
ಮಹಾಭಾರತ ಸಂಗ್ರಾಮ: ಬಿಹಾರ
ಪಟ್ನಾ[ಮಾ.07]: ಎನ್‌ಡಿಎ ಬಹುವಾಗಿ ನಿರೀಕ್ಷೆ ಇಟ್ಟುಕೊಂಡಿರುವ ರಾಜ್ಯ ವೆಂದರೆ ಬಿಹಾರ. ಕಾಂಗ್ರೆಸ್-ಆರ್‌ಜೆಡಿ-ಆರ್‌ಎಲ್‌ಎಸ್ ಪಿ-ಎನ್‌ಸಿಪಿ ಹಾಗೂ ಜೀತನ್‌ರಾಂ ಮಾಂಝಿ ಅವರ ಪಕ್ಷಗಳು ಸೇರಿಕೊಂಡು ಮಹಾಗಠಬಂಧನ ರಚಿಸಿಕೊಂಡಿ ದ್ದರೂ, ಬಿಜೆಪಿ-ಜೆಡಿಯು-ಲೋಕಜನಶಕ್ತಿ ಪಕ್ಷಗಳು ಇರುವ ಮೈತ್ರಿಕೂಟ ಸದ್ಯದ ಮಟ್ಟಿಗೆ ಮೇಲುಗೈ ಸಾಧಿಸಿದಂತೆ ಕಂಡುಬರುತ್ತಿದ್ದು, ಫಲಿತಾಂಶ ಏನಾಗಬಹುದು ಎಂಬ ಕುತೂಹಲ ಕೆರಳಿಸಿದೆ.
ರಾಜ್ಯ ಸಮರ: ಯುಪಿಯಲ್ಲಿ ಈ ಸಲವೂ ಬಿಜೆಪಿ ಮ್ಯಾಜಿಕ್ ಮಾಡುತ್ತಾ?
2014ರ ಚುನಾವಣೆಯಲ್ಲಿ ಬಿಜೆಪಿ-ಜೆಡಿಯು ಮೈತ್ರಿಕೂಟ ಇರಲಿಲ್ಲ. ಆದರೆ ಬದಲಾದ ಸಂದರ್ಭದಲ್ಲಿ ಆರ್‌ಜೆಡಿ ಸಂಗ ತೊರೆದ ಜೆಡಿಯು, ಈಗ ಬಿಜೆಪಿ-ಎಲ್‌ಜೆಪಿ ಮೈತ್ರಿಕೂಟದ ಜತೆ ಸೇರಿಕೊಂಡಿದೆ. ಇದು ಎನ್‌ಡಿಎಗೆ ಭೀಮಬಲ ತಂದಿದೆ
ಇನ್ನೊಂದೆಡೆ ಕಾಂಗ್ರೆಸ್-ಆರ್‌ಜೆಡಿ ಹಾಗೂ ಎನ್‌ಸಿಪಿ ಇದ್ದ ಮೈತ್ರಿಕೂಟಕ್ಕೆ ಈವರೆಗೆ ಎನ್‌ಡಿಎ ಜತೆಗೆ ಇದ್ದ ಉಪೇಂದ್ರ ಕುಶ್ವಾಹಾ ಅವರ ರಾಷ್ಟ್ರೀಯ ಲೋಕಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಸೇರಿಕೊಂಡಿದೆ. ಇವರ ಜತೆಗೆ ಜೆಡಿಯುದಿಂದ ಸಿಡಿದೆದ್ದು ಬಂದಿದ್ದ ಮಾಜಿ ಮುಖ್ಯಮಂತ್ರಿ ಜೀತನ್‌ರಾಂ ಮಾಂಝಿ ಕೂಡ ಸೇರಿಕೊಂಡಿದ್ದಾರೆ. ಇದು ಮೇಲ್ನೋಟಕ್ಕೆ ಮಹಾಗಠಬಂಧನಕ್ಕೆ ಬಲ ಬಂದಿದೆ ಎಂದು ತೋರಿಸುತ್ತದೆ. ಆದರೆ, ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಜೈಲುಶಿಕ್ಷೆ ಅನುಭವಿಸುತ್ತಿರುವುದು, ಲಾಲು ಕುಟುಂಬದಲ್ಲಿನ ಅಣ್ಣ-ತಮ್ಮಂದಿರ ಒಳಜಗಳ ರಾಜ್ಯದಲ್ಲಿ ಕಾಂಗ್ರೆಸ್ ಅಷ್ಟು ಬಲಶಾಲಿ ಅಲ್ಲದಿರುವುದು ‘ಮೈನಸ್’ ಅಂಶಗಳಾಗಿವೆ.
