
ಜೂನ್ 1 ರಿಂದ ದೇಗುಲಗಳು ಓಪನ್? ಸ್ವಚ್ಛತಾ ಕೆಲಸಗಳು ಶುರು...
ನಾಲ್ಕನೇ ಹಂತದ ಲಾಕ್‌ಡೌನ್ ಮೇ. 31 ಕ್ಕೆ ಮುಕ್ತಾಯಗೊಳ್ಳಲಿದೆ. ಜೂನ್ 1 ರಿಂದ ಹೊಸ ಮಾರ್ಗಸೂಚಿ ಬರಲಿದೆ. ದೇಗುಲಗಳನ್ನು ತೆರೆಯಲು ಸರ್ಕಾರದ ಅನುಮತಿಗಾಗಿ ಕಾಯಲಾಗುತ್ತಿದೆ. ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ಸೇರಿ ಹಲವು ದೇವಾಲಯಗಳಲ್ಲ ಸ್ವಚ್ಛತಾ ಕೆಲಸ ಆರಂಭವಾಗಿದೆ. ಸ್ಯಾನಿಟೈಸರ್ ಸಿಂಪಡಿಸಿ ದೇವಾಲಯ ಸ್ವಚ್ಛತಾ ಕೆಲಸ ಶುರು ಮಾಡಲಾಗಿದೆ.
ತನ್ನ 10 ಕಾರ್ಮಿಕರನ್ನು ವಿಮಾನದಲ್ಲಿ ಬಿಹಾರಕ್ಕೆ ಕಳುಹಿಸಿಕೊಟ್ಟ ರೈತ!...
ಲಾಕ್‌ಡೌನ್‌ನಿಂದಾಗಿ ಬೃಹತ್ ಕಂಪನಿಗಳು ನೌಕರರ ವೇತನ ಕಡಿತಗೊಳಿಸುತ್ತಿದ್ದರೆ, ದೆಹಲಿಯ ರೈತನೊಬ್ಬ ತನ್ನಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿ ಕಾರ್ಮಿಕರನ್ನು ವಿಮಾನದ ಮೂಲಕ ತವರಿಗೆ ಕಳುಹಿಸಿ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.
ಕೊರೋನಾ ಎಕ್ಸ್‌ಪ್ರೆಸ್: ಏಷ್ಯಾದಲ್ಲೇ ಭಾರತಕ್ಕೆ ಅಗ್ರಸ್ಥಾನ..!.
ಕೊರೋನಾ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಇದೀಗ ಭಾರತ ಏಷ್ಯಾದ ಹೊಸ ಕೊರೋನಾ ಹಾಟ್‌ಸ್ಪಾಟ್ ಆಗಿ ಬದಲಾಗಿದೆ. ಇನ್ನು ಅತಿಹೆಚ್ಚು ಕೊರೋನಾ ಪೀಡಿತರ ಪಟ್ಟಿಯಲ್ಲಿ 9ನೇ ಸ್ಥಾನಕ್ಕೆ ಜಿಗಿದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ವಿಯೆಟ್ನಾಂ ದೇವಸ್ಥಾನದಲ್ಲಿ 9ನೇ ಶತಮಾನದ ಶಿವಲಿಂಗ ಪತ್ತೆ!...
ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ)ಯು ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೆ ಸೇರಿದ ಮರಳುಗಲ್ಲಿನ ಏಕಶಿಲಾ ಶಿವಲಿಂಗವೊಂದನ್ನು ಪತ್ತೆ ಮಾಡಿದೆ.
ಉಗ್ರ ಕಸಬ್ ವಿರುದ್ಧ ಸಾಕ್ಷ್ಯ ನುಡಿದಿದ್ದ ಶ್ರೀವರ್ಧಾಂಕರ್ ನಿಧನ!...
2008ರ ಮುಂಬೈ ದಾಳಿಯಲ್ಲಿ ಜೀವಂತ ಸೆರೆ ಸಿಕ್ಕಿದ್ದ ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಸದಸ್ಯ ಅಜ್ಮಲ್ ಕಸಬ್ ವಿರುದ್ದ ಸಾಕ್ಷ್ಯ ನುಡಿದಿದ್ದ ಇಲ್ಲಿನ ಶ್ರೀವರ್ಧಾಂಕರ್ (70) ಅವರು ನಿಧನರಾಗಿದ್ದಾರೆ.
#DhoniRetires vs #DhoniNeverTires: ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್..!
ಕೆಲವರು ಧೋನಿ ರಿಟೈರ್ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದರೆ, ಧೋನಿ ಅಭಿಮಾನಿಗಳು, ಧೋನಿ ಎಂದಿಗೂ ದಣಿಯುವುದಿಲ್ಲ ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಕೂಡಾ #DhoniNeverTires ಎನ್ನುವ ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.
