ಲಾಕ್‌ಡೌನ್ ಮಾರ್ಗಸೂಚಿ ಪ್ರಕಟ, ಫಿಕ್ಸ್ ಆಯ್ಕು ನಿಖಿಲ್ ಮದ್ವೆ ಮಂಟಪ; ಏ.15ರ ಟಾಪ್ 10 ಸುದ್ದಿ!

By Suvarna News  |  First Published Apr 15, 2020, 5:11 PM IST
ದೇಶದಲ್ಲಿ 2ನೇ ಹಂತದ ಲಾಕ್‌ಡೌನ್ ಆದೇಶ ಜಾರಿ ಮಾಡಲಾಗಿದೆ. ಇದೀಗ ಮೇ.3ರ ವರೆಗಿರುವ ಲಾಕ್‌ಡೌನ್ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಇತ್ತ ಮೈಸೂರಿನಲ್ಲಿ ಕೊರೋನಾ ವ್ಯಾಪಕವಾಗಿ ಹರುತ್ತಿದೆ. ಇದಕ್ಕೆ ಕಾರಣವಾದ ಜುಬಿಲಿಯೆಂಟ್ ಕಾರ್ಖಾನೆ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ 21 ದಿನ ಹಾಗೂ ಇನ್ನು 19 ದಿನ ಒಟ್ಟು 40 ದಿನಗಳ ಲಾಕ್‌ಡೌನ್‌ನಿಂದ ಭಾರತಕ್ಕೆ 17 ಲಕ್ಷ ಕೋಟಿ ರೂಪಾಯಿ ಲಾಸ್. ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ಸ್ಥಳ ಕೊನೆ ಕ್ಷಣದಲ್ಲಿ ಬದಲಾವಣೆ, ನಿವೇದಿತಾ ಗೌಡ ಕೂದಲಿಗೆ ಕತ್ತರಿ ಸೇರಿದಂತೆ ಏಪ್ರಿಲ್ 15ರ ಟಾಪ್ 10 ಸುದ್ದಿ ಇಲ್ಲಿವೆ.

ಲಾಕ್‌ಡೌನ್, ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ: ಏನಿದೆ ಏನಿಲ್ಲ?...

ಕೇಂದ್ರ ಸರ್ಕಾರದಿಂದ ಲಾಕ್‌ಡೌನ್ ಮೇ 3ವರೆಗೆ ವಿಸ್ತರಿಸಲಾಗಿದ್ದು, ಕೇಂದ್ರ ಗೃಹ ಇಲಾಖೆ 2ನೇ ಅವಧಿಯ ಲಾಕ್‌ಡೌನ್ ವೇಳೆ ಪಾಲಿಸಬೇಕಾದ ನಿಯಮಗಳ ಕುರಿತು  ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಸಿಎಂ ಜೊತೆ ಸಭೆ ಬೆನ್ನಲ್ಲೇ ಕಾಂಗ್ರೆಸ್‌ ಶಾಸಕಗೆ ಸೋಂಕು, ಆಸ್ಪತ್ರೆಗೆ ದಾಖಲು!


ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ನಡೆಸಿದ ಸಭೆಯಲ್ಲಿ ಬಾಗಿಯಾದ ಬೆನ್ನಲ್ಲೇ, ಕಾಂಗ್ರೆಸ್‌ ಶಾಸಕರೊಬ್ಬರು ಕೊರೋನಾಕ್ಕೆ ತುತ್ತಾದ ಘಟನೆ ಮಂಗಳವಾರ ನಡೆದಿದೆ.

ಕೊರೋನಾ ರೋಗಿಗಳ ಕರೆದೊಯ್ಯುತ್ತಿದ್ದ ಆಂಬುಲೆನ್ಸ್ ಪ್ರಿ ಪ್ಲಾನ್ ಅಟ್ಯಾಕ್...


ಕೊರೋನಾ ವಿರುದ್ಧದ ಹೋರಾಟ ನಿರಂತರವಾಗಿದ್ದು ದೇಶದೆಲ್ಲೆಡೆ ಲಾಕ್ ಡೌನ್ ಜಾರಿಯಲ್ಲಿದೆ.  ಇದರ ನಡುವೆ ಉತ್ತರ ಪ್ರದೇಶದ ಮೋರಾದಾಬಾದ್ ನಿಂತ ಆತಂಕಕಾರಿ ಘಟನೆಯೊಂದು ವರದಿಯಾಗಿದೆ.