ಟಿಕೆಟ್ ಫೈಟ್: ಕಾಂಗ್ರೆಸ್‌ನಲ್ಲಿ ಹಿರಿಯರು, ಕಿರಿಯರ ಕಿರಿಯರ ಕದನ!
ಇದನ್ನೇ ಬಂಡವಾಳ ಮಾಡಿಕೊಂಡು ಹೋರಾಟಕ್ಕೆ ಮುಂದಾಗಿರುವ ಎನ್‌ಡಿಎ ಮೈತ್ರಿಕೂಟ, ಜೆಡಿಯುನ ನಿತೀಶ್‌ಕುಮಾರ್ ಅವರ ಉತ್ತಮ ಚರಿಷ್ಮಾ, ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಗಳು ಹಾಗೂ ಜನಪ್ರಿಯತೆ, ರಾಮ್‌ವಿಲಾಸ್ ಪಾಸ್ವಾನ್ ಅವರ ದಲಿತ ಮತಬ್ಯಾಂಕ್ ಮುಂದಿಟ್ಟುಕೊಂಡು 2014ರಲ್ಲಿ ತೋರಿದ ಮ್ಯಾಜಿಕ್ ಪುನರಾವರ್ತಿಸುವ ಯತ್ನದಲ್ಲಿದೆ.
2014ರಲ್ಲಿ ಏನಾಗಿತ್ತು?:
2014ರಲ್ಲಿ ಮೋದಿ ಅಲೆ ಭರ್ಜರಿಯಾಗಿದ್ದ ಕಾರಣ ಜೆಡಿಯುನಿಂದ ದೂರವಾಗಿದ್ದರು ಕೂಡ ಎನ್‌ಡಿಎ, ಬಿಹಾರದಲ್ಲಿ ಭರ್ಜರಿ ಗೆಲುವು ಸಾಧಿಸಿತ್ತು. ಬಿಜೆಪಿ-ಎಲ್‌ಜೆಪಿ ಹಾಗೂ ಆರ್‌ಎಲ್‌ಎಸ್‌ಪಿ ಇದ್ದ ಮೈತ್ರಿಕೂಟವು, ರಾಜ್ಯದ ೪೦ ಕ್ಷೇತ್ರಗಳ ಪೈಕಿ 31 ಲೋಕಸಭಾ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿತ್ತು. ಆದರೆ ಆರ್ ಜೆಡಿ-ಕಾಂಗ್ರೆಸ್-ಎನ್‌ಸಿಪಿ ಕೂಟ ಕೇವಲ 7 ಸ್ಥಾನಗಳಲ್ಲಿ ಜಯಿಸಿದ್ದರೆ, ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಜೆಡಿಯು ಕೇವಲ 2 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು.
ಟಿಕೆಟ್ ಫೈಟ್: ಅನಂತ್ ಕ್ಷೇತ್ರದಲ್ಲಿ ಪತ್ನಿ ಬಿಜೆಪಿ ಅಭ್ಯರ್ಥಿ?
ಬದಲಾದ ಚಿತ್ರಣ:ಆದರೆ 2019ರಲ್ಲಿ ಬಿಹಾರದಲ್ಲಿನ ಲೋಕಸಭಾ ಸಮರದ ಚಿತ್ರಣ ಸಂಪೂರ್ಣ ಬದಲಾಗಿದೆ. ಅಲ್ಲಿದ್ದವರು ಇಲ್ಲಿಗೆ ಬಂದಿದ್ದರೆ, ಇಲ್ಲಿದ್ದವರು ಅಲ್ಲಿಗೆ ಹೋಗಿದ್ದಾರೆ ಎಂಬ ಸ್ಥಿತಿ ಇದೆ. ಅಂದರೆ ಎನ್‌ಡಿಎ ಜತೆಗೆ ಇದ್ದ ಆರ್‌ಎಲ್‌ಎಸ್‌ಪಿ ಹಾಗೂ ಜೀತನ್‌ರಾಂ ಮಾಂಝಿ ಅವರು ಈಗ ಪ್ರತಿಪಕ್ಷಗಳ ಮಹಾಗಠಬಂಧನದಲ್ಲಿದ್ದಾರೆ.
