ಕೊರೊನಾಗೆ ಡೋಂಟ್ ವರಿ, ಐಪಿಎಲ್ ಪ್ರಶಸ್ತಿ ಮೊತ್ತಕ್ಕೆ ಕತ್ತರಿ; ಮಾ.04ರ ಟಾಪ್ 10 ಸುದ್ದಿ!

Suvarna News   | Asianet News
Published : Mar 04, 2020, 04:59 PM IST
ಕೊರೊನಾಗೆ ಡೋಂಟ್ ವರಿ, ಐಪಿಎಲ್ ಪ್ರಶಸ್ತಿ ಮೊತ್ತಕ್ಕೆ ಕತ್ತರಿ; ಮಾ.04ರ ಟಾಪ್ 10 ಸುದ್ದಿ!

ಸಾರಾಂಶ

ದೇಶದಲ್ಲೀಗ ಕೊರೊನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಭಾರತದಲ್ಲಿ 28 ಮಂದಿಯಲ್ಲಿ ವೈರಸ್ ಪತ್ತೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಅಭಯ ನೀಡಿದ್ದಾರೆ. 2020ರ ಐಪಿಎಲ್ ಟೂರ್ನಿಯ ಪ್ರಶಸ್ತಿ ಮೊತ್ತ ಕಡಿತಕ್ಕೆ ಬಿಸಿಸಿಐ ಮುಂದಾಗಿದೆ. ಶಿವಸೇನೆ ಜೊತೆ ಮೈತ್ರಿ ಮಾಡಿಕೊಂಡು ಮಹಾರಾಷ್ಟ್ರದಲ್ಲಿ ಬಿಜೆಪಿ ಬಾವುಟ ಹಾರಿಸಲು ಕಸರತ್ತುಗಳು ನಡೆಯುತ್ತಿದೆ. ಡ್ರೈವಿಂಗ್ ವೇಳೆ ನಿದ್ದೆಗೆ ಜಾರಿಗೆ ಊಬರ್ ಚಾಲಕ, ಅಭಿಮಾನಿಗಳ ನಿದ್ದೆಗೆಡಿಸಿದ ಹರ್ಷಿಕಾ ಪುಣಚ್ಚ ಸೇರಿದಂತೆ ಮಾರ್ಚ್ 4ರ ಟಾಪ್ 10 ಸುದ್ದಿ ಇಲ್ಲಿವೆ.

ಕೊರೋನಾ ಭೀತಿ ಬೇಡ: ಪಿಎಂ ಮೋದಿ ಅಭಯ!

ದೇಶದಲ್ಲಿ ಹೊಸದಾಗಿ ಕೊರೋನಾ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಭಯ ಬೇಡ ಎಂದು ದೇಶದ ಜನತೆಯಲ್ಲಿ ಮನವಿ ಮಾಡಿದ್ದಾರೆ. 

ಶಿವಸೇನೆ ಜತೆ ಮೈತ್ರಿಗೆ ಸಿದ್ಧವಾದ ಬಿಜೆಪಿ!

ಮುಸ್ಲಿಂ ಮೀಸಲಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ನ ಮಹಾಮೈತ್ರಿಕೂಟದಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಲಾಭ ಗಿಟ್ಟಿಸಿಕೊಳ್ಳಲು ಹೊರಟಿರುವ ಬಿಜೆಪಿ, ‘ಕಾಂಗ್ರೆಸ್‌ ಹಾಗೂ ಎನ್‌ಸಿಪಿಗಳು ಸರ್ಕಾರದಿಂದ ಹೊರಬರಲು ತೀರ್ಮಾನಿಸಿದರೆ ಶಿವಸೇನೆ ಜತೆ ಮೈತ್ರಿಗೆ ನಾವು ಸಿದ್ಧ’ ಎಂದಿದೆ.

ತಿಮ್ಮಕ್ಕ, ಸುಧಾ ಮೂರ್ತಿಗೆ ಪಿಎಂ ಮೋದಿ ಗಿಫ್ಟ್?

