ಮತ್ತೆ ಭವಿಷ್ಯ ನುಡಿದ ಕೋಡಿ ಮಠ, ಕೊಹ್ಲಿ ನಾಯಕತ್ವಕ್ಕಿಲ್ಲ ಕಂಟಕ; ಇಲ್ಲಿವೆ ಸೆ.20ರ ಟಾಪ್ 10 ಸುದ್ದಿ!

Published : Sep 20, 2019, 04:50 PM ISTUpdated : Sep 20, 2019, 04:51 PM IST
ಮತ್ತೆ ಭವಿಷ್ಯ ನುಡಿದ ಕೋಡಿ ಮಠ, ಕೊಹ್ಲಿ ನಾಯಕತ್ವಕ್ಕಿಲ್ಲ ಕಂಟಕ; ಇಲ್ಲಿವೆ ಸೆ.20ರ ಟಾಪ್ 10 ಸುದ್ದಿ!

ಸಾರಾಂಶ

ಬಿಎಸ್ ಯಡಿಯೂರಪ್ಪ ಸರ್ಕಾರದ ಆಯಸ್ಸು ಕುರಿತು ಕೋಡಿ ಮಠದ ಭವಿಷ್ಯ ಹೊರಬೀಳುತ್ತಿದ್ದಂತೆ ಇದೀಗ ಬಿಜೆಪಿ ಮುಖಂಡ ಸವಾಲು ಹಾಕಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಬಿಎಸ್‍ವೈ ಖಾಸಗಿ ಜೀವನ ಕೆದಕಿ ಸುದ್ದಿಯಾಗಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಬಳಿಕ ಇದೀಗ ಮತ್ತೊರ್ವ ಕಾಂಗ್ರೆಸ್ ಮುಖಂಡ ಜಮೀರ್ ಅಹಮ್ಮದ್‌ಗೆ ಸಿಬಿಐ ನೊಟೀಸ್ ನೀಡಿದೆ. ವಿರಾಟ್ ಕೊಹ್ಲಿ ನಾಯಕತ್ವ, ನಟಿ ರಾಧಿಕಾ ಕುಮಾರಸ್ವಾಮಿ ದಮಯಂತಿ ಟೀಸರ್ ಸೇರಿದಂತೆ ಸೆ.20ರ ಟಾಪ್ 10 ಸುದ್ದಿ ಇಲ್ಲಿವೆ.

1) ಜಮೀರ್‌ಗೆ ಸಿಬಿಐ ನೋಟಿಸ್‌: ಹಾಜರಿಗೆ 5 ದಿನ ಕಾಲಾವಕಾಶ


ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸಿಬಿಐ ತನಿಖೆ ಬಿರುಸಿನಿಂದ ಮುಂದುವರೆದಿದ್ದು, ಮಾಜಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರು ಬುಧವಾರ ತನಿಖಾಧಿಕಾರಿಗಳನ್ನು ಭೇಟಿಯಾಗಿ ವಿಚಾರಣೆಗೆ ಐದು ದಿನಗಳ ಕಾಲಾವಕಾಶ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.


2) ಅನರ್ಹರಾದ 17 ಮಂದಿಯೂ ನಮ್ಮ ಜೊತೆಗೆ ಇದ್ದಾರೆ : ಡಿಸಿಎಂ

ರಾಜ್ಯ ಸಚಿವ ಸಂಪುಟ ವಿಸ್ತರಣೆಯಾದರೆ ಉತ್ತಮ ಎಂದು ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ್ ಹೇಳಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅಶ್ವತ್ಥ್ ನಾರಾಯಣ್ ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಪುಟ ಇದ್ದರೆ ಒಳ್ಳೆಯದು. ಈ ನಿಟ್ಟಿನಲ್ಲಿ ಹೀಗೆ ಹೇಳುತ್ತಿದ್ದೇನೆ ಎಂದರು.

