ಮೋದಿಯಿಂದ ಸಶ್ಮಾನ ಸೇರಿದ್ರಾ ಲೀಡರ್, ಬೆಂಗ್ಳೂರಲ್ಲಿಂದು ಸಿಗಲ್ಲ ಲಿಕ್ಕರ್; ನ.10ರ ಟಾಪ್ 10 ಸುದ್ದಿ!

By Web Desk  |  First Published Nov 10, 2019, 5:27 PM IST

ನರೇಂದ್ರ ಮೋದಿ ಪ್ರಧಾನಿ ಮಂತ್ರಿಯಾದ ಮೇಲೆ ಬಿಜೆಪಿ ಪಕ್ಷದ ಹಲವರು ಸ್ಮಶಾನ ಸೇರುತ್ತಿದ್ದಾರೆ. ಮೋದಿ ಹಿರಿಯ ನಾಯಕರಿಗೆ ಕುಣಿಕೆ ಹಾಕುತ್ತಿದ್ದಾರೆ ಎಂದು ಗಂಗಾವತಿ ಶಾಸಕ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಆಯೋಧ್ಯೆ ತೀರ್ಪಿನ ಹಿನ್ನಲೆಯಲ್ಲಿ ಶನಿವಾರ ಬೆಂಗಳೂರಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿತ್ತು. ಇದೀಗ ಭಾನುವಾರವೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ವಿರಾಟ್ ಕೊಹ್ಲಿಯ ವಿದಾಯದ ನಂತರದ ಪ್ಲಾನ್ ಬಹಿರಂಗ, ಚುಡಾಯಿಸಿದ ಹುಡುಗನಿಗೆ ಕಾಲೇಜು ಹುಡುಗಿಯಿಂದ ಗೂಸಾ ಸೇರಿದಂತೆ ನವೆಂಬರ್ 10ರ ಟಾಪ್ 10 ಸುದ್ದಿ ಇಲ್ಲಿವೆ.


1) ‘ಮೋದಿ ಬಂದು ವಾಜಪೇಯಿ, ಜೇಟ್ಲಿ, ಸುಷ್ಮಾರನ್ನು ಸ್ಮಶಾನಕ್ಕೆ ಕಳುಹಿಸಿದ್ದಾರೆ’

Latest Videos

undefined

ನರೇಂದ್ರ ಮೋದಿ ಪ್ರದಾನಮಂತ್ರಿಯಾಗಿ ಅಧಿಕಾರಕ್ಕೆ ಬಂದ ಮೇಲೆ ಬಿಜೆಪಿ ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಅರುಣ ಜೆಟ್ಲಿ ಹಾಗೂ ಸುಷ್ಮಾ ಸ್ವರಾಜ ಅವರನ್ನು ಕುಣಿಗೆ(ಸ್ಮಶಾನಕ್ಕೆ)ಕಳುಹಿಸಿದ್ದಾರೆ ಎಂದು ಜಿಲ್ಲೆಯ ಗಂಗಾವತಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. 

2) ಬೆಂಗಳೂರಿನಲ್ಲಿಂದು ಮದ್ಯ ಮಾರಾಟವಿಲ್ಲ..!

ಇಂದು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಮದ್ಯ ಮಾರಾಟಕ್ಕೆ ನಿಷೇಧ ಹೇರಿರುವುದಾಗಿ ಬೆಂಗಳೂರು ಪೊಲೀಸ್ ಆಯುಕ್ತರಾದ ಬಾಸ್ಕರ್ ರಾವ್ ಆದೇಶಿಸಿದ್ದರು. ಹೀಗಾಗಿ ನಗರದ ವ್ಯಾಪ್ತಿಗೆ ಬರುವ ಎಲ್ಲಾ ಬಾರ್, ವೈನ್ ಶಾಪ್ ಹಾಗೂ ಮದ್ಯ ಮಾರಾಟ ಅಂಗಡಿಗಳು ಬಂದ್ ಆಗಿವೆ.  

3) ಬುಲ್ ಬುಲ್‌ ರೌದ್ರಾವತಾರ: ಓರ್ವನ ಸಾವು, ತಗ್ಗು ಪ್ರದೇಶಗಳು ಮುಳುಗಡೆ

ನಿರೀಕ್ಷೆಯಂತೆ ಬುಲ್‌ಬುಲ್ ಚಂಡ ಮಾರುತ ಶನಿವಾರ ಪಶ್ಚಿಮ ಬಂಗಾಳ ಹಾಗೂ ಒಡಿಶಾಗೆ ಅಪ್ಪಳಿಸಿದ್ದು, ಓರ್ವನನ್ನು ಬಲಿ ಪಡೆದುಕೊಂಡಿದೆ. ಭಾರೀ ಮಳೆ ಹಾಗೂ ಗಾಳಿಯ ರೌದ್ರಾವತಾರದಿಂದಾಗಿ ತಗ್ಗು ಪ್ರದೇಶಗಳು ಮುಳುಗಡೆಯಾಗಿದ್ದು, ಒಡಿಶಾದಲ್ಲಿ ಮೂರು ಸಾವಿರ ಮಂದಿಯನ್ನು ಸ್ಥಳಾಂತರಿಸಲಾಗಿದೆ.


4) ಈ ಉಸಾಬರಿ ಬೇಕಿತ್ತಾ?: ಅಯೋಧ್ಯೆ ತೀರ್ಪು ವ್ಯಾಖ್ಯಾನಿಸಿ ಬೈಸಿಕೊಂಡ ಪಾಕಿಸ್ತಾನ!

