿಯಾಗುತ್ತಲೇ ಇದೆ.  ಇದೆಲ್ಲದರ ನಡುವೆ ನಿಜಾಮುದ್ದೀನ್ ಮರ್ಕಜ್ ಮುಖ್ಯಸ್ಥನ ಸಂಬಂಧಿಗೆ ಕೊರೋನಾ ತಾಗಿದೆ.


ರವಿ ಪೂಜಾರಿ ಕೇಸ್ ನಲ್ಲಿ ಟ್ವಿಸ್ಟ್; ಸಿಸಿಬಿಯಿಂದ ಮುತ್ತಪ್ಪ ರೈ ವಿಚಾರಣೆ...


ಭೂಗತ ಪಾತಕಿ ರವಿ ಪೂಜಾರಿಯನ್ನು ಪೊಲೀಸರು  ಪ್ಯಾರಿಸ್ ನಿಂದ ಬೆಂಗಳೂರಿಗೆ  ಕರೆತಂದಿದ್ದರು.  ಎಡಿಜಿಪಿ ಅಮರ್ ಕುಮಾರ್ ಪಾಂಡೆ ನೇತೃತ್ವದ ತಂಡ ಕರೆದುಕೊಂಡು  ಬಂದಿತ್ತು. ಇದೀಗ ಈ ಕೇಸ್ ಕುರಿತು ಮುತ್ತಪ್ಪ ರೈ ವಿಚಾರಣೆಗೆ ಪೊಲೀಸ್ ಮುಂದಾಗಿದೆ. 


ಆಟೋ ತಡೆದ ಪೊಲೀಸರು: ವೃದ್ಧ ತಂದೆಯನ್ನು ಹೊತ್ತುಕೊಂಡೇ ಸಾಗಿದ ಮಗ, ವಿಡಿಯೋ ವೈರಲ್...


ದೇಶದಾದ್ಯಂತ ಹೇರಲಾಗಿರುವ ಲಾಕ್‌ಡೌನ್ ಸದ್ಯ ಜನ ಸಾಮಾನ್ಯರ ನಿದ್ದೆ ಕಸಿದಿದೆ. ಒಂದೆಡೆ ಹೊರ ಹೋಗಲಾರದೆ ಜನರು ಪರದಾಡುತ್ತಿದ್ದು, ವಾಹನ ಸಂಚಾರಕ್ಕೂ ಬ್ರೇಕ್ ಹಾಕಲಾಗಿದೆ. ಹೀಗಿರುವಾಗ ಕೇರಳದ ಕೊಲ್ಲಂನಲ್ಲಿ ನಡೆದ ಘಟನೆಯೊಂದು ಸದ್ಯ ದೇಶದಾದ್ಯಂತ ಸೌಂಡ್ ಮಾಡುತ್ತಿದೆ. ಇಲ್ಲೊಬ್ಬ ವ್ಯಕ್ತಿ ತನ್ನ ವೃದ್ಧ ತಂದೆ ತಾಯಿಯನ್ನು ಆಟೋದಲ್ಲಿ ಕರೆದೊಯ್ಯುತ್ತಿದ್ದಾಗ ಪೊಲೀಸರು ಆತನನ್ನು ತಡೆದಿದ್ದಾರೆ. ಹೀಗಾಗಿ ಬೇರೆ ವಿಧಿ ಇಲ್ಲದ ಮಗ ಕಾಯಿಲೆಯಿಂದ ಬಳಲುತ್ತಿದ್ದ ತಂದೆಯನ್ನು ಹೆಗಲ ಮೇಲೆ ಹೊತ್ತುಕೊಂಡೇ ತೆರಳಿದ್ದಾನೆ.

