ಕೊರೋನಾ ವೈರಸ್ ಹರಡಲು ವಿಶ್ವದ ಎಲ್ಲಾ ದೇಶಗಳು ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಭಾರತ ಹಾಗೂ ಬ್ರಿಟನ್ ಲಾಕ್‌ಡೌನ್ ವಿಸ್ತರಿಸುತ್ತಲೇ ಬರುತ್ತಿದೆ.. ಇದೀಗ ಲಾಕ್‌ಡೌನ್ ತೆರವು ಲಸಿಕೆ ಕಂಡು ಹಿಡಿದರೆ ಮಾತ್ರ ಎಂದು ಆರೋಗ್ಯ ಸಚಿವರು ಗಟ್ಟಿ ನಿರ್ಧಾರ ಮಾಡಿದ್ದಾರೆ.
ಲಂಡನ್(ಏ.16): ಕೊರೋನಾ ವೈರಸ್‌ಗೆ ನಲುಗಿದ ದೇಶಗಳ ಪೈಕಿ ಬ್ರಿಟನ್ ಕೂಡ ಒಂದು. ಭಾರತಕ್ಕಿಂತಲೂ ವೇಗವಾಗಿ ಬ್ರಿಟನ್‌ನಲ್ಲಿ ವೈರಸ್ ಹರಡುತ್ತಿದೆ. ಹೀಗಾಗಿ ಬ್ರಿಟನ್‌ನಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಲಾಗುತ್ತಿದೆ. ಇದೀಗ ಲಾಕ್‌ಡೌನ್ ತೆರವು ಯಾವಾಗ ಅನ್ನೋ ಪ್ರಶ್ನೆ ಕೇಳಿ ಬರುತ್ತಿದೆ. ಅದರಲ್ಲೂ ಬ್ರಿಟನ್ ಮಾಧ್ಯಮಗಳು ಸರ್ಕಾರವನ್ನು ಪ್ರಶ್ನಿಸುತ್ತಿದೆ. ಲಾಕ್‌ಡೌನ್ ಎಲ್ಲಿಯವರೆಗೆ ಇರಲಿದೆ ಅನ್ನೋದನ್ನೇ ಹೇಳಿಲ್ಲ ಎಂದು ಸರ್ಕಾರಕ್ಕೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದೆ.
ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮ ಪ್ರಶ್ನೆಗಳಿಗೆ ಉತ್ತರಿಸಿದ ಬ್ರಿಟನ್ ಆರೋಗ್ಯ ಸಚಿವ ನ್ಯಾಡೈನ್ ಡೊರಿಸ್, ಲಾಕ್‌ಡೌನ್ ತೆರುವಿನ ಕುರಿತು ಪ್ರಶ್ನಿಸುವುದನ್ನು ಬಿಡಿ. ಮೊದಲು ಆರೋಗ್ಯ ಮುಖ್ಯ. ಕೊರೋನಾ ವೈರಸ್‌ಗೆ ಲಸಿಕೆ ಕಂಡು ಹಿಡಿಯುವ ವರೆಗೆ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಡೊರಿಸ್ ಹೇಳಿದ್ದಾರೆ. ಈ ಕುರಿತು ಡೊರಿಸ್ ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಪತ್ರಕರ್ತರು ಲಾಕ್‌ಡೌನ್ ತೆರವು ಪ್ರಶ್ನೆಯಿಂದ ಹೊರಬನ್ನಿ. ಯಾವಾಗ ಲಸಿಕೆ ಕಂಡು ಹಿಡಿಯಲಾಗುತ್ತದೋ ಆವಾಗಲೇ ಲಾಕ್‌ಡೌನ್ ತೆರವು ಮಾಡಲಾಗುವುದು. ಅಲ್ಲಿಯವರೆಗೆ ನಾವು ದೇಶದ ನಾಗರೀಕರ ಆರೋಗ್ಯವನ್ನು ಉತ್ತಮ ಸ್ಥಿತಿಯಲ್ಲಿಡುವುದು ಹಾಗೂ ಆರ್ಥಿಕತೆ ಬಗ್ಗೆ ಯೋಚಿಸಿ ಎಂದು ಡೋರಿಸ್ ಟ್ವೀಟ್ ಮಾಡಿದ್ದಾರೆ.
ಬ್ರಿಟನ್ ಆರೋಗ್ಯ ಸಚಿವ ನ್ಯಾಡೈನ್ ಡೊರಿಸ್ ಕೊರೋನಾ ವೈರಸ್ ತಗುಲಿಸಿಕೊಂಡ ಬ್ರಿಟನ್‌ನ ಮೊದಲ ಸಚಿವ. ಸದ್ಯ ಚೇತರಿಸಿಕೊಂಡಿರುವ ಡೊರಿಸ್ ಇದೀಗ ಎಲ್ಲರ ಆರೋಗ್ಯದ ದೃಷ್ಟಿಯಿಂದ ಲಾಕ್‌ಡೌನ್ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಬ್ರಿಟನ್ ಸರ್ಕಾರ ಲಾಕ್‌ಡೌನ್ 3 ವಾರಗಳಿಗೆ ಮತ್ತೆ ವಿಸ್ತರಿಸಿದೆ. ಬ್ರಿಟನ್ ವಿರೋಧ ಪಕ್ಷದ ಸದಸ್ಯರಾದ ಸರ್ ಕೀರ್ ಸ್ಟಾರ್ಮರ್ ಲಾಕ್‌ಡೌನ್ ವಿಸ್ತರಣೆಯನ್ನು ಸ್ವಾಗತಿಸಿದ್ದಾರೆ. ಕೊರೋನಾ ವೈರಸ್ ತೊಲಗಿಸಲು ಲಾಕ್‌ಡೌನ್ ವಿಸ್ತರಣೆ ಅಗತ್ಯ. ನಾವೆಲ್ಲಾ ಸರ್ಕಾದ ಜೊತೆಗಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