ದೆಹಲಿ ನಿಜಾಮುದ್ದೀನ್ ಆಯ್ತು, ಈಗ ಸರ್ಕಾರಕ್ಕೆ ನಿದ್ದೆಗೆಡಿಸಿದ ಮೈಸೂರಿನ ಜ್ಯುಬಿಲಿಯಂಟ್‌ ಕಾರ್ಖಾನೆ


ಕೊರೋನಾ ವಿರುದ್ಧ ಸಮರ ಸಾರಿರೋ ಭಾರತಕ್ಕೆ ದೆಹಲಿಯ ನಿಜಾಮುದ್ದೀನ್ ಕೇಸ್ ಕಂಟಕವಾಗಿದೆ. ಲಾಕ್‍ಡೌನ್ ಮಧ್ಯೆಯೂ ಸೋಂಕಿತರ ಸಂಖ್ಯೆ ಏರಿಕೆಯಾಗಿರುತ್ತಿರುವುದು ಇದೇ ತಬ್ಲಿಘಿಗಳಿಂದಲೇ. ಇದೀಗ ಮೈಸೂರಿನಲ್ಲಿ ಜಿಲ್ಲೆಯಲ್ಲಿ ಜ್ಯುಬಿಲಿಯಂಟ್‌ ಕಾರ್ಖಾನೆ ರಾಜ್ಯ ಸರ್ಕಾರಕ್ಕೆ ನಿದ್ದೆಗೆಡಿಸಿದೆ.

ವಿವಾದಗಳಿಂದ ವೃತ್ತಿ ಬದುಕು ಹಾಳು ಮಾಡಿಕೊಂಡ ಟಾಪ್ 5 ಕ್ರಿಕೆಟಿಗರಿವರು


ಜಂಟಲ್‌ಮನ್ಸ್ ಕ್ರೀಡೆ ಎಂದು ಕರೆಸಿಕೊಳ್ಳುವ ಕ್ರಿಕೆಟ್‌ನ ಇನ್ನೊಂದು ಮುಖವು ಅನಾವರಣಗೊಂಡಿದೆ. ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ಕ್ರೀಡೆಗೆ ಕೆಲ ಕ್ರಿಕೆಟಿಗರು ಮಸಿ ಬಳಿಯುವ ಪ್ರಯತ್ನವನ್ನು ಮಾಡಿದ್ದಾರೆ. ಕೆಲ ಕ್ರಿಕೆಟಿಗರು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ವೃತ್ತಿಜೀವನವನ್ನೇ ಹಾಳುಮಾಡಿಕೊಂಡವರಿದ್ದಾರೆ. 

ಮತ್ತೆ ನಿಖಿಲ್-ರೇವತಿ ಮದ್ವೆ ಸ್ಥಳ ಬದಲು: ಎಚ್‌ಡಿಕೆ ಸೆಂಟಿಮೆಂಟ್ ಮಾತ್ರ ಬಿಡಲೇ ಇಲ್ಲ


ಕೊರೋನಾ ವೈರಸ್ ಕಾಟದಿಂದ ನಿಖಿಲ್ ಕುಮಾರಸ್ವಾಮಿ- ರೇವತಿ ಮದುವೆ ಮಹೋತ್ಸವ ನಡೆಯೋ ಸ್ಥಳದ ಕುರಿತು ಒಂದಷ್ಟು ಗೊಂದಲವಿತ್ತು. ಆದ್ರೆ ಇದೀಗ ವಿವಾಹ ಸ್ಥಳ ಫೈನಲ್ ಆಗಿದ್ದು, ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ಹಾಗಾದ್ರೆ ನಿಖಿಲ್ ಮದ್ವೆ ನಡೆಯೋದು ಎಲ್ಲಿ? ಈ ಕೆಳಗಿನಂತಿದೆ ನೋಡಿ ವಿವರ...! 

ಉದ್ದ ಕೂದಲಿಗೆ ಕತ್ತರಿ ಹಾಕಿದ್ರಾ ನಿವೇದಿತಾ ಗೌಡ?


ಬಿಗ್‌ಬಾಸ್ ನಿವೇದಿತಾ ಗೌಡ ಲಾಂಗ್ ಹೇರ್ ಫೇಮಸ್. ಹೆಣ್ಮಕ್ಕಳಂತೂ ನಿವೇದಿತಾ ಲಾಂಗ್ ಹೇರ್ ಗೆ ಕಳೆದೇ ಹೋಗಿದ್ದರು. ಅಷ್ಟೇ ಯಾಕೆ ತೈಲ ಕಂಪನಿಯೂ ನಿವೇದಿತಾ ಲಾಂಗ್ ಹೇರ್ ಗೆ ಫಿದಾ ಆಗಿತ್ತು. ನಿವೇದಿತಾರಿಂದ ಒಂದು ಜಾಹೀರಾತನ್ನು ಮಾಡಿಸಿತು. ಆದ್ರೀಗ ನಿವೇದಿತಾ ಶಾಕ್ ನೀಡಿದ್ದಾರೆ.

