ಕಣ್ಮನಸೆಳೆದ ಜಂಬೂ ಸವಾರಿ, ರಿವೀಲ್ ಆಯ್ತು ಕಿಚ್ಚನ ಸ್ಯಾಲರಿ; ಇಲ್ಲಿವೆ ಅ.8ರ ಟಾಪ್ 10 ಸುದ್ದಿ!

Published : Oct 08, 2019, 05:17 PM ISTUpdated : Oct 08, 2019, 05:18 PM IST
ಕಣ್ಮನಸೆಳೆದ ಜಂಬೂ ಸವಾರಿ, ರಿವೀಲ್ ಆಯ್ತು ಕಿಚ್ಚನ  ಸ್ಯಾಲರಿ; ಇಲ್ಲಿವೆ ಅ.8ರ ಟಾಪ್ 10 ಸುದ್ದಿ!

ಸಾರಾಂಶ

ವಿಶ್ವವಿಖ್ಯಾತ ಮೈಸೂರು ದಸರಾ ಸಂಭ್ರಮದಲ್ಲಿ ಜಂಬೂ ಸವಾರಿ ಕಣ್ಮನಸೆಳೆದಿದೆ. ನಾಡಹಬ್ಬದ ಉತ್ಸವ, ಅಂಬಾರಿ ಹೊತ್ತ ಅರ್ಜುನ ಸೇರಿದಂತೆ ಸಾಂಸ್ಕೃತಿಕ ನಗರಿ ಹಬ್ಬದಲ್ಲಿ ಮಿಂದೆದ್ದಿದೆ. ಇತ್ತ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಕಿಚ್ಚ ಸುದೀಪ್ ಅತೀ ಹೆಚ್ಚು ಸಂಭಾವನೆ ಪಡೆಯುತ್ತಿದ್ದಾರೆ ಅನ್ನ ಮಾಹಿತಿ ಹೊರಬಿದ್ದಿದೆ. ಹಾರ್ದಿಕ್ ಪಾಂಡ್ಯಾಗೆ ಕ್ಲಾಸ್ ತೆಗೆದುಕೊಂಡ ಫ್ಯಾನ್ಸ್, ಇಳಿಮುಖವಾದ ಬಂಗಾರದ ಬೆಲೆ ಸೇರಿದಂತೆ ಅ.8ರಂದು ಸದ್ದು ಮಾಡಿದ ಟಾಪ್ 10 ಸುದ್ದಿ ಇಲ್ಲಿವೆ.

1) ಮೈಸೂರಿಗೆ ಹೋಗಕ್ಕಾಗಿಲ್ವಾ? ಇಲ್ಲೇ ದಸರಾ ಸಂಭ್ರಮ ನೋಡಿ ಕಣ್ತುಂಬಿಕೊಳ್ಳಿ!

ವಿಶ್ವವಿಖ್ಯಾತ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಮೈಸೂರು ಅರಮನೆ ಸೇರಿದಂತೆ ಇಡೀ ನಗರ ಮಧುವಣಗಿತ್ತಿಯಂತೆ ಸಿಂಗಾರಗೊಂಡು ರೆಡಿಯಾಗಿದ್ದಾಳೆ. ನಗರದಲ್ಲಿ ಜನಸಾಗರ ಸೇರಿದೆ. ನಾಡಹಬ್ಬದ ಉತ್ಸವದ ಬಗ್ಗೆ ಎಲ್ಲರಿಗೂ ಕುತೂಹಲ ಇರುತ್ತೆ, ಅಲ್ಲಿ ನಡೆಯುತ್ತಿರುವ ಪೂಜೆ-ಪುರಸ್ಕಾರಗಳು, ಆಚರಣೆಗಳು, ಸ್ಪರ್ಧೆಗಳು, ಕಾರ್ಯಕ್ರಮಗಳನ್ನು ನೋಡುವ ಸಂಭ್ರಮವೇ ಬೇರೆ. ಮೇಲಿನ ಲಿಂಕ್ ಕ್ಲಿಕ್ ಮಾಡಿ ದಸರಾ ಸಂಭ್ರಮಕಣ್ತುಂಬಿಕೊಳ್ಳಿ... 

2) ಅಮಿತ್‌ ಶಾ ವಿಮಾನ ಓಡಿಸಲು ಕಟ್ಟುಕತೆ ಕಟ್ಟಿದ ಪೈಲಟ್‌ ಅತಂತ್ರ!