ಕೊನೆಗೂ ಲವ್‌ ಬ್ರೇಕಪ್‌ ಬಗ್ಗೆ ಸತ್ಯ ಬಿಚಿಟ್ಟ ನಯನತಾರ;'No trust No love'


ತೆಲುಗು , ತಮಿಳು  ಚಿತ್ರರಂಗದಲ್ಲಿ 'ದರ್ಬಾರ್' ಮಾಡುತ್ತಿರುವ ನಟಿ ನಯನತಾರ ಮೊದಲ ಬಾರಿಗ್ ಲವ್‌, ಟ್ರಸ್ಟ್‌, ರಿಲೇಷನ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ.

ಗುಡ್‌ನ್ಯೂಸ್: ಕರ್ನಾಟಕಕ್ಕೂ ಬಂತು ಮೊಬೈಲ್ ಕೊರೋನಾ ಟೆಸ್ಟಿಂಗ್ ಬೂತ್‌


ಕರ್ನಾಟಕದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಆತಂಕ ಸೃಷ್ಟಿಸಿದೆ. ಕೊರೋನಾ ಸೋಂಕು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅತ್ಯಧಿಕ ತಪಾಸಣೆಗಳ ಅಗತ್ಯವಿದ್ದು ಇದಕ್ಕಾಗಿ ಮೊಬೈಲ್‌ ಬೂತ್‌ಗಳನ್ನು ರಾಜ್ಯ ಸರ್ಕಾರ ಆರಂಭಿಸಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮೊಬೈಲ್ ಬೂತ್ ಪರಿಚಯ ಮಾಡಲಾಗುತ್ತಿದೆ.

ಕ್ಯಾಡ್‌ಬರಿ ಸಂಸ್ಥೆಯಿಂದ 71 ಟನ್‌ ಬಿಸ್ಕಟ್‌, ಚಾಕಲೇಟ್‌ ವಿತರಣೆ!


ಕೊರೋನಾ ಲಾಕ್‌ಡೌನ್‌ನಿಂದಾಗಿ ತ್ರಾಸ ಪಡುತ್ತಿರುವ ನಿರ್ಗತಿಕರಿಗೆ ಸಹಾಯ ಮಾಡಲು ಕ್ಯಾಡ್‌ಬರಿ ಚಾಕಲೇಟ್‌ ಹಾಗೂ ಬಿಸ್ಕೆಟ್‌ ಉತ್ಪಾದಿಸುವ ಮೊಂಡೆಲಿಜ್‌ ಫುಡ್ಸ್‌ ಪ್ರೈವೆಟ್‌ ಲಿಮಿಟೆಡ್‌ ಸಂಸ್ಥೆ 71 ಟನ್‌ ಬಿಸ್ಕೆಟ್‌ ಹಾಗೂ ಚಾಕಲೇಟ್‌ಗಳನ್ನು ಹಂಚಲು ನಿರ್ಧರಿಸಿದೆ.

ಕಳೆದ 20 ದಿನದಿಂದ ನಿಸಾನ್ ಮೈಕ್ರಾ ಕಾರಿನಲ್ಲೇ ದ.ಕ ಜಿಲ್ಲೆಯ ಇಬ್ಬರ ಜೀವನ!


ಕೊರೋನಾ ವೈರಸ್ ತಡೆಯಲು ಪ್ರಧಾನಿ ಮೋದಿ ಮಾರ್ಚ್ 24ರಿಂದ ಲಾಕ್‌ಡೌನ್ ಘೋಷಣೆ ಮಾಡಿದ್ದರು. ಮೋದಿ ಘೋಷಣೆಯಿಂದ ಬೇರೆ ರಾಜ್ಯಗಳಿಗೆ ತೆರಳಿದವರು, ಕೂಲಿ ಕಾರ್ಮಿಕರು ಸೇರಿದಂತೆ ಮನೆಗೆ ವಾಪಸ್ ಬರಲು ಸಾಧ್ಯವಾಗದೇ, ಉಳಿದುಕೊಳ್ಳಲು ವ್ಯವಸ್ಥೆ ಇಲ್ಲದೆ ಪರದಾಡಿದರು. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಗುಜರಾತ್‌ಗೆ ತೆರಳಿದ ಇಬ್ಬರು ಇದೀಗ ಕಳೆದ 20 ದಿನಗಳಿಂದ ನಿಸಾನ್ ಮಿಕ್ರಾ ಸಣ್ಣ ಕಾರಿನಲ್ಲಿ ದಿನ ದೂಡುತ್ತಿದ್ದಾರೆ. 