ಆದರೆ ಒಂದು ಕಾಲದಲ್ಲಿ ನರೇಂದ್ರ ಮೋದಿ ಅವರನ್ನು ನಖಶಿಖಾಂತ ವಿರೋಧಿಸುತ್ತ ಹಾಗೂ ಬಿಜೆಪಿಯೇತರ ಮೈತ್ರಿಕೂಟ ಗೆದ್ದರೆ ಪ್ರಧಾನಿಯಾಗುವ ಸಾಮರ್ಥ್ಯವಿದ್ದ ನಿತೀಶ್‌ಕುಮಾರ್ ಅವರು ಅಚ್ಚರಿಯ ರೀತಿಯಲ್ಲಿ ಆರ್‌ಜೆಡಿ ಸ್ನೇಹ ತೊರೆದು ಮೋದಿ ನಾಯಕತ್ವ ಒಪ್ಪಿ ಎನ್‌ಡಿಎ ಸೇರಿದ್ದು, ಚಮತ್ಕಾರವೇ ಸರಿ. ಹೀಗಾಗಿ ಬಿಜೆಪಿ-ಜೆಡಿಯು-ರಾಮ್ ವಿಲಾಸ್ ಪಾಸ್ವಾನ್ ಮೈತ್ರಿಯು ಉತ್ತಮ ಸಾಧನೆ ತೋರುವ ವಿಶ್ವಾಸದಲ್ಲಿದೆ. 2014ರಲ್ಲಿ ಇದ್ದ ಮೋದಿ ಅಲೆ ಈಗಿಲ್ಲವಾದರೂ, ನಿತೀಶ್ ಕುಮಾರ್ ಅವರ ಪ್ರಭಾವವನ್ನು ಬಳಸಿಕೊಂಡು ಆದ ನಷ್ಟವನ್ನು ಸರಿದೂಗಿಸಿಕೊಳ್ಳುವ ಇರಾದೆ ಎನ್‌ಡಿಎಗೆ ಇದೆ. ಬಿಜೆಪಿ-ಜೆಡಿಯು ತಲಾ 17ರಲ್ಲಿ ಹಾಗೂ ಎಲ್‌ಜೆಪಿ 6ರಲ್ಲಿ ಸ್ಪರ್ಧಿಸಲಿದೆ
ಟಿಕೆಟ್ ಫೈಟ್: ದೇವಮೂಲೆಯಲ್ಲಿ ಮತ್ತೆ ‘ಕೈ’ ಪತಾಕೆ?
ಜಾತಿ ಲೆಕ್ಕಾಚಾರ:
ಇನ್ನು ಜಾತಿ ಲೆಕ್ಕಾಚಾರ ನೋಡುವುದಾದರೆ ದಲಿತ ಮತಗಳನ್ನು ತಮ್ಮತಮ್ಮ ಕೂಟಗಳತ್ತ ಸೆಳೆಯಲು ದಲಿತ ನಾಯಕರಾದ ಪಾಸ್ವಾನ್ ಹಾಗೂ ಮಾಂಝಿ ಯತ್ನಿಸುತ್ತಿದ್ದಾರೆ. ಪ್ರಭಾವಿ ಯಾದವ ಹಾಗೂ ಅಲ್ಪಸಂಖ್ಯಾತ ಸಮುದಾಯವು ಲಾಲು ಪುತ್ರ ತೇಜಸ್ವಿ ಯಾದವ್ ಮತ್ತು ಕಾಂಗ್ರೆಸ್ ಬೆನ್ನಿಗೆ ನಿಲ್ಲುವ ಸಾಧ್ಯತೆ ಇದೆ. ಇನ್ನು ಮುಂದುವರಿದ ವರ್ಗಗಳು ಹಾಗೂ ಹಿಂದುಳಿದ ವರ್ಗಗಳು ಎನ್‌ಡಿಎ ಬೆಂಬಲಕ್ಕೆ ನಿಲ್ಲುವ ನಿರೀಕ್ಷೆಯಿದೆ.