ಲಾಕ್‌ಡೌನ್‌ ವಿಸ್ತರಣೆಯಿಂದ 17 ಲಕ್ಷ ಕೋಟಿ ಲಾಸ್‌!...


ಕೊರೋನಾ ತಾಂಡವದಿಂದ ಪಾರಾಗಲು ರಾಷ್ಟ್ರವ್ಯಾಪಿ ಘೋಷಣೆಯಾಗಿದ್ದ ಲಾಕ್‌ಡೌನ್‌ ಅನ್ನು ಮೇ.3ರ ವರೆಗೆ ವಿಸ್ತರಿಸಿದ್ದರಿಂದ ದೇಶದ ಆರ್ಥಿಕತೆ, ಈ ಹಿಂದೆ ಅಂದಾಜಿಸಿದ್ದಕ್ಕಿಂತಲೂ ಭೀಕರವಾಗಿ ನೆಲ ಕಚ್ಚಲಿದೆ. ಬರೋಬ್ಬರಿ 17.81 ಲಕ್ಷ ಕೋಟಿಯಷ್ಟುನಷ್ಟವಾಗಲಿದೆ ಎಂದು ಬ್ರೋಕರೇಜ್‌ ಸಂಸ್ಥೆ ಬಾಕ್ಲೇರ್ಸ್‌ ಅಂದಾಜಿಸಿದೆ.

ಗಾರ್ಡನ್‌ ಸಿಟಿ ಎಂದಿದ್ದು ಸುಮ್ಮನೆಯಲ್ಲ, ಬೆಂಗಳೂರಿನ ಚಂದವನ್ನೊಮ್ಮೆ ನೋಡಿ.


ಬೆಂಗಳೂರನ್ನು ಗಾರ್ಡನ್ ಸಿಟಿ ಎಂದೂ ಕರೆಯುತ್ತಾರೆ. ಸುಂದರ ಉದ್ಯಾವನಗಳಿರುವ ಬೆಂಗಳೂರಿನ ರಸ್ತೆಗಳೂ ಸದ್ಯದ ಮಟ್ಟಿಗೆ ಗಾರ್ಡನ್‌ ರೀತಿಯೇ ಕಂಗೊಳಿಸುತ್ತಿದೆ. ವಾಹನಗಳ ಓಡಾಟ, ಧೂಳು, ಮಾಲೀನ್ಯವಿಲ್ಲದೆ ನೈಸರ್ಗಿಕ ಸೌಂದರ್ಯ ಅಧ್ಬುತವಾಗಿ ಕಾಣಿಸುತ್ತಿದೆ. ಅರೆ ಇದು ನಮ್ಮ ಬೆಂಗಳೂರಾ.. ಎಂದು ಖಂಡಿತಾ ನಿಮ್ಮನ್ನು ಅಚ್ಚರಿಗೊಳಿಸುತ್ತವೆ ಈ ಫೋಟೋಸ್


ಲಾಕ್‌ಡೌನ್ ಬಳಿಕ ಬಿಡುಗಡೆಯಾಗಲಿದೆ ಬಜಾಜ್-KTM ಎಲೆಕ್ಟ್ರಿಕ್ ಮೊಪೆಡ್! ...


KTM ಭಾರತದಲ್ಲಿ ತನ್ನ ಬೈಕ್‌ಗಳನ್ನು ಬಜಾಜ್ ಸಹಯೋಗದೊಂದಿಗೆ ಮಾರಾಟ ಮಾಡುತ್ತಿದೆ. ಇದೀಗ ಈ ಎರಡೂ ಕಂಪನಿ ಜೊತೆಯಾಗಿ ಎಲೆಕ್ಟ್ರಿಕ್ ಮೊಪೆಡ್ ಬಿಡುಗಡೆ ಮಾಡಲು ಸಜ್ಜಾಗಿದೆ. ಬಜಾಜ್ ಉತ್ಪಾದನ ಘಟಕದಲ್ಲಿ KTM ಡ್ಯೂಕ್ ತಂತ್ರಜ್ಞಾನ ಬಳಸಿ ನೂತನ ಎಲೆಕ್ಟ್ರಿಕ್ ಮೊಪೆಡ್ ಮಾರುಕಟ್ಟೆ ಪ್ರವೇಶಿಸಲಿದೆ. ವಿಶೇಷ ಅಂದರೆ ಇದು ಕಡಿಮೆ ಬೆಲೆಯ ಸ್ಕೂಟರ್ ಆಗಿರಲಿದೆ. ಈ ಮೊಪೆಡ್ ಸ್ಕೂಟರ್ ಹೆಚ್ಚಿನ ಮಾಹಿತಿ ಇಲ್ಲಿದೆ
 
click me!