3) ಕೋಡಿ ಮಠದಿಂದ ಸರ್ಕಾರ ಭವಿಷ್ಯ : ಬಿಜೆಪಿ ಮುಖಂಡನಿಂದ ಶ್ರೀಗಳಿಗೆ ಸವಾಲು

ರಾಜ್ಯದಲ್ಲಿ ಮೂರು ನಾಲ್ಕು ತಿಂಗಳಲ್ಲಿ ಮತ್ತೆ ಚುನಾವಣೆ ಎದುರಾಗಲಿದೆ ಎಂದು ಹೇಳಿರುವ ಕೋಡಿ ಮಠದ ಶ್ರೀಗಳಿಗೆ ಬಿಜೆಪಿ ಕಾರ್ಯಕರ್ತ ಸವಾಲು ಹಾಕಿದ್ದಾನೆ. ಮಂಡ್ಯದ ಶಿವಕುಮಾರ್ ಆರಾಧ್ಯ ಎನ್ನುವ ವ್ಯಕ್ತಿ ಕೋಡಿ ಮಠದ ಶ್ರೀಗಳು ಹೇಳಿದಂತೆ ನಾಲ್ಕು ತಿಂಗಳಲ್ಲಿ ಸರ್ಕಾರ ಪತನವಾದರೆ ಕೈ ಬೆರಳು ಕಟ್ ಮಾಡಿಕೊಂಡು ಪಾದಕ್ಕೆ ಅರ್ಪಿಸುವುದಾಗಿ ಹೇಳಿದ್ದಾರೆ.

4) ಬೆಳಗಾವಿ ಕಾಂಗ್ರೆಸ್‌ನ್ನು PLD ಬ್ಯಾಂಕ್ ನುಂಗಿತ್ತಾ, ಬಳ್ಳಾರಿ ವಿಭಜನೆ ಬಿಜೆಪಿ ನುಂಗುತ್ತಾ?

ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಕಾಂಗ್ರೆಸ್‌ನ ಪ್ರಭಾವಿ ರಾಜಕಾರಣಿಗಳ ಜಿದ್ದಾಜಿದ್ದಿಗೆ ಕಾರಣವಾಗಿ ದೆಹಲಿ ಹೈ ಕಮಾಂಡ್‌ವರೆಗೂ ಹೋಗಿತ್ತು. ಇದು ರಾಜ ಕಾಂಗ್ರೆಸ್‌ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಜಗತ್ ಜಾಹೀರು ಆಗಿತ್ತು. ಈ ಪಿಎಲ್‌ಡಿ ಬ್ಯಾಂಕ್ ಕಿಚ್ಚು ಮೈತ್ರಿ ಪತನಕ್ಕೂ ಒಂದು ರೀತಿ ಕಾರಣವಾಯ್ತು. 


5) RCB ಬ್ರ್ಯಾಂಡ್ ಮೌಲ್ಯ ಕುಸಿತ..! ಆದರೆ ಕೊಹ್ಲಿ ನಾಯಕತ್ವಕ್ಕಿಲ್ಲ ಕುತ್ತು..!


ಐಪಿ​ಎಲ್‌ನಲ್ಲಿ ಕಳಪೆ ಪ್ರದ​ರ್ಶನ ಮುಂದು​ವ​ರಿ​ಸಿ​ರುವ ರಾಯಲ್‌ ಚಾಲೆಂಜ​ರ್ಸ್ ಬೆಂಗ​ಳೂರು ತಂಡದ ಬ್ರ್ಯಾಂಡ್‌ ಮೌಲ್ಯ ಶೇ.8ರಷ್ಟುಕುಸಿತಗೊಂಡಿದೆ. 2018ರಲ್ಲಿ ₹ 647 ಕೋಟಿ ಇದ್ದ ಆರ್‌ಸಿಬಿ ತಂಡದ ಮೌಲ್ಯ ಈಗ 595 ಕೋಟಿ ರುಪಾಯಿಗೆ ಇಳಿಕೆಯಾಗಿದೆ. ನ್ಯೂಯಾ​ರ್ಕ್ ಮೂಲದ ಡಫ್‌ ಅಂಡ್‌ ಫೆಲ್ಫ್ಸ್ ಎನ್ನುವ ಕಾರ್ಪೋ​ರೇಟ್‌ ಹಣ​ಕಾಸು ಸಲಹಾ ಸಂಸ್ಥೆ ನಡೆ​ಸಿ​ರುವ ಸಮೀಕ್ಷೆಯಲ್ಲಿ ಈ ವಿಚಾರ ತಿಳಿದು ಬಂದಿದೆ.


6) ಮತ್ತೆ ಯಡಿಯೂರಪ್ಪ ಪರ್ಸನಲ್ ಲೈಫ್ ಕೆದಕಿದ HDK

ಮತ್ತೊಮ್ಮೆ ಮಾಜಿ ಸಿಎಂ ಕುಮಾರಸ್ವಾಮಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಖಾಸಗಿ ಜೀವನದ ಬಗ್ಗೆ ಮಾತನಾಡಿದ್ದಾರೆ.  ರಾಮನಗರದ ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಸಿಎಂ ಯಡಿಯೂರಪ್ಪ ಪತ್ನಿ ಸಾವು ಸಹಜವಲ್ಲ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ. 