ಸ್ಪೂರ್ತಿದಾಯಕ ಸಾಧನೆ ಮಾಡಿದ ಮಹಿಳೆಯರ ಸಾಧನೆಯನ್ನು ಹ್ಯಾಶ್‌ ಟ್ಯಾಗ್‌ ಬಳಸಿ ಅವರ ಸಾಧನೆ ಬಗ್ಗೆ ಹಂಚಿಕೊಳ್ಳಿ. ಅವರಿಗೆ ಮಾ.8ರ ಮಹಿಳಾ ದಿನದಂದು ತಮ್ಮ ಟ್ವೀಟರ್‌ ಖಾತೆ ಬಳಸುವ ಅವಕಾಶ ನೀಡುವುದಾಗಿ ಹೇಳಿರುವ ಪ್ರಧಾನಿ ಮೋದಿ ಟ್ವೀಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ.

IPL ಟೂರ್ನಿಗೆ ತಯಾರಿ ಆರಂಭಿಸಿದ 8 ತಂಡಕ್ಕೆ ಶಾಕ್, BCCI ವಿರುದ್ದ ಅಸಮಾಧಾನ!

ಐಪಿಎಲ್ ಟೂರ್ನಿಗೆ  ಭರ್ಜರಿ ತಯಾರಿ ಆರಂಭಿಸಿದ 8 ಫ್ರಾಂಚೈಸಿಗಳಿಗೆ ಬಿಸಿಸಿಐ ಸದ್ದಿಲ್ಲದೆ ಶಾಕ್ ನೀಡಿದೆ. ಟೂರ್ನಿಗೆ ಕೆಲ ದಿನಗಳು ಮಾತ್ರ ಇರುವಾಗ ಬಿಸಿಸಿಐ ಶಾಕ್, ತಂಡಗಳ ಅಸಮಧಾನಕ್ಕೆ ಕಾರಣವಾಗಿದೆ. ಇದೀಗ ಬಿಸಿಸಿಐ ಅಧಿಕಾರಿಗಳ ಜೊತೆ ಮಾತುಕತೆಗೆ ಫ್ರಾಂಚೈಸಿಗಳು ಮುಂದಾಗಿದ್ದಾರೆ.


ಗುಲಾಬಿಗೆ ಸವಾಲು ಹಾಕಿದ ಹರ್ಷಿಕಾ, ತಿರುಗಿ ನೋಡಿದ್ರೇ ಅಷ್ಟೇ ಸಾಕಾ!

ಈ ಗುಲಾಬಿ ಸುಂದರಿ ಯಾರೆಂದು ನಿಮಗೆಲ್ಲಾಗೊತ್ತು. ಕೊಡಗಿನ ಚೆಲುವೆ ಹರ್ಷಿಕಾ ಪೂಣಚ್ಚ ಕೈಯಲ್ಲಿ ಗುಲಾಬಿಯ ಹೂಗಳ ಗುಚ್ಛ. ಸೌಂದರ್ಯ ಸಮರಕ್ಕೆ ಇನ್ನೇನು ಬೇಕು? ಹರ್ಷಿಕಾಳನ್ನು  ಗುಲಾಬಿ ಮೀರಿಸುವುದೋ? ಗುಲಾಬಿಯನ್ನು ಹರ್ಷಿಕಾ ಮೀರಿಸುವರೋ?


ಕಾಣೆಯಾಗಿದ್ದ ಸನ್ಯಾಸಿ ಸಂಸಾರಿಯಾಗಿ ಪತ್ತೆ..!

ಶಿವರಾತ್ರಿ ಸಂದರ್ಭದಲ್ಲಿಯೇ ಊರಿನಿಂದ ನಾಪತ್ತೆಯಾಗಿದ್ದ ಸ್ವಾಮೀಜಿ ಸಂಸಾರಿಯಾಗಿ ಪತ್ತೆಯಾಗಿರುವ ಘಟನೆ ಕೋಲಾರದಲ್ಲಿ ನಡೆದಿದೆ. ಕೋಲಾರ ತಾಲೂಕು ಹೊಳಲಿ ಗ್ರಾಮದಿಂದ ಯುವತಿ ಜೊತೆ ನಾಪತ್ತೆಯಾಗಿದ್ದ ಸ್ವಾಮಿ ವಿವಾಹಿತನಾಗಿ ಪತ್ತೆಯಾಗಿದ್ದಾನೆ.

8000 ಕೋಟಿ ಕಟ್ಟಿದ ಟೆಲಿಕಾಂ ಕಂಪನಿಗಳು!