ಕೇಂದ್ರ ಸರ್ಕಾರದ ನಂ.2 ನಾಯಕರಾಗಿರುವ ಗೃಹ ಸಚಿವ ಅಮಿತ್‌ ಶಾ ಅವರು ಪ್ರಯಾಣಿಸುವ ವಿಮಾನವನ್ನು ಚಾಲನೆ ಮಾಡುವ ಆಸೆಯೊಂದಿಗೆ ಬೇರೊಬ್ಬ ಪೈಲಟ್‌ರ ಅನುಭವವನ್ನು ತನ್ನದೆಂದು ಹೇಳಿಕೊಂಡಿದ್ದ, ಬಿಎಸ್‌ಎಫ್‌ ಪರವಾಗಿ ಸುಳ್ಳು ಇ-ಮೇಲ್‌ ಕಳುಹಿಸಿದ್ದ ಪೈಲಟ್‌ವೊಬ್ಬರು ಇದೀಗ ಅತಂತ್ರರಾಗಿದ್ದಾರೆ.

3) ಸಿಕ್ತು ಸ್ವಿಸ್ ಕಾಳ ಧನಿಕರ ಪಟ್ಟಿ: ಮೋದಿ ಹಿಡಿತಾರೆ ಕೊರಳ ಪಟ್ಟಿ!...

ಭಾರತ-ಸ್ವಿಡ್ಜರ್ಲ್ಯಾಂಡ್ ಹೊಸ ಒಪ್ಪಂದದಡಿಯಲ್ಲಿ  ಭಾರತವು ತನ್ನ ಪ್ರಜೆಗಳ ಸ್ವಿಸ್ ಬ್ಯಾಂಕ್ ಖಾತೆ ವಿವರಗಳನ್ನು ಮೊದಲ ಬಾರಿಗೆ ಪಡೆದುಕೊಂಡಿದೆ. ಇದು ವಿದೇಶದಲ್ಲಿ ಸಂಗ್ರಹವಾಗಿರುವ ಕಪ್ಪು ಹಣದ ವಿರುದ್ಧದ ಸರ್ಕಾರದ ಹೋರಾಟದ ಪ್ರಮುಖ ಮೈಲಿಗಲ್ಲಾಗಿದೆ.


4) ಜಹೀರ್‌ ಅವಮಾನಿಸಿದ ಪಾಂಡ್ಯಾಗೆ ಸರಿಯಾಗಿ ಜಾಡಿಸಿದ ಫ್ಯಾನ್ಸ್!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಕಾಫಿ ವಿತ್ ಕರಣ್ ಕಾರ್ಯಕ್ರಮದ ಬಳಿಕ ಎಚ್ಚರಿಕೆಯ ಹೆಜ್ಜೆ ಇಟ್ಟಿದ್ದ ಪಾಂಡ್ಯ, ಇದೀಗ ಎಲ್ಲೆ ಮೀರಿದ್ದಾರೆ.  ಟೀಂ ಇಂಡಿಯಾ ವೇಗಿ ಜಹೀರ್ ಖಾನ್ ಅವಮಾನಿಸೋ ಮೂಲಕ ಅಭಿಮಾನಿಗಳ ಆಕ್ರೋಷಕ್ಕೆ ತುತ್ತಾಗಿದ್ದಾರೆ.

5) ಮೈದಾನದಲ್ಲೇ ಪ್ರಾಣ ಬಿಟ್ಟ ಅಂಪೈರ್; ಕಂಬನಿ ಮಿಡಿ ಕ್ರಿಕೆಟ್ ಜಗತ್ತು!


ರೋಚಕ ಪಂದ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಅಂಪೈರ್ ದಿಢೀರ್ ಕುಸಿದು ಬಿದ್ಧ ಕ್ರಿಕೆಟಿಗರ ಎದೆಬಡಿತ ಹೆಚ್ಚಿಸಿದ ಘಟನೆ ನಡೆದಿದೆ. ಕುಸಿದ ಬಿದ್ದ ಅಂಪೈರ್ ಮೈದಾನದಲ್ಲೇ ಸಾವನ್ನಪ್ಪಿದ್ದಾರೆ. 


6) ಕಿಸ್ ಕೊಟ್ಟು ಎಂಗೇಜ್ ಮೆಂಟ್ ಗೆ ಅಧಿಕೃತ ಮುದ್ರೆ ಒತ್ತಿದ ಸಾಹೋ ನಟಿ!


‘ಸಾಹೋ’ ನಟಿ ಎವೆಲ್ಯನ್ ಶರ್ಮಾ ಬಾಯ್ ಫ್ರೆಂಡ್ ಡಾ. ತುಷಾನ್ ಬಿಂದಿ ಜೊತೆ ಎಂಗೇಜ್ ಆಗಿರುವುದನ್ನು ಅಧಿಕೃತಗೊಳಿಸಿದ್ದಾರೆ.  ಇಬ್ಬರೂ ಸಿಡ್ನಿಯಲ್ಲಿ ರೊಮ್ಯಾಂಟಿಕ್ ಅಗಿ ಕಾಲ ಕಳೆಯುತ್ತಿದ್ದು ಅಲ್ಲಿಂದಲೇ ಎಂಗೇಜ್  ಆಗಿರುವ ವಿಚಾರವನ್ನು ರಿವೀಲ್ ಮಾಡಿದ್ದಾರೆ. 

7) ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸ್ಯಾಂಡಲ್ ವುಡ್ ನ ಹೈಯೆಸ್ಟ್ ಪೇಯ್ಡ್ ನಟ! ಹೀಗೊಂದು ವರದಿ ಹೊರ ಬಿದ್ದಿದೆ. ಸಿನಿಮಾಗಿಂತ ಹೆಚ್ಚಾಗಿ ಕಿರುತೆರೆಯಲ್ಲಿ ಹೋಸ್ಟ್ ಮಾಡುವ ಬಿಗ್ ಬಾಸ್ ರಿಯಾಲಿಟಿ ಶೋಗಾಗಿ ಅತೀ ಹೆಚ್ಚು ಸಂಭಾವನೆ ಪಡೆಯುತ್ತಾರಂತೆ! 

8) 3 ದಿನ ಆಯ್ತು ಬಂಗಾರದ ಬೆಲೆ ಇಳಿದು: ಖರೀದಿ ಮಾಡಲ್ವಾ ತಿಳಿದೂ ತಿಳಿದು!...

ನಿರಂತರವಾಗಿ ಇಳಿಕೆಯತ್ತ ಮುಖ ಮಾಡಿರುವ ಚಿನ್ನದ ಬೆಲೆಯುಲ್ಲಿ ಇಂದೂ ಕೂಡ ಗಮನಾರ್ಹ ಇಳಿಕೆ ಕಂಡು ಬಂದಿದ್ದು, ಹಬ್ಬದ ಸಂಭ್ರಮದಲ್ಲಿದ್ದವರ ಸಂತಸವನ್ನು ಇಮ್ಮಡಿಗೊಳಿಸಿದೆ. ಕಳೆದ ಮೂರು ದಿನಗಳಿಂದ ಗಮನಾರ್ಹ ಇಳಿಕೆ ಕಂಡಿದ್ದ ಚಿನ್ನದ ದರ, ವಿಜಯದಶಮಿಯ ಶುಭ ಘಳಿಗೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ.


9) 48 ಸಾವಿರ ಸಾರಿಗೆ ನೌಕರರನ್ನು ವಜಾಗೊಳಿಸಿದ ತೆಲಂಗಾಣ ಸಿಎಂ!

ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದ ತೆಲಂಗಾಣ ರಾಜ್ಯ ಸಾರಿಗೆ ನಿಗಮದ 48 ಸಾವಿರ ನೌಕರರನ್ನು ವಜಾಗೊಳಿಸುವಂತೆ ಸಿಎಂ ಕೆ. ಚಂದ್ರಶೇಖರ್ ರಾವ್ ಾದೇಶ ಹೊರಡಿಸಿದ್ದಾರೆ. ತೆಲಂಗಾಣ ಮುಖ್ಯಮಂತ್ರಿಯ ಈ ಆದೇಶ ರಾಜ್ಯದಾದ್ಯಂತ ಭಾರೀ ಸಂಚಲನ ಮೂಡಿಸಿದೆ.

10) 'ಭಾರತದಲ್ಲಿ ಅಭಿವೃದ್ಧಿಯ ಸುನಾಮಿ ಬರ್ತಿದೆ' ಕುವೈತ್‌ನಲ್ಲಿ ಅಣ್ಣಾಮಲೈ ವ್ಯಾಖ್ಯಾನ.!

 ಐಪಿಎಸ್ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಹೋಗಿರುವ ಕೆ. ಅಣ್ಣಾಮಲೈ ಪ್ರಧಾನಿ ನರೇಂದ್ರ  ಮೋದಿ ಅವರನ್ನು ಹಾಡಿ ಹೊಗಳಿದ್ದಾರೆ. ಇದು ಭಾರತದಲ್ಲ..ಕುವೈತ್ ನಲ್ಲಿ.  ಇತ್ತೀಚೆಗೆ ಕುವೈತ್ ಪ್ರವಾಸ ಕೆಐಗೊಂಡಿದ್ದ ಅಣ್ಣಾಮಲೈ ಭಾಷಣ ಮಾಡುತ್ತ ಮೋದಿ ಅವರನ್ನು ಶ್ಲಾಘಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!
ಮಹಾಮೇಳಾವ್ ಅನುಮತಿ ನಿರಾಕರಣೆ: ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