'ನೆರೆ' ಮನೆಯಲ್ಲಿ ಬೆಳ್ಳಿ, ಚಿನ್ನದ ನಾಣ್ಯ ಪತ್ತೆ!

Published : Mar 04, 2020, 04:47 PM IST
'ನೆರೆ' ಮನೆಯಲ್ಲಿ ಬೆಳ್ಳಿ, ಚಿನ್ನದ ನಾಣ್ಯ ಪತ್ತೆ!

ಸಾರಾಂಶ

ಹಳೆ ಮನೆ ತೆರವುಗೊಳಿಸುವ ವೇಳೆ ಬೆಳ್ಳಿ, ಚಿನ್ನದ ನಾಣ್ಯ ಪತ್ತೆ| ನೆರೆಯಿಂದ ಇವರ ಮನೆ ಕುಸಿದಿತ್ತು. ಹೊಸ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ 5 ಲಕ್ಷ ಪರಿಹಾರ ಮಂಜೂರು

ಹಾವೇರಿ[ಫೆ.04]: ಹಾನಗಲ್ಲ ತಾಲೂಕಿನ ವರ್ದಿ ಗ್ರಾಮದಲ್ಲಿ ನೆರೆಯಿಂದ ಕುಸಿದಿದ್ದ ಮನೆಯೊಂದನ್ನು ತೆರವುಗೊಳಿಸುವ ಸಂದರ್ಭದಲ್ಲಿ 169 ಬೆಳ್ಳಿ ನಾಣ್ಯ, 2 ಚಿನ್ನದ ನಾಣ್ಯಗಳು ಪತ್ತೆಯಾಗಿವೆ.

ಗ್ರಾಮದ ಲಕ್ಷ್ಮವ್ವ ಫಕೀರಪ್ಪ ಕುರುಬರ ಎಂಬವರ ಮನೆಯಲ್ಲಿ ಹಳೆ ಕಾಲದ ಈ ನಾಣ್ಯಗಳು ಪತ್ತೆಯಾಗಿವೆ. ನೆರೆಯಿಂದ ಇವರ ಮನೆ ಕುಸಿದಿತ್ತು. ಹೊಸ ಮನೆ ಕಟ್ಟಿಸಿಕೊಳ್ಳಲು ಸರ್ಕಾರದಿಂದ ಇವರಿಗೆ 5 ಲಕ್ಷ ಪರಿಹಾರ ಮಂಜೂರಾಗಿದ್ದು, ಹೊಸ ಮನೆ ಕಟ್ಟಲು ಬಿದ್ದ ಮನೆಯ ಮಣ್ಣನ್ನು ತೆರವುಗೊಳಿಸುವ ಕಾರ್ಯ ನಡೆದಿತ್ತು.

ಮಂಗಳವಾರ ಕಾರ್ಮಿಕರು ಅಗೆಯುತ್ತಿದ್ದಾಗ ನಾಣ್ಯಗಳು ಸಿಕ್ಕಿವೆ. ಅಕ್ಕಪಕ್ಕದವರೆಲ್ಲ ಸೇರಿ ಪರಿಶೀಲಿಸಿ ಪೊಲೀಸರಿಗೆ ಮಾಹಿತಿ ತಲುಪಿಸಿದರು. ಹಾನಗಲ್ಲ ಠಾಣೆ ಪೊಲೀಸರಿಗೆ ಸಿಕ್ಕ ನಾಣ್ಯಗಳನ್ನು ನೀಡಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸ್ಮಶಾನದಲ್ಲಿ ನಿಗೂಢ ಕೃತ್ಯ : ಚಿತೆಯ ಮೇಲೆ ಕುರಿ ತಲೆಬುರುಡೆ; ಮದ್ಯದ ಬಾಟಲಿಗಳು, ಬೆಚ್ಚಿಬಿದ್ದ ಗ್ರಾಮಸ್ಥರು
Gold Rate Today: ಬಂಗಾರದ ಬೆಲೆ ದಿಢೀರ್ ₹1,860 ಇಳಿಕೆ! ಗೃಹಿಣಿಯರು ಫುಲ್ ಖುಷ್, ಇಂದಿನ ರೇಟ್ ಎಷ್ಟು?