'ಜಾನಿ'ಯಂತಾಗಿ ಮನೆಯಲ್ಲಿರಿ ಎಂದ ಪೊಲೀಸ್, ಅಷ್ಟಕ್ಕೂ ಈ ಜಾನಿ ಯಾರು?

By Suvarna NewsFirst Published Apr 15, 2020, 4:29 PM IST
Highlights
ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್| ಮನೆಯಲ್ಲಿರಲು ತಯಾರಿಲ್ಲ ಜನ| ಜನರನ್ನು ನಿಯಂತ್ರಿಸೋದೆ ಪೊಲೀಸರಿಗೆ ತಲೆ ನೋವು| ಜನರ ಹಿಡಿದಿಇಡಲು ಪೊಲೀಸರ ಐಡಿಯಾ, ಕರೆತಂದ್ರು ಜಾನಿಯನ್ನ| ಅಷ್ಟಕ್ಕೂ ಈ ಜಾನಿ ಯಾರು?
ಕೊರೋನಾ ವೈರಸ್ ನಿಯಂತ್ರಿಸುವ ಹಾಗೂ ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್ ಹೇರಲಾಗಿದೆ. ಎಡರನೇ ಹಂತದ ಲಾಖ್‌ಡೌನ್ ಮೇ. 3ರವರೆಗೆ ವಿಸ್ತರಿಸಲಾಗಿದೆ. ಹೀಗಿರುವಾಗ ಪೊಲೀಸರು ಜನರನ್ನು ಮನೆಯಲ್ಲೇ ನಿಲ್ಲಿಸಲು ಹರ ಸಾಹಸ ಪಡುತ್ತಿದ್ದಾರೆ. ಜನರು ಕೂಡಾ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸದೆ ರಸ್ತೆಗಿಳಿಯುತ್ತಿದ್ದಾರೆ. ಹೀಗಿರುವಾಗ ಜನರನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಸೋಶೀಯಲ್ ಮೀಡಿಯಾ ಮೊರೆ ಹೋಗಿದ್ದು, ಜನರಿಗೆ ಜಾನಿಯ ಉದಾಹರಣೆ ನೀಡಿದ್ದಾರ

ಹಸಿದವರಿಗೆ ಆಹಾರ ಕೊಟ್ಟ ಮೇಲೆಯೇ ಊಟ ಮಾಡೋ ಪೊಲೀಸ್ ಕುಟುಂಬ: ಪೇದೆಗೊಂದು ಸಲಾಂ..!

ಹೌದು ದೇಶದಾದ್ಯಂತ ಪೊಲೀಸರು ಭಿನ್ನ ವಿಭಿನ್ನ ಯತ್ನಗಳನ್ನು ನಡೆಸುತ್ತಿದ್ದಾರೆ. ಇತ್ತ ಕರ್ನಾಟಕ ಪೊಲೀಸರು ಪ್ಲ ಕಾರ್ಡ್ ನೀಡಿ, ಹಣೆಗೆ ಸೀಲ್ ಹಾಕಿ, ಬಸ್ಕಿ ಹೊಡೆಸಿ ಯತ್ನಿಸಿದ್ದರು. ಅದ್ಯಾವುದಕ್ಕೂ ಜಗ್ಗದಾಗ ಲಾಠಿ ಪ್ರಯೋಗಿಸಿದ್ದರು. ಅತ್ತ ಚೆನ್ನೈ ಪೊಲೀಸರು ಕೊರೋನಾ ವೈರಸ್‌ನಂತೆ ಕಾಣುವ ಹೆಲ್ಮೆಟ್ ಬಳಸಿದ್ದರು. ಮತ್ತೊಂದೆಡೆ ರಸ್ತೆಗಿಳಿಯುವವರಿಗೆ ಅರತಿಯನ್ನೂ ಬೆಳಗಿದ್ದರು. ಇತ್ತ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುಲಾಬಿ ನೀಡಿ ಸತ್ಕರಿಸಿದ್ದರು. ಹೀಗಿರುವಾಗ ಮಹಾರಾ‍ಷ್ಟ್ರ ಪೊಲೀಸರರೀಗ ವಿಭಿನ್ನ ಪ್ರಯೋಗ ನಡೆಸಿದ್ದಾರೆ.

Johnny is not telling lies for once! Be like Johnny. pic.twitter.com/WQXO6ES2IH

— Maharashtra Police (@DGPMaharashtra)
ಮಹಾರಾಷ್ಟ್ರ ಪೊಲೀಸ್ ಇಲಾಖೆಯ ಟ್ವಿಟರ್ ಖಾತೆಯಲ್ಲಿ ಚಿಕ್ಕಂದಿನಲ್ಲಿ ಹಾಡುತ್ತಿದ್ದ ಜಾನಿ ಜಾನಿ ಎಸ್ ಪಾಪಾ ಎಂಬ ಚಿಣ್ಣರ ಗೀತೆಗೆ ಕೊಂಚ ಟ್ವಿಸ್ಟ್ ಕೊಟ್ಟು ಪೋಸ್ಟ್ ಮಾಡಲಾಗಿದೆ. ಈ ಮೂಲಕ ಜನರಲ್ಲಿ ಮನೆಯಲ್ಲೇ ಉಳಿದುಕೊಳ್ಳುವಂತೆ ಮನವಿ ಮಾಡಲಾಗಿದೆ. ಪೊಲೀಸರ ಈ ಮನವಿ ನೆಟ್ಟಿಗರ ಮನ ಗೆದ್ದಿದ್ದು ಭಾರೀ ವೈರಲ್ ಆಗಿದೆ. ಇನ್ನು ಈ ಗೀತೆ ಮೂಲಕ ಕೈ ಚೆನ್ನಾಗಿ ತೊಳೆಯುವ, ಸಂದೇಶಗಳನ್ನು ಕಣ್ಮುಚ್ಚಿ ಫಾರ್ವರ್ಡ್ ಮಾಡಬೇಡಿ ಹಾಗೂ ಹೊರಗೆ ಹೋಗದೆ ಮನೆಯಲ್ಲೇ ಸೇಫಾಗಿರಿ ಎಂಬ ಸಂದೇಶವನ್ನೂ ನೀಡಿದ್ದಾರೆ.
click me!