ಟಿಕೆಟ್ ಫೈಟ್: ಉಡುಪಿಯಲ್ಲಿ ಕರಂದ್ಲಾಜೆ ನಿರಾಕರಿಸಿದ್ರೆ ಹೆಗ್ಡೆಗೆ ಟಿಕೆಟ್?
ಚುನಾವಣಾ ವಿಷಯಗಳು:
ಮೋದಿ ಸರ್ಕಾರದ ಸಾಧನೆಗಳು ಪ್ರಮುಖ ಚುನಾವಣಾ ವಿಷಯವಾಗಲಿವೆ. ಇದರ ನಡುವೆ ಬಿಹಾರಕ್ಕೆ ಎನ್‌ಡಿಎ ವಿಶೇಷ ಸ್ಥಾನಮಾನ ನೀಡಲಿಲ್ಲ ಎಂಬುದನ್ನು ಮುಂದಿಟ್ಟುಕೊಂಡು ಹಾಗೂ ನಿತೀಶ್ ಅವಕಾಶವಾದಿ ಎಂದು ಬಿಂಬಿಸಿ ಬಿಜೆಪಿ-ಜೆಡಿಯು ವಿರುದ್ಧ ಆರ್‌ಜೆಡಿ ಪ್ರಚಾರ ಮಾಡುವ ಸಾಧ್ಯತೆ ಇದೆ.
ಮತಗಳ ಲೆಕ್ಕಾಚಾರ:
2014ರ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಕೂಟದಲ್ಲಿದ್ದ ಬಿಜೆಪಿ ಶೇ.29.4, ಎಲ್‌ಜೆಪಿ ಶೇ.6.4, ಆರ್‌ಎಲ್‌ಎಸ್‌ಪಿ ಶೇ.3 ಮತಗಳನ್ನು ಗಳಿಸಿದ್ದವು. ಒಟ್ಟಾರೆ ಎನ್‌ಡಿಎ ಶೇ.38.8 ಮತ ಗಳಿಸಿತ್ತು. ಇದೇ ವೇಳೆ ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಜೆಡಿಯು ಶೇ.18.8 ಮತ ಗಳಿಸಿತ್ತು. ಈ ಸಲ ಆರ್‌ಎಲ್‌ಎಸ್‌ಪಿ ಎನ್‌ಡಿಎ ತೊರೆದಿದ್ದರೂ, ಶೇ.15.8 ಮತ ಗಳಿಸಿದ್ದ ಜೆಡಿಯು ಎನ್‌ಡಿಎ ತೆಕ್ಕೆಗೆ ಬಂದಿದೆ. ಹಾಗಾಗಿ 2014ರ ಮ್ಯಾಜಿಕ್ ಈಗಲೂ ನಡೆದರೆ ಶೇ.50ರ ಆಸುಪಾಸಿನಲ್ಲಿ ಮತ ಪಡೆದು ಭರ್ಜರಿ ಜಯ ಸಾಧಿಸಬಹುದು ಎಂಬ ಲೆಕ್ಕಾಚಾರದಲ್ಲಿ ಎನ್‌ಡಿಎ ಇದೆ.
ಟಿಕೆಟ್ ಫೈಟ್: ಕಾಂಗ್ರೆಸ್ ಭದ್ರಕೋಟೆ ಚಾಮರಾಜನಗರದಲ್ಲಿ ಅರಳುತ್ತಾ ಕಮಲ?