7) ದಸರಾ ಕ್ರೀಡಾಕೂಟ ಉದ್ಘಾಟಿಸಲಿರುವ ಪಿ.ವಿ.ಸಿಂಧು

ಮೈಸೂರು ದಸರಾ ಮಹೋತ್ಸವ ಅಂಗವಾಗಿ ನಡೆಯುವ ಯುವ ದಸರಾ ಸಂಭ್ರಮ ಮಾತ್ರವಲ್ಲದೆ, ದಸರಾ ಕ್ರೀಡಾಕೂಟದಲ್ಲೂ ಭಾರತದ ಖ್ಯಾತ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು ಪಾಲ್ಗೊಳ್ಳುವುದು ಖಚಿತವಾಗಿದೆ. ಈ ಮೊದಲು ಕೇವಲ ಯುವ ದಸರಾ ಉದ್ಘಾಟನೆಗೆ ಮಾತ್ರ ಪಿ.ವಿ.ಸಿಂಧು ಅವರನ್ನು ಆಹ್ವಾನಿಸಲಾಗಿತ್ತು. ಇದೀಗ ಮನವಿಗೆ ಸ್ಪಂದಿಸಿರುವುದಾಗಿ ತಿಳಿದು ಬಂದಿದೆ. 

8) ದಮಯಂತಿ ಟೀಸರ್ ವೈರಲ್! ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದ ನೆಟ್ಟಿಗರು!

ರಾಧಿಕಾ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಇಂತಹ ಪಾತ್ರ ಮಾಡುತ್ತಿದ್ದಾರೆ. ಅರುಂಧತಿ-ಭಾಗಮತಿಯ ಅಕ್ಕ,ತಂಗಿಯಂತೆ ಕಾಣುತ್ತಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ದಮಯಂತಿ ಟೀಸರ್ ಎಲ್ಲೆಡೆ ಸದ್ದು ಮಾಡುತ್ತಿದೆ. ಟೀಸರ್ ನೋಡಿದ ಪ್ರೇಕ್ಷಕರು ರಾಧಿಕಾ ಕಣ್ಣು ನೋಡಿ ಬೆಚ್ಚಿ ಬಿದ್ದಿದ್ದಾರೆ. ಈ ಟೀಸರ್ ನೀವು ನೋಡಲೇಬೇಕು!

9) 20 ವರ್ಷದ ಹಿಂದೆ ಚೈನ್‌ ಎಳೆದು ರೈಲು ನಿಲ್ಲಿಸಿದ್ದ ಸನ್ನಿ, ಕರೀಷ್ಮಾಗೆ ಈಗ ಸಂಕಷ್ಟ!

ಬರೋಬ್ಬರಿ 20 ವರ್ಷಗಳ ಹಿಂದೆ ಸಿನಿಮಾವೊಂದರ ಚಿತ್ರೀಕರಣದ ವೇಳೆ ಚೈನ್‌ ಎಳೆದು ರೈಲು ನಿಲ್ಲಿಸಿದ್ದ ಪ್ರಕರಣ ಸಂಬಂಧ ಚಿತ್ರನಟರಾದ ಸನ್ನಿ ಡಿಯೋಲ್‌ ಹಾಗೂ ಕರೀಷ್ಮಾ ಕಪೂರ್‌ ಅವರಿಗೆ ಇದೀಗ ಸಂಕಷ್ಟ ಎದುರಾಗಿದೆ. ಈ ಇಬ್ಬರ ವಿರುದ್ಧ ರೈಲ್ವೇ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ. 

10) ಹವಾಲಾ ಎಂದರೇನು?: ನೀವು ತಿಳಿದಿರದ ಸಂಗತಿ ಎಷ್ಟಿವೆ ಗೊತ್ತೇನು?

ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅಕ್ರಮ ಹಣ ವ್ಯವಹಾರದ ಆರೋಪಕ್ಕೆ ಗುರಿಯಾಗಿ ದೆಹಲಿಯ ತಿಹಾರ್ ಜೈಲು ಸೇರಿದ್ದಾರೆ. ಇಡಿ ತನಿಖೆಯ ವೇಳೆ ಹವಾಲಾ ಹಣದ ವಾಸನೆಯೂ ಬಡಿದಿದ್ದು, ಸಾಮಾನ್ಯ ಜನ ಹವಾಲಾ ಹಣ ಎಂದರೇನು ಎಂದು ತಿಳಿಯಲು ಬಯಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Justice for Bongo: ಮಗು ಹುಟ್ಟಿದ್ದಕ್ಕೆ ಸಾಕಿ ಸಲುಹಿದ ಶ್ವಾನ ಕೊಂದ್ರಾ ಪಾಪಿಗಳು? ಸಿಲಿಕಾನ್ ಸಿಟಿಯಲ್ಲಿ 'ಬೋಂಗೋ' ಸಾವಿನ ರೋಚಕ ಕಹಾನಿ!
ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