ಪಾಕಿಸ್ತಾನ ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡಿದ ಮೋಸ ಎಂದು ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಬಣ್ಣಿಸಿದೆ. ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ನಮ್ಮ ಆಂತರಿಕ ವಿಷಯದಲ್ಲಿ ಪಾಕಿಸ್ತಾನ ಮೂಗು ತೂರಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.

5) ಅಯೋಧ್ಯೆ ತೀರ್ಪಿನ ಬಳಿಕ ಬಾಬ್ರಿಯ ಮತ್ತೊಂದು ತೀರ್ಪು ಶೀಘ್ರ ಪ್ರಕಟ

ಅಯೋಧ್ಯೆಯ ರಾಮಮಂದಿರ-ಬಾಬ್ರಿ ಮಸೀದಿ ತೀರ್ಪನ್ನು ಸುಪ್ರೀಂ ಕೋರ್ಟ್‌ ಪ್ರಕಟಿಸಿದ ಬೆನ್ನಲ್ಲೇ, ಬಾಬ್ರಿ ಮಸೀದಿ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ತೀರ್ಪು ಶೀಘ್ರವೇ ಉತ್ತರ ಪ್ರದೇಶದ ಲಖನೌ ವಿಶೇಷ ನ್ಯಾಯಾಲಯದಿಂದ ಹೊರ ಬೀಳುವ ಸಾಧ್ಯತೆ ದಟ್ಟವಾಗಿದೆ. 

6) ಚುಡಾಯಿಸಿದವನಿಗೆ ಕಾಲೇಜು ಹುಡುಗಿಯಿಂದ ಬಿತ್ತು ಗೂಸಾ..!

ಹುಡುಗರು ಚುಡಾಯಿಸಿದ್ರು ಎಂದು ದೂರು ಹೇಳೋ ಬದಲು ಕಾಲೇಜು ತಾನೇ ಹುಡುಗನ ಕೆನ್ನೆಗೆ ಬಾರಿಸಿ, ಗೂಸಾ ಕೊಟ್ಟಿರೋ ಘಟನೆ ಹಾಸನ ಬಸ್‌ ನಿಲ್ದಾಣದಲ್ಲಿ ನಡೆದಿದೆ. ಚುಡಾಯಿಸಿದ ಇಬ್ಬರು ಯುವಕರಿಗೂ ಕಾಲೇಜು ಹುಡುಗಿ ಹೆದರದೇ ಪ್ರತಿಕ್ರಿಯಿಸಿದ್ದಾಳೆ.

7) ವಿದಾಯದ ನಂತರದ ಪ್ಲಾನ್ ಬಹಿರಂಗಪಡಿಸಿದ ವಿರಾಟ್ ಕೊಹ್ಲಿ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿದಾಯದ ಪ್ಲಾನ್ ಸದ್ಯಕ್ಕಿಲ್ಲ. ಆದರೆ ವಿದಾಯದ ಹೇಳಿಕ ಬಳಿಕ ತಮ್ಮ ಪ್ಲಾನ್ ಏನು ಎಂಬುದನ್ನು ಕೊಹ್ಲಿ ಬಹಿರಂಗ ಪಡಿಸಿದ್ದಾರೆ. 

8) BB7: ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡ ನಾಗಿಣಿ!

ನೋಡೋಕೆ ಸೈಲೆಂಟ್ ಆದ್ರೆ ಟಾಸ್ಕ್‌ ಬಂದ್ರೆ ವೈಲೆಂಟ್. ಟೀಮ್‌ನ ಲೀಡ್‌ ಮಾಡುತ್ತಾ ಹಿಂದೆ ಉಳಿದ ತಂಡವನ್ನು ಮುಂದೆ ತರಲು ಅತಿ ಹೆಚ್ಚು ಪಾಯಿಂಟ್ಸ್‌ ಗಿಟ್ಟಿಸಿಕೊಂಡ ದೀಪಿಕಾ ದಾಸ್‌ಗೆ ಸಿಗ್ತು ಕಿಚ್ಚನ ಮೆಚ್ಚುಗೆಯ ಚಪ್ಪಾಳೆ.


9) ಶುಭಸುದ್ದಿ: ಇರಾನ್‌ನಲ್ಲಿ 550 ಬಿಲಿಯನ್ ಬ್ಯಾರೆಲ್ ಕಚ್ಚಾತೈಲ ನಿಕ್ಷೇಪ ಪತ್ತೆ

ಇರಾನ್’ನ ದಕ್ಷಿಣ ಭಾಗದಲ್ಲಿ ಬರೋಬ್ಬರಿ 50  ಬಿಲಿಯನ್ ಬ್ಯಾರೆಲ್’ನಷ್ಟು ಅಗಾಧ ಪ್ರಮಾಣದ ಕಚ್ಚಾತೈಲದ ನಿಕ್ಷೇಪ ಪತ್ತೆಯಾಗಿದೆ. ಇರಾನ್ ಇದೀಗ ಸುಮಾರು 150 ಬಿಲಿಯನ್ ಬ್ಯಾರೆಲ್ ಕಚ್ಚಾ ತೈಲ ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಿದೆ.

10) ಹುಬ್ಬಳ್ಳಿ: ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ..!

ಟ್ವಿನ್ಸ್‌ ಮಕ್ಕಳು ಹುಟ್ಟುವುದೇ ವಿಶೇಷ. ಹುಬ್ಬಳ್ಳಿಯಲ್ಲಿ ಮಹಿಳೆಯೊಬ್ಬರು ನಾಲ್ವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. 3 ಗಂಡು ಮಕ್ಕಳು 1 ಹೆಣ್ಣು ಮಗು ಜನನವಾಗಿದ್ದು, ನಾಲ್ವರೂ ಮಕ್ಕಳು ಆರೋಗ್ಯವಾಗಿದ್ದಾರೆ.

click me!