ಆಪರೇಶನ್ ಹಸ್ತ: ಬಿಜೆಪಿ ಶಾಸಕರು ರೆಸಾರ್ಟ್‌ಗೆ?

Sep 17, 2018, 3:45 PM IST

ರಾಜ್ಯ ರಾಜಕಾರಣದಲ್ಲಿ ಆಪರೇಷನ್‌ಗಳದ್ದೇ ಚರ್ಚೆ. ಮುಂಬರುವ ಬುಧವಾರ ಬಿಜೆಪಿಯು ತನ್ನೆಲ್ಲಾ ಶಾಸಕರ ಸಭೆಯನ್ನು ಕರೆದಿದೆ. ಲೋಕಸಭೆ ಚುನಾವಣೆಯ ತಯಾರಿಗೆ ಸಂಬಂಧಿಸಿದಂತೆ ಈ ಸಭೆ ಕರೆಯಲಾಗಿದ್ದರೂ, ಆ ಬಳಿಕ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.