ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ, ನಿರ್ಭಯಾ ದೋಷಿಗಳಿಗೆ ಗಲ್ಲೇ ಗತಿ; ಫೆ.23ರ ಟಾಪ್ 10 ಸುದ್ದಿ

Suvarna News   | Asianet News
Published : Feb 23, 2020, 05:41 PM IST
ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ, ನಿರ್ಭಯಾ ದೋಷಿಗಳಿಗೆ ಗಲ್ಲೇ ಗತಿ; ಫೆ.23ರ ಟಾಪ್ 10 ಸುದ್ದಿ

ಸಾರಾಂಶ

ಫೆಬ್ರವರಿ 23ರ ಭಾನುವಾರ ಹಲವು ಸುದ್ದಿಗಳು ಸದ್ದು ಮಾಡಿದೆ. ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿ ಸೇರ್ಪಡೆಗೊಳ್ಳೋ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪಿಯನ್ನುಪೊಲೀಸರು ಬಂಧಿಸಿದ್ದಾರೆ. ನಿರೂಪಕಿ ಮಯಾಂತಿ ಲ್ಯಾಂಗರ್ ಸಂದರ್ಶನ, ನಟಿ ಜಾಕ್ವೆಲಿನ್ ಫರ್ನಾಂಡೀಸ್ ತೆರೆ ಹಿಂದಿನ ರೋಚಕ ಮಾಹಿತಿ ಸೇರಿದಂತೆ ಫೆ.23ರ ಟಾಪ್ 10 ಸುದ್ದಿ ಇಲ್ಲಿವೆ.  

ದಂತಚೋರ ವೀರಪ್ಪನ್ ಪುತ್ರಿ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆ!

ಕುಖ್ಯಾತ ದಂತಚೋರ, ಕಾಡುಗಳ್ಳ ವೀರಪ್ಪನ್ ಪುತ್ರಿ, ವಕೀಲೆ ವಿದ್ಯಾರಾಣಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಶನಿವಾದಂದು ತಮಿಳುನಾಡಿನ ಕೃಷ್ಣಗಿರಿನಲ್ಲಿ ನಡೆದ ಪಕ್ಷದ ಕಾರ್ಯಕ್ರಮದಲ್ಲಿ ವಿದ್ಯಾರಾಣಿ ಕಮಲ ಪಾಳಯಕ್ಕೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ವ್ಯಾಪಾರ ಒಪ್ಪಂದದ ಕಿರಿಕ್‌ ಬಳಿಕ ಅಮೆರಿಕ ಅಧ್ಯಕ್ಷರ ಹೊಸ ವಿವಾದ!

ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಎಂಬುದು ದೇಶದ ಆಂತರಿಕ ವಿಚಾರ ಎಂದು ಭಾರತ ಪ್ರತಿಪಾದಿಸಿಕೊಂಡು ಬಂದಿದ್ದರೂ, ತಮ್ಮ ಭಾರತ ಪ್ರವಾಸ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಹಾಗೂ ಸಾರ್ವಜನಿಕ ಭಾಷಣದ ವೇಳೆ ಈ ವಿಚಾರವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಪ್ರಸ್ತಾಪ ಮಾಡುವುದು ಬಹುತೇಕ ಖಚಿತವಾಗಿದೆ.

ನಡೆಯಲಿಲ್ಲ ಆಟ, ನಿರ್ಭಯಾ ದೋಷಿಗಳ ನೇಣಿನ ಅಂತಿಮ ಸಿದ್ಧತೆ ಆರಂಭ!

ನಿರ್ಭಯಾ ಗ್ಯಾಂಗ್‌ರೇಪ್‌ ಹಾಗೂ ಕೊಲೆ ಪ್ರಕರಣದ ದೋಷಿಗಳ ಮರಣದಂಡನೆ ಶಿಕ್ಷೆ ಜಾರಿಗೆ ದಿನಗಣನೆ ಆರಂಭವಾಗಿದೆ. ಮಾಚ್‌ರ್‍ 3ರಂದು ಎಲ್ಲ ನಾಲ್ವರೂ ದೋಷಿಗಳು ಗಲ್ಲಿಗೇರಲಿದ್ದು, ಈ ಹಿನ್ನೆಲೆಯಲ್ಲಿ ತಿಹಾರ್‌ ಜೈಲಿನಲ್ಲಿ ನೇಣು ಶಿಕ್ಷೆ ಜಾರಿಯ ಅಂತಿಮ ಸಿದ್ಧತೆಗಳು ಆರಂಭವಾಗಿವೆ.