ಖಾಸಗಿ ವಲಯದ ನಾಲ್ಕು ಟೆಲಿಕಾಂ ಕಂಪನಿಗಳು ಕೇಂದ್ರ ಸರ್ಕಾರಕ್ಕೆ ತಾವು ಪಾವತಿಸಬೇಕಿದ್ದ ಸ್ಪೆಕ್ಟ್ರಂ ಶುಲ್ಕದ ಪೈಕಿ 8000 ಕೋಟಿ ರು. ಬಾಕಿಯನ್ನು ಮಂಗಳವಾರ ಪಾವತಿ ಮಾಡಿವೆ.


ನಿದ್ದೆಗೆ ಜಾರಿದ ಉಬರ್ ಚಾಲಕ, ಪುಣೆಯಿಂದ ಮುಂಬೈಗೆ ತಾನೇ ಕಾರು ಚಲಾಯಿಸಿದ ಮಹಿಳೆ!...

ವಾಹನ ಚಲಾಯಿಸುವಾಗ ಡ್ರೈವರ್ ನಿದ್ದೆಗೆ ಜಾರಿದರೆ ಅದಕ್ಕಿಂತ ಭಯಾನಕ ಬೇರೇನಿಲ್ಲ. ಇಂದಿನ ಬಿಡುವಿಲ್ಲದ ಜೀವನ ಶೈಲಿಯಲ್ಲಿ ಬಹುತೇಕರು ಕ್ಯಾಬ್ ನಂಬಿಕೊಂಡೇ ಜೀವನ ಸಾಗಿಸುತ್ತಾರೆ. ಕ್ಯಾಬ್ ಪ್ರಯಾಣ ಆರಾಮದಾಯಕ ಮಾತ್ರವಲ್ಲ ಡ್ರೈವ್ ಮಾಡುವ ಸಮಸ್ಯೆಯಿಂದಲೂ ಪಾರು ಮಾಡುತ್ತದೆ. ಆದರೀಗ ಇದಕ್ಕೆ ತದ್ವಿರುದ್ಧವಾದ ಘಟನೆಯೊಂದು ಬೆಳಕಿಗೆ ಬಂದಿದೆ

ಚಿತ್ರದುರ್ಗಕ್ಕೆ ಆಗಮಿಸಿದ ಪ್ರಧಾನಿ ಮೋದಿ  ಪತ್ನಿ

ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋಧಾಬೆನ್ ಅವರು ಚಿತ್ರದುರ್ಗದ ನೀಲಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಬೆಳಗ್ಗೆ ಶಿವನ ದರ್ಶನ ಮಾಡದೇ ಉಪಹಾರ ಸೇವನೆ ಮಾಡದ ಹಿನ್ನೆಲೆ ಅವರು ಶಿವ ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅವರ ಭೇಟಿಯ ಪೋಟೋಗಳು ಇಲ್ಲಿವೆ.


ಮತ್ತೊಮ್ಮೆ ಕ್ರೇಜ್ ಕಾ ಬಾಪ್ ಅಂತ ನಿರೂಪಿಸಿದ ಕಿಚ್ಚ...

ಕರುನಾಡ ಕೇಸರಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶೂಟಿಂಗ್ ಭರದಿಂದ ಸಾಗುತ್ತಿದೆ. ಕ್ರೇಜ್ ಕಾ ಬಾಪ್ ಅಂತಾನೆ ಅಭಿಮಾನಿಗಳಿಂದ ಕರೆಸಿಕೊಳ್ಳುವ ಕಿಚ್ಚನ ಹೊಸ ಚಿತ್ರದ ಫೋಟೋಶೂಟ್ ಈಗಾಗಲೇ ಮುಗಿದಿದ್ದು ಸ್ಯಾಂಪಲ್ ಫೋಟೋ ಸಖತ್ ಕ್ರೇಜ್ ಹುಟ್ಟಿಸಿದೆ.  

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
ಸಿದ್ದರಾಮಯ್ಯ ಆಡಳಿತ ಕೇವಲ ಟೀಕೆಯಲ್ಲಿ ಮುಳುಗಿದೆ: ಕೇಂದ್ರ ಸಚಿವ ವಿ.ಸೋಮಣ್ಣ ಆರೋಪ