ಚುನಾವಣಾಪೂರ್ವ ಸಮೀಕ್ಷೆಗಳೂ ಎನ್ ಡಿಎಗೆ ಅನುಕೂಲಕರ ವಾತಾವರಣವಿದೆ ಎಂದು ಹೇಳಿವೆ. ಆದರೆ ಶೇ.20ರಷ್ಟು ಮತ ಗಳಿಸಿದ್ದ ಆರ್‌ಜೆಡಿ, ಶೇ.8.4 ಮತ ಪಡೆದ ಕಾಂಗ್ರೆಸ್, ಶೇ.1.2ರಷ್ಟು ಮತಗಳಿರುವ ಎನ್‌ಸಿಪಿ ಹಾಗೂ ಶೇ.3 ಮತ ಪಡೆದಿದ್ದ ಉಪೇಂದ್ರ ಕುಶ್ವಾಹಾ ಮೇಲೆ ಅವಲಂಬಿತ ವಾಗಿದೆ. ಸವಾಲುಗಳಿದ್ದರೂ ಬಿಜೆಪಿಯನ್ನು ಹಣಿಯುತ್ತೇವೆ ಎಂಬ ವಿಶ್ವಾಸದಲ್ಲಿ ಲಾಲು ಅನುಪಸ್ಥಿತಿಯಲ್ಲಿ ಆರ್‌ಜೆಡಿ ಮುನ್ನಡೆಸುತ್ತಿ ರುವ ಪುತ್ರ ತೇಜಸ್ವಿ ಯಾದವ್ ಇದ್ದಾರೆ.
ಟಿಕೆಟ್ ಫೈಟ್: ದಾವಣಗೆರೆಯಲ್ಲಿ ಕೈ-ಕಮಲ ನಡುವೆ ಪ್ರಬಲ ಪೈಪೋಟಿ
ಪ್ರಮುಖ ಅಭ್ಯರ್ಥಿಗಳು
*ರಾಮ್‌ವಿಲಾಸ್ ಪಾಸ್ವಾನ್ (ಎಲ್‌ಜೆಪಿ), *ಉಪೇಂದ್ರ ಕುಶ್ವಾಹಾ(ಆರ್‌ಎಲ್‌ಎಸ್‌ಪಿ), *ರಾಜೀವ್‌ಪ್ರತಾಪ್ ರೂಡಿ (ಬಿಜೆಪಿ), *ಮೀರಾ ಕುಮಾರ್ (ಕಾಂಗ್ರೆಸ್), *ರಾಬ್ಡಿ ದೇವಿ (ಆರ್‌ಜೆಡಿ), *ಮಿಸಾ ಭಾರತಿ (ಆರ್‌ಜೆಡಿ), *ರಾಮ್‌ಕೃಪಾಲ್ ಯಾದವ್ (ಬಿಜೆಪಿ), *ಶಹನವಾಜ್ ಹುಸೇನ್ (ಬಿಜೆಪಿ), *ಶತ್ರುಘ್ನ ಸಿನ್ಹಾ (ಬಿಜೆಪಿ ಬಂಡುಕೋರ) *ಆರ್.ಕೆ. ಸಿಂಗ್ (ಬಿಜೆಪಿ), *ರಾಧಾಮೋಹನ ಸಿಂಗ್ (ಬಿಜೆಪಿ), *ಚಿರಾಗ್ ಪಾಸ್ವಾನ್ (ಎಲ್‌ಜೆಪಿ)
ಟಿಕೆಟ್ ಫೈಟ್: ಡಿಕೆ+ಎಚ್‌ಡಿಕೆ ವರ್ಸಸ್ ಯೋಗಿ?
ಪ್ರಮುಖ ಕ್ಷೇತ್ರಗಳು
*ಪಾಟಲೀಪುತ್ರ *ಸಸಾರಾಂ (ಎಸ್‌ಸಿ) *ಪಟನಾ ಸಾಹಿಬ್ *ಸಾರಣ್ *ಆರಾ *ಪೂರ್ವ ಚಂಪಾರಣ್ಯ *ಹಾಜಿಪುರ *ಬಕ್ಸರ್ *ಜಮೂಯಿ
ಟಿಕೆಟ್ ಫೈಟ್: ವಿಜಯಪುರದಲ್ಲಿ ಜಿಗಜಿಣಗಿ V/S ಅಲಗೂರ?
ಟಿಕೆಟ್ ಫೈಟ್: ಬಿಜೆಪಿ ಟಿಕೆಟ್‌ಗೆ ಸವದಿ, ಕತ್ತಿ, ಕೋರೆ ಫೈಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.