ನನಗೆ ಕೊಟ್ಟ ಸಾಲ ತೆಗೆದುಕೊಳ್ಳಿ, ಕೊರೋನಾ ಸಮರಕ್ಕೆ ಬಳಸಿ: ಮತ್ತೆ ಮಲ್ಯ ಮನವಿ!


ಭಾರತ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಅಟ್ಟಹಾಸಕ್ಕೆ ನಉಗಿದೆ. ಹೀಗಿರುವಾಗ ಭಾರತೀಯ ಬ್ಯಾಂಕ್‌ಗಳಿಂದ ಕೋಟ್ಯಂತರ ರೂಪಾಯಿ ಸಾಲ ಮಾಡಿ, ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿದ್ದ ಮದ್ಯ ದೊರೆ ವಿಜಯ್ ಮಲ್ಯ ನನಗೆ ಕೊಟ್ಟ ಹಣ ಹಿಂಪಡೆಯಿರಿ, ಕೊರೋನಾ ಸಮರಕ್ಕೆ ಬಳಸಿಕೊಳ್ಳಿ ಎಂದು ಸರ್ಕಾರಕ್ಕೆ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಇದು ಕೊರೋನಾ ಹಾವಳಿ ಬಳಿಕ ಮಲ್ಯ ಸರ್ಕಾರಕ್ಕೆ ಮಾಡುತ್ತಿರುವ ಎರಡನೇ ಮನವಿಯಾಗಿದೆ

ಕೈಗೆಟುಕದ ಮದ್ಯ, ಸ್ಯಾನಿಟೈಸರ್‌ ಕುಡೀತಿದ್ದಾರಾ ಎಣ್ಣೆ ಪ್ರಿಯರು?.


ಮದ್ಯ ಸಿಗದೆ ಸ್ಯಾನಿಟೈಸರ್ ಕುಡೀತಿದ್ದಾರಾ ಕುಡುಕರು? ಹುಬ್ಬಳ್ಳಿಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಸ್ಯಾನಿಟೈಸರ್ ಬಾಟಲ್| ಉಗಾರ್‌ ಶುಗರ್ ಹೆಸರಿನ ಸ್ಯಾನಿಟೈಸರ್‌ಗೆ ಹೆಚ್ಚಿದ ಬೇಡಿಕೆ

ಜರ್ಮನಿಯ ಬೆಡಗಿ ಬಾಯಲ್ಲಿ ಅರಳು ಹುರಿದಂತೆ ಕಸ್ತೂರಿ ಕನ್ನಡ, ಏನ್ ಚೆಂದ ಟಿಕ್ ಟಾಕ್ ನೋಡಾ


ವಿದೇಶಿಯರು ಕರ್ನಾಟಕದ ಸಂಸ್ಕೃತಿ, ಆಹಾರ ಪದ್ಧತಿ ಹಾಗೂ ಇಲ್ಲಿನ ಸಂಪ್ರದಾಯವನ್ನು ಮೆಚ್ಚಿಕೊಂಡು ಪಾಲಿಸುವುದಕ್ಕೆ ಬಯಸುತ್ತಾರೆ. ಸಾಂಸ್ಕೃತಿಕ ನಗರಿ  ಮೈಸೂರಿಗೆ ಟೀಚರ್‌ ಆಗಿ ಆಗಮಿಸಿದ ಜರ್ಮನಿ ಹುಡುಗಿ ಈಗ ಸೋಷಿಯಲ್‌ ಮೀಡಿಯಾದಲ್ಲಿ ಸ್ಟಾರ್‌ ಆಗಿರುವುದಲ್ಲದೆ ಕರ್ನಾಟಕದ ಕ್ರಶ್‌ ಆಗಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?