ಅನನ್ಯಾ ಪಾಂಡೆ ಆನ್‌ಲೈನ್ ವರ್ಕೌಟ್; ಯಾರಾದ್ರೂ ಪುಶ್ ಮಾಡೋರು ಬೇಕಂತೆ!...
ಒಬ್ಬಳೇ ಇರೋದು ಬಹಳ ಕಷ್ಟಅನ್ನೋ ಅನನ್ಯಾ ಪಾಂಡೆ ಫ್ರೆಂಡ್ಸ್ ಜೊತೆಗೆ ವೀಡಿಯೋ ಚಾಟಿಂಗ್ ಮಾಡ್ತಾ ವರ್ಕೌಟ್ ಮಾಡ್ತಿದ್ದಾರೆ. ಅದು ಹೇಗೆ, ನಾವೂ ಟ್ರೈ ಮಾಡಬಹುದಾ.. ಅನನ್ಯಾ ಏನಂತಾರೆ?
ಡೊನಾಲ್ಡ್ ಟ್ರಂಪ್‌ಗೆ ಶಾಕ್ ಕೊಟ್ಟ ಟ್ವಿಟರ್!...
ವಾಸ್ತವಕ್ಕೆ ದೂರವಾದ ಅಂಶಗಳನ್ನು ಸದಾ ಪ್ರಸ್ತಾಪಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಟ್ವೀಟರ್ ದೊಡ್ಡ ಶಾಕ್ ನೀಡಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಉಪಯೋಗಿಸುವ ಬ್ಯಾಲೆಟ್ ಪೇಪರ್‌ನಲ್ಲಿ ಭ್ರಷ್ಟಾಚಾರ ನಡೆಯುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದ ಪೋಸ್ಟ್‌ಗೆ ಟ್ವೀಟರ್, ಫ್ಯಾಕ್ಟ್ಚೆಕ್ (ಸುದ್ದಿಯ ಸತ್ಯ ಅರಿಯುವ) ಎಚ್ಚರಿಕೆಯನ್ನು ಲಗತ್ತಿಸಿದೆ.
ಕೊನೆಯ ಅಸ್ತ್ರ: ಹಣಕಾಸು ಕೊರತೆ ನೀಗಿಸಲು ಆರ್‌ಬಿಐನಿಂದ ನೋಟು ಮುದ್ರಣ?
ದೇಶದ ಆರ್ಥಿಕತೆಗೆ ಕೊರೋನಾ ವೈರಸ್ ನೀಡುತ್ತಿರುವ ಹೊಡೆತ ನಿರೀಕ್ಷೆಗೂ ಮೀರಿದಲ್ಲಿ, ಭಾರತೀಯ ರಿಸವ್‌ರ್ ಬ್ಯಾಂಕ್ ನೋಟು ಮುದ್ರಣ ಮಾಡಿ ವಿತ್ತೀಯ ಕೊರತೆ ತುಂಬುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಅಂಥ ಪರಿಸ್ಥಿತಿ ನಿರ್ಮಾಣವಾಗಿದ್ದೇ ಆದಲ್ಲಿ ಸುಮಾರು 3 ದಶಕಗಳ ಬಳಿಕ ಅಂಥದ್ದೊಂದು ಘಟನೆಗೆ ದೇಶ ಸಾಕ್ಷಿಯಾಗಲಿದೆ.
ಅಂಬಾನಿ ಮನೆ ಸೇರಿದ ಫೆರಾರಿ ಹಾಗೂ ಮೆಕ್ಲೆರೆನ್ ಸೂಪರ್ ಕಾರು!...
ವಿಶ್ವದ ಶ್ರೀಮಂತ ಉದ್ಯಮಿಗಳ ಪೈಕಿ ಭಾರತದ ಮುಖೇಶ್ ಅಂಬಾನಿಗೆ ಅಗ್ರಸ್ಥಾನವಿದೆ. ಅಂಬಾನಿ ಬಳಿ ಹಲವು ದುಬಾರಿ ಕಾರುಗಳಿವೆ. ರೋಲ್ಸ್ ರಾಯ್ಸ್ ಕಲ್ಲಿನಾನ್ , ಲ್ಯಾಂಬೋರ್ಗಿನಿ ಅವೆಂಟಡೂರ್ ಸೇರಿದಂತೆ ಅತ್ಯಂತ ದುಬಾರಿ ಕಾರುಗಳು ಅಂಬಾನಿ ಬಳಿ ಇವೆ. ಇದೀಗ ಮತ್ತೆರೆಡು ದುಬಾರಿ ಕಾರು ಅಂಬಾನಿ ಮನ ಸೇರಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.