IPL ಕ್ರಿಕೆಟ್: ಸತತ 4 ಬಾರಿ ನಿರೂಪಣೆ ಸಂದರ್ಶನದಲ್ಲಿ ಫೇಲ್ ಆಗಿದ್ದ ಮಯಾಂತಿ!

ಕ್ರೀಡಾ ನಿರೂಪಣೆಯಲ್ಲಿ ಜನಪ್ರಿಯವಾಗಿರುವ ಮಯಾಂತಿ ಲ್ಯಾಂಗರ್ ಸದ್ಯ ವಿಶ್ವದಲ್ಲೇ ಅತ್ಯುತ್ತಮ ಸ್ಪೋರ್ಟ್ಸ್ ಆ್ಯಂಕರ್ ಅನ್ನೋ ಹೆಗ್ಗಳಿಕಗೆ ಪಾತ್ರರಾಗಿದ್ದಾರೆ. ಕ್ರಿಕೆಟ್ ವಿಶ್ವಕಪ್, ಫುಟ್ಬಾಲ್ ವಿಶ್ವಕಪ್, ಒಲಿಂಪಿಕ್ಸ್ ಸೇರಿದಂತೆ ಎಲ್ಲಾ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ ಮಯಾಂತಿ ಲ್ಯಾಂಗರ್. ಐಪಿಎಲ್ ಟೂರ್ನಿಯಲ್ಲಿ ನಿರೂಪಕಿಯಾಗೋ ಕನಸು ಇಟ್ಟುಕೊಂಡಿದ್ದ ಮಯಾಂತಿ, 4 ಬಾರಿ ತಿರಸ್ಕೃತಗೊಂಡಿದ್ದರು. ಕಾರಣ ಮಾತ್ರ ವಿಚಿತ್ರ.

ತಾಯಿ ಗಗನ ಸಖಿ, ಪುತ್ರಿ ಖ್ಯಾತ ನಟಿ; ಇವರಿಬ್ಬರದು ಲಂಕಾದಲ್ಲೊಂದು ಹೊಟೇಲ್!

ಮಾಡಲ್‌ ಕಮ್‌ ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ದಿನೇ ದಿನೇ ಸಾಮಾಜಿಕ ಜಾಲತಾಣದಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಸದ್ದು ಮಾಡುತ್ತಿದ್ದಾರೆ. ಅಷ್ಟಕ್ಕೂ ಜಾಕ್ವೆಲಿನ್‌ ರಿಯಲ್‌ ಬ್ಯಾಕ್‌ ಗ್ರೌಂಡ್‌, ಲಂಕಾದಲ್ಲಿನ ಹೊಟೆಲ್ ಕುರಿತ ವಿವರ ಬಹಿರಂಗವಾಗಿದೆ.

ಬೆಂಗಳೂರು: ರೂಂಗೆ ಕರೆದು ಸ್ನೇಹಿತೆಯ ವಿಡಿಯೋ ಮಾಡಿದ್ದವ ಸಿಕ್ಕಿಬಿದ್ದ

ಸ್ನೇಹಿತೆಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಹಣಕ್ಕೆ ಬೇಡಿಕೆಯಿಟ್ಟ ಆರೋಪಿಯನ್ನುಪೊಲೀಸರು ಬಂಧಿಸಿದ್ದಾರೆ.  ದೀಪಕ್ ಕುಮಾರ್ ಎಂಬಾತನನ್ನ ಕೃಷ್ಣರಾಜಪುರ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಇನ್ಮುಂದೆ ಈ ಬ್ಯಾಂಕ್ ಎಟಿಎಂನಲ್ಲಿ 2,000 ರೂ. ನೋಟುಗಳು ಸಿಗಲ್ಲ!

ಟಿಎಂಗಳಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ಪಡೆದವರು ಚಿಲ್ಲರೆ ಮಾಡಿಸಲು ಪರದಾಡುವುದನ್ನು ಗಮನಿಸಿರುವ ಸರ್ಕಾರಿ ಸ್ವಾಮ್ಯದ ಇಂಡಿಯನ್‌ ಬ್ಯಾಂಕ್‌, ಮಾ.1ರಿಂದ ತನ್ನ ಎಟಿಎಂಗಳಲ್ಲಿ 2000 ರು. ಮುಖಬೆಲೆಯ ನೋಟುಗಳನ್ನು ತುಂಬದೇ ಇರಲು ನಿರ್ಧರಿಸಿದೆ. 2000 ರು. ಬದಲಿಗೆ 200 ರು. ಮುಖಬೆಲೆಯ ನೋಟುಗಳಿಗೆ ಒತ್ತು ನೀಡುವುದಾಗಿ ಬ್ಯಾಂಕ್‌ ಘೋಷಿಸಿದೆ.

100ಕ್ಕೆ 100 ಅಂಕ ಪಡೆದ ವಿದ್ಯಾರ್ಥಿನಿಯ ಉತ್ತರ ಪತ್ರಿಕೆ ಹೀಗಿದೆ ನೋಡಿ: ನೀವೂ ಒಂದ್ಸಲ ಚೆಕ್ ಮಾಡಿ

ಮಾರ್ಚ್ ಬಂದೇ ಬಿಡ್ತು. ಹಾಗೇ ಎಸ್‌ಎಸ್‌ಎಲ್‌ (10ನೇ ತರಗತಿ) ವಾರ್ಪಿಕ ಪರೀಕ್ಷೆಗಳು ಹತ್ತಿರವಾಗುತ್ತಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಭರ್ಜರಿ ಸಿದ್ಧತೆ ನಡೆಸಿದ್ದಾರೆ. ಅದರಲ್ಲೂ ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ವಿಜಯಪುರ ವಿದ್ಯಾರ್ಥಿನಿಯೋರ್ವಳು ಕನ್ನಡದಲ್ಲಿ 100ಕ್ಕೆ 100 ಅಂಕ ಪಡೆದು ಸೈಎನಿಸಿಕೊಂಡಿದ್ದಾಳೆ. 

'ದೇಶ ವಿರೋಧಿ ಘೋಷಣೆ ಕೂಗಿದ್ರೆ ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು'

ದೇಶ ವಿರೋಧಿ ಘೋಷಣೆ ಕೂಗಿದರೆ ಕಂಡಲ್ಲಿ ಗುಂಡಿಕ್ಕುವ ಕಾನೂನು ತರಬೇಕು. ದೇಶದ ಅನ್ನ, ನೀರು, ಗಾಳಿ ಸೇವಿಸಿ ದೇಶ ವಿರೋಧಿ ಘೋಷಣೆ ಸಲ್ಲದು. ಗುಂಡಿಕ್ಕುವ ಕಾನೂನು ತರಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ.

16ರ ಪೋರನಿಗೆ 19 ವರ್ಷದ ಯುವತಿಯೊಂದಿಗೆ ಮದುವೆ!

ಹದಿನಾರು ವರ್ಷದ ಪೋರನಿಗೆ 19 ವರ್ಷದ ಯುವತಿಯನ್ನು ಕೊಟ್ಟು ಆತನ ಪೋಷಕರೇ ವಿವಾಹ ಮಾಡಿಸಿರುವ ಅಪರೂಪದ ಬೆಳಕಿಗೆ ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಫೆಬ್ರವರಿಯಿಂದ ರಾಜ್ಯದಲ್ಲಿ ಎಸ್‌ಐಆರ್‌?
ಇವಿಎಂ ಬೇಡ ಎನ್ನುತ್ತಿದ್ದ ಕಾಂಗ್ರೆಸ್ಸಿಗೆ ಗುಡ್‌ನ್ಯೂಸ್‌